Saturday, October 26, 2019

ಚುಟುಕು

ಚೂರಿ...
ಸಾಣೆ ಹಿಡಿದದ್ದಾರೇನು?
ತುಕ್ಕು ಹಿಡಿದದ್ದಾರೇನು? ಇರಿಯುವುದಾರೆ
ಇರಿದು ಕೊಂದುಬಿಡು...
ಹೀಗೆ, ಮೌನ ಬೀದಿಯಲ್ಲಿ
ನನ್ನನೊಬ್ಬನನ್ನೆ ಬಿಟ್ಟು
ಹೋಗಬೇಡ.

Friday, October 25, 2019

ಶಾಯರಿ

ಅವಳಿಗ...
'ಮೌನ'ವಾಸಿ
ಸಾಕಿ...
ನಾನೀಗ...
ನಿನ್ನ'ಮದ್ಯ'
ವಾಸಿ

Wednesday, October 23, 2019

ಚುಟುಕು

ನಿನ್ನ ಕುರಿತು 
ಬರೆವ ಸಾಲುಗಳಿಗೆ
ಕೊನೆಯೆ.... ಇಲ್ಲ!!!
ಯಾವ ರಾಗದಲ್ಲಿ
ಹಾಡಲಿ....?
ಒಂದೂ...
ನಿನ್ನಂದಕೆ ಹೋಲುತ್ತಿಲ್ಲ!!!

Monday, October 21, 2019

ಸಾಕಿ

ಪರದೆಯನ್ನೆಳೆದರೆ
ಪ್ರೀತಿಯು 
ಸಾಯುವುದೇನು?
ಸಾಕಿ..
ಮರೆಮಾಚಿದ
ದುಪ್ಪಟಕ್ಕೂ...
ಅದರ ಸೊಂಕು
ತಗಲುವುದಿಲ್ಲವೇನು?

ಚುಟುಕು

ಸಾಕು...
ತೆಗೆದಿಟ್ಟುಬಿಡು
ಉಸಿರುಗಟ್ಟಿ
ಹೋದಾತು!!!
ತೊಡಿಕೊಂಡುಬಿಡು
ಮನದ ಮಾತುಗಳನ್ನು
ಕನಸುಗಳಿಗೆ ಜೀವ,
ಬಂದರು... ಬಂದಾತು!!

Friday, October 18, 2019

ಕಜಲ್ ೫೦


ಬೆನ್ನು ಬಿದ್ದ ಬೇತಾಳದಂತೆಯೆ, ಮಸಣದಿಂದ
ನನ್ನ ಹೆಜ್ಜೆ ಗುರುತುಗಳನ್ನೆ ಹಿಂಬಾಲಿಸಿಕೊಂಡು
ಬರಬೇಡವೊ ಪಾಗಲ್...
ಸುರಿದುಕೊಳ್ಳುತ್ತಿರುವೆ... ತಣ್ಣೀರನ್ನೆ!!
ನೀನಿಲ್ಲವೆಂಬ ಸುದ್ದಿಯನ್ನು ಅರಿತು...
ಅರಿಯಲಾರದಂತೆ

ಬೆತ್ತಲೆಯ ಬೆನ್ನಿನ ಮೇಲೆ ಹಾಗೆಯೆ...
ಉಳಿಸಿಕೊಳ್ಳಬೇಕೆಂದುಕೊಂಡಿದ್ದೆ, ನಿನ್ನಧರದ ನೆನಪಿನ
ಕುರುಹುಗಳನ್ನು ಪಾಗಲ್...
ಇಲ್ಲ..!!! ಇಲ್ಲ..!! ತೊಳೆದುಕೊಂಡು ಬಿಡುವೆ,
ಬರುವವರು..ಅಲ್ಲಿ ತುಂಬುವುದು ಕಾಮವೊ!!
ಮೋಹವೊ!!, ವಿರಹವೊ!!! ವಿಷವೊ!! ನಾನ್ಹೇಗೆ
ಕಂಡುಕೊಳ್ಳಲಿ!!!

ಗೋಕುಲಾಷ್ಠಮಿಯಂದು ಕೊಡಿಸಿದ
ಈ ರಂಗು ರಂಗೀನ ದುಪ್ಪಟವನ್ನು... ನಿನ್ನ
ಗೋರಿಯ ಮೇಲೆ ಹೊದಿಸಿಬಿಡಬೇಕೆಂದಿದ್ದೆ ಪಾಗಲ್...
ಆದರೂ... ಎತ್ತಿಟ್ಟುಕೊಂಡೆ! ನೆನಪಿಗಾಗಲ್ಲ,
ಕಾಮದ್ಹಸಿವಿನ ವಿರಹಿಗಳ ಹಾಸಿಗೆಯಾಗಿಸಲು,
ಭುಜವ ಕಚ್ಚಿದ ನೋವಿಗೆ, ಸುರಿವ ಎರಡು ಹನಿ
ಕಣ್ಣೀರ ಒರೆಸಿಕೊಳ್ಳಲು...

ನಿಜವೆನಿಸಿತು ನನಗಿಂದು, ನಿನ್ನನು ಗೋರಿಯೊಳಗಿಟ್ಟು
ಮಣ್ಣನು ಸುರಿದ ಕ್ಷಣ...ಪ್ರೀತಿಗೆ ಸಾವಿಲ್ಲವೆಂಬುದು
ಪಾಗಲ್...
ಆದರೆ.......!!! ಮಸಣದ ಮೂಲೆ ಮೂಲೆಯನ್ನು ಹುಡುಕಿದರು..... ವಿರಹದ ಸಾವಿನ ಕುರುಹುವೆ
ಕಾಣಿಸುತ್ತಿಲ್ಲವಲ್ಲ!!, ಎರಡು ಒಂದೆ ನಾಣ್ಯ‌ದ 
ಎರಡು ಮುಖಗಳೇನು?

ಅಡಿಯಿಂದ ಮುಡಿಯವರೆಗೂ... ನೋವೆ ತುಂಬಿಕೊಂಡಿದ್ದರು,
ಅದ್ಹೇಗೆ ಸಂತಸವಾಗಿರುತ್ತಿದ್ದೆಯೋ? ಒಂದೆ ಒಂದು ಮಧು
ಬಟ್ಟಲನ್ನು ಕುಡಿದು ಪಾಗಲ್....
ಹೇಳಲು ನೀನಿಗಿಲ್ಲ!!, ನಾನು?....ಅಲ್ಲಿಗೀಗ ಬರುವ ಹಾಗಿಲ್ಲ!!
ನಿನೆಂದೂ ಚಿರನಿದ್ರೆಗೆ ಹಪಹಪಿಸಿದವನೆ ಅಲ್ಲ, ಮೈಗೇರಿದ
ಅಮಲಿನಲ್ಲೂ...ಅವಳ ಹೆಸರನ್ನೆ ಜಪಿಸುತ್ತಿದ್ದೆ..
ಮಣ್ಣಿನಲ್ಲಿ?....ಜಪಿಸಬೇಡ, ಸುತ್ತಲಿರುವ ಆತ್ಮಗಳೆಲ್ಲ
ಎದ್ದು ಕುಳಿತು ಬಿಟ್ಟಾವು!!

Wednesday, October 16, 2019

ಚುಟುಕು

ಹೂವುಗಳು.....
ಚುಚ್ಚಿ ನೋಯಿಸಬಹುದು
ನಿನ್ನಂಗಾಲನ್ನು
ಚೆಲುವೆ,
ಹೆಜ್ಜೆಯೂರುವುದಾದರೆ...
ನನ್ನೆದೆಯ ಮೇಲೆ
ಊರು...
ಎಡವಾದರೇನು?
ಬಲಗಾಲಾದರೇನು?

Tuesday, October 15, 2019

ಶಾಯರಿ ಹಿಂದಿ

ಯ್ಯೂಂ.....ನಾ ದೇಖ್ಹೊ
ಇನ್ ನಷಿಲಿ ಆಂಖೋಸೆ...
ದಿಲ್ ಕಿ ದಡಖನ್ ನಾ...
ರುಖ್ ಜಾಯೆ!!!

ತರಸ್ ಕರೋ.. ಇಸ್
ದಿವಾನೆಕೆ ಊಪರ್..
ದಿಲ್ ಮೆ ಪ್ಯಾರ ಕಾ
ಫೂಲ ಖಿಲ್ ಜಾಯೆ!!