Wednesday, July 19, 2017

ಅರಿವಿಲ್ಲದೆ

ಬಾಳಿನ ಸಂಗಾತಿ..
ಹೇಳದೆ ಕೇಳದೆ ಎದೆ
ಮನೆಯ ಬಾಗಿಲ ನೂಕಿ ಬಂದಾಕಿ
ಮರಭೂಮಿಯಲ್ಲಿ ಪ್ರೇಮ
ಸಸಿಯ ನೆಟ್ಟು ನಡೆದೆಯಲ್ಲ
ನೀನು ನನ್ನರಿವಿಲ್ಲದೆ....

ಮಾಡಿದ ಕರೆಗಳಿಗೆಲ್ಲ ನಿರುತ್ತರವ
ಕೊಟ್ಟೆ... ಬದುಕದೆ ನಿನ್ನ ನೆನಪಲಿ
ಓದಿ..ಓದಿ..ನರಳಲು ನೂರೊಂದು
ಪತ್ರಗಳ ಕಂತೆಯನೆ.. ಬಿಟ್ಟೆ..

ಸೂಜಿಯ ಮೊನೆಯಂತೆ ಚುಚ್ಚುವ
ನಿನ್ನ ನಗುವಿನ ಸದ್ದನು ಎದೆಯಲಿ
ತುಂಬಿಬಿಟ್ಟೆ.... ನೋವಿಗೆ ತಾಳದ
ಮನವಿದು ಎಷ್ಟೇ ಕೂಗಿ ಕೂಗಿ ಕರೆದರು
ಯಮನನ್ನು..ನನ್ನ ನೋವಿಗೆ ಕಿವಿಗೊಡದ
ಹಾಗೆ ಅವನನ್ನು ಕಿವುಡನನ್ನಾಗಿಸಿದೆ...

ಹೊಳೆಯ ದಾಟಿದ ಮೇಲೆ ಅಂಬಿಗನ
ಹಂಗೇಕೆ ಎಂಬಂತೆ...ಪ್ರೀತಿಯ ಹೊಳೆಯಲಿ
ಒಲವಿನ ದೋಣಿಯಲಿ ವಿಹಾರಿಸಿ..ವಿರಹದ
ದಡದಲಿ ನನ್ನನೊಬ್ಬನೆ ಕಾಯಲು ಕುಳ್ಳರಿಸಿ
ನಡದೆಯಲ್ಲ...

ದಿನ ಬೆಳಗೊ.. ಸೂರ್ಯನಿಗೂ ಗ್ರಹಣ
ಹಿಡಿಯುವುದು...ಕಳೆಯುವುದು..ನೀನು
ಮಾತ್ರ ಕರಗದ... ಮರೆಯದ ಗ್ರಹಣವನು
ಪ್ರೀತಿಗೆ ಹಿಡಿಸಿ ಮರೆಯಾಗಿಬಿಟ್ಟೆ..

ನಮ್ಮ ತುಂಬು ಪ್ರೀತಿಯ ಕನ್ನಡಿಯನ್ನು
ಕಲ್ಲು ಬಂಡೆಯ ಮೇಲೆ ಒಡೆದು ಚೂರು
ಚೂರು ಹಾಗೆ ಕೈ ಬಿಟ್ಟು... ಓಡಿದೆಯಲ್ಲ
ನನ್ನ ಸ್ಥಿತಿಯು ಏನಾಗುವುದೊ...
ಎಂಬರಿವಿಲ್ಲದೆ

ಅವಳ ಕನಸನ್ನೆ

ಅವಳ ಮಲ್ಲಿಗೆಯ
ನಗುವಿಗೆ ಸೋತ
ಮನವಿದು.. ಬೇಡುತಿದೆ
ಮರಳಿ ಮರಳಿ ಅವಳ
ನಗುವನ್ನೆ..

ನಗುವಿಗೆ ಸೋತ
ಮನಸ್ಸಿದು.. ತಾರೆಗಳ
ರಾತ್ರಿಗಳಿಗೂ.. ಬೇಡುತಿದೆ
ಬರೀ.. ಅವಳ
ಕನಸನ್ನೆ..

ವರುಣ

ವರುಣ ಎಷ್ಟು
ಹೆಪ್ಪುಗಟ್ಟಿರುವೆ
ಮುನಿದು
ಮೋಡದಲಿ..
ಕೋಪವ ಮರೆತು
ಬಂಧಿಯಾಗಬಾರದೆ
ಸುರಿದು.. ಭೂದೇವಿಯ
ತೆಕ್ಕೆಯಲಿ...

