Saturday, November 27, 2021

ಚುಟುಕು

ಎಷ್ಟೊಂದು ತುಂಬಿಕೊಳ್ಳುವೆ?
ನನ್ನೀ... ರೂಪವನು, ನಿನ್ನ
ಕಂಗಳ ಬಟ್ಟಲಿನಲ್ಲಿ!!
ರಂಗೀ...
ಹುಷಾರು!! ಅಪ್ಪಿತಪ್ಪಿಯೂ
ಕಣ್ಣೀರನ್ನು ಹಾಕಬೇಡ.
ಮತ್ತೆ ನಾನು ಜಾರಿ ಬಿಳಬೇಕಾದಿತು
ಮಧುಶಾಲೆಯ ಮಾನಿನಿಯ
ತೆಕ್ಕೆಯಲ್ಲಿ!!


ರಂಗೀ

ಸಮಾನ ಮನಸ್ಕರ ಸಾವು,
ನೋವು-ಸಂಕಟಗಳನ್ನೆಲ್ಲವ
ಕಂಡು, ತಳಮಳಿಸುತ್ತಿರುವ
ಈ ಮನಸ್ಸಿಗೆ ಸಂತೈಸುವರಾದರು
ಯಾರು? ರಂಗೀ.....
ಮರೆತು ಬಿಡಿ, ಆದದ್ದು
ಆಗಿ ಹೋಯಿತು ಎನ್ನುವವರ
ಮಧ್ಯೆ, ಹೋದವರೆಲ್ಲ, ಕೈ
ಒರೆಸಿಕೊಂಡು ಬಿಸಾಡುವ "ರದ್ದಿ"
ಹಾಳೆಗಿಂತ ಕಡೆಯೇನು?

ರಂಗಿ..

ಹುಷಾರು....!!
ಬಳ್ಳಿಯಂತಹ ನಡುವಿಗೆ
ಹೂವಿನ ಮುಳ್ಳುಗಳು
ಚುಚ್ಚಿಬಿಟ್ಟಾವು
ರಂಗೀ...
ಹ್ಞೂಂ.... ಅನ್ನು
ಬೇಕಿದ್ದರೆ, ಒಂಬತ್ತು
ತಿಂಗಳಲ್ಲಿ ಹೂವಂತ ಮಗುವನ್ನೆ
ನೀಡುವೆ ಕಂಕುಳಿಗೆ.

Wednesday, October 13, 2021

ಚುಟುಕು

ಎದೆಗೊದ್ದು ಹೋಗುವುದೇನು?
ಬಗೆದು ಹೋಗಿದ್ದರೂ....
ಸಾವರಿಸಿಕೊಳ್ಳುತ್ತಿದ್ದೆ
ರಂಗೀ....
ಬಾಳಿನ ಹಾದಿಗೆ ಬೆನ್ನನ್ನೆ
ತೋರಿಸಿಬಿಟ್ಟಳಲ್ಲ!!!
ಸ್ವಾರ್ಥ ಸಂಬಂಧಗಳು
ನಡೆದು ಹೋಗುವ
ಹಾಗೆ.

Saturday, September 25, 2021

ಚುಟುಕು

ದೇಹಗಳ ಹಸಿವಿನ ಕಾದಾಟಕ್ಕೆ
ಈ ಹೂವುಗಳು
ಆಹಾರವಾಗಬೇಕೇನು?
ಸುಂದ್ರಿ....
ಇರುಳ ಕಳೆದು, ಹೊನಲು
ಮೂಡುವವರೆಗೂ...
ಒಂದು...ಎರಡು..ಮೂರೆಂದು
ಗುಣಿಸುತ್ತಾ, ಹೂಮುತ್ತುಗಳ
ನೀಡುವೆ!
ಇಷ್ಟು... ಸಾಕಲ್ಲವೇನು?

Sunday, September 19, 2021

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?