Sunday, July 16, 2017

ನಾವಲ್ಲ ಅನಾಥರು

ಅನಾಥರು...
ಹೊಟ್ಟೆ ಹಸುವೆಂದು ಸುಡು ಬಿಸಿಲಲಿ
ನಿಮ್ಮ ಮನೆಯ ಕದವ ತಟ್ಟುವವನಿಗೆ
ತುತ್ತು ಅನ್ನವ ನೀಡದ ನೀವು ಅನಾಥರು

ಬಾಯಾರಿ ಬಳಲಿ ಕುಡಿಯಲಿಕ್ಕೆ ನೀರು
ಕೊಡದಂತಹ ಕಲ್ಲು ಮನಸ್ಸಿನ ಮುಖಗಳೆ
ನೀವು ಅನಾಥರು... ಪ್ರೀತಿಯ ಬಯಸಿ
ಬಯಸಿ ಊರ ತುಂಬೆಲ್ಲಾ ನಿಮ್ಮ ಹಿಂದೆ
ಸುತ್ತಿ..ಊರಲ್ಲಿರುವ ಗುಲಾಬಿ ಹೂಗಳ
ರಾಶಿಯನೆ ತಂದು ಸುರಿದರೊಪ್ಪದ ಚೆಲುವೆಯರೆ.. ನೀವು ಅನಾಥರು

ತಾಯಿ.. ಮಡದಿ ಮಕ್ಕಳ ಆರೋಗ್ಯ
ಸರಿಯಿಲ್ಲವೆಂದು.. ತೋರಿಸಲು ಹಣವ
ಬೇಡಿದ ಮಿತ್ರನಿಗೆ ಸಹಾಯ ಹಸ್ತವ ಚಾಚದೆ
ಕುಡಿದು.. ಐವತ್ತೇರಡು ಎಲೆಗಳಲಿ ಹಗಲಿರುಳು ಕಳೆದು...ಸಂಸಾರವನು ಕಣ್ಣೀರ
ಕಡಲಿಗೆ ನೂಕುವವರಿಗೆ ಹಣವ ನೀಡುವ
ನಿಮ್ಮಂಥವರು ಅನಾಥರು..

ಮಗುವು ಕೇಳಿದ ಒಂದು ಆಟಿಕೆಯನ್ನು
ಕೊಡಿಸದೆ ಅದೇ ದುಡ್ಡಿನಲ್ಲಿ ಜೂಜಾಡಿ ಬರುವ ಗಂಡು ಜನ್ಮಗಳೆ ಅನಾಥರು..
ತನ್ನ ಪಕ್ಕದ ಮನೆಯ ಹಸುಗೂಸು ತಾಯಿಯ ಎದೆಹಾಲು ಸಾಲದಾಗಿ..ಆ ತಾಯಿ ನಿಮ್ಮ ಮನೆಯವರೆಗೂ ಬಂದು
ಹಾಲನ್ನು ಕೇಳಿದಾಗ ನೀಡದೆ ಮಲತಾಯಿ
ಧೋರಣೆ ತೋರುವ ತಾಯಂದಿರೆ ನೀವು
ಅನಾಥರು..

ಇನ್ನೊಬ್ಬರ ನೋವು ನಲಿವುಗಳಿಗೆ
ಸ್ಪಂದಿಸದ..ಮರುಗದ..ಸದಾ ಮನದಲಿ
ಕಲ್ಮಷವನೆ ತುಂಬಿಕೊಂಡ ಮನಗಳೆಲ್ಲವು
ಎಲ್ಲ ಇದ್ದೂ ಅನಾಥರು..

ದೇವರ ಮಕ್ಕಳು

ಅನಾಥರೆ.. ನಾವು ಅನಾಥರು
ಹುಟ್ಟಿಸಿ ಮರೆತಿರುವ ಈ
ಸಮಾಜದ ಕಣ್ಣಿಗೆ ನಾವು
ಅನಾಥರು..
ಮಾಂಸದ ಮುದ್ದೆಗೆ ಜ್ಯೋತಿಯ
ಹೊತ್ತಿಸಿ... ದುಡಿಯಲು ಬಲವಿಲ್ಲದ
ರೆಟ್ಟೆಗಳಿಗೆ ಹಸಿವೆಂಬ ಜೋಳಿಗೆಯ
ಕಟ್ಟಿ..ಸಾವನ್ನು ನಮ್ಮ ಪಾಲಿಗೆ ನಿಲುಕದ
ನಕ್ಷತ್ರವನ್ನಾಗಿಸಿ... ನಮ್ಮಳುವ ತಾ ಕೇಳಿ
ನಗುವಂತವವನ ದೇವರು ಮಕ್ಕಳು ನಾವು

ನಮಗೆಂದು ಹಾಕಿಲ್ಲ ಅವನು ಚೌಕಟ್ಟು..
ಓಡಾಡಲು.. ಮಲಗಲು..ಜಿಗಿಯಲು
ಹಾರಲು..ಮನೆ ಮನೆಗೆ ಹೋಗಿ.. ತರ
ತರದ ಹಳಸಿದ್ದೊ.. ನಿನ್ನೆಯದ್ದೊ ಭಕ್ಷ
ಭೋಜನವ ಸವಿಯುವ ಅನ್ನ ಸಂಪತ್ತಿಗೆಂದೂ... ಕೊರತೆಯನ್ನಿ...ಟ್ಟಿಲ್ಲ
ಅದು ತಿಂದರೆ ಹೊಟ್ಟರ ನೋಯುತ್ತದೆ...
ಇದನ್ನು ತಿಂದರೆ ಹಲ್ಲುನೋವು ಬರುತ್ತದೆ...
ಎಂದು ಬೈಯ್ಯುವ ತಾಯನ್ನು ಕೊಡದಿರಬಹುದು..
ಅವೆಲ್ಲವ ತಿಂದರೂ ರೋಗವ ಬರದ ಶಕ್ತಿಯನ್ನು ನೀಡಿರುವನಲ್ಲ.... ಇನ್ನೇನು ಬೇಕು