Tuesday, July 18, 2017

ನಿನ್ನ ಕರೆಗೆಂದೆ

ಸನಿಹವಿದ್ದಾಗವೇಕೆ ಸಲ್ಲದ
ನುಡಿಗಳನಾಡಿ ದೂರ ತಳ್ಳಿದೆ
ನೀನೊಬ್ಬಳೆ ದೂರದಲಿ ಕೂತು
ನನಗೆ ಕೇಳಿಸದ ಹಾಗೆ ಬಂದು ಬಿಡು
ಎಂದು ಕರೆದರೆ ಬರಲಾದರೂ ಹೇಗೆ..
ಮುತ್ತುಗಳ ಮೋಡವನು ಕಟ್ಟಿ ತಡೆ
ಹಿಡಿಯಲಿ ಅದೇಷ್ಟು ಘಳಿಗೆ..
ಕೂಗೆ ಮನವಿದು ಕಾದಿದೆ
ನಿನ್ನ ಕರೆಗೆಂದೆ..

Monday, July 17, 2017

ದೇವನು ಕ್ರೂರಿಯೆ

ಹೌದು ದೇವನು ಕ್ರೂರಿಯೆ...
ಆದರೂ ಅವನಿಗೆ ನನ್ನದೊಂದು ಶರಣು..

ಮನದಲ್ಲಿ ದುಃಖದ ಕಟ್ಟೆಯನ್ನೆ ಕಟ್ಟಿಕೊಂಡಿದ್ದರೂ.. ಇನ್ನೊಬ್ಬರ
ನೋವಿಗೆ ಸ್ಪಂದಿಸುವ.. ಮೀಡಿಯುವ
ಮನಸ್ಸನು ನೀಡಿದ್ದಕ್ಕೆ...

ತಾವು ದಿನನಿತ್ಯ ಕಣ್ಣೀರಿನಲ್ಲೆ ಕೈ
ತೊಳೆಯುತ್ತಿದ್ದರೂ.. ದುಃಖದಲ್ಲಿರುವ ಇನ್ನೊಬ್ಬರ ಕಣ್ಣೀರನು ಒರೆಸುವ ಗಟ್ಟಿ
ಕೈಗಳನ್ನು ಕೊಟ್ಟಿದ್ದಕ್ಕೆ
ನೀಡಿದ ಪ್ರೀತಿಗೆ ಮೋಸ ಮಾಡುವ
ಮನಸ್ಸುಗಳಿದ್ದರೂ ಅವುಗಳ ಕ್ಷಮಿಸಿ
ಮತ್ತೆ ಮತ್ತೆ ಪ್ರೀತಿಯ ಹಂಚುವಂತಹ
ತಾಯಿ ಮನಸ್ಸನ್ನು ನೀಡಿದ್ದಕ್ಕೆ
ಜೇಬಲ್ಲಿ ಹಣವಿಲ್ಲದಿದ್ದರೂ.. ನಾಲ್ಕು
ಜನರು ಮೆಚ್ಚಿ ಹೊಗಳುವ ಗುಣವನ್ನು
ಬಾಳಲ್ಲಿ ತುಂಬಿದ್ದಕ್ಕೆ...
ಹೇಳಲಾಗದ.. ಕರಗಲಾರದ.. ಮರೆಯಲಾರದ ನೋವುಗಳಿದ್ದರೂ
ಅವೆಲ್ಲವ ಮೆಟ್ಟಿ ಸದಾ ಮೊಗದಲಿ
ಮಂದಹಾಸದ ಚಿಲುಮೆಯನ್ನಿಟ್ಟಿದ್ದಕೆ
ಏಷ್ಟೆಂದು ಶರಣು ಹೇಳಲಿ ನಿನಗೆ ನಾ..
ಇಷ್ಟೇಲ್ಲಾ ನೀ ನೀಡಿರುವಾಗ

