ಯಾವ ಮೋಹನ ಮುರಳಿ ಕರೆಯಿತೋ
ದೂರ ತೀರಕೆ ನಿನನ್ನು ......
ಅದಾವ ನಾದವದು ಸೆಳೆದುದು
ಅದಾವ ತಿರವದು ನಮ್ಮನು ಮರೆಸಿದುದು
ಮಿತ್ರ.....
ಸದಾ ನಸುನಗುವ ನೀನು
ಆಗದ ಕಾರ್ಯಗಳ ಗುರುವು ನೀನು
ಕಾಯಕವೇ ಕೈಲಾಸ ವನರಿತವನು
ಹಗಲಿರುಳು ದುಡಿಸಪರಿಯರಿತವನು
ಸುತ್ತಾರೂರೊಳಗೆ ನಿನದೆ ಮಾತು
ಯಾರಿಗೂ ನುಡಿದಿಲ್ಲ ಇದಾಗದ ಮಾತು
ಹತ್ತಾರು ಕೈಗಳಿಗೆ ನಿನಾಗಿದ್ದೆ ಆಸರೆ
ಇಂದಿಲ್ಲವಾಗಿದೆ ನಿನ್ನಾಶ್ರಮಕಾಸರೆ
ವಿಧಿಯಂತಹದು ಕ್ರೂರ
ನಿನ ಬಾಳ ಹೊಸೆಯಿತದು ದುರ್ಭರ
ದಿಟವಾಯಿತು
ಶಿವನು ಬಿಡನು ನಾಲ್ಕು ದಿನ ಹೆಚ್ಚಿಗೆ
ತನಗಾದವರ ಮೆಚ್ಚುಗೆ
ಬಾರದೂರಿಗೆ ನಡೆದು ಬಿಟ್ಟೆ
ಮರಳಿ ಬಾರದಲ್ಲೇ ಕುಳಿತು ಬಿಟ್ಟೆ
ಬರಿ ನೆನಪೇ ನೀನಿನ್ನೂ ಜೊತೆಗೆ
ನಿನ ನಗುವೊಂದೆ ಬದುಕಿನುದ್ದಕು ಸಾಕೆಮೆಗೆ