Beish
Thursday, September 29, 2022
ರಂಗೀ
ಮೊದಲ ಭೇಟಿಯ
ಕುಡಿ ನೋಟಕ್ಕೆ...
ಎದೆಯ ಬೆಟ್ಟವಿದು
ಛಿದ್ರವಾಗಿ ಹೋಯಿತಲ್ಲ
ರಂಗೀ...
ನಿತ್ಯ ಸಿಂಗರಿಸಿಕೊಳ್ಳುವ
ಇವಳ ಮನೆಯ
ಕನ್ನಡಿಯ ಪಾಡು
ಏನಾಗಿದೇಯೊ?
Wednesday, September 28, 2022
ರಂಗೀ
ಅವಳೊಲವು ನನ್ನನ್ನು
ರೆಕ್ಕೆ ಕಿತ್ತ ಹಕ್ಕಿಯಂತೆ
ಹೇಳವನನ್ನಾಗಿ
ಮಾಡಿಬಿಟ್ಟಿತು
ರಂಗೀ....
ದಾರಿಯನ್ನು
ಬದಲಾಯಿಸಿಕೊಂಡಿದ್ದರೆ!!?
ಬಾನಿಗೆ....
ಮುತ್ತಿಕ್ಕುತ್ತಿದ್ದನೇನೊ?.
Tuesday, September 27, 2022
ರಂಗೀ
ಮರಣದ ನಂತರ, ಮಸಣಕ್ಕೆ
ಬರುವವರಿಗೆಲ್ಲ,
ಗೋರಿಯ ಮೇಲಿಡಲು
ಹೂಗುಚ್ಛಗಳನ್ನು
ತರಬೇಡವೆಂದು
ಹೇಳಿಬಿಡು
ರಂಗೀ...
ತರುವುದೇ ...ಆದರೆ,
ಮದ್ಯದ ಬಾಟಲಿಗಳನ್ನು
ತಂದು...
ಸುರಿದು ಹೋಗಲಿ.
ರಂಗೀ
ಊರ ಜನರೆಲ್ಲ
'ಹುಡುಗ' ದಾರಿ
ತಪ್ಪಿದ ಎನ್ನುತ್ತಿದ್ದಾರಲ್ಲ!!
ರಂಗೀ...
ಅದ್ಹೇಗೆ?
ಎಲ್ಲಿದ್ದರೂ....ಪ್ರತಿನಿತ್ಯ
ಸಂಜೆಗೆ
ನಿನ್ನರಮನೆಯ ಮುಂದೆ
ಹಾಜರಾಗುವುದಿಲ್ಲವೇನು?
ರಂಗೀ
ಒಂದು ಹೆಣ್ಣಿನ ನಂಜಿಗೆ
ಮತ್ತೊಂದು ಹೆಣ್ಣೇ...ಮದ್ದು
ಎನ್ನುವ ಮಾತು ನನ್ನ
ವಿಷಯದಲ್ಲಿ ನಿಜವಾಯಿತು
ರಂಗೀ...
ಅವಳಂಟಿಸಿ ಹೋಗಿರುವ
ನಂಜಿನ ರೋಗಕ್ಕೆ
ನೀನು ಮದ್ದಾಗಿರುವೆ.
ರಂಗೀ
ಪ್ರೀತಿಯ ವಿಷಯದಲ್ಲಿ
ಊರ ಜನರು ಕಕ್ಕಿದ
ವಿಷವೇ... ನನ್ನನ್ನೇನು
ಮಾಡಲಿಲ್ಲ
ರಂಗೀ...
ಇನ್ನೂ ನಿನ್ನ ಮದ್ಯದ
ನಂಜು ನನ್ನನ್ನೆನು
ಮಾಡೀತು...!!
ರಂಗೀ
ಸುರಿಯುತ್ತಿರವ ಮಳೆಗೆ
ನದಿಗಳೆಲ್ಲ ತುಂಬಿ ಹರಿದು
ಊರು-ಮನೆ- ಗದ್ದೆಗಳೆಲ್ಲ
ಮುಳಗಿ ಹೋಗಿದ್ದರು... ಭೂದೇವಿಯ
ಒಡಲಾಳದ ಬೆಂಕಿಯಿನ್ನೂ..
ತಣಿದಿಲ್ಲ
ರಂಗೀ...
ಕೇವಲ ಎರಡೇ.. ಎರಡು
ಮದ್ಯದ ಬಟ್ಟಲಿಗೆ
ನನ್ನೆದೆಯೊಳಗಿನ ಪ್ರೇಮಾಗ್ನಿ
ನಂದಿ ಬೂದಿಯಾಗಬಲ್ಲದೇನು?
Newer Posts
Older Posts
Home
Subscribe to:
Posts (Atom)