Beish
Wednesday, February 5, 2014
ಶರಣ
ಶರಣ
ಸೂರಿಲ್ಲದವರ ಕಂಡೆ
ಅಗುಳಿಲ್ಲದವರ ಕಂಡೆ
ನೆಲೆಯಿಲ್ಲದವರ ಕಂಡೆ
ಮನವಿಲ್ಲದವರ ಕಂಡೆ
ಶರಣ । ಆಸೆಯಿಲ್ಲದವರ
ಕಾಣದಾದೆನಯ್ಯ - ಶರಣ
ಹುಡುಗಿಯ ಗುಣ
ಹುಡುಗಿಯ ಗುಣ
ಹೂವಿನ ಗುಣ
ದುಂಬಿಗೆ ಗೊತ್ತು
ಮಣ್ಣಿನ ಗುಣ
ಯೋಗಿಗೆ ಗೊತ್ತು
ಕುದುರೆಯ ಗುಣ
ಸವಾರನಿಗೆ ಗೊತ್ತು
ಎಮ್ಮೆಯ ಗುಣ
ಗಾಣಿಗನಿಗೆ ಗೊತ್ತು
ವಚನಗಳ ಗುಣ
ಜ್ಞಾನಿಗೆ ಗೊತ್ತು
ಭಕ್ತರ ಗುಣ
ದೇವರಿಗೆ ಗೊತ್ತು
ತಾಯಿಯ ಗುಣ
ಮಗನಿಗೆ ಗೊತ್ತು
ಹುಡುಗಿಯ ಗುಣ
ಯಾವನಿಗೊತ್ತು?
ಸೂಳೆಗೆಲ್ಲಿ ಬರಗಾಲ
ಸೂಳೆಗೆಲ್ಲಿ ಬರಗಾಲ
ಹರಿಯುವ ನದಿಯು
ಬರಿದಾದುದ ಕಂಡೆ
ಹಸಿರಿನ ಮರವು
ಒಣಗಿದುದ ಕಂಡೆ
ಹೊ ತುಂಬಿದ ಬಳ್ಳಿ
ಬರಡಾದುದ ಕಂಡೆ
ಜೇನು ತುಂಬಿದ ಗೂಡು
ರಸವಿಲ್ಲದುದನು ಕಂಡೆ
ಸಿರಿಯಿದ್ದ ಮನೆಯು
ದರಿದ್ರವಾದುದ ಕಂಡೆ
ದೇವರಿರುವ ಗುಡಿಯಲ್ಲಿ
ದೀಪವಿಲ್ಲದುದ ಕಂಡೆ
ಆದರೆ ಸೂಳೆಯ ಮನೆ
ಬರಿದಾದುದ ನಾನೊಂದು
ದಿನವಾದರೂ ಕಾಣದಾದೆ
ಲೋಕಕ್ಕೆ ಬರವುಂಟು ಸೊಳೆಗಿಲ್ಲ
ಹೆಣ್ಣು
ಹೆಣ್ಣು
ಕರುಳ ಕತ್ತರಿಸಿ ಜನ್ಮವನಿತ್ತವಳು
ನೀರೆರೆದು ಹಾಲುಣಿಸಿ ಮಲಗಿಸುವಳು
ಓದಲು ಬರೆಸಲು ಗುರುವಾದವಳು
ಸರಿ ತಪ್ಪುಗಳ ತಿಳಿ ಹೇಳಿದವಳು
ನನ್ನೆಲ್ಲ ಆಸೆಗಳ ಪೋಷಿಸುವವಳು - ತಾಯಿ
ಕತ್ತೆತ್ತದೆ ಕೀರು ನೋಟದಲ್ಲಿ ಒಪ್ಪಿದಾಕೆ
ಹಾಡುತ್ತಲೆ ನನ್ನೆದೆಯ ಸೇರಿದಾಕೆ
ಮಾತೆತ್ತದೆ ಕತ್ತಲಲಿ ದೇಹವ ಒಪ್ಪಿಸಿದಾಕೆ
ಏಳುತ್ತಲೇ ಒಲೆಯಡಿಗೆಯ ಬಡಿಸುವಾಕೆ
ಉಸಿರೆತ್ತದೆ ಮಕ್ಕಳೆರಡನು ಹೆತ್ತಿದಾಕೆ - ನನ್ನಾಕೆ
ತಾನೊಪ್ಪಿದ ಮನೆಯ ಸೊಸೆಯಾಗಿ
ಆರು ಗುಣಗಳ ಆರತಿಯಾಗಿ
ಅತ್ತೆ ಮಾವಂದಿರ ಮಗಳಾಗಿ
ಮೈದುನ ನಾದಿನಿಯ ತಾಯಿಯಾಗಿ
ಮನೆ ಬೆಳಗೊ ಜ್ಯೋತಿಯಾಗಿ
ಇರುವವಳು - ಮಗಳು
ಪಶ್ಚಾತಾಪ
ಪಶ್ಚಾತಾಪ
ಹಾದರದ ಹೆಂಗಸಿಗೆಂಥ
ಪಶ್ಚಾತಾಪ
ಹಾದರದ ಹಣಕ್ಕೆಂತಹ ಪಶ್ಚಾತಾಪ
ಹಾದಿಯ ಕುಡುಕನಿಗೆಂತಹ ಪಶ್ಚಾತಾಪ
ಹಾದಿಯ ಹಂದಿಗೆಂಥಹ ಪಶ್ಚಾತಾಪ
ಹರಿಯುವ ನೀರಿಗೆ
ಹರಿಯುವ ನೀರಿಗೆ
ಹರಿಯುವ ನೀರಿಗೆ
ಹೊಲಸೆನು ಮಾಡೀತು