ಆದರೂ ನಮ್ಮೆಲ್ಲ ಮೂಡನಂಬಿಕೆಗಳಿಗೆ ನಿನ್ನ ನಾವು ಹೊಣೆ ಮಾಡುವೆವಲ್ಲ..
ಕಲ್ಲು ದೇವರು ಎಂದು ತಿಳಿದಿದ್ದು ತಾವು
ಉಪವಾಸವ ಗೈದು ಅವನಿಗೆ ನೈವೇದ್ಯವ
ಒಯ್ಯುವರಲ್ಲ.. ಅವನು ಕೇಳಿದ್ದನೆ..
ಬದುಕಿಗೆ ಅವಶ್ಯವಿರುವ ವಸ್ತುಗಳ ಖರೀದಿಸದೆ.. ಉಣ್ಣದ ತೊಡದ ದೇವರಿಗೆ
ಹರಕೆಗಳ ಮೇಲೆ ಹರಕೆಯ ತೀರಿಸುವರಲ್ಲ
ವಾರ ವೃತಗಳು ನಿಮ್ಮ ಮನಸ್ಸನ್ನು ನಿಗ್ರಹಿಸಲು ಮಾಡಿಕೊಂಡಿರುವ ಸಾಧನಗಳು.. ಅಲ್ಲದೆ ನೀವೊಬ್ಬರೆ ಕೂಗಿದ
ತಕ್ಷಣ ನಿಮಗೆ ಓಗೊಟ್ಟು ತಕ್ಷಣವೆ ಬರಲಾಗುವುದಿಲ್ಲವಲ್ಲ.. ನೂರ್ಹತ್ತು ಕೋಟಿ ಜನರ ಮನವಿಯ ಅನುಗ್ರಹಿಸುತ್ತ.. ಬರುವಾಗ ಸ್ವಲ್ಪ ತಡವಾಗುವುದು ಅಲ್ಲಿಯವರೆಗೂ ಕಾಯದೆ ನಿಮಗೆ ಇರಲಾಗದೆ ಹೇಳುವಿರಲ್ಲ ನೀವೆ ನಮ್ಮ ಕೂಗು ನಿನಗೆ ಕೇಳುತ್ತಿಲ್ಲವೆ ಎಂದು..?

ಇದು ನನ್ನನುಭವ.. ತಪ್ಪಿದ್ದರೆ ಕ್ಷಮಿಸಿ
ಅದ್ಭುತವಾಗಿ ಬರೆದಿರುವಿರಿ ಸಹೋದರಿಯವರೆ ಶುಭೋದಯ

ಸಾರು ಬಾ ಹೆಣ್ಣೆ

ಹೆಣ್ಣೆ...
ಗೆದ್ದುಬಿಡು ನೀ..ನಾನೊಬ್ಬಳು
ಹೆಣ್ಣು ಅಬಲೆಯೆಂಬುದನು...
ಮಾತು ಮಾತಿಗೂ ಕಣ್ಣೀರು
ತಂದು ಮೂಲೆ ಸೇರುವ ಬದುಕನು..
ನಿನ್ನ ತಪ್ಪಿಲ್ಲದಿದ್ದರೂ ಅವರು ಕೊಡುವ
ಬಾಸುಂಡೆಗಳಿಗೆ ತೋರುವ ನಿನ್ನ ಬೆನ್ನನು..
ದುಡಿಯಲು ಹೊರಗೆ ಹೋದ ಸ್ಥಳಗಳಲ್ಲಿ
ನೀಡುವ ಲೈಂಗಿಕ ಕಿರುಕುಳವನು...
ತಾಳಿ ಕಟ್ಟುವ ವೇಳೆ ಬಾಗಿಸಿದ ತಲೆಯನ್ನು
ಬಾಳ ತುಂಬ ಅನ್ಯಾಯವಾದರೂ ಸರಿ
ತಲೆ ತಗ್ಗಿಸಿ ನಡೆಯಬೇಕೆಂಬ ಗೊಡ್ಡು
ಸಂಪ್ರದಾಯವನ್ನು..
ಎಷ್ಟಿದ್ದರೂ ಗಂಡಿನ ಕಾಮಕ್ಕೆ ಹೇರುವ
ಮಕ್ಕಳ ಯಂತ್ರವೆಂಬುದನು..