ನಮಗಿಲ್ಲವಲ್ಲ ನಾಳೆಯ ಚಿಂತೆ..
ಶಾಲೆಯ ಚಿಂತೆ.. ಹೊರೆ ಹೊರೆ ಪುಸ್ತಕಗಳ ಹೊತ್ತು
ನೂರು..ಸಾವಿರ.. ಲಕ್ಷ ಲಕ್ಷಗಟ್ಟಲೆ ಹಣವ
ಸುರಿದು..ಇಪ್ಪತ್ತಕ್ಕೂ ಹೆಚ್ಚು ವರುಷವ ನಾಲ್ಕು
ಗೋಡೆಗಳ ಮಧ್ಯೆ ಕುಳಿತು.. ಬದುಕಿಗೆ ದಾರಿಯ
ಹುಡುಕುವ ವಿದ್ಯೆಯ ಭಾಗ್ಯವ ನೀಡದಿದ್ದರೂ... ಹುಟ್ಟಿಸಿದಾರು ವರುಷದಲ್ಲೆ ಈ... ವಿಶಾಲ ವಿಶ್ವದಲ್ಲಿ ಹೊಟ್ಟೆಗೊಂದಿಷ್ಟು ಹಿಟ್ಟನು.. ಯಾವ ಜನರ ಜೊತೆ
ಯಾವ ರೀತಿಯಾಗಿ ಬದುಕಬೇಕೆಂಬುದ ಕಲೆಯನು..
ಹುಟ್ಟಿಸಿದ ಬೆನ್ನಲ್ಲೆ.... ಸಾವಿನ ಜೊತೆಗೆ ಕಟ್ಟಿಕೊಟ್ಟದ್ದಕ್ಕೆ
ನಾವಾ...ವ ಬೆಲೆಯ ತೆರಬಲ್ಲೇವು

ಲಕ್ಷ...ಲಕ್ಷಗಳ ಕೊಟ್ಟು ಮನೆಯ ಕಟ್ಟಿಸಿ..
ಸುತ್ತಲೂ ಕಬ್ಬಿಣದ ಸರಳುಗಳ ಹಾಕಿಸಿ.. ಕಳ್ಳ
ಕಾಕರೂ ಬರುವರೆಂಬ ಭಯದಿಂದ ಸಾವಿರಾರು
ರೂಪಾಯಿಗಳ ಕೊಟ್ಟು ನಾಯಿಯ ತಂದು...
ಹಗಲಲ್ಲೂ ಮನೆಯೆಲ್ಲ ಬಾಗಿಲುಗಳ ಹಾಕಿಕೊಂಡು
ಬದುಕುವ ದೌರ್ಭಾಗ್ಯವ ಕೊಡದಿದ್ದರು..
ವಿಶಾಲ ಅಂಗಳದಲ್ಲಿ.. ಎರಡು ಕೌದಿಯ ಹೋದಿಕೆಯ
ಗುಡಿಸಲಿನಲ್ಲಿ ಯಾರ ಭಯವಿಲ್ಲದೆ..ನನ್ನ
ಅಗುಳಿನಲ್ಲಿಯೆ ಒಂದು ಅಗುಳನುಂಡು ನನ್ನ ಗುಡಿಸಲು
ಕಾಯುವ ಬೀದಿ ನಾಯಿಯು...ಹುಣ್ಣಿಮೆಗೆ ಬೆಳದಿಂಗಳೂಟ
ಅಮವಾಸೆಗೆ ತಾರೆಗಳ ತೋಟದೊಳಗಿಂದ ಚೆಲ್ಲಿದ
ಬಿಂಬದೂಟ..ದಿನವು ನನ್ನ ಮಡದಿಯೊಂದಿಗೆ
ಉಪ್ಪು ಖಾರವಿಲ್ಲದಲೆ ಬರೀ ಅವಳ ಪ್ರೀತಿ ತುಂಬಿ
ಬಡಿಸುವ ಮೇಣಬತ್ತಿಯ ಊಟ..ಅವಳ ಮಡಿಲಲಿ
ಮಗುವಾಗಿ ಮಲಗುವ ನೀಡಿದ ಭಾಗ್ಯವ ನೆನೆದು
ನಾವೆಲ್ಲ ಕರೆದುಕೊಳ್ಳುವುದದಕ್ಕೆ
ನಾವು ದೇವರ ಮಕ್ಕಳು...
ನಾವು ದೇವರ ಮಕ್ಕಳು...

Saturday, July 15, 2017

ಪತ್ರಿಕೆ

ಪತ್ರಿಕೆ..
ಪತ್ರಿಕೆ ಕೇವಲ ಹತ್ತು ಹನ್ನೆರಡು
ಪುಟಗಳ ಹೊಂದಿದ.. ಕೇವಲ
ಕಪ್ಪು ಬಿಳುಪು ಬಣ್ಣ ಬಣ್ಣದ ಪದಗಳ
ಮತ್ತು ಪಟಗಳ ಮುದ್ರಿಸಿಕೊಂಡು ನಮ್ಮ
ಮನೆಯ ಹೊಸ್ತಿಲನ್ನು ರವಿಯ ಕಿರಣಗಳು
ಸ್ಪರ್ಶಿಸುವ ಮೊದಲೆ.. ಮನೆಯ ಬಾಗಿಲನ್ನು
ತಟ್ಟಿ.. ರಾತ್ರಿಯೆಲ್ಲ ಕಲ್ಪನೆಯ ಕನಸುಗಳಲೆ
ತೇಲಾಡಿದ ಮತಿಗೆ ವಾಸ್ತವದ ದರ್ಶನವ ಮಾಡಿಸುವ
ಜ್ಞಾನಕೋಶ...

