Wednesday, October 4, 2023

ಚುಟುಕು

ಧರ್ಮಕ್ಕೆ ಯಾವ ಅಪ್ಪ-ಅಮ್ಮಂದಿರೂ
ಇಲ್ಲ..!!
ಬದುಕಲಿಕ್ಕೆ ನಾವೆ ಸೃಷ್ಟಿಸಿದಂತಹ
ಕರ್ಮಗಳು..!!
ಕಟ್ಟಿದ್ದೇನೊ ಮಾನವನ ಉದ್ಧಾರಕ್ಕಾಗಿ..
ಅರಿತು ಬೆಳಗಲಿಲ್ಲ..!!
ಎಂತಹ ವಿಪರ್ಯಾಸ ನೋಡಿ...!! 
ಬಟ್ಟೆ ಸೋಪಿಗಿಂತಲೂ 
ಕಡೆಯಾಗಿ ಬಳಸಿಕೊಳ್ಳುತ್ತಿದ್ದೇವೆ.. 
ತುಳಿಯಲಿಕ್ಕೆ, ಬೆಳೆಯಲಿಕ್ಕೆ,
ಅವರಿವರ ನಡುವೆ
ಬೆಂಕಿಯನ್ನು ಹಚ್ಚಲಿಕ್ಕೆ..

ಚುಟುಕು

ಓ...
ನಿರ್ದಯಿ ದೇವರೆ...
ಗಾಯಕ್ಕೆ ಮದ್ದನ್ನು ಹಚ್ಚುವವರನ್ನು
ಸನಿಹದಲ್ಲಿರಿಸಬೇಡ..!!
ಆ ಕೆಲಸವನ್ನು ದಾದಿಯೂ ಮಾಡುತ್ತಾಳೆ..
ಎದೆಯ ನೋವನ್ನು
ತೋಡಿಕೊಳ್ಳಲಿಕ್ಕೆ ಒಬ್ಬ
ಕಿವುಡನನ್ನಾದರೂ ಜೊತೆಗಿರಿಸು..!!

ಗೆಳೆಯ


ಹೀಗೆ ಕಲ್ಪನೆಯಲ್ಲಿಯೇ..
ಎಷ್ಟು ದಿನ ಕಾಲ
ಕಳೆಯುವೆ
ಗೆಳೆಯ...
ದಿನಸಿ ದರಗಳೆಲ್ಲ
ಗಗನವನ್ನು
ಚುಂಬಿಸುತ್ತೀವೆ..!!
ಒಮ್ಮೆ ಬಜಾರನ್ನಾದರೂ
ಸುತ್ತಿ ಬಾರೆಯಾ...😜

ಅಂಗೈಯೊಳಗಿನ ಹೂವಿನಂತೆ
ಕಾಪಿಟ್ಟುಕೊಳ್ಳುವೆನೆಂದು
ಮಾತನ್ನು ಕೊಟ್ಟಿದ್ದೆಯಲ್ಲ
ಗೆಳೆಯ...
ನೀನೆ ಹೇಳು...
ಬಳ್ಳಿಯಿಂದ ಹೂವುಗಳೇನೊ
ಕಳಚಿವೆ...
ಆಘ್ರಾಣಿಸುವೆಯೊ...?
ಉಸಿರ ಕಟ್ಟಿಸುವೇಯೊ...?

ಗಜಲ್

ಯಾರೋ.... ಹೇಳಿದರೆಂದು ನಿನ್ನರಮನೆಯ
ಬಾಗಿಲಿಗೆ ಬಂದು ಕುಳಿತುಕೊಂಡು ಬಿಟ್ಟೆ..!!
ಕಾಡಿಗೆ ಕಣ್ಣವಳ ನೊಟದ ಬಾಣಕ್ಕಾದ ನೋವಿಗೆ
ಮದ್ಯವೆ ಮದ್ದೆಂದು ನಾ ಕುಡಿದು ಕೆಟ್ಟೆ..!!
ಸಾಕಿ...
ದೇವರು ಸೃಷ್ಟಿಸಿದ ಮನುಷ್ಯನಿಂದ ದೇವರಿಗಾಗಿಯೆ
ಕಟ್ಟಿಸಿದ ಕಲ್ಲು ಕಟ್ಟಡದ ಮುಂದಾದರು ಕುಳಿತುಕೊಂಡಿದ್ದರೆ..
ಭಿಕ್ಷೆ ಬೇಡುವುದನ್ನಾದರು ಚೆನ್ನಾಗಿ ಕಲಿತುಕೊಳ್ಳುತ್ತಿದೆ..!!! ಪ್ರೇಮ ದೇವತೆ ದಯೆ ತೋರಲಿಲ್ಲ..
ಲಕ್ಷ್ಮೀ ದೇವಿಯಾದರೂ ಒಲಿದರೆ....ಮುಂದಿನ
ಸಂಜೆಗಳಿಗೆ ಬೆಳಕಾದರೂ ಅಗಬಹುದು..!!

