Sunday, November 24, 2019

ಚುಟುಕು


ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!

Wednesday, November 20, 2019

ಸಾಕಿ

ವಿರಹದ ಬೇಗೆಯಲ್ಲಿ
ಬೆಂದು...ಬೆಂದು...
ಬಳಲಿಹೋಗಿರುವೆ,
ಇಂದಿರುಳಿಗಾದರು ಅವಳ
ನೆನಪುಗಳಿಂದ ದೂರವಿರಿಸು
ಸಾಕಿ....
ಈ ರಾತ್ರಿಗಾದರೂ...
ಕೈಗೂಡದ ಕನಸುಗಳನ್ನು
ನನಸಾಗಿಸಿಕೊಳ್ಳುವ
ವ್ಯರ್ಥ ಪ್ರಯತ್ನವನ್ನಾದರೂ
ಮಾಡುವೆ!!

Saturday, November 16, 2019

ಚುಟುಕು

ನಾನೆ ಪಂಜರದ ಹಕ್ಕಿ
ಅವಳೊಲವಲ್ಲಿ!
ಇನ್ನೂ ಸೆರೆಯಾಗುವ
ಮಾತೆಲ್ಲಿ!
ನಾನೆ ಮರೆಯಾಗಬೇಕಿದೆ
ಅವಳ ಸೀರೆ
ಸೆರಗಿನಂಚಿನಲ್ಲಿ!

ಚುಟುಕು

ವಾದ್ಯದ ತರಂಗಗಳಿಗೆ
ಮಿಡಿಯುವ ನೀನು...
ನನ್ನೆದೆಯ ತರಂಗದ ರಾಗವು
ನಿನಗೆ ಕೇಳಿಸದೇನು?
ಪಲ್ಲವಿಗೆ ಸೋತು ಹೋಗುವ
ನೀನು.... ಯುಗಳ ಗೀತೆಗಳನ್ನು
ಹಾಡಿದರೂ...ನಿನಗೆ
ಕೇಳಿಸುತ್ತಿಲ್ಲವೇನು?

ಚುಟುಕು

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

Sunday, November 10, 2019

ರಂಗೀ..

ವಿಳಾಸವಿಲ್ಲದ
ನಿನ್ನೂರನ್ನು ಬೇಕಿದ್ದರು
ಹುಡುಕಿಕೊಂಡು
ಬರುವೆ ರಂಗೀ....
ಎದುರಾದಾಗ
ನಿನ್ನ ದಿವ್ಯ ನಿರ್ಲಕ್ಷ್ಯದ
ನೋಟವನ್ನು ನಾ
ಹೇಗೆ ಸಹಿಸಿಕೊಳ್ಳಲಿ!

ಶಾಯರಿ

ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!

Saturday, November 9, 2019

ಚುಟುಕು

ನಿನಗೆಂದೆ ಕಟ್ಟಿದ
ಜೋಳಿಗೆಯಲ್ಲಿ.... ನಾ
ಬರೆದಿಟ್ಟ ಕವಿತೆಗಳೆಲ್ಲ
ನಿದಿರುಸುತ್ತಿವೆ!
ಏನು ಮಾಡಲೀಗ?
ಬಂದರೆ, ಇವುಗಳನ್ನು ಎಬ್ಬಿಸುವುದೋ?
ಕರೆಯದೆ, ನಾನೊಬ್ಬನೆ
ವಿರಹವನ್ನು ಅನುಭವಿಸುವುದೊ?


ಚುಟುಕು

ಲೆಕ್ಕ ಇಟ್ಟವರಾರಿಲ್ಲಿ?
ನಿನ್ನ ಕಣ್ಣೊಟದ
ಬಾಣಕ್ಕೆ, ಹತ್ಯೆಯಾಗಿ
ಹೋದವರನ್ನು!!
ಕುರುಡರಾಗಿಬಿಟ್ಟಿದ್ದಾರೆ
ಎಲ್ಲರೂ... ನಿನ್ನಂದಕ್ಕೆ!!!
ಯಾರು ದಾಖಲಿಸಿಕೊಳ್ಳುತ್ತಲೆ
ಇಲ್ಲ, ಫಿರ್ಯಾದಿಯನ್ನು!

Wednesday, November 6, 2019

ಚುಟುಕು

ಮನಸುಗಳೆ....
ಬೇರತಾದ ಮೇಲೆ
ಬೇವರಿನ ವಾಸನೆಗೇತಕೆ
ಅಂಜುವೆ!!
ನಮಗೇತಕೆ?
ಹೆಜ್ಜೆ....ಹೆಜ್ಜೆಗೂ... 
ಲಜ್ಜೆಯೆನ್ನುವ ಈ 
ನಿರ್ಲಜ್ಜ ಜಗದ
ಗೊಡವೆ!!