ಹೆಣ್ಣೆ...
ಹೊರಗೆ ಬಾ ಆ ಕೋಣೆಯಿಂದ
ನೀನು ನೋವುಂಡು ಹೋದಾಗಲೆಲ್ಲ
ನಿನ್ನ ದುಃಖಕ್ಕೆ ಕಿವಿಯಾಗದ...ನೊಂದ
ಮನಸ್ಸಿಗೆ ಸಾಂತ್ವಾನದ ಮಾತುಗಳ ಹೇಳದ
ಕಲ್ಲು ಗೋಡೆಗಳ ಬಂಧನವ ತೊಡೆದು ಬಾ...
ನಿನ್ನ ಸಾಧನೆಯ ಹೆಜ್ಜೆಗಳಿಗೆ ಮೆಟ್ಟಿಲುಗಳಾಗದೆ
ನಿನ್ನ ಕನಸಿನ ಗೋಪರಕ್ಕೆ ಭದ್ರ ಬುನಾದಿಯ
ನೊದಗಿಸದ ಕಲ್ಲು ಗೋಡೆಗಳ ತೊಡೆದು ಬಾ..
ಇವನಿಲ್ಲದೆ...ಈ ಕೆಲಸವಿಲ್ಲದೆ ಬದುಕಿಲ್ಲ
ಎಂಬ ಕಲ್ಪನಾ ಕೋಟೆಯ ಜಯಿಸಿ ಬಾ

ಹೆಣ್ಣೆ...
ಅಚ್ಚಳಿಯದೆ ಉಳಿಸು ಬಾ ನಿನ್ನ ಹೆಜ್ಜೆಗಳ
ಸೌಟು ಹಿಡಿಯುವ ಕೈ..ಸೀರೆಯ ಸೆರಗು
ಸದಾ ಸುರಿಸುವ ಕಣ್ಣೀರನ್ನು ಒರೆಸುವದರಲ್ಲೆ
ಮಾಸಿ ಹೋಗುವದದೆನ್ನುವವರ ದಾರಿಯಲ್ಲಿ
ಮಾಸದೆ ಉಳಿಸು ಬಾ ನಿನ್ನ ಹೆಜ್ಜೆಗಳನು
ನೀ ನಡೆವ ದಾರಿಯ ಕಂಡು ಹಿಯ್ಯಾಳಿಸುವ
ಮನಗಳು ಮೆಚ್ಚಿ... ಸದಾ ಬಾಸುಂಡೆಗಳ
ರುಚಿಯನ್ನೆ ತೋರಿಸುತ್ತಿದ್ದ ಕೈಗಳು ನಿನ್ನ
ಸಾಧನೆಯ ಮೆಚ್ಚಿ ಬೆನ್ನ ತಟ್ಟಿ ಮೆಚ್ಚುವ ಹಾಗೆ

ಹೆಣ್ಣೆ...
ಸಾರು ಬಾ ನೀ ಲೋಕಕೆ...
ನೀವು ತೊಡಿಸುವ ಬಳೆಗಳು ಸಂಕೋಲೆಗಳಲ್ಲ..
ಬಳೆಯ ತೊಟ್ಟ ಕೈಗಳು ದೇಶವನಾಳಿತು...
ಗಗನವ ಮುಟ್ಟಿ ಬಂದಿತು.. ಶತುೃಗಳ ರುಂಡವ ಚೆಂಡಾಡಿ ಬಂದಿತು...ಅನಾಥ ಮಕ್ಕಳ ಪಾಲಿನ ತಾಯಿಯಾಯಿತು... ಹಾಡುವ ಹಕ್ಕಿಯಾಯಿತು... ಸಾರಿ ಸಾರಿ ಹೇಳು ಬಾ
ನಾನಿಲ್ಲದೆ ಈ ಲೋಕದಲಿ ತೃಣವಾದರೂ ಪ್ರೀತಿ ಮೂಡಲಾರದು ಅರಳಲಾರದೆಂದು..
ಸಾರು ಬಾ ಹೆಣ್ಣೆ ಸಾರಿ... ಸಾರಿ..
ಸಾರು ಬಾ..

ಅನಾಥ ಕದನ ಜಯಾ

ಅನಾಥ ಅನಾಥ ಅನ್ನುವಿರಿ
ನಿಜವಾಗಿಯೂ ಅನಾಥರು ಯಾರು ಗೊತ್ತೆ..?

ಅನಾಥರು ಎಂದು ನಾವು
ಎಲ್ಲಿಯೂ ಹೇಳಲಿಲ್ಲ ನೀವೆ ನಮ್ಮನ್ನ
ನೋಡಿ ಅನಾಥರು ಎಂದು
ನಾಮಕರಣ ಮಾಡಿಬಿಟ್ಟಿರಿ..

ಎಲ್ಲರು ಇದ್ದು ಅನಾಥರಾದವರು ನೀವು
ತಿನ್ನಲು ಅನ್ನ ವಿದ್ದರು
ತಿನ್ನಲು ಬಾಯಿ ಇಲ್ಲ ನಿಮಗೆ..