ಹುಚ್ಚನೆಂದು ನಡು‌ ಬೀದಿಯಲ್ಲಿ ಎಂದೋ... ಕೈ
ಬಿಟ್ಟು ಹೋಗಿರುವಳವಳು..
ನನ್ನೆದೆಯ ನೋವು ಅವಳಿಗಿಂತಲೂ ಚೆನ್ನಾಗಿ...
ಹನಿ...ಹನಿ...ರಕ್ತವನ್ನು ನುಂಗುತ್ತಾ ಅಚ್ಚೆಯನ್ನು ಹಾಕಿದ
ಸೂಜಿಗಷ್ಟೇ ಗೊತ್ತಿದೆ ಸಾಕಿ.....
ಇಂದೋ...ನಾಳೆಯೋ... ಅಂಗೈಯ ತುಂಬಾ
ಗೊರಂಟಿಯನ್ನು ಹಚ್ಚಿಕೊಳ್ಳುತ್ತಾವಳು...
ತುಂಬು ಚಂದಿರನ ಬೆಳದಿಂಗಳ ಹೆಣದೊಂದಿಗೆ
ಮಲಗಬೇಕಿದೆ ನಾನು ಅಂಗಳದಲ್ಲಿ....
ಅಚ್ಚೆ ಹಾಕಿಸಿಕೊಂಡ ಹೆಸರಿನೊಂದಿಗೆ ಒಬ್ಬಂಟಿಯಾಗಿ!!

ಅರೇ... ಆದ ಗಾಯದ ಕಿವುವನ್ನು ಹಿಚುಕಿ, ಮುಲಾಮನ್ನು
ಸವರಿ ಶುಶ್ರೂಷೆ ಮಾಡುವ ದಾದಿಗಿಂತಲೂ ಕಲ್ಲು
ಹೃದಯದವಳಾಗಿಬಿಟ್ಟಳಾ..?
ಬಾಡಿದ ಮಲ್ಲಿಗೆಯನ್ನು ನೀಲಿಯಲ್ಲಿ ಅದ್ದಿ ತೆಗೆದು
ಮರು ದಿನಕ್ಕೆ ಮಾರಾಟ ಮಾಡಲು ನಿಲ್ಲುವ ಹೂವಾಡಗಿತ್ತಿಗಿಂತಲೂ ಕೀಳಾಗಿಬಿಟ್ಟಳಾ..?
ಸಾಕಿ...
ಮನೆಯ ಎದುರಿಗೆ ಹೋದಾಗಲೊಮ್ಮೆ ಕಲ್ಲುಗಳನ್ನು
ಎಸೆಯುತ್ತಾಳೆ..!!
ಆಕೆ ಎಸೆದ ಒಂದೊಂದು ಕಲ್ಲುಗಳನ್ನು ಎತ್ತಿಟ್ಟುಕೊಂಡು
ಬಂದು ಕಾಪಿಟ್ಟುಕೊಳ್ಳುತ್ತೇನೆ..!!
ಭಕ್ತಿಯಿಂದ ಶಿವನ ನೆತ್ತಿಯಿಂದ ಜಾರಿಬಿದ್ದ ಹೂವುಗಳಂತೆ