ಹರಡುವ ಗಂಧಕೆ
ಕಲ್ಮಷವೇನುಮಾಡಿತು
ಬೆಳಗುವ ರವಿಗೆ
ಮೊಡವೇನು ಮಾಡೀತು
ಹಾಲಂತ ಶಶಿಗೆ
ಕತ್ತಲೇನು ಮಾಡೀತು
ಓಡುವ ಕಾಲಕೆ
ವಯಸ್ಸೇನು ಮಾಡೀತು
ಚಿಗುರುವ ಮೀಸೆಗೆ
ಬುದ್ದಿಯೇನು ಮಾಡೀತು
ಸವಿಯುವ ಅಮೃತಕೆ
ವಿಷವೇನು ಮಾಡೀತು
ಸತ್ಯದ ಮಾತಿಗೆ
ಸುಳ್ಳೇನು ಮಾಡೀತು
Saturday, February 1, 2014
ಅಣ್ಣ ಬಸವಣ್ಣ
ಅಣ್ಣ ಬಸವಣ್ಣ
ಕಿತ್ತಿದೆ ದಾರವ
ಅಪ್ಪಿದೆ ಲಿಂಗವ
ಕಟ್ಟಿದೆ ಮಂಟಪವ
ಹಾಡಿದೆ ವಚನವ
ನಿನಗಾರು ಸಾಟಿ
ಅಣ್ಣ ಬಸವಣ್ಣ
ಧಿಕ್ಕರಿಸಿ ಪೀಠವ
ಸ್ವೀಕರಿಸಿ ಆಸನವ
ಹಚ್ಚಿದೆ ದೀಪವ
ಪಸರಿಸಿದೆ ಜ್ಞಾನವ
ಅಳಸಿದೆ ಅಸ್ಪ್ರಶ್ಯವ
ಬಳಸಿದೆ ನಿಷ್ಕಲ್ಮಷವ
ಬೆಳಸಿದ ಕಾಯಕವ
ನಡೆಸಿದೆ ದಾಸೋಹವ
ತೊಳಸಿ ಮನವ
ಬಳಸಿ ಪ್ರೇಮವ
ಉಳಿಸಿ ನೇಮವ
ಹರಿಸಿದೆ ಭಾವವ
ನಿನಗಾರು ಸಾಟಿ
ಅಣ್ಣ ಬಸವಣ್ಣ
ಕುಡ್ಕ
ನಾನ್ ಕುಡ್ಕ್ ಸ್ವಾಮಿ ... ಕುಡ್ಕ್
ನಾನು ಕುಡ್ಕ್ ಸ್ವಾಮಿ ಕುಡ್ಕ
ಮುಖಾ - ಮೊತಿ ತೊಲೆಯೊನಲ್ಲ
ಹಲ್ಲು - ಗಿಲ್ಲು ಉಜ್ಜೋನಲ್ಲ
ಸ್ನಾನ - ಗೀನಾ ಮಾಡೊನಲ್ಲ
ಬಟ್ಟೆ - ಬರೆ ಮೊಸಂಗಿಲ್ಲ
ನಾನು ಕುಡ್ಕ್ ಸ್ವಾಮಿ ಕುಡ್ಕ್
ದುಡಿಮೆ - ಗಿಡಿಮೆ ಗೊತ್ತಿಲ್ಲ
ಸಾಲ - ಪಾಲ ಊರಲ್ಲೆಲ್ಲಾ
ಹೆಂಡ್ರು - ಮಕ್ಳು ಮನಿಯಾಗಿಲ್ಲ
ತಂದಿ - ತಾಯಿ ನೆನಪಾಗೊಲ್ಲ
ನಾನು ಕುಡ್ಕ್ ಸ್ವಾಮಿ ಕುಡ್ಕ್
ಊರು - ಕೇರಿ ಸುತ್ತೊನಲ್ಲ
ಹೆಣ್ಣು - ಹೊನ್ನು ಮುಟ್ಟೋನಲ್ಲ
ಆಸ್ತಿ - ಪಾಸ್ತಿ ಗಳಿಸೊನಲ್ಲ
ಸಿಂಧೆ - ಗಿಂಧೆ ಬಿಡೋನಲ್ಲ
ಸಾರಾಯಿ ಒಂದೆ ನನ್ ಲೋಕವೆಲ್ಲ
ಬರೆಯುವ ಮುನ್ನ
ಬರೆಯುವ ಮುನ್ನ
ಬರೆಯುವ ಮುನ್ನ
ಮರೆಯಲೆ ನಿನ್ನ
ಮರೆತರೆ ನಿನ್ನ
ಬರೆಯಲಿ ಹೆಂಗ
ಪ್ರೀತಿಸುವ ಮುನ್ನ
ಸೋತೆನೆ ಚಿನ್ನ
ಸೋಲದೆ ನನ್ನ
ಪಡೆಯಲಿ ಹೆಂಗ
ಹೋಗುವಾ ಮುನ್ನ
ಗೆದ್ದೆಯಾ ನನ್ನ
ಗೆಲ್ಲದೆ ನನ್ನ
ಮರೆತೆ ಹೆಂಗ
ಮದುವೆಗೂ ಮುನ್ನ
ತುಳಿದೆ ನನ್ನ
ತುಳಿಯದೇ ನನ್ನ
ಸಾಯಿಸಿದೆ ಹೆಂಗ
ಕಿಚ್ಚಿನ ಮುನ್ನ
ನೋಡದಿರು ನನ್ನ
ನೋಡಿದರು ನನ್ನ
ತೊರೆದೆ ಹೆಂಗ
Newer Posts
Older Posts
Home
Subscribe to:
Posts (Atom)