ಗೊತ್ತು ಬಿಡು....
ಹರಡಿರುವ ಹೇರಳುಗಳಿಗೆ
ಮೊಳ ಮಲ್ಲಿಗೆಯೆಂಬ
ಲಂಚವನ್ನೆ ತಂದಿಲ್ಲ
ನಾನು
ರಂಗೀ....
ಅವುಗಳನ್ನು ದಾಟಿ...
ಅದರದ ಸವಿಯನ್ನು
ಸವಿಯಲು, ಭ್ರಷ್ಟನಾಗದೆ
ಬೇರೆ ದಾರಿಯೇ...ಉಳಿದಿಲ್ಲ
ಅಲ್ಲವೇನು?
ರಣ ಬಿಸಿಲಿನಲ್ಲಿ
ನಾ ಬರುವ ದಾರಿಯನ್ನೆ
ಕಾಯುತ್ತ, ಕುಳಿತಿರಬೇಡ!!
ಕಳೆಗುಂದಿ ಹೋದಿತು
ನಿನ್ನ ವದನ!!!
ರಂಗೀ....
ಮಲ್ಲಿಗೆಯಂತಹ
ಮೊಗದವಳು... ಬಾಡಿ
ನಿಂತರೆ, ಅದೇಷ್ಟು
ನೊಂದುಕೊಳ್ಳಬಹುದು?
ನನ್ನೆದೆಯೊಳಗಿನ
ಮದನ!!!
ಕಣ್ಣಿನಲ್ಲೆ ಹೇಳುವ
ನೂರು...ಮಾತುಗಳನ್ನು
ಅರಿಯಲಾರದಷ್ಟು
ಕುರುಡನಾಗಿಬಿಟ್ಟಿರುವೆ!!!
ನಿನ್ನೊಲವಿನಲ್ಲಿ
ರಂಗೀ....
ಕೈ ಹಿಡಿದು ನಡೆದುಬಿಡು
ಪ್ರೇಮದೂರಿಗೆ!!
ಹಾದಿಯ ಮದ್ಯದಲ್ಲಿ
ಎಲ್ಲೂ.... ವಿರಹಕ್ಕೆ ಸುಂಕವ
ಕಟ್ಟಿಸದ ಹಾಗೆ!!
ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡ
ರಂಗೀ...
ಕೈ ಮುಗಿಯುವೆ
ಬೇಕಿದ್ದರೆ....
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ಕರೆತರಬಾರದೇಕೆ..?
ಪದೇ...ಪದೇ...
ನನ್ನ ನೋಡಿ
ನಕ್ಕು ಹೋಗುತ್ತಿರುವವರ
ಕುರಿತೇ...
ಮಾತನಾಡಬೇಡ
ರಂಗೀ...
ಹೀಗಾಗಲು...ಆ ಸಂಜೆ
ನಕ್ಕು ಹೋದವಳ
ಕುರಿತು ಏನಾದರು
ಹೇಳು.
ಹೃದಯದಲ್ಲೆ...
ಆರಾಧಿಸಿಕೊಂಡ ಮೇಲೆ
ಕಳೆದುಕೊಳ್ಳುವ
ಭಯವಿನ್ನೆಲ್ಲಿ
ರಂಗೀ...
ಬಡಿತ ನಿಲ್ಲುವವರೆಗೂ...
ನಿನ್ನ ಮರೆಯುವ
ಮಾತುಂಟೇನೆ...
ಹುಡುಗಿ.
👌👌💐💐
ನಾನೂ...
ನಂಬಲೇ...ಇಲ್ಲ
ಹಿತ್ತಲಿನ ಮಲ್ಲಿಗೆಯೆ
ಅವಳ ಮುಡಿಯನ್ನು
ಸಿಂಗರಿಸುತ್ತಿತ್ತೆಂದು
ರಂಗೀ...
ಚುಚ್ಚುವ ಮುಳ್ಳಿನ
ಗುಲಾಬಿಯನ್ನೆ ಹುಡುಕಾಡುತ್ತ
ಅಲೆದಾಡುತ್ತಿದ್ದೇನೆ
ಅಲೆಮಾರಿಯಾಗಿ.