ನಾಳೆ ನನ್ನದಲ್ಲ...ನಿನ್ನೆ ನೆನಪಿಲ್ಲ... ಇಂದು ಅವಳಿಲ್ಲ..
ಹೊತ್ತು-ಗೊತ್ತುಗಳೆ ಮೋಸ ಹೋಗಿಬಿಟ್ಟಿವೆ ಅವಳ
ನಗುವಿನ ಸದ್ದಿಗೆ..!! ಯಾವುದು ನಿಂತಿದೆ ? ಯಾವುದು
ಓಡುತ್ತಿದೆ ಒಂದು ಅರ್ಥವಾಗುತ್ತಿಲ್ಲ
ಸಾಕಿ...
ಈಗೀಗ ಎಲ್ಲ ಕೊಳಚೆಗಳ ಬಾಯಿಗಳನ್ನು ಮುಚ್ಚಿಬಿಟ್ಟಿದ್ದಾರೆ
ಬೀಳುವ ಭಯವಿಲ್ಲ..!! ಹೀಗೆ ನಡು ಬೀದಿಯಲ್ಲಿ ನಿಲ್ಲಲು
ಸುಂಸ್ಕೃತ ಜನರು ಬಿಡುವುದಿಲ್ಲ...!! ಹಾಳಾಗಿ ಹೋಗಲಿ
ಸುಡುಗಾಡಿಗಾದರೂ ಹೋಗೋಣವೆಂದರೆ... ಉಸಿರಿರುವ
ತನಕ ಇಲ್ಲಿ ಕಾಲಿಡಬೇಡ ಎನ್ನುತ್ತಾರಲ್ಲ..!!
ಅವರಿಗೆಲ್ಲ ಏನು ಗೊತ್ತು.. ನನ್ನುಸಿರು ಅವಳ ಕಿರುನಗೆಯ ಅಂಚಿನಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವುದು...

ಚುಟುಕುಗಳು


ಮಾತು ಮಾತಿಗೂ
ಹೇಳುತ್ತಾಳೆ ನನ್ನಾಕೆ
ನಿಮಗಾಗಿಯೇ ಒಲವಿಂದ
ಮಾಡಿದ್ದು ಎಳ್ಳು ಹೋಳಿಗೆ!!
ಭಯವಾಗುತ್ತಿದೆ ಈ 
ಮಾತನ್ನು ಕೇಳುತ್ತಿದ್ದರೆ...
ಯಾವ ಡಿಮ್ಯಾಂಡನ್ನು
ಇಡುತ್ತಾಳೊ..?
ನಾಳೆಗೆ!!

ಆಕಿ ಅಂದ್ಳು
ಹಬ್ಬ ಐತಿ ಮಾಡ್ಕೋ
ಬೇಕಿತ್ತಿಲ್ಲ ದಾಡಿ...!!
ನೀ ಜೊತಿಗಿಲ್ದಿದ್ರ
ನನಗ್ಯಾರು ಅಂಕಲ್ ಅನ್ನಲ್ಲ
ಕಣೇ... ಅಂದೇ ನೋಡಿ..!!
ಸಂಜೆಗಾಗುವ ಅನಾಹುತವನ್ನು
ನೆನಸಿಕೊಂಡು ನಡಗುತ್ತಿದೆ 
ಸಣ್ಣಗೆ ನನ್ನ ಬಾಡಿ!!

ಹೂವಿನಂಥವಳು....
ಹೂವನ್ನೇ ಬಿಟ್ಟಿಲ್ಲ..!!
ಇನ್ನೂ ನನ್ನೆದೆಯ
ಪಾಡೇನು..?
ರಂಗೀ..
ಸತ್ತು, ಬದುಕಿಸಿ
ಬದುಕಿಸಿ, ಸಾಯಿಸುವ
ಕಲೆ ಇವಳಿಗಿಂತ
ಬೇರಾರಿಗೆ ಕರಗತವಾಗಿದೆ
ಹೇಳು..!!

ಭಾವನೆಗಳನ್ನೆ... ಲೆಕ್ಕಕ್ಕಿಡದವರ
ಮದ್ಯದಲ್ಲಿ ನಾನು
ಪದಗಳನ್ನು ಎಣಿಸಿ
ಜೋಡಿಸುತ್ತಿದ್ದೇನೆ
ರಂಗೀ...
ಬರೆದಿಟ್ಟ ಸಾಲುಗಳ
ಅರ್ಥವನ್ನೆ ಅರಿಯದವರು...
ಮನಸಿನ ಮಾತನ್ನು
ಹೇಗೆ ಅರಿತುಕೊಂಡಾರು?

