ನೀ ನಕ್ಕಾಗ ನಿನ್ನ
ಕೆನ್ನ್ಯಾಗ ಬೀಳೊ ಗುಳಿ
ನನ್ನೆದಿಯಾಗ ಬಡದಾವ
ಪ್ರೀತಿ ಮೊಳಿ
ನಗೊದೊಂದ ಏನ್
ನಿನ್ನ ಚಾಳಿ
ಮನದಾಗ ಆಡ್ಸಕ್ಹತ್ತಿಯಲ್ಲ
ಕಾಮನ ಹೋಳಿ
ಚಲೋ ಅಲ್ನೋಡಿದು
ನಿನ್ನ ವಾಂಛಾಳಿ
ಈ ಬರಗಾಲ ಮನದಾಗ ಪ್ರೀತಿ
ಅನ್ನೋ ಬೆಳಿನರ ಬೆಳಿ
ನೀ ನಕ್ಕಾಗ ನಿನ್ನ
ಕೆನ್ನ್ಯಾಗ ಬೀಳೊ ಗುಳಿ
ನನ್ನೆದಿಯಾಗ ಬಡದಾವ
ಪ್ರೀತಿ ಮೊಳಿ
ನಗೊದೊಂದ ಏನ್
ನಿನ್ನ ಚಾಳಿ
ಮನದಾಗ ಆಡ್ಸಕ್ಹತ್ತಿಯಲ್ಲ
ಕಾಮನ ಹೋಳಿ
ಚಲೋ ಅಲ್ನೋಡಿದು
ನಿನ್ನ ವಾಂಛಾಳಿ
ಈ ಬರಗಾಲ ಮನದಾಗ ಪ್ರೀತಿ
ಅನ್ನೋ ಬೆಳಿನರ ಬೆಳಿ
ಪ್ರೀತಿ ಮಾಡೋರು
ಕಣ್ಣಾಗ ಬರೀತಾರ
ಕಣ್ಣಾಗ ಓದ್ತಾರ
ಕಣ್ಣಾಗ ನಗ್ತಾರ
ಕಣ್ಣಾಗ ಅಳ್ತಾರ
ಕಣ್ಣಾಗ ಮಲಗ್ತಾರ
ಕಣ್ಣಾಗ ಈಜತಾರ
ಕಣ್ಣಾಗ ಹಾಡ್ತಾರ
ಕಣ್ಣಾಗ ಕುಣಿತಾರ
ಈ ಪ್ರೀತ್ಯಾಗ ಒಬ್ರ
ಕಣ್ಣ ಮುಚ್ಚಿದ್ರ
ಇನ್ನೊಬ್ರ ಕಣ್ಣ ಕೆರಿ
ತುಂಬಿದ ದಂಡಿನ
ಆಗಿರತೈತಿ
ನಮ್ಮ ಸಾಹಿತ್ಯ ಸಂಜೆ
ನಡೆಯುತ್ತದೆ ಚೌಕಿ
ಮಠದಲ್ಲಿ
ಪ್ರತಿಸಲ ಬರುವಾಗಲೂ
ನನ್ನಾಕೆ ಹೇಳುತ್ತಾಳೆ
ಮರಳಿ ಬನ್ನಿ ಮನೆಗೆ
ಯಾಕೆಂದರೆ
ಅದು
ಮಠ
ಮಲಗಿರುವೇ ಏಕೇ ಮೋಡವಾಗಿ
ಕರಗಿ ಇಳಿದುಬಿಡು ನೀರಾಗಿ
ಕಾಯುತ್ತಿದೆ ಧರೆಯು ಕಾದ ಹಂಚಾಗಿ
ಬೇಡುತಿವೆ ತರುಲತೆಗಳು ಹನಿ ತೊಟ್ಟಿಗಾಗಿ
ಫಸಲೊಳಗಿನ ಹಸಿರಳುತಿರಲು ನೀನಗಾಗಿ
ಕೆರೆಕಟ್ಟೆಗಳು ಕಾಯುತಿರಲು ನಿನ್ನ ಬರುವಿಗಾಗಿ
ಜೀವಿಗಳು ನಲಗುತಿರಲು ನೀರಿಗಾಗಿ
ಹರಿದುಬಿಡು ಶಿವನ ಜಡೆಯಿಂದ ಚಿಲುಮೆಯಾಗಿ
ಹರನೇ ಹರಿಸಿಬಿಡು ಗಂಗೆಯನು ಧರೆಗಾಗಿ
ಮರೆಸು ಮನದ ನೋವನು ಮಳೆಯಾಗಿ
ಸುರಿಸು ಜೀವರಾಶಿಗಳ ಬದುಕಿಗಾಗಿ
ಸತ್ತು ಬಾರದಿರಲಿ ನಿನ್ನ ರುದ್ರಭೂಮಿಗೆ