Beish
Saturday, December 4, 2021
ಗೆಳೆಯ
ನಾಯಿ ಮುಟ್ಟಿದ ಮಡಿಕೆಯೆಂಬ
ಗಾಳಿ ಮಾತುಗಳನ್ನೆ ಕೇಳಿ,
ನಂಬಿಕೆಯ ಬೇರುಗಳನ್ನೆ
ಅಲ್ಲಾಡಿಸಿಬಿಟ್ಟೆಯಲ್ಲ
ಗೆಳೆಯ....
ಇಷ್ಟು ದಿನ ಈ ಮಡಿಲಲ್ಲಿ
ಉಂಡಂತಹ ಸುಖ
ಹೆಚ್ಚಾಗಿ, ನಂಜಾಗಿದೆಯೇನು?
Thursday, December 2, 2021
ಗೆಳೆಯಾ
ಹೂವು ಮಾರುವವನ
ಅಂಗೈಯೊಳಗಿನ ಮೃದುತನವು
ನಿನ್ನ ಮಾತಿನಲ್ಲಿ
ಇಲ್ಲವಾಯಿತಲ್ಲೊ
ಗೆಳೆಯಾ....!!
ಕಟ್ಟುವ ಮೊದಲೇ...
ಹೊಸಕುವ ಉತ್ಸಾಹವಿರುವಾಗ,
ಸಂಬಂಧಗಳನ್ನು ಪೋಣಿಸಿಕೊಳ್ಳುವ
ಜರೂರೊತ್ತಾದರು....
ಏನಿತ್ತು?
ರಂಗೀ
ಈ ಥಂಡಿ... ಥಂಡಿ
ದಿನ್ದಾಗ, ತಣ್ಣೀರನ ಕೊಳ್ದ
ಮುಂದ ಹಿಂಗ ತಣ್ಗ
ನೋಡ್ಕೊಂತ ಕುಂತ್ರ
ಹ್ಯಾಂಗ ರಂಗೀ....
ಮಾತಾಡ್ಲಿಕ್ಕ ಅಷ್ಟ ಹೋತು...
ನಕ್ಕಾರ ನಕ್ಬಿಡೊಮ್ಮೆ!!
ಆ ನಗುವಿನ ಬೆಂಕ್ಯಾಗರ
ಚೂರು ಬೆಂದ ಹೊಕ್ಕಿನಿ
Wednesday, December 1, 2021
ರಂಗೀ
ಬರೆದು ಕಳುಹಿಸಿದ್ದ
ಇವೀಷ್ಟು ಒಲೆಗಳನ್ನು
ಮರಳಿ ಕಳುಹಿಸುವ ಬದಲು,
ನಿನ್ನ ಮದುವೆಯ ಅಗ್ನಿ
ಕುಂಡದಲ್ಲಿ ಸುರಿದುಕೊಂಡಿದ್ದರೂ
ಸಾಕಿತ್ತಲ್ಲವೆ?
ರಂಗೀ....
ಪ್ರೇಮ ಸೇತುವೆಯ
ಸಾಕ್ಷಿಗಳನ್ನಿಂದು.... ಗೆದ್ದಲುಗಳಿಗೆ
ಆಹಾರವಾಗುವುದಕ್ಕೆ ಬಿಟ್ಟ
ನಿನ್ನ ಪರಿಗೆ.... ನಾನೇನು
ಹೇಳಲಿ!!?
Monday, November 29, 2021
ರಂಗೀ
ಮದುವೆಯಾಗಿ
ಮೂರು ಮಕ್ಕಳ
ತಂದೆಯಾಗಿರುವೆ ಈಗ...
ಹೂವನ್ನೀಡಿದು ಎದುರು
ಬಂದು ನಿಂತರೆ ಹೇಗೆ?
ರಂಗೀ...
ಸಾಲದ್ದಕ್ಕೆ ಲೈಫ್ ಟೈಮ್
ಒಂಬತ್ತು ತಿಂಗಳಿನ ಹೊಟ್ಟೆಯನ್ನು
ಹೊತ್ತು ನಿಂತಿರುವ "ಚಿರು ಯುವಕ"
ನಾನೆಂದು ನಿನಗೆ ತಿಳಿದಿಲ್ಲವೇನು?
ರಂಗೀ
ಹೀಗೆ ಒಂಟಿ ಕಣ್ಣಲಿ
ಎಷ್ಟಂತ ಅಳುವೆ?
'ಅಲ್ಫಾ, ಡೆಲ್ಟಾ, ಕರೋನಾದಂತ'
ಅಲೆಗಳೆ ಇಳಿದಿರುವಾಗ, ಇನ್ನೀ...
ಒಮಿಕ್ರಾನಿನ ಭಯವೇತಕೆ
ರಂಗೀ....
ಹೋಗಲಿಬಿಡು ಇದೊಂದು
ಸೀಜನ್ನು!!
ಮುಂದಿನ ಸಲ ತಂದರಾಯಿತಲ್ಲವೆ
ಬಂಗಾರವನ್ನು!!
Sunday, November 28, 2021
ರಂಗೀ...
ಹೇಳಿದ್ದೆ..!!
ಕೇಳಲಿಲ್ಲ "ಡಯಟ್"
ಮಾಡಿ...ಮಾಡಿ... ನಡುವು
ನೋವಾಗುತಿಹುದೆಂದು
"ಬೇವಿನ ಮರ" ಕ್ಕೆ
ಭಾರವಾಗಿ ಏಕೆ ನಿಂತೆ?
ರಂಗೀ....
ಕೂಗಿದ್ದರೆ... ಈ
"ಬೇವಿನಕಟ್ಟಿ" ಇದ್ದನಲ್ಲ!!
ಹತ್ತಿಯಂತೆ ಎತ್ತಾಡಲು.
Newer Posts
Older Posts
Home
Subscribe to:
Posts (Atom)