ಮೋಸ ಮಾಡುವ ಈ
ಜೋಡಿ ಕಣ್ಣುಗಳಿಂದ
ಪದೇ..ಪದೇ...
ನನ್ನನು 
ವಂಚಿಸುತ್ತಿರುವಳಲ್ಲ
ರಂಗೀ...
ಜಾಲಕ್ಕೆ ಸಿಕ್ಕಿಬಿದ್ದು
ಒದ್ದಾಡುವವನ
ನೋವಿನಲ್ಲಿ ಇಲ್ಲಿ
ಯಾರು ಪಾಲನ್ನು
ಬೇಡುವುದಿಲ್ಲ..!!

ಮೊದಲ ಮಧು 
ಬಟ್ಟಲನ್ನು
ಕುಡಿದಷ್ಟು ಕಹಿಯಾಗಿರಲಿಲ್ಲ
ನನ್ನ ಅವಳ
ಮೊದಲ ಭೇಟಿ
ರಂಗೀ....
ನಿನ್ನ ಮದ್ಯದೊಳಗಿನ
ಕಹಿಯೇನು ಕಡಿಮೆಯಾಗಿಲ್ಲ
ಕೊನೆಗಿಲ್ಲಿ ಅವಳೇನು
ಸಿಹಿಯನ್ನು ಉಳಿಸಿ ಹೋಗಿಲ್ಲ

ಹತ್ಯಾಕಾಂಡಗಳಂತಹ
ವಿಷಯಗಳನ್ನೆ ಜಗತ್ತು
ಮರೆತು ಬಿಡುತ್ತದೆ
ರಂಗೀ...
ಮರೆವು ನನ್ನ ಪಾಲಿಗೆ
ಎಷ್ಟೊಂದು ನಿಷ್ಕರುಣಿ 
ಪದೇ...ಪದೇ...ಅವಳ
ನೆನಪುಗಳನ್ನೆ ನೆನಪಿಸುತ್ತದಲ್ಲ!!

ಅಲ್ಲಿ ನಿನ್ನ 
ಕಣ್ಣೀರಿಗೆ ಬರವಿದ್ದರೆ..
ಇಲ್ಲಿ ನನ್ನ
ಮದ್ಯದ ಬಾಟಲಿಗೆ
ಬರ ಬಂದಿದೆ
ನಿಮ್ಮ "ಉಚಿತ" 
ಸೌಲಭ್ಯದ ಬೆಲೆ
ಏರಿಕೆಯಿಂದಾಗಿ 😝


ನಜಹ

ಇಲ್ಲಿ ಕೇಳೊ... ಮಹಾತ್ಮ...
ರಾತ್ರಿಯೆಲ್ಲ ಹುಳಿ, ಹೆಂಡವನ್ನು
ಸವಿದ ನಾಲಿಗೆಯಿಂದು, ಕುಡಿತದಿಂದ
ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆಂದು
ಭೋದಿಸುತ್ತಿದೆ...

ಇಲ್ಲಿ ನೋಡೊ.... ಮಹಾತ್ಮ...
ಊರಿಗೆ ಬೆಂಕಿ ಹಚ್ಚಿಸಿದವರು
ಅಮಾಯಕರ ಮುಂದೆ  ಶಾಂತಿ-ಸಹಬಾಳ್ವೆಯ
ಹರಿಕಥೆಯನ್ನು ಹರಿಬಿಡುತ್ತಿದ್ದಾರೆ..

ಇಲ್ಲೇನು ಹೇಳುವೇಯೊ... ಮಹಾತ್ಮ...
ಶಾಂತಿಯ ಹೂತೋಟದಲ್ಲಿ ಜಾತಿಗಳೆಂಬ
ಮುಳ್ಳು ಬೇಲಿಯನ್ನು ಹೆಣೆಯುತಿರುವರಲ್ಲೊ
ಇಲ್ಲಿ ಯಾರೊ ಬೆಳೆದದ್ದನ್ನು.. ಇನ್ನಾರೊ
ಉಣ್ಣುತ್ತಾರೆ...