ಪ್ರೀತಿಸುವ ಹೃದಯ ವಿದ್ದರು
ಯಾರನ್ನೂ ಮನಬಿಚ್ಚಿ
ಪ್ರೀತಿಸಲಾರಿರಿ ನೀವು..

ಧನಕನಕ ವಿದ್ದರು ಅರಮನೆಯಂತ
ಮನೆಯಿದ್ದರು.
ನೀಡಲಾರಿರಿ ಒಂದು ತುತ್ತು ಭಿಕ್ಷೆಯನ್ನು

ನಿಜವಾದ ಅನಾಥರು ನೀವುಗಳು
ದಯೆ,ಕರುಣೆ,ಪ್ರೀತಿ, ವಿಶ್ವಾಸ,
ಮಾನವೀಯತೆಯನ್ನು ಮರೆತು
ಬದುಕುವಿರಿ ನೀವು..

ನಾವು ಆರ್ಧನಾರೇಶ್ವನ
ಮಕ್ಕಳು ನಾವು
ನಾವು ಎಂದಿಗೂ ನಾವು ಅನಾಥರಲ್ಲ

ನಾ
ಅನಾಥರು...
ಹೊಟ್ಟೆ ಹಸುವೆಂದು ಸುಡು ಬಿಸಿಲಲಿ
ನಿಮ್ಮ ಮನೆಯ ಕದವ ತಟ್ಟುವವನಿಗೆ
ತುತ್ತು ಅನ್ನವ ನೀಡದ ನೀವು ಅನಾಥರು

ಬಾಯಾರಿ ಬಳಲಿ ಕುಡಿಯಲಿಕ್ಕೆ ನೀರು
ಕೊಡದಂತಹ ಕಲ್ಲು ಮನಸ್ಸಿನ ಮುಖಗಳೆ
ನೀವು ಅನಾಥರು... ಪ್ರೀತಿಯ ಬಯಸಿ
ಬಯಸಿ ಊರ ತುಂಬೆಲ್ಲಾ ನಿಮ್ಮ ಹಿಂದೆ
ಸುತ್ತಿ..ಊರಲ್ಲಿರುವ ಗುಲಾಬಿ ಹೂಗಳ
ರಾಶಿಯನೆ ತಂದು ಸುರಿದರೊಪ್ಪದ ಚೆಲುವೆಯರೆ.. ನೀವು ಅನಾಥರು

ತಾಯಿ.. ಮಡದಿ ಮಕ್ಕಳ ಆರೋಗ್ಯ
ಸರಿಯಿಲ್ಲವೆಂದು.. ತೋರಿಸಲು ಹಣವ
ಬೇಡಿದ ಮಿತ್ರನಿಗೆ ಸಹಾಯ ಹಸ್ತವ ಚಾಚದೆ
ಕುಡಿದು.. ಐವತ್ತೇರಡು ಎಲೆಗಳಲಿ ಹಗಲಿರುಳು ಕಳೆದು...ಸಂಸಾರವನು ಕಣ್ಣೀರ
ಕಡಲಿಗೆ ನೂಕುವವರಿಗೆ ಹಣವ ನೀಡುವ
ನಿಮ್ಮಂಥವರು ಅನಾಥರು..

ಮಗುವು ಕೇಳಿದ ಒಂದು ಆಟಿಕೆಯನ್ನು
ಕೊಡಿಸದೆ ಅದೇ ದುಡ್ಡಿನಲ್ಲಿ ಜೂಜಾಡಿ ಬರುವ ಗಂಡು ಜನ್ಮಗಳೆ ಅನಾಥರು..
ತನ್ನ ಪಕ್ಕದ ಮನೆಯ ಹಸುಗೂಸು ತಾಯಿಯ ಎದೆಹಾಲು ಸಾಲದಾಗಿ..ಆ ತಾಯಿ ನಿಮ್ಮ ಮನೆಯವರೆಗೂ ಬಂದು
ಹಾಲನ್ನು ಕೇಳಿದಾಗ ನೀಡದೆ ಮಲತಾಯಿ
ಧೋರಣೆ ತೋರುವ ತಾಯಂದಿರೆ ನೀವು
ಅನಾಥರು..

