Sunday, July 3, 2016

ಓ..ಹೆಣ್ಣೆ ನಿನಗಿದೊ ನಮನ

ಓ ತಾಯೆ, ತಂಗಿಯೆ, ಸಹೋದರಿಯೆ
ಪ್ರೇಯಸಿಯೆ, ಮಡದಿಯೆ, ಮಗಳೆ
ಎಲ್ಲ ಹೆಣ್ತನದ ರೂಪಗಳೆ ನಿಮಗಿದೊ
ನನ್ನಿ  ನಮನ

ಬಳ್ಳಿ ಹುಟ್ಟಿನಿಂದಲೂ
ಮರವನಾಶ್ರಯಿಸುವಂತೆ

ನೀನು ಹುಟ್ಟಿನಿಂದ ತಂದೆಯ
ತೊಳೊಳಗಿನ ಲಾಲಿ
ಬುಜದ ಮೇಲಿನ ಸವಾರಿ
ಬೆನ್ನ ಮೇಲಿನಂಬಾರಿ
ಕಿರು ಬೆರಳ ನಾರಿ
ಅಪ್ಪನ ಬಂಗಾರಿ

ಬೆಳಿತಾ ಬೆಳಿತಾ ಗಂಡನ
ಪಕ್ಕನ ಮಡದಿ
ರಾತ್ರಿಗೆ ಸುಖದ ನೋವಿನ ಸಂಗಾತಿ
ಅಡುಗೆ ಮನೆಯೊಡತಿ
ಮದ್ಯಾಹ್ನಕೆರಡು ಮಕ್ಕಳ ತಾಯಿ
ಮುಸ್ಸಂಜೆಗೆ ಮೊಮ್ಮಕ್ಕಳ ದೊಡ್ತಾಯಿ

Saturday, July 2, 2016

ಕವಿತೆ

ಛೆ...ಅದೇಷ್ಟು
ಸಂಜೆಗಳನ್ನು ಕಳೆದುಬಿಟ್ಟೆ
ನೀನಿಲ್ಲದೆ, ನಿನ್ನರಿವಿಲ್ಲದೆ

ಅದೇಷ್ಟು ಪದಗಳ
ಮರೆತುಬಿಟ್ಟೆ, ಕೊಂದುಬಿಟ್ಟೆ
ಅರಿತರಿವಿಲ್ಲದೆ

ಅರ್ಥವಿಲ್ಲದವರೊಡಗೂಡಿ
ಸರಣಿ ವಾಹಿನಿಗಳ ನೋಡಿ
ವ್ಯರ್ಥದಾರಿಯೊಳಡ್ಡಾಡಿ

ಓದದೆ, ಅರಿಯದೆ, ಅನುಭವಿಸದೆ
ಬರೆಯಲೆದ್ದು ಕತ್ತು ಹಿಸುಕಿದೆ, ವಿಲವಿಲನೆ
ಒದ್ದಾಡಿಸಿಬಿಟ್ಟೆ ಕವಿತೆ ಹುಟ್ಟುವ ಮೊದಲೆ...

ಕ್ಷಮಿಸಿಬಿಡಿ ಅಕ್ಷರಕಳೆ
ಹುಟ್ಟುವಾರ್ಧದಲೆ ಸಾಯಿಸಿ
ಅರೆಬೆಂದ ಕವಿ ಥೂ...

ಹಾಗೆನ್ನಲೆನಗೆ ನಾಚಿಕೆ
ಅವಮಾನ, ಸಂಕಟ
ಎಲ್ಲವಡಗೂಡಿ ಅಪರಾಧಿ
ಭಾವನೆ ಟೀಸುಲೂಡೆಯುತಿಹುದು
ಮನದಲಿ....

ಮನ್ನಿಸಿ
ಅಕ್ಷರಗಳೆ

ಚೆಲುವು

ಅಷ್ಟೇನು ಎತ್ತರವಲ್ಲದ
ತಳ್ಳನೂ ಅಲ್ಲದ, ದಪ್ಪನೂ
ಇಲ್ಲದ ನಿನ್ನ ದೇಹ

ಆ ಬೆದರು ಜಿಂಕೆಯ
ಕಣ್ಣುಗಳು| ದುಂಡು
ಮಲ್ಲಿಗೆಯಂತಹ
ಮುದ್ದಾದ ಮೂಗು

ಆ ನೆರಲೆ ಹಣ್ಣಿನ
ತುಟಿಯ ಬಣ್ಣ
ದಾಳಿಂಬೆ ಹಣ್ಣಂತ
ಸಾಲು ದಂತುಗಳು

ಮ್ಯೆ ತುಂಬಿ ನಿಂತ
ದೇಹ| ಹೋಗು
ಬರವಾಗೊಮ್ಮೆ ನೋಡವ
ವಾರೆಕಣ್ಣೊಟ ಓಹಃ

ಮದುವೆಯಾಗಿದ್ದರು
ಆ ಕಣ್ಣ ಬಲೆಯಲಿ
ಒಮ್ಮೆಯಾದರೂ ಬಿದ್ದು
ಬಿಡಬೇಕೆಂಬುವ ಹಂಬಲ

ಅರಿಯಿತು ಮನವು
ನಾನೊಬ್ಬರ ಸೊತ್ತು
ನಿನೊಬ್ಬರ ಸೊತ್ತೆಂದು
ಅದಕೆ ಮುರಿಯಿತು....

