ಮುತ್ತುಗಳೇಕೆ.. ಸಖಿ..
ನನ್ನಧರದ ಸವಿ ಮುತ್ತುಗಳನೆಲ್ಲ
ನಿನ್ನಧರದಲಿ ಅಡವಿಟ್ಟುರುವೆನಲ್ಲ
ಬಿಡಿಸಿಕೊಳ್ಳಲಾರದಷ್ಟು ಬಡವ ನಾನು
ಕೃಪೆತೋರಿ ಮರಳಿಸಲಾರೆಯ...
ಹಾಕಿರುವ ಬಡ್ಡಿಯನ್ನು ಕಡಿತಗೊಳಿಸದೆ
Saturday, August 5, 2017
ಅಡವು ಚು ೪೧೪
Friday, August 4, 2017
ಕುರುಹು ೪೪೦
ನಾನು ನಿನ್ನ ನೆನಪಿಗಾಗಿ
ಬರೆಯುತ್ತಿರುವ ಸಾಲುಗಳು
ಇತಿಹಾಸ ಸೇರಲೆಂದಲ್ಲ..
ನಿನ್ನ ನೆನಪುಗಳ ಕೊರಗಿನಲ್ಲಿ
ನಾನು ಇತಿಹಾಸದ ಪುಟಗಳಲ್ಲಿ
ಕುರುಹುವಾಗುವೆನಲ್ಲ..
ಚೆಲುವೆಯರು
ಅವನು ನಕ್ಕ ನಗುವಿಗೆ
ಸೋತು ಹೋಗಿದ್ದರು
ಹದಿನಾರು ಸಾವಿರ ನಾರಿಯರು
ನಿಮ್ಮ ನಗುವಿನ
ಮಾಟಕೆ ಸೋಲದೆ
ಇರಲಾರರೆ ಹದಿನಾರರ
ಹರೆಯದ ಚೆಲುವೆಯರು
Thursday, August 3, 2017
ನಿನಗಿಂತ
ನಿನಗಿಂತಲೂ ಚೆಲುವರಿದ್ದಾರೆ
ಕಂಡಿರುವೆ ನಲ್ಲ..
ಆದರೆ.. ಅವರು
ಮೊಗದಲ್ಲಷ್ಟೆ ಅರಸರು
ನಿನ್ನ ಹಾಗೆ ಹೃದಯದಲ್ಲಲ್ಲ..
ಮನದ ಮಾತುಗಳು
ನನ್ನ ಮನದ ಮಾತುಗಳೆಲ್ಲ
ನಿನ್ನ ತುಟಿಯಂಚಲೆ....
ಕೂತಿಹವಲ್ಲ...
ನಲ್ಲೆ
ನಿನ್ನ ಮನದ ಬಾಗಿಲ ತೆರದು
ನೋಡು... ನನ್ನ ಮಾತುಗಳೆಲ್ಲ
ಅಲ್ಲೆ ಮನೆಮಾಡಿ ನಿದ್ರಿಸುತಿಹುವಲ್ಲ..
ಮನದ ವಿಷ
ಮನೆಯಂಗಳದ ತೋಟಕೆ
ನೀರುಣುಸಿದಷ್ಟು ಸರಳವಲ್ಲ
ಮನದಲ್ಲಿ ಸದ್ಗುಣಗಳ ಬಿತ್ತಿ
ಪೋಷಿಸಿ ಪಾಲಿಸಿಕೊಳ್ಳುವುದು
ನೀರು ಗೊಬ್ಬರ ಹಾಕಿ ಮನೆಯಂಗಳದ
ಗಿಡಗಳನ್ನು ಪೋಷಿಸದಿದ್ದರೂ... ಇನ್ನೊಬ್ಬರ
ಮನೆಯಂಗಳದ.. ಅವರ ಬೇವರಿನ ಫಲದ
ಹಣ್ಣನ್ನು ಕದ್ದು ತಂದು ತಿನ್ನುವೆವು..
ಇಲ್ಲಿ ನಾಲಿಗೆ ಚಪಲವು ತೀರಿತು
ಮನದ ಮೂಲೆಯಲೊಂದು ಹುಳುಕು
ಮನೆ ಮಾಡಿತು
ಓಣಿ.. ಓಣಿ ಅಲೆದಾಡಿ ಮನೆ ಮನೆಯ
ಬಾಗಿಲು ತಟ್ಟಿ.. ಕೆದಕಿ ಕೆದಕಿ ಅವರು
ಮರೆತು ಕುಳಿತಿರುವ ವಿಷಯಗಳಿಗೆ
ಮತ್ತೆ ಜೀವತುಂಬಿ.. ಬಣ್ಣ ಬಣ್ಣದ ರೆಕ್ಕೆಗಳ
ಕಟ್ಟಿ.. ನಿಂತ ಕೊಳವಾದ ಅವರ
ಮನದಲಿ ಶಂಕೆಯೆಂಬ ಅಲೆಗಳನ್ನೆಬ್ಬಿಸಿ
ಮರಳಿ ನಮ್ಮನೆಯ ಅಂಗಳದಲ್ಲಿ
ಕಾಲಿಡುವುದರೊಳಗೆ.. ಮತ್ತಾರೊ
ನಮ್ಮ ಕೊಳದಲ್ಲಿ ಕಾಲಾಡಿಸಿ ಹೋಗಿರುವದನ್ನು
ಮರೆತು ಬಿಡುತ್ತೇವೆ
ನಾಲ್ಕು ಜನರೊಡಗೂಡಿ ಬಾಳುವುದ
ಮರೆತು.. ಮನೆ ಮನೆಗಳ ಮನ ಮನಗಳಲ್ಲಿ
ವೀಷವ ಬಿತ್ತಿ ನಾವೂ.. ವೀಷವನುಣ್ಣುತಿಹೆವು..
ಪಕ್ಕದ ಮನೆ ಬೆಕ್ಕು ಕಣ್ಮುಚ್ಚಿ ಕದ್ದು ಹಾಲು ಕುಡಿದಂತೆ
Wednesday, August 2, 2017
ಮೊದಲೆ
ನಿನ್ನ ಮನದ ಮೂಲೆಯಲಿ
ನಮ್ಮೊಲವಿನ ಕುರುಹುವಾಗಿ
ಒಂದೆ ಒಂದು ಹಣ್ಣೇಲೆಯಷ್ಟು
ನೆನಪಿದ್ದರೂ....
ಬಂದು ಬಿಡು ಗೆಳತಿ
ನಿನ್ನ ಪ್ರೀತಿಯ ಚಿಗುರು
ವಿರಹಿಗಳ ಹಾದಿಯ ಗೊಬ್ಬರ
ವಾಗುವ ಮೊದಲೆ..