Thursday, February 3, 2011
ಮದನ ಪುರಾಣ
ಮದನ ಪುರಾಣ
ಮುಕ್ಕಣ್ಣನ ಕಣ್ಣಿಗೆ ಗುರಿಯಾಗಿ
ಮರುಜನ್ಮ ಪಡೆದವನು ನೀನು
ಲಂಕಾಸುರನ ಎದೆಯಲ್ಲಿ ಹುಟ್ಟಿ
ಲಂಕೆಯನೆ ದಹಿಸುವಂತೆ ಮಾಡಿದವನು ನೀನು
ಶೂರ್ಪಿಯ ಮನವನ್ನು ಹೊಕ್ಕು
ಅವಳ ನಾಸಿಕವೇ ಕತ್ತರಿಸುವಂತೆ ಮಾಡಿದೆ ನೀನು
ಇಷ್ಟೆಲ್ಲಾ ಇದ್ದರೂ
ಶಿವಶರಣೆ ಅಕ್ಕನ ಚಿತ್ತವನು ಕೊಂಕಿಸದೆ ಸೋತೆ
ತೇಜೋಸುತನಾದ ವಿವೇಕಾನಂದನ ಮನಸ್ಸನ್ನು ತಟ್ಟದೆ ಹೋದೆ
ಮುಕ್ಕಣ್ಣನ ಕಣ್ಣಿಗೆ ಗುರಿಯಾಗಿ
ಮರುಜನ್ಮ ಪಡೆದವನು ನೀನು
ಲಂಕಾಸುರನ ಎದೆಯಲ್ಲಿ ಹುಟ್ಟಿ
ಲಂಕೆಯನೆ ದಹಿಸುವಂತೆ ಮಾಡಿದವನು ನೀನು
ಶೂರ್ಪಿಯ ಮನವನ್ನು ಹೊಕ್ಕು
ಅವಳ ನಾಸಿಕವೇ ಕತ್ತರಿಸುವಂತೆ ಮಾಡಿದೆ ನೀನು
ಇಷ್ಟೆಲ್ಲಾ ಇದ್ದರೂ
ಶಿವಶರಣೆ ಅಕ್ಕನ ಚಿತ್ತವನು ಕೊಂಕಿಸದೆ ಸೋತೆ
ತೇಜೋಸುತನಾದ ವಿವೇಕಾನಂದನ ಮನಸ್ಸನ್ನು ತಟ್ಟದೆ ಹೋದೆ
ನಿರಂತರ
ನಿರಂತರ
ಅಲೆಯ ಮೇಲೊಂದು ಅಲೆ
ಸಾಗಿ ಬರುತಿಹುದು ತಡೆಯಿಲ್ಲದೆ
ಚಿಗುರಿನ ಮೇಲೆ ಚಿಗುರು
ಬರುತಿಹುದು ಯಾವ ಬಂಧವಿಲ್ಲದೆ
ಹೂವಿನ ನಂತರ್ ಹೂವೊಂದು
ಅರಳುತಲಿಹುದು ದುಂಬಿಗು ಕಾಯದೆ
ಕವಿತೆಯ ಮೇಲೊಂದು ಕವಿತೆ
ಹುಟ್ಟುತಿಹುದು ಯಾವ ಭಾವನೆಗೂ ನಿಲುಕದೆ
ಜೀವದ ಮೇಲೆ ಜೀವ ಹುಟ್ಟುತಿದೆ
ಸಾವಿನ ಭಯವಿಲ್ಲದೆ ಹಾಗೆ
ಮರಣದ ನಂತರ ಮರಣ
ಬರುತಲಿದೆ ಬದುಕುವ ಆಸೆಯಿಲ್ಲದೆ
ಬದುಕಿನ ನಂತರ ಬದುಕು
ಹುಟ್ಟುತಿದೆ ಮರಣಕು ಅಂಜದೆ
ಅಲೆಯ ಮೇಲೊಂದು ಅಲೆ
ಸಾಗಿ ಬರುತಿಹುದು ತಡೆಯಿಲ್ಲದೆ
ಚಿಗುರಿನ ಮೇಲೆ ಚಿಗುರು
ಬರುತಿಹುದು ಯಾವ ಬಂಧವಿಲ್ಲದೆ
ಹೂವಿನ ನಂತರ್ ಹೂವೊಂದು
ಅರಳುತಲಿಹುದು ದುಂಬಿಗು ಕಾಯದೆ
ಕವಿತೆಯ ಮೇಲೊಂದು ಕವಿತೆ