ಈ ಒಂದು ಮುಂಜಾವಿಗೆ ಬಂದು ಬದುಕಿಗೆ
ಬೆಳಕನು ಚೆಲ್ಲುವ ಈ ಪತ್ರಿಕೆಯ ಹಿಂದೆ ಅದೇಷ್ಟು
ಯುವಕರ.. ಕೆಲಸಗಾರರ.. ಪತ್ರಿಕೆದಾರರ..
ಹಂಚಿಕೆದಾರರ ಪರಿಶ್ರಮವಿರುತ್ತದೆ.. ಒಬ್ಬ ಪತ್ರಕರ್ತ
ಸಾಮಾಜಿಕ.. ರಾಜಕೀಯ.. ಸಾಂಸ್ಕೃತಿಕ...ಬೇಕಾದ್ದು ಬೇಡವಾದದ್ದನ್ನು... ಹಲವು ಅಡೆತಡೆಗಳ ಎದುರಿಸಿ..
ಮಾಡುವ ಕೆಲಸದಲ್ಲಿ ಜೀವ ಬೆದರಿಕೆಯನ್ನು ಹೊಂದಿ
ಸಂಸಾರವನ್ನು ಸದಾ ಆತಂಕದ ಮಡುವಲ್ಲಿ ಮಲಗಿಸಿ
ಮನೆಬಿಟ್ಟು ಹೋದವನು ಮರಳಿ ಗೂಡು ಸೇರಬಲ್ಲನೆ
ಎಂಬ ಅನುಮಾನದಲ್ಲೆ ಊರಿನ ನಾಡಿನ ದೇಶದ ಬಗ್ಗೆ
ಚಿಂತಿಸುತ್ತ.. ವಿಮರ್ಶಿಸುತ್ತ..ತಾನೇನು ಕೊಡಬಲ್ಲೇನು
ಈ ಸಮಾಜಕ್ಕೆ... ಜನ್ಮವನಿತ್ತ ದೇಶಕ್ಕೆ...ಅದರಲ್ಲೂ ಹೆಚ್ಚಾಗಿ ಅಂಧಕಾರದಲ್ಲಿ ಮಲಗಿರುವ ನನ್ನ ಓದುಗರನ್ನು ಮೇಲೆತ್ತಲು
ಎಂತಹ ಅಪಾಯವನ್ನಾದರೂ ಸರಿ ಒಂದು ವಿಷಯಕ್ಕೆ
ನ್ಯಾಯವನ್ನು ದೊರಕಿಸಿಕೊಡಲೆಬೇಕು ಎಂದು ಹೊರಾಡುವ ಈ ಸಮಾಜದ ಕಣ್ಣುಗಳಿಗೆ ನಾವು ಎಷ್ಟು ಕೃತಜ್ಞತೆಗಳ
ಸಲ್ಲಿಸಿದರು ಸಾಲದು..

ಪತ್ರಿಕೆಯೆಂದರೆ ಪತ್ರಕರ್ತ..ಪತ್ರಕರ್ತನೆಂದರೆ ಪತ್ರಿಕೆ..
ಇವರು ಬರೆಯುವದರಿಂದ ಆ ಪತ್ರಿಕೆಗೆ ಜೀವವುಂಟು
ಆ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವುದರಿಂದಲೆ
ಇವರಿಗೆ ಹೆಸರುಂಟು ಗೌರವವುಂಟು...ಇಷ್ಟೇಲ್ಲಾ ಹೇಳಿ
ಇವರಿಬ್ಬರನು ಮನೆಯಂಗಳಕೆ ತಲುಪಿಸುವ ವಿತರಕರ
ಬಗ್ಗೆ ಹೇಳದೆ ಇರದಾದಿತೇನು...

ಮಳೆಯಲ್ಲಿ ತೊಯ್ದು... ಚಳಿಯಲ್ಲಿ ನಡುಗಿ..
ಬಿಸಿಲಲ್ಲಿ ಬೇವರಿ... ಗಾಳಿ ಇರದ ಸೈಕಲ್ ನ್ನು
ತುಳಿದುಕೊಂಡು ಓಣಿ.. ಓಣಿ.. ಮನೆಯ ಬಾಗಿಲುಗಳ
ತಟ್ಟಿ ಎಚ್ಚರಿಸಿ ಪತ್ರಿಕೆಯ ಹಂಚುವರು.. ಜ್ವರವಿರಲಿ
ಮೈ ಕೈ ನೋವೆ ಇರಲಿ.. ತಲೆನೋವಿರಲಿ ರಾತ್ರಿಪೂರಾ
ಎಚ್ಚರವಿರಲಿ ಇವರು ಕಾಯಕಕ್ಕೆ ಮಾತ್ರ ಗೈರು ಹಾಜರಿಲ್ಲ
ಒಂದು ತಲೆ ನೋವು ಬಂದರೆ ಸಾಕು ಎರಡು ದಿನ ರಜೆ
ಹಾಕುವ ಸರಕಾರಿ ನೌಕರರು... ಇವರನ್ನು ಕಂಡು ಇವರ ಕಾರ್ಯದಕ್ಷತೆಯನ್ನು ಒಪ್ಪಿ ಮೈಗೂಡಿಸಿಕೊಂಡರೆ ಸರಕಾರದ
ಕೆಲಸಗಳು ನಿಲ್ಲದೆ..ಮಲಗದೆ.. ಎದ್ದು ಓಡುಡಾವುದರಲ್ಲಿ ಸಂಶಯವೆಯಿಲ್ಲ

ನಮ್ಮ ಓದುಗರದೊಂದೆ ವಿನಂತಿ..
ನಿಮ್ಮ ಬರಹ ನಿಷ್ಪಕ್ಷಪಾತವಾಗಿರಲಿ..
ಓದುಗರ ಒಳಗಣ್ಣನು ತೆರೆಸುವಂತಿರಲಿ
ನಿಮ್ಮ ಚಿಂತನೆಗಳ ನಮ್ಮ ಮತಿಯಲ್ಲಿ ಬಿತ್ತಿ
ದೇಶಕ್ಕೆ ಸಮಾಜಕ್ಕೆ ಓದುಗುರು ತಮ್ಮನ್ನು ತಾವು
ಯಾವ ರೀತಿಯಾಗಿ ಅರ್ಪಿಸಿಕೊಳ್ಳಬೇಕೆಂಬುದನು
ಲೇಖನಗಳಲ್ಲಿ ತಿಳಿಸಿಕೊಡಿ.. ಭವ್ಯ ಭಾರತವ ಕಟ್ಟುವ
ನಿಟ್ಟಿನಲ್ಲಿ ನಮ್ಮನು ನಿಮ್ಮೊಡಗೂಡಿ..ನಡೆಸಿಕೊಂಡು ಹೋಗಿ
ಅಂಧಕಾರದ ಬದುಕಿಗೆ ಜ್ಞಾನ ತೋರುವ ದೀವಿಗೆಯಾಗಿರಿ
ದೀವಿಗೆಯಾಗಿರಿ

Thursday, July 13, 2017

ಕಾಯುವೆಯಾ ಹುಡುಗಿ

ಹೇಗೆ ತಿರುಗಿ ನೋಡಲೆ.. ಹುಡುಗಿ
ನಾವು ಕಂಡ ಕನಸುಗಳಿಗೆ ಬಲವ
ತುಂಬಲು ನನ್ನ ರೆಟ್ಟೆಗಳಲಿ
ಬಲವಿಲ್ಲದಿರುವಾಗ..