ಅವರಿಗೆಲ್ಲ ಏನೂ ಹೇಳುವುದು... ಮಹಾತ್ಮ..
ಉಂಡ ತಟ್ಟೆಯಲ್ಲಿ ಮಣ್ಣು ಸುರಿದು, ಎದ್ದು
ಹೋಗುವ ಬು(ಲ)ದ್ಧಿ ಜೀವಿಗಳ ಬೆನ್ನನು
ತಟ್ಟುವ ತಾಯ್ಗಂಡರೀರುವಾಗ...

ಮರೆತುಬಿಡೋಣ ಬಿಡು... ಮಹಾತ್ಮ...
ಅರೆ ಘಳಿಗೆ.‌!! ನಿನ್ನ ಪಟಕ್ಕೊಂದು ಹಾರ ಹಾಕಿ,
ಹಕ್ಕಿಯಂತೆ ಕಪಾಟುಗಳ ಬಂಧನದಲ್ಲಿದ್ದ ತಿರಂಗವನ್ನು
ಹಾರಿಸಿ, ದೌಡಾಯಿಸಿ ಬಿಡಬೇಕಿದೆ.. ತೋಟಕ್ಕೊ
ಊರ ಹೊರಗಿನ ಒಂಟಿ ಮನೆಯ ಕಡೆಗೊ
ಇಲ್ಲದಿದ್ದರೆ, ಗುಂಡು-ತುಂಡು ಎರಡು 'ಮಿಸ್ಸ್'
ಆಗುವ ಸಾಧ್ಯತೆ ಇದೆಯಲ್ಲವೇನು?

Monday, September 25, 2023

ಕಜಲ್

ಯಾರೋ.... ಹೇಳಿದರೆಂದು ನಿನ್ನರಮನೆಯ
ಬಾಗಿಲಿಗೆ ಬಂದು ಕುಳಿತುಕೊಂಡು ಬಿಟ್ಟೆ..!!
ಕಾಡಿಗೆ ಕಣ್ಣವಳ ನೊಟದ ಬಾಣಕ್ಕಾದ ನೋವಿಗೆ
ಮದ್ಯವೆ ಮದ್ದೆಂದು ನಾ ಕುಡಿದು ಕೆಟ್ಟೆ..!!
ಸಾಕಿ...
ದೇವರು ಸೃಷ್ಟಿಸಿದ ಮನುಷ್ಯನಿಂದ ದೇವರಿಗಾಗಿಯೆ
ಕಟ್ಟಿಸಿದ ಕಲ್ಲು ಕಟ್ಟಡದ ಮುಂದಾದರು ಕುಳಿತುಕೊಂಡಿದ್ದರೆ..
ಭಿಕ್ಷೆ ಬೇಡುವುದನ್ನಾದರು ಚೆನ್ನಾಗಿ ಕಲಿತುಕೊಳ್ಳುತ್ತಿದೆ..!!! ಪ್ರೇಮ ದೇವತೆ ದಯೆ ತೋರಲಿಲ್ಲ..
ಲಕ್ಷ್ಮೀ ದೇವಿಯಾದರೂ ಒಲಿದರೆ....ಮುಂದಿನ
ಸಂಜೆಗಳಿಗೆ ಬೆಳಕಾದರೂ ಅಗಬಹುದು..!!

ಹುಚ್ಚನೆಂದು ನಡು‌ ಬೀದಿಯಲ್ಲಿ ಎಂದೋ... ಕೈ
ಬಿಟ್ಟು ಹೋಗಿರುವಳವಳು..
ನನ್ನೆದೆಯ ನೋವು ಅವಳಿಗಿಂತಲೂ ಚೆನ್ನಾಗಿ...
ಹನಿ...ಹನಿ...ರಕ್ತವನ್ನು ನುಂಗುತ್ತಾ ಅಚ್ಚೆಯನ್ನು ಹಾಕಿದ
ಸೂಜಿಗಷ್ಟೇ ಗೊತ್ತಿದೆ ಸಾಕಿ.....
ಇಂದೋ...ನಾಳೆಯೋ... ಅಂಗೈಯ ತುಂಬಾ
ಗೊರಂಟಿಯನ್ನು ಹಚ್ಚಿಕೊಳ್ಳುತ್ತಾವಳು...
ತುಂಬು ಚಂದಿರನ ಬೆಳದಿಂಗಳ ಹೆಣದೊಂದಿಗೆ
ಮಲಗಬೇಕಿದೆ ನಾನು ಅಂಗಳದಲ್ಲಿ....
ಅಚ್ಚೆ ಹಾಕಿಸಿಕೊಂಡ ಹೆಸರಿನೊಂದಿಗೆ ಒಬ್ಬಂಟಿಯಾಗಿ!!