ಇನ್ನೊಬ್ಬರ ನೋವು ನಲಿವುಗಳಿಗೆ
ಸ್ಪಂದಿಸದ..ಮರುಗದ..ಸದಾ ಮನದಲಿ
ಕಲ್ಮಷವನೆ ತುಂಬಿಕೊಂಡ ಮನಗಳೆಲ್ಲವು
ಎಲ್ಲ ಇದ್ದೂ ಅನಾಥರು..


ಊಟದ ಸಮಯದಲ್ಲಿ ಬಂದು ಬೇಡಿದರೆ ಮುಂದೆ ಹೋಗು ಅನ್ನುವಿರಿ ನೀವು ಅನಾಥರು..

ಹೆತ್ತವರನ್ನು ಸಾಕಲಾರದೆ
ವೃದ್ಧ ಶ್ರಮ ಸೇರಿಸಿ ಬರುವ ನೀವು ಅನಾಥರು..

ಮಡದಿ ಬಂದೂಡನೆ ಒಡಹುಟ್ಟಿದ ಸಹೋದರಿಯರನ್ನು ಹೊರ ಹಾಕುವಿರಿ ನೀವು ಅನಾಥರು..

ವರ್ಷಕೊಮ್ಮೆ ಬರುವ ಗೌರಿ ಹಬ್ಬಕ್ಕೆ
ಒಂದು ಚಿಟಿಕೆ ಅರಿಶಿನ ಕುಂಕುಮ ಕೊಡದೆ ಮನೆ ಮಗಳನ್ನು ಕಸದ ರೂಪದಲ್ಲಿ
ಕಾಣುವ ನೀವು ಅನಾಥರು

ನಾ
ಅಪಘಾತವಾಗಿ ವಿಪರೀತ ರಕ್ತವು
ಸೋರಿ ಹೋಗಿ... ರಕ್ತದಾನವ ಬೇಡಿದರೂ
ನೀಡದ ನೀವು ಅನಾಥರು..

ಮಡದಿಯ ಮಾತಿಗೆ ಕಟ್ಟುಬಿದ್ದು ಹೆತ್ತವರ
ಬಿಟ್ಟು ಬೇರೆ ಮನೆಯ ಮಾಡಿ ಬದುಕುವ
ನಿಮ್ಮಂಥವರು ಅನಾಥರು..

ಪರೀಕ್ಷೆಯ ಸಮಯದಲ್ಲಿ ಓದಲು ಪುಸ್ತಕ
ಕೇಳಿದಾಗ ಕೊಡದೆ ಸತಾಯಿಸುವವರು
ಅನಾಥರು

ಭೂಮಿಗೆ ಬಿತ್ತಲು ಸೇರು ಬೀಜವ
ಬೇಡಿದಾಗ ಕೊಡದ ಕಟುಕ ಮನಸಿನ
ಮನುಜರು ಅನಾಥರು..


ಒಂದು ಹೊತ್ತು ಕುಳಿಗೆ ದುಡಿದು ತಿನ್ನುವರನ್ನು ದರೋಡೆ ಮಾಡುವ ನೀವು ಅನಾಥರು..

ಮಡದಿ ಸತ್ತ ಮೂರು ತಿಂಗಳಲ್ಲಿ ಮರು ಮದುವೆಯಾಗಿ ಮಕ್ಕಳಿಂದ ತಂದೆಯ ಆಸರೆಯನ್ನು ಕಿತ್ತು ಕೊಳ್ಳುವ ನೀವು ಅನಾಥರು..

ಮಡದಿಯ ಮಾತು ಕೇಳಿ
ಸಹೋದರರನ್ನು ದೂರ ಮಾಡಿ ಒಂದಾಗಿದ್ದ ಮನೆಯನ್ನು ಎರಡೂ ಭಾಗ ಮಾಡುವ ನೀವು ಅನಾಥರು

ನಾ
ಗಟ್ಟಿಯಾದ ಹಾಲಿಗೆ ನೀರನು
ಬೇರಸಿ ತಾಯಿ ಕಾಮಧೇನುವಿಗೆ..
ಹಾಲ ಕೊಂಡುಕೊಳ್ಳುವವರಿಗೆ ಮೋಸ
ಮಾಡುವ ನಿಮ್ಮಂಥವರು ಅನಾಥರು

ನೀರು ಗೊಬ್ಬರವ ಹಾಕಿ ಹಗಲಿರುಳು
ಕಷ್ಟಪಟ್ಟು ಬೆಳಸಿದ ಬೆಳೆಯ ಕದ್ದೊಯ್ವ
ಕಳ್ಳರು ಅನಾಥರು..