ಹೇಗೆ ಗಟ್ಟಿಗೊಳಿಸಲಿ ಹುಡುಗಿ
ನಮ್ಮ ಹಸಿ ಹಸಿ ಆಸೆಗಳನ್ನು....
ನಾ ನಡೆವ ನೆಲವ ಇನ್ನೂ ಗಟ್ಟಿಯಾಗದಿರುವಾಗ...

ಇದೆ.. ಕಾರಣಕ್ಕಲ್ಲವೆ ನಾ ಹೊರಟಿರುವುದು
ನಮ್ಮಿಬ್ಬರ ಎಸಳು ಮನಸಿನ ಪ್ರೀತಿಯ
ಅರಿಯುವರಾರು ಇಲ್ಲವಿಲ್ಲಿ... ಹಿಡಿದಿಟ್ಟುಕೊ..
ಜಗವ ನಾ ಗೆದ್ದು ಬರುವವರೆಗೂ ಆ ಪ್ರೀತಿಯನು

ಅದಕ್ಕೆಂದೆ ಬಾಳ ಯುದ್ಧ ಗೆಲ್ಲಲು
ಹೊರಟಿರುವೆ ಬೆಡಗಿ.. ನಾವು ಸವಿದು
ಉಣ್ಣುವ ಈ ಪ್ರೀತಿ ಮುಂದೊಂದು ದಿನ
ಹಸಿವಿನ ಸಿಡಿಲಿಗೆ ಸಿಕ್ಕು ಬಲಿಯಾಗದಂತೆ..
ಬಡತನದ ಪ್ರೀತಿಯರಮನೆಯ ಪಟ್ಟಕೆ
ನಿನ್ನ ನಾ ರಾಣಿಯನ್ನಾಗಿ ಮಾಡಲಾರೆ

ಬರುವೆ ನಾ ಮರಳಿ ಕಾಯುವೆಯಾ ಹುಡುಗಿ

ಕೂಗಿ ನೋಡು

ಕೂಗಿ ನೋಡು ಒಮ್ಮೆ
ನಾನೀಲ್ಲೆ ಇರುವೆ ಈ ದಂಡೆಯ
ತುದಿಯಲ್ಲಿ...ನಿನ್ನ ನೆನಪಿನ ಕೊರಗಲಿ
ಮನದ ಮಡಿಕೆಯಿದು ಅತ್ತು.. ಅತ್ತು
ಬರಿದಾಗಿಬಿಟ್ಟಿದೆ...

ಕರಗಿಸಿಬಿಡು ನಿನ್ನ ಮನದ ಹೆಪ್ಪನು
ತುಂಬಿಸಿಬಿಡು ನಿನ್ನೆಲ್ಲ ದುಃಖವನು
ಭರಿಸುವೆನು ನಾನೆಲ್ಲ ನಿನ್ನ ನೋವನು
ಅತ್ತುಬಿಡು ಬಿಟ್ಟು ಬಿಡದ ಹಾಗೆ ನನ್ನೆದೆಯ
ಮೇಲೆ ನಿನ್ನ ಮಡುವುಗಟ್ಟಿದ ಮೊಗವನಿಟ್ಟು

ಬಿಟ್ಟು ಬಂದ ನೆನಪುಗಳನೆಲ್ಲವ ನೆನೆದು
ನೆನೆದು ದುಃಖಿಸಬೇಡ... ನನ್ನೊಲವಿನ
ಮಾತುಗಳ ಕೇಳದೆ ನೀನೆಡವಿದ ಕ್ಷಣಗಳ
ಕೆದಕಿ ಕೆದಕಿ ಕೊರಗಬೇಡ.. ಹರಿಯುವ
ಹಳ್ಳವದು.. ನಿನ್ನ ಕಣ್ಣಂಚಿಂದ ಜಾರಿದ
ಮುತ್ತುಗಳ ಅದೇಷ್ಟು ಲೆಕ್ಕವಿಟ್ಟಾತು...
ಆ ಮುತ್ತುಗಳ ಬೆಲೆ ಅದಕ್ಕೆನಾದರೂ
ಗೊತ್ತಾದಿತು...

ತೂರಿಬಿಡು ನಿನ್ನ ಮನದ ದುಗುಡಗಳನ್ನೆಲ್ಲವ
ಹಾರಿ ಹಾರಿ ಮೋಡದೊಡಲ ಸೇರಿ.. ಸುರಿಸಲಿ
ಮಳೆ ಹನಿಗಳ ನಮ್ಮಿಬ್ಬರ ಮರು ಮಿಲನಕೆ...
ಕೂಡಿದ ಸಾಕ್ಷಿಗೆ ನಿನ್ನ ಕೆನ್ನೆಯು ರಂಗೇರುವುದು..
ನಮ್ಮಿಬ್ಬರೊಲವಿಗೆ ಸುರಿದ ಮಳೆ ಹನಿಗಳ ಸಾಕ್ಷಿಗೆ
ಬಾನಿನ ಬಿಲ್ಲು ಮೂಡಿ  ನಾಚುವುದು

ನಷೀಲಿ ಆಂಖೇ..

ಯ್ಯೂಂ.. ನಾ ದೇಖ್ಹೊ...
ಉನ್ ನಷೀಲಿ ಆಂಖೋಸೆ
ಮೈ ತೊ ಶರಾಭಿ ನಹೀ ಹ್ಞೂಂ..
ಲೇಖಿನ್ ತೇರಿ ಜೊ ಆಂಖೆ ಹೈ..
ಇತನಾ ನಷಾ ಭರ ದೇತಾ ಹೈ
ಬದನ್ ಮೆ.. ಕೀ.. ಮೈ ದುನಿಯಾ
ಭೂಲ್ ಜಾಂಹ್ಞೂಂ...
ತೇರೆ ಪ್ಯಾರ್ ಮೆ ಪಾಗಲ್ ಹೊ
ಜಾಂಹ್ಞೂಂ...