ಬೆಸೆಯುವ ಹಂಬಲವ
ಹೊಸೆಯುವ ಬಂಧನವ

ಮಾತು

ಮದುವೆಗೂ ಮುಂಚೆ....

ಮದುವೆಗೂ ಮುಂಚೆ ನೀನು
ಚೆಲುವೆ, ಒಲವೆ, ಬಲವೆ
ನೀನಿದ್ದಲ್ಲೆಲ್ಲಾ ಗೆಲುವೆ

ನೀನ್ನ ಮಾತು ಕೇಳಲು
ಮುತ್ತು, ಮತ್ತು, ಗಮ್ಮತ್ತು,
ಆಡುವ ಮಾತಿನಲ್ಲೆ ಕಳೆಯುತ್ತಿತ್ತು ಹೊತ್ತು

ನೀನು ನಗಲು ಹೀಗೆ
ಮೆಲ್ಲಗೆ, ಮಲ್ಲಿಗೆ, ಸಂಪಿಗೆ
ಎದೆ ಜಾರುತ್ತಿತ್ತು ಕಂಪಿಗೆ

ಬೆನೆ ಬಂದಳಲು ನೀ
ಯಾತನೆ, ವೇದನೆ, ರೋದನೆ
ಮಡಿಲಲಿ ಮಗುವಾಗುತ್ತಿದ್ದೆ ಸುಮ್ಮನೆ

ಮದುವೆಯ ನಂತರ....

ಮದುವೆಯ ನಂತರ ನೀನು
ಬ್ಯೆಯುವೆ, ತಿವಿಯುವೆ, ಬಡಿಯುವೆ
ನೀ ಕ್ಯೆಯಿಟ್ಟಲ್ಲೆಲ್ಲಾ ನೋವೆ

ನೀನು ಮಾತಾಡುತ್ತಿದ್ದರೆ
ಕುತ್ತು, ವಿಪತ್ತು, ಆಪತ್ತು
ಯಾಕಾದರೂ ಬೆಳಗಾಗುತ್ತಿತ್ತೂ

ನೀ ನಗಲು ಹೀಗೆ
ಹೆದರಿ, ಬೆದರಿ, ಕಮರಿ
ಎದೆ ಒದರುತ್ತಿತ್ತು ಹಾಗೆ

ನಾ ಬಂದಳಲು ನಿನ್ನಲ್ಲಿಗೆ
ಸುಮ್ಮನೆ, ತಣ್ಣನೆ, ಕೇಳದೆನೆ
ಹಿಡಂಬಿಯಾಗುತ್ತಿರುವೆ ಹಾಸಿಗೆಗೆ

ಮನವಿಲ್ಲದವರು

ಮನವಿಲ್ಲದವರೊಡನೆ
ಮಾತೆಂತಯ್ಯ
ಒಲವಿಲ್ಲದವರೊಡನೆ
ಬೆಸುಗೆ ಎಂಥಯ್ಯ
ಫೋನಿಲ್ಲದವರೊಡನೆ
ಭೇಟಿ ಎಂಥಯ್ಯ

Friday, July 1, 2016

ನಿನ್ ಅಂದ

ನಿನ್ ಅಂದಾನ ಕಲ್ಲನ್ಯಾಗ
ಕೆತ್ತಿಡ್ತೀನಿ...
ನಿನ್ನ ಮಾತ್ನ ಮುತ್ತನ್ಯಾಗ
ಪೋಣಿಸ್ತಿನಿ...
ನಿನ್ನ ನಗೂನ ಮಲ್ಲಿಗ್ಯಾಗ
ಕಟ್ಟಿಡ್ತೀನಿ....
ನಿನ್ನ ಪ್ರೀತಿನ ನನ್ ಮನದಾಗ
ಮುಚ್ಚಿಡ್ತೀನಿ....

ಹೇಳಿಬಿಡು

|| ಕಣ್ಣಾಗ ಕಣ್ಣಿಟ್ಟ ನೋಡಿದ್ರ
ಪ್ರೀತಿ ಹುಟ್ಹಂಗಿಲ್ಲ ||
ಕಣ್ಣಾಗ ಕಣ್ಣಿಟ್ಟ ನೋಡಿದ್ರ
ಕಣ್ ಬ್ಯಾನಿ ಹುಟತ್ಯತಿ

|| ನೂರಾರು ಪತ್ರ ಬರೆದು ಕೊಟ್ರು
ಪ್ರೇಮ ಬರೊಲ್ಲ ||
ನೂರಾರು ಪತ್ರ ಬರದ್ರ ಕೈ
ನೋವು ಬರತ್ಯತಿ

|| ಸಾವಿರಾರ ಹಾಡ ಹಾಡಿ ಅವಳೆದ್ಯಾಗ
ಪ್ರಣಯ ಬರಸಲಿಕ್ಕಾಗಂಗಿಲ್ಲ ||
ಸಾವಿರ ಹಾಡ ಹಾಡಿದ್ರ ನೀನು
ಗಂಟಲಬ್ಯಾನಿ ಬರಸ್ಕೋತಿ

ಯಾಕಿಷ್ಟು ರಗಳಿ ಮಾಡ್ಕೊತಿ
ಹೇಳ್ಬಿಡು ಅವಳಿಗೆ
ನಾನ ಅದಿನಿ ನಿನ್ ಇರುಳ
ಕನಸಿನ ರಾಜಾಂಥ