ತೊಟ್ಟಿಲಲಿ ಮಲುಗೆದ್ದು ಅಳುತಿರುವ
ಮಗುವ ಸಂತೈಸದಿರುವ ಅತ್ತೆ ನಾದಿನಿಯವರು ಅನಾಥರು


ರೈತ ದುಡಿದ ಬೆಳೆಯನ್ನು
ಕದ್ದು ಮರುವರು ಅನಾಥರು

ಮಕ್ಕಳಿಗೆ ಸರ್ಕಾರ ಕಳಿಸುವ ದಿನಸಿ ಮಾರುವವರು ಅನಾಥರು..

ಹೆಣ್ಣನ್ನು ಕೆಲಸದವಳು ಎಂದು ಭಾವಿಸುವರು ಅನಾಥರು..

ಧನಕನಕಕ್ಕೆ ಬೆಲೆ ಕೊಟ್ಟ
ಸ್ನೇಹ ಮಾಡುವ ನೀವು ಅನಾಥರು...

ಹಣಕ್ಕಾಗಿ ಮಾನವೀಯತೆಯನ್ನು ವತ್ತೆ ಇಡುವ ನೀವು ಅನಾಥರು

ನಾ
ಯುದ್ದದಲ್ಲಿ ಹೋರಾಡಿ ಸೈನಿಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಬಂದರೆ ಅವರ ಯೋಗಕ್ಷೇಮ ನೋಡದಿರುವ ನೀವು ಅನಾಥರು...

ಮಗಳ ಮದುವೆಯಲ್ಲಿ ಲಕ್ಷ ಲಕ್ಷ ವರದಕ್ಷಿಣೆ ನೀಡಿ ಮದುವೆ ಮಾಡುವಿರಿ
ಕಲಸದವರಿಗೆ ಸಂಬಳ ಕೊಡದೇ ಮೋಸ ಮಾಡುವ ನೀವು ಅನಾಥರು...

ರಕ್ತದಾನ ಮಾಡಿ ಬನ್ನಿ ಎಂದು ಯಾರಾದರೂ ಕೇಳಿದರೆ ಹಣದ ಬೇಡಿಕೆ ಇಡುವಿರಿ ನೀವು ಅನಾಥರು


ದೇವರು ವರ ಕೊಟ್ಟರು
ಪೂಜಾರಿ ವರ ಕೊಡಲಾರದೆ ಉಳಿದ ಪ್ರಸಾದವನ್ನು ಆಚೆಗೆ ಹಾಕುವ ನೀವು ಅನಾಥರು..

ಬರಿಗಾಲಲ್ಲಿ ನಡೆದು ನೂರಾರು ಮೈಲಿ ನಡದೆ ದೇವರ ಹರಕೆ ಸಲ್ಲಿಸಲು ಬಂದರನ್ನು ಬಿಕರಿ ಯೆಂದು ದೂರ ತಳ್ಳುವ ನೀವು ಅನಾಥರು..

ಸರ್ಕಾರಿ ಆಸ್ಪತ್ರೆ ಯಲ್ಲಿ ಉಚಿತವಾಗಿ ವೈದ್ಯಕೀಯ ಸೌಲಭ್ಯ ಇದ್ದರು ಹಣ ಕೊಟ್ಟರೆ ಮಾತ್ರ ಪ್ರಸೂತಿ ಮಾಡಿಸು ನೀವು ಅನಾಥರು

ನಾ
ಸಾಹಿತ್ಯ ವಲಯದಲಿ ನಿಮ್ಮವರನು
ಜೊತೆಗೂಡಿ ಎತ್ತರಕ್ಕೆ ಕರೆದೊಯ್ಯದೆ
ನಿಮ್ಮಷ್ಟಕ್ಕೆ ನೀವೆ ಸಾಗುವಿರಲ್ಲ ನೀವಲ್ಲವೆ ಅನಾಥರು

ದಾರಿಯಲ್ಲಿ ಹೋಗುವಾಗ ನಡೆದುಕೊಂಡು ಹೊರಟಿರುವ ದಾರಿಹೋಕನು ನಿಮ್ಮನ್ನು ಸಹಾಯ ಕೇಳಿದರೆ ಬಿಟ್ಟು ಹೋಗುವ ನಿಮ್ಮಂಥವರಲ್ಲವೆ ಅನಾಥರು

ಬರೆದ ಕವನಕ್ಕೆ ಎರಡು ಸಾಲು ಬರೆದು
ಹಾಕದೆ ಒಂದೆ ಮಾತಿನಲ್ಲಿ ಉತ್ತರಿಸುವವರಲ್ಲವೆ ಅನಾಥರು


ಸಾಹಿತ್ಯ ಕ್ಷೇತ್ರ ಕಲಿಸಿದ ಪಾಠ ಮತ್ತೊಬ್ಬರಿಗೆ ಕಲಿಸದೆ ಮುಂದೆ ಸಾಗುವ ನೀವು ಅನಾಥರು.