Wednesday, July 12, 2017

ಜಯಲಕ್ಷ್ಮಿ ಕದನ ೪

ಜಯಲಕ್ಷ್ಮಿ

ಕಾಡುತ್ತಿರುವ
ನೆನಪುಗಳಿಗೆ
ಯಲ್ಲಿ ಕೊಡಲಿ
ಜಾಗವ
ನೀ ಹಚ್ಚಿದ
ಕಿಡಿಯಲ್ಲಿ
ಹೃದಯ ಸುಟ್ಟು
ಬೂದಿಯಾಗಿದೆ
ಈ ಕಾಡುವ
ನೆನಪುಗಳನ್ನು ಯಲ್ಲಿ
ಇಡಲಿ
ನನೆಪಾದರೆ ಸಾಕು
ಮನ ತುಂಬುವುದು
ಕಣ್ಣುಗಳು
ಮಂಜು ಆಗುವುದು
ಒಮ್ಮೆ ಬಂದು
ಹೇಳಬಾರದೆ
ನೆನಪುಗಳನ್ನು
ಯಲ್ಲಿ ಬಚ್ಚಿಡ
ಬೇಕೆಂದು

ನಾನು
ಕಾಡುವ ನೆನಪುಗಳ
ಬಯಸಿ ಬಯಸಿ
ಪಡೆದೆಯಲ್ಲ ಗೆಳತಿ
ನನ್ನನೂ ಮನದಿಂದ
ದೂರ ನೂಕಿ..
ಕಾದ ಕೆಂಡದ
ನೆನಪುಗಳ ಎದೆಯಲಿ
ಇಟ್ಟುಕೊಂಡು ಬರೀ..
ವಿರಹದ ವಲೆಯನೆ
ಉರಿಸುತಿರುವೆಯಲ್ಲಾ
ನೆನಪುಗಳನ್ನೆಲ್ಲ ಸುಟ್ಟು
ಬೂದಿ ಮಾಡುತಿರುವೆಯಲ್ಲ

ಕರೆದುಬಿಡು ನನ್ನನೊಮ್ಮೆ
ಬರುವೆ ನಿನ್ನೆದೆಗೆ
ಮುಂಗಾರು ಮಳೆಯಾಗಿ
ಕಹಿ ನೆನಪಿನ ಬೂದಿ
ಎಲ್ಲವ ತೊಳೆದು
ಹೊಸ ಆಸೆಗಳ
ಬೀಜವ ಬಿತ್ತಿ..
ಬದುಕಿನ ಕನಸುಗಳ
ಸಾಕಾರಗೊಳಿಸುವೆ
ಕೂಗಿಬಿಡುವೊಮ್ಮೆ
ಎನ್ನೆದೆಗೆ ಕೇಳುವ ಹಾಗೆ..


ಅಯ್ಯೋ ಗೆಳೆಯ
ಬುದ್ದಿ ಮತಿಯಾಯಿತೆ
ಹೃದಯವನ್ನು ಸುಟ್ಟು
ಬೂದಿಯನ್ನು
ಕಾವೇರಿಯಲ್ಲಿ
ಹರಿದು ಬಿಟ್ಟು
ಒಮ್ಮೆ ಕೊಗು ಎನ್ನುವೆಯಲ್ಲ

ಎಷ್ಟೇ ಆದರೂ ಗಂಡು
ಅಹಂ ಏಲ್ಲಿ ಬಿಡುವಿರಿ
ನಾನು ಹೃದಯವನ್ನು ಸುಟ್ಟಿದ್ದು ಮುಲಾಮು
ನಾ ಹಚ್ಚಬೇಕು

ಅವಳು ಕರೆಯುವ
ಮೊದಲು ನಾ ಹೋಗಬೇಕು
ಅನ್ನವ ಅರಿವು ಬಾರದೆ ಹೊಯಿತೆ

ನಾ
ಗೆಳತಿ..
ನೀ ಬರೆದ ಸಾಲುಗಳನ್ನು
ಯಾರಾದರೂ ಓದಿದರೆ
ನಿನಗೆ ಮತಿಭ್ರಮಣೆ
ಆಗಿರಬಹುದೆಂದು ತಿಳಿಯುವರು
ಸುಗುಣೆ.. ಕುಡಿಯಲು
ನೀರಿಲ್ಲದ ಕಾವೇರಿ
ಕೊಳ್ಳದಲ್ಲಿ... ನಿನ್ನ
ಹೃದಯವ ಸುಟ್ಟು ಬೂದಿಯ
ಹರಿಸಿದೆನೆಂದರೆ ಜನ
ನಕ್ಕಾರು ಒಲವೆ...

ನೀ ಸುಟ್ಟುಕೊಂಡಿರುವ
ಹೃದಯಕ್ಕೆ ನಾನಗಿ
ಬರುವೆ ಮುಲಾಮು
ಸುಮ್ಮನೆ ನೋವಿನ
ವೇದನೆಯಲಿ ನರಳಬೇಡ

ಬರೆದು ಕಳೆಸು
ನೋವಿಗೊಂದು ಪತ್ರ
ನಿನ್ನ ನೋವಿಗೆ
ಮದ್ದಾಗಿ ಬರುವನು
ಈ ಕರ್ನಾಟಕದ ಸುಪುತ್ರ


ಅಯ್ಯೋ ಗೆಳೆಯ
ಮಳೆ ಇಲ್ಲ ಅನ್ನುವ
ಕಾರಣ ಕೊಟ್ಟ
ನಿ ನುಳಿಚಿಕೊಬೇಡ
ಕಾವೇರಿ ಚಾಮುಂಡಿಯ
ಮಡಿಲಿನಲ್ಲಿ  ಹರಿಯುತ್ತಿರುವವಳು
ಅವಳನ್ನು ನಂಬಿ ಬಿತ್ತನೆ ಮಾಡಿದ ಮಕ್ಕಳಿಗಾಗಿಯೇ
ಉಸಿರು ಬಿಗಿ ಹಿಡಿದು ಹರಿಯುತ್ತಿರುವವಳು

ಅಂತಹವಳ ಮಡಿಲಲ್ಲಿ
ನನ್ನ ಬೂದಿಯನ್ನು
ಬಿಟ್ಟು ಬಂದು
ಹುಸಿಯ ನೋಡಿಯದಿರು
ನೋಡಿದವರು ನಕ್ಕಾರು
ಕರ್ನಾಟಕ ಸುಪುತ್ರ
ಇಂದು ಹುಸಿಯ ನುಡಿದನೆಂದು

ನಾ
ನಿಜ ಅವಳು ಉಸಿರು
ಬಿಗಿ ಹಿಡಿದೆ ಹರಿಯುತ್ತಿರುವವಳು
ಜೋರಾಗಿ ಹರಿದರೆ ನೆರೆ ರಾಜ್ಯದವರು
ತಮ್ಮ ಕಾಲುವೆಗಳಿಗೆ ಹರಿಸಿಕೊಳ್ಳುವರಲ್ಲ
ಕಾವೇರಿಯ ನಂಬಿದ ಕೆಂಪೆಗೌಡನ
ಊರಿನವರು ಅದೇ ನೀರಿಗಾಗಿ
ಹಾಹಾಕಾರ ತೆಗೆಯುತಿರುವರು ಒಡತಿ