Tuesday, November 5, 2019

ಚೆನ್ನಿ


ಹಿಂಗ್ ಕಣ್ಣನ್ಯಾಗ ಮಾತಾಡೊದನ್ನ ನೀ... ಯಾವಾಗ 
ಬಿಡ್ತಿದಿ?, ಲೆಕ್ಕ ಇಡಲಾರ್ದಷ್ಟ ದಿವ್ಸಾ...ಸುಟ್ಟ್ಹೊಂಟಾವಿಲ್ಲೆ...
ಯಾಕ್ ಸುಮ್ನ ಕಾಲ ಕಳಿಯಾಕ ಹತ್ತಿದಿ?
ಬೆಂಕಿ ಹಚ್ಚಲಾರ್ದನ ಒಳ್ಗೊಳ್ಗ ಸುಟ್ಟ ಹೊಂಟೆನ ನಾನಿಲ್ಲೆ
ಗೊತ್ತಿಲ್ಲೇನ, ತಣ್ಗ ಮಾಡೊ ದವಾ ನಿನ್ಹತ್ರನ ಐತಿ...
ಬಿಟ್ಟ ಕಣ್ ಬಿಟ್ಕೊಂತ ಮಳ್ಳಿಯಂಗ ಕುತ್ಗೊಂಡಿಯಲ್ಲೆ ಅಲ್ಲೆ

ಅನುಮಾನ ಮಾಡಬ್ಯಾಡ ಹುಡ್ಗಿ, ನಿನ್ಮ್ಯಾಲಿನ ಪ್ರೀತಿ ಮ್ಯಾಲೆ
ಗೊತ್ತೈತನು ಅಳ್ದ, ತೂಗಿ ಲೆಕ್ಕ ಮಾಡಾಕ ಪ್ರೀತಿಗಿನ್ನೂ ಎಲ್ಲಿ ತಕ್ಕಡಿ..ನ ಸಿಕ್ಕಿಲ್ಲ...
ಚೀಲ್ದಾಗ ತುಂಬಲಾರ್ದಷ್ಟ, ಗೋದಾಮನ್ಯಾಗ ನಿಟ್ಟ ಒಟ್ಟಲಾರದಷ್ಟು ನನ್ನೆದಿಯೊಳ್ಗ ತುಂಬಿ ತುಳ್ಕಾಕ್ಹತ್ತೈತಿ 
ಇದು ನಿಂಗಿನ್ನ್.. ಗೊತ್ತಿಲ್ಲ...

ಸೇರನ್ಯಾಗ ತುಂಬಾಕ ಹೋಗಬ್ಯಾಡ, ಮರದಾಗ ಹಸ್ನss
ಮಾಡ್ಕೊಂತ ಕುಂದ್ರಬ್ಯಾಡ... ಬೇಕಿದ್ರ ಸಾಣ್ಗಿ ಹಿಡ್ದ ನೋಡ!!!
ಒಂದ್ಸಲ!!!, ಒಂದ ಒಂದ ಕಾಳ ಹುಳ್ಕ ಬರೋದಿಲ್ಲ ನನ್ನ ಪ್ರೀತ್ಯಾಗ
ನಿಗಿನಿಗಿ ಕೆಂಡದ ಮ್ಯಾಲಿಟ್ಟ ನೋಡ...ಕುದ್ದು..ಕುದ್ದು...ಅರಳಿ ಹೂವಾಕ್ಕೈತಿ.. ಹೊರ್ತ...ಹಳಿಸಂತು ಹೋಗುದಿಲ್ಲ!

ಊಟದಾಗಿನ ಉಪ್ಪಿನಕಾಯ್ಹಂಗ....ನೆಕ್ಕಿ ನೋಡಬ್ಯಾಡ, 
ಹುಣ್ಮಿ ಹೊಳ್ಗಿಯಂಗ ಬಾಯ್ಚಪ್ಪರಿಸಿ ನೋಡ....
ನನ್ನೊಳ್ಗ ಬೇವು.. ಐತಿ, ಬೆಲ್ಲಾನೂ ಐತಿ... ಎರ್ಡನ್ನ
ಬೇರ್ಸಿ ಯುಗಾದಿ ಮಾಡ್ಕೊ, ಸಾಕ್ಷಿಗೆ ಕಾರ್ತಿಕಕ್ಕೊಂದ
ತೊಟ್ಲ ತೂಗಸ್ಲಿಲ್ಲಂದ್ರ ಕೇಳ!!

ಇನ್ನ ತಡಮಾಡಬ್ಯಾಡ ಲಡ್ಕಿ.... ಹರೆ ಹರ್ದ ಹೊಂಟೈತಿ
ಖಾಲಿಯಾದ ಮೇಲೆನೈತಿ 
ನೀನು ಒಳ್ಳಾಗು...‌ನಾ ರುಬ್ಬಗುಂಡ ಆಕ್ಕಿನಿ..‌ಬಾಳ್ವೆದಾಗಿನ
ಎಲ್ಲಾ ಕಷ್ಟಾನೂ ರುಬ್ಬಿ ಹಾಕೋನು...
ಮತ್ತ್ ನೀ ಮಡ್ಕಿಯಾಗು... ನಾ ಕೂಡಗೋಲ ಆಕ್ಕೈನಿ
ಅರ್ಮನಿಯಂತ ಗುಡ್ಸಿಲೊಳ್ಗು ನಾವ್ ಸುಖಾ ಅನ್ನೊ
ಬೆಣ್ಣಿ ಕಡಿಯೊನ ಚೆನ್ನಿ.... ಸುಖಾ ಅನ್ನೊ ಬೆಣ್ಣಿ ಕಡಿಯೊನು

Saturday, November 2, 2019

ಶಾಯರಿ

ನಾ ಕೊಟ್ಟ ಬಳೆಗಳನ್ನು
ಅವಳು ತೊಡದೆ
ಹೋಗಿದ್ದರು ಸಾಕಿತ್ತು
ಸಾಕಿ...
ಒಡೆದು ಹೋದಳು!!
ತಡೆದುಕೊಳ್ಳುವುದೆ ಈ...
ಹೃದಯ