ದಾರಿಯಲ್ಲಿ ಕಣ್ಣು ಕಾಣದ ಅಂದರು ಸಹಾಯ ಕೇಳಿದರೆ ಅಹಂಕಾರದಿ ಮುಂದೆ ಸಾಗುವ ನೀವು ಅನಾಥರು...

ಅಮ್ಮ ಅಂತ ಮನೆ ಮುಂದೆ ಬಂದ ವೃದ್ಧ ನಿಗೆ ಒಂದು ತುತ್ತು ಅನ್ನ ನೀಡದೆ ಮುಂದು ಹೋಗು ಅನ್ನುವ ನೀವು ಅನಾಥರು

ನಾ
ಯಾವ ಕ್ಷೇತವ ಬಿಡದೆ ಹಾಸು
ಹೊಕ್ಕಿದೆ ಈ ಅನಾಥ ಭಾವ

ದಿನ ದಿನವು ಅನುಕ್ಷಣವು ಓಡುತಿರುವ
ಕಾಲದಿ ಬೇರೆತು ಎಲ್ಲರಲೂ ತುಂಬುತಿದೆ
ಅನಾಥ ಭಾವ

ಕಾಲದೊಡಗೂಡಿ ನಾವು ಕಳೆದು
ಹೋಗುವ ಮುನ್ನವೆ ಎಚ್ಚೆತ್ತುಕೊಳ್ಳದಿದ್ದರೆ
ಸಿಲುಕಿ ನರಳಾಡಬೇಕಾಗುವುದು ಅನಾಥ
ಪ್ರಜ್ಞೆಯಲಿ ದಿನವಿಡಿ..


ಅನಾಥ ಪ್ರಜ್ಞೆ ಹೋಗಲಾರದು
ಸ್ವಾರ್ಥ ಮನೋಭಾವ ಬಿಟ್ಟು ಎಲಾರನ್ನು ಸರಿಸಮ ಕಂಡ ದಿನ ಅನಾಥರು ಈ ಭೂಮಿಯಲ್ಲಿ ಇರಲಾರರು..

ಜಾತಿಬೇದ ಮೇಲುಕೀಳು ಧನಕನಕದಲ್ಲಿ ಎಲ್ಲಾರನ್ನು ಸಮನಾಗಿ ಕಂಡ ದಿನ ಅನಾಥರು ಯಾರು ಇರಲಾರರು..

ಹೆತ್ತವರನ್ನು ವೃದ್ಧಶ್ರಮ ಬಿಡದೆ ಮನೆಯಲ್ಲಿ ಮಕಳ್ಳಂತೆ ಕಾಳಜಿ ವಹಿಸಿದ ದಿನ ಯಾರು ಅನಾಥರು ಇರಲಾರರು..

ನಾ
ಯುಗ ಯುಗಗಳು ಕಳೆದು
ಹೊಸ ತಲೆಮಾರುಗಳೆ ಹುಟ್ಟಿದರು
ಜಾತಿಯ ಕಸವನ್ನು ಸ್ವಚ್ಚಗೊಳಿಸಲಾಗಲಿಲ್ಲ
ಇನ್ನೂ ಎಲ್ಲ ಮನಗಳಲಿ ಸಮಾನತೆಯ ಗುಣವನ್ನು ಕಾಣಲಾಗುವುದೆ

ವೈಚಾರಿಕತೆಯ ತುಂಬುವ ಶಿಕ್ಷಣ ಸಂಸ್ಥೆಗಳಲ್ಲೂ.. ಜಾತೀಕರಣದ ಪಠ್ಯವ ತುಂಬಿ ಬೆಳೆಸುತಿರುವವರಲ್ಲಿ ಕಾಡದಿರುವುದೆ ಅನಾಥ ಪ್ರಜ್ಞೆ