ನಮ್ಮ ಪ್ರೀತಿಯ ಬೂದಿಯು
ಆ ಕಾವೇರಿಯಲ್ಲಿ ಹರಿಯಬಿಟ್ಟಿದ್ದೆ
ಆದರೆ.. ಆ ನೀರನು ಕುಡಿದ ಕವಿಮಿತ್ರ
ಶೇಖರಜ್ಯೋತಿಯು ಸುಮ್ಮನಿರುತ್ತಿದ್ದನೆ..
ಬರೆದು ಹಾಕುತ್ತಿರಲಿಲ್ಲವೆ ನಮ್ಮ ಪ್ರೇಮ
ಮರಣದ ಇತಿಹಾಸದ ಮೆಲುಕುಗಳನ್ನು

ಸುಳ್ಳನಾಡುವದಕೂ ಒಂದು
ಮಿತಿ ಇರಲಿ ಮಲ್ಲಿಗೆ..
ನೀನಿಲ್ಲದೆ ಸೊರಗಿದೆ
ಮನದ ಗದ್ದುಗೆ..
ಬಂದು ವೀರಾಜಮಾನವಾಗಿಸು
ನನ್ನೆದೆಯಲಿ ಮೆಲ್ಲಗೆ


ಆಹಾ ಗೆಳೆಯ
ಪ್ರತಿನಿತ್ಯ ಅವರು
ಪ್ರೇಮ ಕವಿತೆಯನ್ನು ಬರೆಯುತ್ತಲೆ ಇರುವರು

ಮೊನ್ನೆತಾನೆ ಶಿಶುನಾಳರ
ಮಡಿಲಲ್ಲಿ ರ
ಶಂಕರ್ ಸರ್ ಕೃಪೆಯಿಂದ
ಕವನ ವಾಚನ ಮಾಡಿ ಮೆಚ್ಚುಗೆ ಪಡೆದು ಬಂದರು

ಅಲ್ಲಿಗೆ ಬಂದ ನಮ್ಮ ಗೆಳತಿ
ಕೊಟ್ಟ ಕೊಡುಬಳೆ ನಿಪ್ಪಟ್ಟು ಸವಿದು ಆ ವಾತಾವರಣದಿಂದ ಹೊರ ಬಾರದೆ ಅದೇ ಗುಂಗಿನಲ್ಲಿ
ನನ್ನ ಅತ್ತಿಗೆಯ ಬಳಿ

ಅಲ್ಲಿಯ ಚರ್ಚೆ ನಡೆಯತ್ತಿದೆ
ಸಲ್ಲ  ತಾಳ್ಮೆ ಗೆಳೆಯ
ನಾಳೆ ಪ್ರಾರಂಭ
ನನ್ನ ಹೃದಯ ಸುಟ್ಟ
ನಿಮ್ಮ ಮೇಲೆ ಕವನದ
ಯುದ್ಧಕ್ಕೆ ಸಿದ್ದರಾಗಿರಿ

ನಾ
ನಿನ್ನ ಪ್ರೇಮ ಯುದ್ಧದಲಿ
ನಾನೆಂದೊ ನಿನಗೆ ಸೋತು
ಶರಣಾದವನು.. ನಿನ್ನ
ಪ್ರೇಮ ಪಂಜರದೊಳು
ಬಂಧಿಯಾದ ಹಕ್ಕಿ ನಾನು

ಮಿತ್ರನು ಪಾಪ.. ಕೊಡುಬಳೆಯೊಂದಿಗೆ
ಎರಡು ತತ್ತಿಗಳನ್ನು ಉಂಡವನು..
ಮಲಗಲಿ ಬಿಡು ಅವರು ಚಂದ್ರಿಕೆ...
ನಮ್ಮಿಬ್ಬರ ಕಾದಾಟದಲಿ ಶಶಿಯು
ಕರಗಿ ರವಿಯು ಬರಬಹುದು..

ಬಾ.. ಬಾಳೆದಿಂಡೆ.. ನಿನ್ನೆಲ್ಲ ಮುಖಪುಟದ
ಸೈನ್ಯವನೆ ಹೂಡಿ ಬಾ... ಮುನ್ನೆಡಿಸಿಕೊಂಡು
ಬಾ.. ಕಾದಿರುವೆ ನಿನಗಾಗಿ ಈ ಪುಟದಲಿ
ಏಕಾಂಗಿಯಾಗಿ... ನಿನ್ನ ಪ್ರೇಮದ ಹೂ
ಬಾಣಗಳಿಗಂತೂ ನನ್ನ ಸೋಲು ನಿಶ್ವಿತ
ವಿರಹದ ಈಟಿಗಳಿಗಂತಾದರೆ... ನನ್ನ
ಬತ್ತಳಿಕೆಯಲ್ಲಿ ಅಸ್ತ್ರಗಳೇನು ಕಡಿಮೆಯಿಲ್ಲ..


ಹಹಹಹ
ನಾನು ಯಾರನ್ನು
ಕರೆತರಲಾರೆನು
ನಾನು ಏಕಾಂಗಿ
ಒನ್ ಮ್ಯಾನ್ ಆರ್ಮಿ ನಾನು

ಹಾವ ಬತ್ತಳಿಕೆ ಬಳಸಿದರು ಸರಿಯೇ
ಕಣ್ಣಿರು ಸುರಿಸಿದರು ಸರಿಯೇ..

ನಾನು ಸ್ವಾಭಿಮಾನ ಸೋಲಲಾರೆ
ಹೇಗೆ ನನ್ನ ಹೃದಯ
ಸುಟ್ಟಿತು ಅಂದಯೇ ತೀರ್ಮಾನ ವಾಯಿತು..

ನಾನು ಯಾವ ಮಲ್ಲಿಗೆ ಸಂಪಿಗಿಗೆಗೆ ಸೋತು ಶರಣಾಗತಿಯನ್ನು ಪಡೆಯಲಾರೆ..