ಅರೇ... ಆದ ಗಾಯದ ಕಿವುವನ್ನು ಹಿಚುಕಿ, ಮುಲಾಮನ್ನು
ಸವರಿ ಶುಶ್ರೂಷೆ ಮಾಡುವ ದಾದಿಗಿಂತಲೂ ಕಲ್ಲು
ಹೃದಯದವಳಾಗಿಬಿಟ್ಟಳಾ..?
ಬಾಡಿದ ಮಲ್ಲಿಗೆಯನ್ನು ನೀಲಿಯಲ್ಲಿ ಅದ್ದಿ ತೆಗೆದು
ಮರು ದಿನಕ್ಕೆ ಮಾರಾಟ ಮಾಡಲು ನಿಲ್ಲುವ ಹೂವಾಡಗಿತ್ತಿಗಿಂತಲೂ ಕೀಳಾಗಿಬಿಟ್ಟಳಾ..?
ಸಾಕಿ...
ಮನೆಯ ಎದುರಿಗೆ ಹೋದಾಗಲೊಮ್ಮೆ ಕಲ್ಲುಗಳನ್ನು
ಎಸೆಯುತ್ತಾಳೆ..!!
ಆಕೆ ಎಸೆದ ಒಂದೊಂದು ಕಲ್ಲುಗಳನ್ನು ಎತ್ತಿಟ್ಟುಕೊಂಡು
ಬಂದು ಕಾಪಿಟ್ಟುಕೊಳ್ಳುತ್ತೇನೆ..!!
ಭಕ್ತಿಯಿಂದ ಶಿವನ ನೆತ್ತಿಯಿಂದ ಜಾರಿಬಿದ್ದ ಹೂವುಗಳಂತೆ

ನಾಳೆ ನನ್ನದಲ್ಲ...ನಿನ್ನೆ ನೆನಪಿಲ್ಲ... ಇಂದು ಅವಳಿಲ್ಲ..
ಹೊತ್ತು-ಗೊತ್ತುಗಳೆ ಮೋಸ ಹೋಗಿಬಿಟ್ಟಿವೆ ಅವಳ
ನಗುವಿನ ಸದ್ದಿಗೆ..!! ಯಾವುದು ನಿಂತಿದೆ ? ಯಾವುದು
ಓಡುತ್ತಿದೆ ಒಂದು ಅರ್ಥವಾಗುತ್ತಿಲ್ಲ
ಸಾಕಿ...
ಈಗೀಗ ಎಲ್ಲ ಕೊಳಚೆಗಳ ಬಾಯಿಗಳನ್ನು ಮುಚ್ಚಿಬಿಟ್ಟಿದ್ದಾರೆ
ಬೀಳುವ ಭಯವಿಲ್ಲ..!! ಹೀಗೆ ನಡು ಬೀದಿಯಲ್ಲಿ ನಿಲ್ಲಲು
ಸುಂಸ್ಕೃತ ಜನರು ಬಿಡುವುದಿಲ್ಲ...!! ಹಾಳಾಗಿ ಹೋಗಲಿ
ಸುಡುಗಾಡಿಗಾದರೂ ಹೋಗೋಣವೆಂದರೆ... ಉಸಿರಿರುವ
ತನಕ ಇಲ್ಲಿ ಕಾಲಿಡಬೇಡ ಎನ್ನುತ್ತಾರಲ್ಲ..!!
ಅವರಿಗೆಲ್ಲ ಏನು ಗೊತ್ತು.. ನನ್ನುಸಿರು ಅವಳ ಕಿರುನಗೆಯ ಅಂಚಿನಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವುದು...