Monday, November 29, 2021

ರಂಗೀ

ಮದುವೆಯಾಗಿ
ಮೂರು ಮಕ್ಕಳ
ತಂದೆಯಾಗಿರುವೆ ಈಗ...
ಹೂವನ್ನೀಡಿದು ಎದುರು
ಬಂದು ನಿಂತರೆ ಹೇಗೆ?
ರಂಗೀ...
ಸಾಲದ್ದಕ್ಕೆ ಲೈಫ್ ಟೈಮ್
ಒಂಬತ್ತು ತಿಂಗಳಿನ ಹೊಟ್ಟೆಯನ್ನು
ಹೊತ್ತು ನಿಂತಿರುವ "ಚಿರು ಯುವಕ" 
ನಾನೆಂದು ನಿನಗೆ ತಿಳಿದಿಲ್ಲವೇನು?

ರಂಗೀ

ಹೀಗೆ ಒಂಟಿ ಕಣ್ಣಲಿ
ಎಷ್ಟಂತ ಅಳುವೆ?
'ಅಲ್ಫಾ, ಡೆಲ್ಟಾ, ಕರೋನಾದಂತ'
ಅಲೆಗಳೆ ಇಳಿದಿರುವಾಗ, ಇನ್ನೀ...
ಒಮಿಕ್ರಾನಿನ ಭಯವೇತಕೆ
ರಂಗೀ....
ಹೋಗಲಿಬಿಡು ಇದೊಂದು
ಸೀಜನ್ನು!!
ಮುಂದಿನ ಸಲ ತಂದರಾಯಿತಲ್ಲವೆ
ಬಂಗಾರವನ್ನು!!

Sunday, November 28, 2021

ರಂಗೀ...

ಹೇಳಿದ್ದೆ..!!
ಕೇಳಲಿಲ್ಲ "ಡಯಟ್"
ಮಾಡಿ...ಮಾಡಿ... ನಡುವು
ನೋವಾಗುತಿಹುದೆಂದು
"ಬೇವಿನ ಮರ" ಕ್ಕೆ
ಭಾರವಾಗಿ ಏಕೆ ನಿಂತೆ?
ರಂಗೀ....
ಕೂಗಿದ್ದರೆ... ಈ
"ಬೇವಿನಕಟ್ಟಿ" ಇದ್ದನಲ್ಲ!!
ಹತ್ತಿಯಂತೆ ಎತ್ತಾಡಲು.

ರಂಗೀ

ಮನಸಿನ ಮಾತನ್ನು
ಹೇಳಲು....
ಕಲ್ಲು ಬಂಡೆಗಳ ಮೇಲೆ
ಕುಳಿತು, ಬರೆಯುತ್ತಾ-ಗೀಚುತ್ತಾ
ಪಾಪದ ಹಾಳೆಗಳನ್ನು ಹರಿದು
ಬಿಸಾಡುವ ಜರೂರೊತ್ತಾದರೂ...
ಏನಿತ್ತು?
ರಂಗೀ....
ಜೇನು ತುಂಬಿದ 
ತುಟಿಯಂಚಿಂದೊಂದು ಸಣ್ಣ
ಕಿರುನಗೆಯನ್ನು ಬೀರಿದ್ದರೂ
ಸಾಕಿತ್ತಿಲ್ಲವೇನು?

Saturday, November 27, 2021

ಚುಟುಕು

"ನೀನು" ಸತ್ತು
ಹೋದ ಮೇಲೆ, ಐದು
ರೂಪಾಯಿಯ ಊದಿನಕಡ್ಡಿಗೂ
ಭಾರವಾಗಿಬಿಡುವೆಯಲ್ಲೋ!!!
ಬದುಕಿದ್ದಾಗ, ಬೇಕು-ಬೇಡಗಳನ್ನೆಲ್ಲವನ್ನು
ಪೊರೈಸಿಕೊಂಡವರು..
"ನಿನ್ನ" ಹೆಣಕ್ಕೆ
ಬಾಡಿದ ಹೂ, ಹಳಸಿದ ಕಾಯಿಯನ್ನು
ಪೂಜೆಗೆಂದೆ ಹೊತ್ತು
ತರುವರಲ್ಲೊ...!!

ಚುಟುಕು

ಕೊನೆಗೂ.....
ಈ ಹೂಗಳೆದೆಯಳಲು
ಕೇಳಿಸಿಕೊಳ್ಳದೆ ನಡೆದು
ಹೋದೆಯಲ್ಲ!!!
ರಂಗೀ.....
ತೋಟದ ಮಾಲೀಕನಿಗೆ
ಕಟ್ಟಬೇಕಿದೆ ಹೂ ಬಾಕಿಯ
ಸುಂಕ. ಯಾರಲ್ಲಿ ಹೇಳಿಕೊಳ್ಳಬೇಕು
ಹೇಳೀಗ? ನನ್ನೊಳಗಿನ
ಸಂಕಟ.

ಚುಟುಕು

ಎಷ್ಟೊಂದು ತುಂಬಿಕೊಳ್ಳುವೆ?
ನನ್ನೀ... ರೂಪವನು, ನಿನ್ನ
ಕಂಗಳ ಬಟ್ಟಲಿನಲ್ಲಿ!!
ರಂಗೀ...
ಹುಷಾರು!! ಅಪ್ಪಿತಪ್ಪಿಯೂ
ಕಣ್ಣೀರನ್ನು ಹಾಕಬೇಡ.
ಮತ್ತೆ ನಾನು ಜಾರಿ ಬಿಳಬೇಕಾದಿತು
ಮಧುಶಾಲೆಯ ಮಾನಿನಿಯ
ತೆಕ್ಕೆಯಲ್ಲಿ!!


ರಂಗೀ

ಸಮಾನ ಮನಸ್ಕರ ಸಾವು,
ನೋವು-ಸಂಕಟಗಳನ್ನೆಲ್ಲವ
ಕಂಡು, ತಳಮಳಿಸುತ್ತಿರುವ
ಈ ಮನಸ್ಸಿಗೆ ಸಂತೈಸುವರಾದರು
ಯಾರು? ರಂಗೀ.....
ಮರೆತು ಬಿಡಿ, ಆದದ್ದು
ಆಗಿ ಹೋಯಿತು ಎನ್ನುವವರ
ಮಧ್ಯೆ, ಹೋದವರೆಲ್ಲ, ಕೈ
ಒರೆಸಿಕೊಂಡು ಬಿಸಾಡುವ "ರದ್ದಿ"
ಹಾಳೆಗಿಂತ ಕಡೆಯೇನು?

ರಂಗಿ..

ಹುಷಾರು....!!
ಬಳ್ಳಿಯಂತಹ ನಡುವಿಗೆ
ಹೂವಿನ ಮುಳ್ಳುಗಳು
ಚುಚ್ಚಿಬಿಟ್ಟಾವು
ರಂಗೀ...
ಹ್ಞೂಂ.... ಅನ್ನು
ಬೇಕಿದ್ದರೆ, ಒಂಬತ್ತು
ತಿಂಗಳಲ್ಲಿ ಹೂವಂತ ಮಗುವನ್ನೆ
ನೀಡುವೆ ಕಂಕುಳಿಗೆ.