ಒಮ್ಮೆ ಬಾಡಿದು ಹೂ ಮತ್ತೆ
ಅರುಳುವುದೆ.
ಒಮ್ಮೆ ಒಡೆದ ಕನ್ನಡಿ ಕೊಡುವುದೆ
ಒಮ್ಮೆ ಒಡೆದ ಮನಸ್ಸು ಸೇರುವುದೆ..
ಒಮ್ಮೆ ಗಾಯದ ಕಲೆ ಮತೆ ಹೋಗುವುದೆ..

ಅಸಾಧ್ಯ ನೀನು ಗಂಡು ಎನ್ನುವ ಅಹಂನಿಂದ ಮಾತಾಡಿದರು
ನಾನು ಹೆಣ್ಣು ನನ್ನ ಗೆಳೆಯ
ಚನ್ನಾಗಿರಲಿ ಎಂದು
ಬಿಟ್ಟುಕೊಡುವೆ
ಮತ್ತೊಬ್ಬರಿಗೆ ತ್ಯಾಗ ಮಾಡುವೆ

ನಾ
ನನಗೆ ಗೊತ್ತು ನೀನು ಒನಕೆ
ಓಬವ್ವನೆ.. ಅಕ್ಷರಗಳಲ್ಲಿ.. ಮಾತಿನಲ್ಲಿ
ಸಿಕ್ಕ ತಲೆಯು ಈ ಪುಟದಲ್ಲಿ ಬದುಕಿ
ಉಳಿದದ್ದು ಯಾವುದಾದರೂ ಇದೆಯೆ...?

ನಿಜ.. ಒಮ್ಮೆ ಬಾಡಿದ ಹೂ ಮತ್ತೆ
ಅರಳದು.. ಆದರೆ ಪ್ರೀತಿಯಲಿ
ಮತ್ತೊಂದ ಮೊಗ್ಗನು ಅರಳಿಸಬಹುದು
ಒಡೆದ ಕನ್ನಡಿ ಕೂಡದು.. ಮನಸಿನ
ಕನ್ನಡಿಗಳು ಕೂಡಲಾರವೇನು...
ಒಡೆದ ಮನಸ್ಸು ಕೂಡಲಾರದು
ಒಲವಿಂದ ಮತ್ತೆ ಒಂದಾಗದೆ..
ಗಾಯದ ಕಲೆ ಮಾಸಿದರೂ ನೋವು
ಮಾಸದು ಅದನ್ನರಿತು.. ಬಾಳಲಿ ಎಡವದಂತೆ ಬದುಕಬಹುದಲ್ಲವೆ

ತ್ಯಾಗದ ಮಾತೆಲ್ಲಿ ಬಂತು ಕಳ್ಳಿ
ಅಂಗಳದಿ ಅರಳಿದ ಸುಮವನು
ಬುಡದ ಸಮೇತ ಕಿತ್ತೊಗೆಯುವ
ಹಾಗೆ ನಿನ್ನ ಪ್ರೀತಿಯ ತೋಟದಿಂದ
ಬೇಡ ಬೇಡವೆಂದೂ ಅಂಗಲಾಚಿದರೂ
ಕಿತ್ತಿ ಒಗೆದುಬಿಟ್ಟೆಯಲ್ಲ... ನಿನಗಿದು
ನ್ಯಾಯವೆ... ಹಣ್ಮನಕ್ಕಿದು ತರವೆ..


ಹಹಹಹಹ
ಮಾತಿನ ಮಲ್ಲ ಎಂದು ಗೊತ್ತು
ಈ ಮಾತಿನ ಕಲೆಯನ್ನು ಬಳಸಿ ಪ್ರೀತಿಯ ಗಾಳಹಾಕಿ
ಮೀನನ್ನು ಬಲೆ ಹಿಡಿಯುವ ರೀತಿಯಲ್ಲಿ ನನಗೆ ಬಲೆ ಹಾಕಿದ್ದು..

ಸುಂದರ ಪ್ರಮದ ಹೂ ತೋಟದಲ್ಲಿ ಅರಳಿನಿಂತ ಗುಲಾಬಿ ನಾನು
ಅದಕ್ಕೆ ನಿನು ಮುಳ್ಳಿನಂತೆ ಕಾವಲು ಕಾಯುವುದನ್ನು ಬಿಟ್ಟು..

ಅಂತ ಇಂತ ಹರಳಿದ ಬಣ್ಣ ಬಣ್ಣದ ಹೂವನ್ನು ಸವಿಯಲು ಹೋದ ದುಂಬಿ ನಿನು..

ಇಂದು ಅಮಾಯಕನಂತೆ ವರ್ತಿಸುವೆಯ ಇದು ಸರಿಯೇ
ದೇವರ ಮಡಿಯ ಮಲ್ಲಿಗೆ ನಾನು
ಕಾಡು ಹೂಗಾಗಿ ನನ್ನ ವಸಿಕಿದ್ದು ಸರಿಯೇ
ಆ ಹೂವಿಗಾಗಿ ನನಗೆ ಮೋಸ ಮಾಡಿದ ಮಳ್ಳ ಕಳ್ಳ ನಿನು ಗೆಳೆಯ

ನಾ
ಎಂತಹ ಎದೆ ಸಿಡಿಯುವ
ನುಡಿಗಳನಾಡಿಬಿಟ್ಟೆ ಸಂಪಿಗೆ
ಮೋಹಕ ನಗುವಿನ ಬಲೆಯಲಿ
ಎನ್ನ ಮನವ ಸೆರೆಹಿಡಿದ
ಗಿರಿಕನ್ಯೆ ನೀನು..

ನಿನ್ನ ಪ್ರೇಮ ಸುಮದ ಗಂಧವನೆ
ಸರಿಯಾಗಿ ಸವಿಯದ ಈ ಮುದ್ದು
ಹುಡುಗನಿಗೆ ಅದೆಂತಹ ಬಿರುದನಿಟ್ಟುಬಿಟ್ಟೆ

ಸದಾ ನಿನ್ನ ಮಡಿಲಲಿ ಮಲಗಿಸಿ
ಹಣೆಗೊಂದು ಸವಿಮುತ್ತ ನೀಡಿ
ನೀನೆ ಈ ಹಣೆಯ ಸಿಂಧೂರ
ಎನ್ನುತ್ತಿದ್ದವಳ ಬಾಯಲ್ಲಿ
ಇದೆಂತಹ ಕರ್ಣ ಕಠೋರ ಮಾತುಗಳು

ನೀನೆಂದು ಈ ಮನೆದೇವರ
ಎದೆಯ ಪುಷ್ಪವೆಂದು ನಿನ್ನ
ಶಿರವನು ಸದಾ ನನ್ನೆದೆಯ ಮೇಲೆ
ಮಲಗಿಸಿ ಆ ಮುಂಗುರುಳಲಿ
ಬೆರಳಾಡಿಸಿ.. ನಿನ್ನ ಕೆಂಪು ಕೆನ್ನೆಯ
ಚಿವುಟಿದ್ದು ಮರೆತೆಯಾ..

