Thursday, May 26, 2016

ತೊಗಟೆ

ಹತ್ತಿ ಕಾಯಿಯ ತೊಗಟೆ
ಬಲು ದಪ್ಪ| ಅದರೊಳಗಿನ
ಹತ್ತಿ ಬಲು ನಿಪ್ಪ

ಬದಾಮಿ ಕಾಯಿ ತೊಗಟಿ
ಬಲು ಗಟ್ಟಿ|  ಅದರೊಳಗಿನ
ಬದಾಮಿ ತಿನ್ನಾಕ ಇನ್ನೂ ತುಟ್ಟಿ

ಕಿತ್ತಳೆ ಹಣ್ಣಿನ ಸಿಪ್ಪಿ
ಬಲು ಮೆತ್ತಗ| ಅದನ್ನ ಸಿಳಾಕ
ಹೋದ್ರ ಕಣ್ಣಾಗ ಬರೀ ನೀರ

ಬಾಳೆ ಹಣ್ಣಿನ ಸಿಪ್ಪಿ
ಬಲು ಸುಲಭ| ಇದನ್ನ
ತಿಂದ್ರ ಮಲ ಇನ್ನೂ ಸುಲಭ

Wednesday, May 25, 2016

ಕರಿಮೋಡ

ಕರಿಮೋಡವು ನೀರಾಗಿ ಸುರಿದು, ಸರಿದು
ರವಿ ಕಿರಣಕೆ  ಮೋಡವು ಮ್ಯದುಂಬಿ ಬೆಳ್ಳಿಯ
ಬಟ್ಟಲಿನಂತೆ ನೀಲಾಕಾಶಾದಲ್ಲಿ ತೇಲುತಿರಲು
ಸುರಿದ ಹನಿಯು ನೆಲವ ತಣಿಸಿ, ಕೆರೆ-ತೊರೆಯ
ಉಣಿಸಿ ಧರೆಯ ಒಡಲ ಸೆಲೆಯ ಸೇರಿತು

ಕಳೆಯಿತೆರಡುದಿನ
ಆಗಸ ಖಾಲಿ ಖಾಲಿ, ಅಲ್ಲೊಂದು ಇಲ್ಲೊಂದು
ಬೆಳ್ಳಿಯ ಮೋಡಗಳ ಪಯಣ, ಭೂತಾಯಿಯ
ಒಡಲು ತಂಪಾಗಿ, ಹಸಿರು ಮೊಳೆತು
ಮರಗಿಡದೊಳು ಚಿಗುರೆಲೆ ಚಿಗುರಿ
ಮರವನಪ್ಪಿಸುಮಗಂಧವಸೂಸಿ
ಹಕ್ಕಿಯ ಕಲರವ ಬಾನಗಲ ತುಂಬಿ
ನಕ್ಕು ನಲಿಯಿತು ಕರಿಮೋಡ
ತಾಯಿಯ ಒಡಲನು ತಂಪಾಗಿಸಿತು
ಕರಿಮೋಡ

ನಾನೊಬ್ಬ ಕವಿಯೆಂದು

ನಾನಂದುಕೊಂಡಿದ್ದೆ....
ನಾನೂ ಒಬ್ಬ ಕವಿಯೆಂದು
ಒಲ್ಲದ, ಒಗ್ಗದ, ಹಿಗ್ಗದ, ಕುಗ್ಗದ
ಬಳಸಿದ, ಬಳಸಲಾರದ, ಸಿಕ್ಕ, ಸಿಗಲಾರದ
ಹಳೆ, ಹೊಸ ಪದಗಳ ತುರುಕಿ
ತಿರುಚಿ, ನಿಗಿಚಿ ಬರೆಯುವ ಕವಿಯೆಂದು

