ಜಡಿಮಳೆಯಂತೆ ನನ್ನೆದೆಯಂತರಂಗದ
ಪಾತಾಳದ ಕೆಸರಾಗಿದೆ, ಎಷ್ಟೆ ನುಂಗಿದರು
ಬತ್ತದ ಸೆಲೆಯಾಗಿದೆ, ಅದನ್ನೇಷ್ಟೆ
ಮರೆಯಲೆತ್ನಿಸಿದಾದರೂ ಒಣಗದ
ರಾಡಿಯಂತಾಗಿದೆ
ಮಾತಿನ, ಮುತ್ತಿನ, ಮೌನದ,
ಮುನಿಸಿನ, ಮುಂಗೋಪದ ಹನಿಗಳನೆಲ್ಲವ
ತೂತು ಬಿದ್ದ ತೆಪ್ಪದಂತಿನ್ನೂ ಬಸೆಯುತ್ತಲೇಯಿದೆ
ಕಾಯಿ ಹಣ್ಣಾಗುವ ಮೊದಲೇ ಉದುರಿದಂತೆ
ಹಾಲು ಮೊಸರಾಗುವ ಮುನ್ನವೇ ವಡದಂತೆ
ನನ್ನ ಪ್ರೀತಿಯು ಬಲಿಯುವ ಮೊದಲಿಗೆ
ಕತ್ತರಿಸಿಬಿಟ್ಟೆ ರಂಬೆಯಂತೆ
ಕಾಲು ನೋವು ಬಂದಂತೆ
ರಸವಿರದ ಹೂವುನು ಸುತ್ತಿ ಸುತ್ತಿ
ದುಂಬಿಯ ರೆಕ್ಕೆ ಸೋತಂತೆ
ಪ್ರೀತಿಯನರಿಯದ ನಿನ್ನ ನಾ ಸುತ್ತಿ ಸುತ್ತಿ
ಬದುಕಿರುವೆನಲ್ಲೆ ಸತ್ತಂತೆ