ಹುಟ್ಟುತಿಹುದು ಯಾವ ಭಾವನೆಗೂ ನಿಲುಕದೆ
ಜೀವದ ಮೇಲೆ ಜೀವ ಹುಟ್ಟುತಿದೆ
ಸಾವಿನ ಭಯವಿಲ್ಲದೆ ಹಾಗೆ
ಮರಣದ ನಂತರ ಮರಣ
ಬರುತಲಿದೆ ಬದುಕುವ ಆಸೆಯಿಲ್ಲದೆ
ಬದುಕಿನ ನಂತರ ಬದುಕು
ಹುಟ್ಟುತಿದೆ ಮರಣಕು ಅಂಜದೆ
ನನ್ನವಳು
ನನ್ನವಳು
ನನ್ನವಳು ನನ್ನೆದೆಯನುರಾಗದ ಗೀತೆಯಂತವಳು
ಮುಂಗಾರಿನ ಮಿಂಚಂತವಳು
ಮಾಗಿಯ ಚಳಿಯಂತವಳು
ಸ್ವಾತಿಮುತ್ತಿನ ಮಳೆಯಂತವಳು
ನನ್ನವಳು
ವಸಂತ ಕೋಗಿಲೆಯ ಗಾನದಂತವಳು
ಗರಿಬಿಚ್ಚಿ ಕುಣಿಸುವ ನವಿಲಿನಂತವಳು
ಗರಿಗೆದರಿ ಹಾರುವ ಹಕ್ಕಿಯಂತವಳು
ಜುಳು ಜುಳು ಹರಿಯುವ ಜರಿಯಂತವಳು
ನನ್ನವಳು
ನನ್ನವಳು ನನ್ನ ಬಾಳಲಿ ಇನ್ನೂ
ಅರಳದ ಪ್ರೀತಿಯ ಮೊಗ್ಗು
ನನ್ನೆದೆಯ ದುಂಬಿಗೆ ಒಲವಿನ
ಮಕರಂದವ ಸೂಸುವ ಪ್ರೇಮದ
ಸುಮರಾಶಿಯಂತವಳು
ನನ್ನವಳು
ನನ್ನವಳು ನನ್ನೆದೆಯನುರಾಗದ ಗೀತೆಯಂತವಳು
ಮುಂಗಾರಿನ ಮಿಂಚಂತವಳು
ಮಾಗಿಯ ಚಳಿಯಂತವಳು
ಸ್ವಾತಿಮುತ್ತಿನ ಮಳೆಯಂತವಳು
ನನ್ನವಳು
ವಸಂತ ಕೋಗಿಲೆಯ ಗಾನದಂತವಳು
ಗರಿಬಿಚ್ಚಿ ಕುಣಿಸುವ ನವಿಲಿನಂತವಳು
ಗರಿಗೆದರಿ ಹಾರುವ ಹಕ್ಕಿಯಂತವಳು
ಜುಳು ಜುಳು ಹರಿಯುವ ಜರಿಯಂತವಳು
ನನ್ನವಳು
ನನ್ನವಳು ನನ್ನ ಬಾಳಲಿ ಇನ್ನೂ
ಅರಳದ ಪ್ರೀತಿಯ ಮೊಗ್ಗು
ನನ್ನೆದೆಯ ದುಂಬಿಗೆ ಒಲವಿನ
ಮಕರಂದವ ಸೂಸುವ ಪ್ರೇಮದ
ಸುಮರಾಶಿಯಂತವಳು
ನನ್ನವಳು
ಏಟು
ಪ್ಯಾಂಟು-ಏಟು
ಇಂದಿನ ಹುಡುಗಿಯರು ಹಾಕುತ್ತಾರೆ ಪ್ಯಾಂಟು
ಅದ ನೋಡಿ ಬಿಳದಿರು ಅವರಿಗೆ ನೀ ಗಂಟು
ಕಟ್ಟಬೇಕಾದಿತು ಅವರ ಕೊರಳಿಗೆ ಮೂರು ಗಂಟು
ತಲೆಯಲ್ಲಿ ಎದ್ದವೋ ಮಗನೆ ಮನೆಯಲ್ಲಿ
ಅವಳು ಕೊಡುವ ಲಟ್ಟಣಿಗೆಯ ಏಟು
ಇಂದಿನ ಹುಡುಗಿಯರು ಹಾಕುತ್ತಾರೆ ಪ್ಯಾಂಟು
ಅದ ನೋಡಿ ಬಿಳದಿರು ಅವರಿಗೆ ನೀ ಗಂಟು
ಕಟ್ಟಬೇಕಾದಿತು ಅವರ ಕೊರಳಿಗೆ ಮೂರು ಗಂಟು
ತಲೆಯಲ್ಲಿ ಎದ್ದವೋ ಮಗನೆ ಮನೆಯಲ್ಲಿ
ಅವಳು ಕೊಡುವ ಲಟ್ಟಣಿಗೆಯ ಏಟು
ನತ್ತು
ನತ್ತು
ಸುತ್ತದಿರು ಆ ನತ್ತಿನ ಸುತ್ತ
ಆ ನಡುವಿನ ಸುತ್ತ
ಕಾಲ್ಗೆಜ್ಜೆಯ ಸುತ್ತ
ನತ್ತು ಕಟ್ಟಿತೋ ನಿನ್ನ ಚಿತ್ತದೊಳಗೆ
ಗೆದ್ದಿಲೆ ಇಲ್ಲದ ಹಾವಿನ ಹುತ್ತವನು
ಹುತ್ತದೊಳಗಿನ ಹಾವು ನೀನಾಗಿ
ನಿನ್ನಾಡಿಸುವ ಪುಂಗಿ ಅವಳಾಗುವಳೋ ಪುಟ್ಟ
ಸುತ್ತದಿರು ಆ ನತ್ತಿನ ಸುತ್ತ
ಸುತ್ತದಿರು ಆ ನತ್ತಿನ ಸುತ್ತ
ಆ ನಡುವಿನ ಸುತ್ತ
ಕಾಲ್ಗೆಜ್ಜೆಯ ಸುತ್ತ
ನತ್ತು ಕಟ್ಟಿತೋ ನಿನ್ನ ಚಿತ್ತದೊಳಗೆ
ಗೆದ್ದಿಲೆ ಇಲ್ಲದ ಹಾವಿನ ಹುತ್ತವನು
ಹುತ್ತದೊಳಗಿನ ಹಾವು ನೀನಾಗಿ
ನಿನ್ನಾಡಿಸುವ ಪುಂಗಿ ಅವಳಾಗುವಳೋ ಪುಟ್ಟ
ಸುತ್ತದಿರು ಆ ನತ್ತಿನ ಸುತ್ತ
Wednesday, February 2, 2011
ಚೆಸ್ಸು ೪೫೦
ಚೆಸ್ಸು-ಟೈಂ ಪಾಸು
ನಿಮಗಾಗಿಯೆ ತಂದದ್ದು ಈ ಚೆಸ್ಸು
ನಿನ್ನೆ ಕರೆದರೆ ನೀವಂದಿರಿ ಪಿಸ್ಸು
ನಿಡದಿರಿ ಇದಕ್ಕೆ ಗೇಟ್ ಪಾಸು
ಕಳೆಯುವದಾದರು ಹೇಗೆ
ಇಂದು ನಾಳೆಯ ಟೈಂ ಪಾಸು
ನಿಮಗಾಗಿಯೆ ತಂದದ್ದು ಈ ಚೆಸ್ಸು
ನಿನ್ನೆ ಕರೆದರೆ ನೀವಂದಿರಿ ಪಿಸ್ಸು
ನಿಡದಿರಿ ಇದಕ್ಕೆ ಗೇಟ್ ಪಾಸು
ಕಳೆಯುವದಾದರು ಹೇಗೆ
ಇಂದು ನಾಳೆಯ ಟೈಂ ಪಾಸು
ಹುಷಾರು
ಹುಷಾರು
ಅವರು ಕೊಲ್ಲುತ್ತಾರೋ ಮಗನೆ ಕಣ್ಣಿನ ಬಾಣದಲಿ
ನೀ ಹುಡುಕದಿರು ಅವರನ್ನು ಷಾಪಿಂಗ ಮಾಲಿನಲಿ
ಅವರ ಹಿಂದಲೆದು ಹುಚ್ಹಾಗದಿರು ಈ ಪ್ರೀತಿಯಲಿ
ಹೀಗೆಯೆ ಹೋದರೆ ನಿನ್ನನ್ನು ನೋಡಬೇಕಾದಿತು
ಹೂ ತುಂಬಿ ತುಳುಕುವ ಪಾರ್ಕಿನಲ್ಲಲ್ಲ
ಸಿಂಗರಿಸಿದ ಕಲ್ಯಾಣ ಮಂಟಪದಲ್ಲಲ್ಲ
ನಿನ್ನಂಥವರ ಮಾವನ ಮನೆಯಾದ ಮೆಂಟಲ್ ಆಸ್ಪತ್ರೆಯಲಿ
ಅವರು ಕೊಲ್ಲುತ್ತಾರೋ ಮಗನೆ ಕಣ್ಣಿನ ಬಾಣದಲಿ
ನೀ ಹುಡುಕದಿರು ಅವರನ್ನು ಷಾಪಿಂಗ ಮಾಲಿನಲಿ
ಅವರ ಹಿಂದಲೆದು ಹುಚ್ಹಾಗದಿರು ಈ ಪ್ರೀತಿಯಲಿ
ಹೀಗೆಯೆ ಹೋದರೆ ನಿನ್ನನ್ನು ನೋಡಬೇಕಾದಿತು
ಹೂ ತುಂಬಿ ತುಳುಕುವ ಪಾರ್ಕಿನಲ್ಲಲ್ಲ
ಸಿಂಗರಿಸಿದ ಕಲ್ಯಾಣ ಮಂಟಪದಲ್ಲಲ್ಲ
ನಿನ್ನಂಥವರ ಮಾವನ ಮನೆಯಾದ ಮೆಂಟಲ್ ಆಸ್ಪತ್ರೆಯಲಿ
ಬೊಕೆ
ಯಾವ ಬೊಕ್ಕೆ
ನೀ ಬಿಳದಿರು ತಮ್ಮ ಅವಳ ಪ್ರೀತಿಯ ತೆಕ್ಕೆಯಲಿ
ಕೊಟ್ಟು ಕಳಿಸದಿರು ನಿನ್ನ ಪ್ರೀತಿಯನು ಬೊಕ್ಕೆಯಲಿ
ಇಂದಿನ ಕನ್ಯೆಯರು ಬಲು ಹುಷಾರು ಈ ಪ್ರೀತಿಯಲಿ
ಎಸೆದಾರೋ ತಮ್ಮ ನೀ ಕೊಟ್ಟ ಬುಕ್ಕೆಯನು ಕಸದ ತೊಟ್ಟಿಯಲಿ
ನೀ ಬಿಳದಿರು ತಮ್ಮ ಅವಳ ಪ್ರೀತಿಯ ತೆಕ್ಕೆಯಲಿ
ಕೊಟ್ಟು ಕಳಿಸದಿರು ನಿನ್ನ ಪ್ರೀತಿಯನು ಬೊಕ್ಕೆಯಲಿ
ಇಂದಿನ ಕನ್ಯೆಯರು ಬಲು ಹುಷಾರು ಈ ಪ್ರೀತಿಯಲಿ
ಎಸೆದಾರೋ ತಮ್ಮ ನೀ ಕೊಟ್ಟ ಬುಕ್ಕೆಯನು ಕಸದ ತೊಟ್ಟಿಯಲಿ
ಮಸಾಲೆ ೩೭೦
ಮಸಾಲೆ
ಹೋಟೆಲೊಂದರಲ್ಲಿ ನನ್ನವಳೊಂದಿಗೆ
ಕುಳಿತಿದ್ದ ನಾನು ಪಕ್ಕದಲ್ಲಿದ್ದ ಚೆಲುವೆಯನು
ನೋಡುತ್ತಾ ಮಾಣಿಗೆ ಹೇಳಿದೆ 'ಎರಡು ಮಸಾಲೆ'
ಇದ ಕಂಡು ನನ್ನವಳು ಇನ್ನು ಹತ್ತಿರ ಬಂದು
ಹೇಳಿದಳು 'ತಾವಿಗ ಮನೆಗೆ ಬಂದರೆ ನಿಮಗರಿತಿನಿ ಮಸಾಲೆ'
ಹೋಟೆಲೊಂದರಲ್ಲಿ ನನ್ನವಳೊಂದಿಗೆ
ಕುಳಿತಿದ್ದ ನಾನು ಪಕ್ಕದಲ್ಲಿದ್ದ ಚೆಲುವೆಯನು
ನೋಡುತ್ತಾ ಮಾಣಿಗೆ ಹೇಳಿದೆ 'ಎರಡು ಮಸಾಲೆ'
ಇದ ಕಂಡು ನನ್ನವಳು ಇನ್ನು ಹತ್ತಿರ ಬಂದು
ಹೇಳಿದಳು 'ತಾವಿಗ ಮನೆಗೆ ಬಂದರೆ ನಿಮಗರಿತಿನಿ ಮಸಾಲೆ'
ಮಲ್ಲಿಗೆ ತೂಕ
ಮಲ್ಲಿಗೆ ತೂಕ
ನಮ್ಮವನ ಮನದರಸಿ ಮಲ್ಲಿಗೆಯ ತೂಕ
ಆದ್ರ ನೋಡಾಕದಾಳ ಮೈಸೂರ ಪಾಕ
ಇಂವ ಹತ್ರ ಹೋದ್ರ ಕೊಡತಾಳ
ಕಪಾಳಕ್ಕೆರಡು ಕರೆಂಟ್ ಶಾಕ
ನಮ್ಮವನ ಮನದರಸಿ ಮಲ್ಲಿಗೆಯ ತೂಕ
ಆದ್ರ ನೋಡಾಕದಾಳ ಮೈಸೂರ ಪಾಕ
ಇಂವ ಹತ್ರ ಹೋದ್ರ ಕೊಡತಾಳ
ಕಪಾಳಕ್ಕೆರಡು ಕರೆಂಟ್ ಶಾಕ
ನಾನಾರು..
ನಾನಾರು......?
ನಾನೇನು ಸಭೆಯೋಳು ಬಿಲ್ಲನು ಮುರಿದು
ಸೀತೆಯನು ಗೆದ್ದ ರಾಮನಲ್ಲ
ಸೀತೆಗಾಗಿ ಮಾಯಾ ಜಿಂಕೆಯ
ಬೆನ್ನು ಹತ್ತುವ ಹುಚ್ಚು ಗಂಡನಲ್ಲ
ದ್ರೌಪದಿಯ ಮುಡಿಯನ್ನು ಕಟ್ಟಲು
ದುಶ್ಯಾಸನನ ಎದೆಯನು ಬಗೆದ
ಭೀಮನಲ್ಲ
ಏಳಿ ಎದ್ದೇಳಿ, ಎಂಬ ಅಮೃತವಾಣಿಯ
ಕರ್ತ್ರು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
ಕೋಟೆ ಕೊತ್ತಲುಗಳಿಗೆ ರಕ್ತದ ಕಾಲುವೆಯನು
ಹರಿಸಿದವನು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
ಹರಿವ ನೀರಿಗೆ ಗೋಡೆಯ ಕಟ್ಟಿ ಬಂಜರು ನೆಲವನು
ಹಸಿರಾಗಿಸಿದವನು ನಾನಲ್ಲ
ಕಡಲನು ಹೊಕ್ಕು ಚಿಪ್ಪನು ಹೆಕ್ಕಿ ಮುತ್ತನು ಸೂಸಿದ
ಕುಶಲನು ನಾನಲ್ಲ
ನಾನಾರು.....?
ನಾನೇನು ಸಭೆಯೋಳು ಬಿಲ್ಲನು ಮುರಿದು
ಸೀತೆಯನು ಗೆದ್ದ ರಾಮನಲ್ಲ
ಸೀತೆಗಾಗಿ ಮಾಯಾ ಜಿಂಕೆಯ
ಬೆನ್ನು ಹತ್ತುವ ಹುಚ್ಚು ಗಂಡನಲ್ಲ
ದ್ರೌಪದಿಯ ಮುಡಿಯನ್ನು ಕಟ್ಟಲು
ದುಶ್ಯಾಸನನ ಎದೆಯನು ಬಗೆದ
ಭೀಮನಲ್ಲ
ಏಳಿ ಎದ್ದೇಳಿ, ಎಂಬ ಅಮೃತವಾಣಿಯ
ಕರ್ತ್ರು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
ಕೋಟೆ ಕೊತ್ತಲುಗಳಿಗೆ ರಕ್ತದ ಕಾಲುವೆಯನು
ಹರಿಸಿದವನು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
ಹರಿವ ನೀರಿಗೆ ಗೋಡೆಯ ಕಟ್ಟಿ ಬಂಜರು ನೆಲವನು
ಹಸಿರಾಗಿಸಿದವನು ನಾನಲ್ಲ
ಕಡಲನು ಹೊಕ್ಕು ಚಿಪ್ಪನು ಹೆಕ್ಕಿ ಮುತ್ತನು ಸೂಸಿದ
ಕುಶಲನು ನಾನಲ್ಲ
ನಾನಾರು.....?
Tuesday, February 1, 2011
ಯಾರದು ತಪ್ಪು
ಯಾರದು ತಪ್ಪು
ಸುಮವರಳಿ ಗಂಧವ ಸೂಸಿದೊಡೆ
ಬಾಲೆಯು ಕಿತ್ತು ಮುಡಿಗೆರಿಸಿಕೊಂಡರೆ
ಯಾರದು ತಪ್ಪು
ಕುಸುಮವರಳಿ ಗಂಧವ ಸೂಸಿದುದು ತಪ್ಪೆ
ಮುಡಿಯ ಸಿಂಗಾರಕೆ ಸುಮವನು ಕಿತ್ತಿದ
ಬಾಲೆಯ ತಪ್ಪೆ
ಭಾನನು ಜಾರಿದ ಬಿಂದು ಧರೆಯನು ತಟ್ಟಿ
ಲವಣದ ಒಡಲನು ಸೇರಿದರೆ
ಯಾರದು ತಪ್ಪು
ಭಾನನು ತೊರೆದು ಭುವಿಯನು ತಣಿಸುದುದು
ಹನಿಯ ತಪ್ಪೆ | ಉಕ್ಕಿ ಉಕ್ಕಿ ಬರುವ ಹನಿಯ
ರಭಸವ ತನ್ನೊಡಲೊಳಗೆ ಸೇರಿಸಿಕೊಳ್ಳುವ ಲವಣದ ತಪ್ಪೆ
ಕತ್ತಲೆಯ ಕಳೆದು ಬೆಳಕನು
ಚೆಲ್ಲುವ ದೀಪಕೆ ಸಂಜೆಯ
ತಂಗಾಳಿ ಸೋಕಿ ನಂದಿದರೆ
ಯಾರದು ತಪ್ಪು
ಹಾದಿಯ ಅಂಧತೆ ನೀಗಿಸಲು
ಬೆಳಕನು ಹರಿಸುವದು ದೀಪದ ತಪ್ಪೆ
ತಂಪಾಗಿ ಬೀಸಿದರು ಗಾಳಿಯು ದೀಪವ
ನಂದಿಸಿದರೆ ಯಾರದು ತಪ್ಪು
ಸುಮವರಳಿ ಗಂಧವ ಸೂಸಿದೊಡೆ
ಬಾಲೆಯು ಕಿತ್ತು ಮುಡಿಗೆರಿಸಿಕೊಂಡರೆ
ಯಾರದು ತಪ್ಪು
ಕುಸುಮವರಳಿ ಗಂಧವ ಸೂಸಿದುದು ತಪ್ಪೆ
ಮುಡಿಯ ಸಿಂಗಾರಕೆ ಸುಮವನು ಕಿತ್ತಿದ
ಬಾಲೆಯ ತಪ್ಪೆ
ಭಾನನು ಜಾರಿದ ಬಿಂದು ಧರೆಯನು ತಟ್ಟಿ
ಲವಣದ ಒಡಲನು ಸೇರಿದರೆ
ಯಾರದು ತಪ್ಪು
ಭಾನನು ತೊರೆದು ಭುವಿಯನು ತಣಿಸುದುದು
ಹನಿಯ ತಪ್ಪೆ | ಉಕ್ಕಿ ಉಕ್ಕಿ ಬರುವ ಹನಿಯ
ರಭಸವ ತನ್ನೊಡಲೊಳಗೆ ಸೇರಿಸಿಕೊಳ್ಳುವ ಲವಣದ ತಪ್ಪೆ
ಕತ್ತಲೆಯ ಕಳೆದು ಬೆಳಕನು
ಚೆಲ್ಲುವ ದೀಪಕೆ ಸಂಜೆಯ
ತಂಗಾಳಿ ಸೋಕಿ ನಂದಿದರೆ
ಯಾರದು ತಪ್ಪು
ಹಾದಿಯ ಅಂಧತೆ ನೀಗಿಸಲು
ಬೆಳಕನು ಹರಿಸುವದು ದೀಪದ ತಪ್ಪೆ
ತಂಪಾಗಿ ಬೀಸಿದರು ಗಾಳಿಯು ದೀಪವ
ನಂದಿಸಿದರೆ ಯಾರದು ತಪ್ಪು
ಕಾರ್ಗಿಲ್
ಬಿಸಿ ನೆತ್ತರಿನ
ಹಸಿದೊಡದಲಿನ
ಭರತೋದ್ಭವ ಪುರುಷ
ಸಿಂಹಗಳಿಹರಿಲ್ಲಿ
ಇಡದಿರೊಂದಡಿಯನು
ಎದೆಬಗೆದೊಗೆಯುವರು
ಅಂಧಕಾರಕಂಧಕದೊಳಗೆ
ಮರೆಯದಿರಿ ಪಾಪಿಗಳೇ
ಪಾಪದ ಫಲಕುಂಡಡುಗೆಯನು
ಬಿತ್ತದಿರಿನ್ನು ಭಯೋತ್ಪಾದಿಸೋ
ಬೀಜಗಳನು
ಕರ ಜೋಡಿಸಿರುತ್ತಮ ಭಾಂದವ್ಯಕೆ
ಮಡಿಲ ಮರಿಗಳಡಿಯಿಡುವ ನೆಲವ
ಹಸಿರಾಗಿಸೋಕೆ
ಕೋವಿಯ ಕಾವದು
ಸುಡದಿರಲಿ ತನುವನು
ಮದ್ದಿನ ಸದ್ದೊಳು
ಲಿನವಾಗದಿರಲಿ ಮನವದು
ಸಾಕಿನ್ನು ಮರೆಯೋಣ
ನೋವುಂಡ ಈ ದಶಕಕ್ಕೆ
ಹರಿಸುವ ಪ್ರೀತಿಯ ಹೊಳೆಯನು
ನೆತ್ತರನುಂಡು ಬರಡಾದ ಈ ಧರಿಣಿಗೆ
ನಾವು ನೀವುಗಳೆಲ್ಲಾ ಭರತ ಸಂಜಾತರೆ
ಬನ್ನಿರಿ ಸಾಗೋಣ ವಿಶ್ವ ಶಾಂತಿ ಪಥದತ್ತ
ಒಂದೊಂದೆ ಹೆಜ್ಜೆಯನಿಡುತ
ಹಸಿದೊಡದಲಿನ
ಭರತೋದ್ಭವ ಪುರುಷ
ಸಿಂಹಗಳಿಹರಿಲ್ಲಿ
ಇಡದಿರೊಂದಡಿಯನು
ಎದೆಬಗೆದೊಗೆಯುವರು
ಅಂಧಕಾರಕಂಧಕದೊಳಗೆ
ಮರೆಯದಿರಿ ಪಾಪಿಗಳೇ
ಪಾಪದ ಫಲಕುಂಡಡುಗೆಯನು
ಬಿತ್ತದಿರಿನ್ನು ಭಯೋತ್ಪಾದಿಸೋ
ಬೀಜಗಳನು
ಕರ ಜೋಡಿಸಿರುತ್ತಮ ಭಾಂದವ್ಯಕೆ
ಮಡಿಲ ಮರಿಗಳಡಿಯಿಡುವ ನೆಲವ
ಹಸಿರಾಗಿಸೋಕೆ
ಕೋವಿಯ ಕಾವದು
ಸುಡದಿರಲಿ ತನುವನು
ಮದ್ದಿನ ಸದ್ದೊಳು
ಲಿನವಾಗದಿರಲಿ ಮನವದು
ಸಾಕಿನ್ನು ಮರೆಯೋಣ
ನೋವುಂಡ ಈ ದಶಕಕ್ಕೆ
ಹರಿಸುವ ಪ್ರೀತಿಯ ಹೊಳೆಯನು
ನೆತ್ತರನುಂಡು ಬರಡಾದ ಈ ಧರಿಣಿಗೆ
ನಾವು ನೀವುಗಳೆಲ್ಲಾ ಭರತ ಸಂಜಾತರೆ
ಬನ್ನಿರಿ ಸಾಗೋಣ ವಿಶ್ವ ಶಾಂತಿ ಪಥದತ್ತ
ಒಂದೊಂದೆ ಹೆಜ್ಜೆಯನಿಡುತ
Subscribe to:
Posts (Atom)