   ಹಳೆತನದಲಿ ಹೊಕ್ಕು ಹೊಸತನವನು ತಂದು
   ಇರದಿರುವಿಕೆಯನು ಇದೆಯಂದು
   ಮರಣಿಸಿದ ಕಾಗದದ ಮೇಲೆ  ಕವಿತೆ
   ಕವಿತೆ ಎಂಬ ಜೀವ ತುಂಬುವ ಕವಿಯೆಂದು

ನಡೆದು ಹೋದ, ಇಂದೆ ಇರುವ
ಮುಂದೆ ಬರುವ ವಿಷಯಗಳನರಿದು
ಕುಡಿದು, ಕುಡಿಸುವ ಕವಿಯೆಂದು
ನಾನಂದುಕೊಂಡಿದ್ದೆ...

ಸುಂದರಿ

ಗಂಧದ ಊರಿನ ಮುತ್ತಿನ ಮನೆಯ
ಸಾಲು ಕಂಬಗಳ ಮನೆಯೊಡತಿ
ಗಿರಿಶ್ರಂಗ ಸಾಲುಗಳ

Wednesday, February 5, 2014

ಶರಣ

                           ಶರಣ
ಸೂರಿಲ್ಲದವರ ಕಂಡೆ
ಅಗುಳಿಲ್ಲದವರ ಕಂಡೆ
ನೆಲೆಯಿಲ್ಲದವರ ಕಂಡೆ
ಮನವಿಲ್ಲದವರ ಕಂಡೆ
ಶರಣ । ಆಸೆಯಿಲ್ಲದವರ
ಕಾಣದಾದೆನಯ್ಯ - ಶರಣ

ಹುಡುಗಿಯ ಗುಣ

                            ಹುಡುಗಿಯ ಗುಣ

ಹೂವಿನ ಗುಣ
ದುಂಬಿಗೆ ಗೊತ್ತು
ಮಣ್ಣಿನ ಗುಣ
ಯೋಗಿಗೆ ಗೊತ್ತು

                  ಕುದುರೆಯ ಗುಣ
                 ಸವಾರನಿಗೆ ಗೊತ್ತು
                 ಎಮ್ಮೆಯ ಗುಣ
                 ಗಾಣಿಗನಿಗೆ ಗೊತ್ತು

ವಚನಗಳ ಗುಣ
ಜ್ಞಾನಿಗೆ ಗೊತ್ತು
ಭಕ್ತರ ಗುಣ
ದೇವರಿಗೆ ಗೊತ್ತು

                  ತಾಯಿಯ ಗುಣ
               ಮಗನಿಗೆ ಗೊತ್ತು
                    ಹುಡುಗಿಯ ಗುಣ
                    ಯಾವನಿಗೊತ್ತು?

ಸೂಳೆಗೆಲ್ಲಿ ಬರಗಾಲ

            ಸೂಳೆಗೆಲ್ಲಿ  ಬರಗಾಲ

ಹರಿಯುವ ನದಿಯು
ಬರಿದಾದುದ ಕಂಡೆ
ಹಸಿರಿನ ಮರವು
ಒಣಗಿದುದ ಕಂಡೆ

                     ಹೊ ತುಂಬಿದ ಬಳ್ಳಿ
                    ಬರಡಾದುದ ಕಂಡೆ
                    ಜೇನು ತುಂಬಿದ ಗೂಡು
                    ರಸವಿಲ್ಲದುದನು ಕಂಡೆ

ಸಿರಿಯಿದ್ದ ಮನೆಯು
ದರಿದ್ರವಾದುದ ಕಂಡೆ
ದೇವರಿರುವ ಗುಡಿಯಲ್ಲಿ
ದೀಪವಿಲ್ಲದುದ ಕಂಡೆ

                  ಆದರೆ ಸೂಳೆಯ ಮನೆ
                 ಬರಿದಾದುದ ನಾನೊಂದು
                ದಿನವಾದರೂ ಕಾಣದಾದೆ
               ಲೋಕಕ್ಕೆ ಬರವುಂಟು ಸೊಳೆಗಿಲ್ಲ