ನೀನು ಸುರಲೋಕದ ಪಾರಿಜಾತ
ನಿನ್ನ ಬಿಟ್ಟು ಈ ಲೋಕದಲಿ
ಮತ್ತಾರ ವರಿಸಲಿ ಸುಕೋಮಲೆ
ಬೇರೆಯವರ ನಾ ಕಣ್ಣೆತ್ತಿ ನೋಡಿದರು
ನೀ ಅರಿಯುತ್ತಿರಲಿಲ್ಲವೆ ನನಗೆ ಮಸಾಲೆ..


ಅಯ್ಯೋ ಗೆಳೆಯ ಸಾಕು ಹೊಗಳಿಕೆ ಮಾತುಗಳಿಗೆ
ಸೋಲುವುದಿಲ್ಲ

ಈಶ್ವರನು ಹೀಗೆಯೆ ಗೌರಿಯ ಮನ ಓಲಿಸಲು ನಾನ ಆಟಗಳನ್ನು ಕಟ್ಟಿ
ಅವಳು ಒಪ್ಪದೇ ಹೋದಾಗ ಗಂಗೆಯನ್ನು ಶಿರದಲ್ಲಿ ಧರಿಸಿ ಕೇಶರಾಶಿಯಲ್ಲಿ ಬಚ್ಚಿಟ್ಟನಂತೆ.

ಕಾಡು ಪರಿಜಾತ ನಾನಲ್ಲ
ಗೌರಿಯು ನಾನಲ್ಲ
ಅವಳು ಲೋಕ ಕಲ್ಯಾಣಕ್ಕೆ ಒಪ್ಪಿದಳು ಪರಶಿವವನ್ನು
ಮನ್ನಿಸಿ ಆರ್ಧನಾರೇಶ್ವರ ಅವತಾರ ತಾಳಿದರು..

ನಿನು ಯಾವ ಉದ್ದರಾದ ಕಾರ್ಯಕ್ಕೆ ನನ್ನ ಹೃದಯವನ್ನು ಸುಟ್ಟೆ ಗೆಳೆಯ ಕಾರಣವನ್ನು ಹೇಳದೆ ಹೋದೆಯಲ್ಲ.

ನಿನ್ನ ಮಾಯಾಜಾಲದಲ್ಲಿ ನಾ ಬೀಳಲಾರೆ ನಡೆ ಮುಂದೆ
ಮರಳು ಮಾತಿಗೆಲ್ಲ ಜಗ್ಗಲಾರೆ ನಾನು..

ಯಾವ ಹೊತ್ತ ದಲ್ಲಿ ಯಾವ ಹಾವು ಇದಿಯು ನಾ ಅರಿಯೇ

ನಾ

ಕೊನೆಯದಾಗಿ ಹೇಳುವೆ ಕೇಳು ಸುಮತಿ
ಪದೇ ಪದೇ ಎಣಿಸಿದರೆ ಲೆಕ್ಕವದು
ಚೊಕ್ಕಾಗುವುದು..
ಪದೇ ಪದೇ ತಪ್ಪುಗಳ ಎಣಿಸುತ್ತ
ಕುಳಿತರೆ ಬದುಕದು ಕೊಳೆತು
ನಾರುವುದು...

ನಿಂತ ನೀರಾಗದಿರಲಿ ಮನ
ಕಾಲಾಡಿಸುವರದೇಷ್ಟಿಲ್ಲ ಜನ
ಕೊಲ್ಲುವರು ಮಾತಿನಲಿ
ಅಣುಕಿಸಿ ಪ್ರತಿ ಕ್ಷಣ ಕ್ಷಣ
ಕಿವಿಗೊಡದಿರು ಹೂವೆ
ನೀನು ಅರೆಕ್ಷಣ

ಕಾದು ಕುಳಿತಿದೆ ನಿನ್ನ ಅಂಗಳದ
ಹೊರಗೆ ಹಕ್ಕಿಯೊಂದು ಪ್ರೀತಿಯ
ಬಲವಿಲ್ಲದೆ ದಯೆತೋರು ಬಿಡೊಮ್ಮೆ
ಈ ನಿನ್ನ ಚೆಲುವಂಗೆ..

ನೋಡು ಗೆಳೆಯ
ನಾ ಪದೆ ಪದೆ ಹೇಳಲಾರೆ
ಗಂಡು ಅನ್ನುವ ಅಹಂ ಬಿಟ್ಟು ನಿನ್ನ ತಪ್ಪು ಅರಿತು
ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು ನಡೆಯುವುದನ್ನು ಕಲತಿಕೊ

ಒಮ್ಮೆ ಬೇಡ ಎಂದು ದೂರ ತಳ್ಳಿದ ಮೇಲೆ ಅಯಿತು
ಆಟ ಮುಗಿಯಿತು
ನಿನ್ನ ನಾನು ಹೃದಯದಲ್ಲಿ ದೇವತಾ ಮೂರ್ತಿ ಮಾಡಿ ಪೂಜಿಸುವೆ.

ನಿನ್ನ ವರತು ಯಾರನ್ನು ನಾ ಪ್ರೀತಿಸಲಾರೆ
ಹಾಗೆಯೇ ಮನ್ನಿಸಿ ಪುನಃ
ಹೃದಯದಲ್ಲಿ ಸ್ಥಾನ ನೀಡಲಾರೆ

ಒಮ್ಮೆ ಹೋದಮೇಲೆ ಆಯಿತು
ಹೊಗುವಾಗ ಇರಲಿಲ್ಲವೇ ನನ್ನ ನೆನಪು
ಪದೇ ಪದೇ ಅಲ್ಲ ಸಾವಿರ ಸಾರಿ ಕಳಿದರು ಅಷ್ಟೇ..

ನಾನು ನಾನೇ ನಿನು ನಿನೇ
ಹೋಗು ಬಂದ ದಾರಿಗೆ ಸೋಂಕವಿಲ್ಲ ಎಂದು
ಆ ಹೂವಿಗಾದರು ಆಸರೆಯಾಗಿ ಬದುಕು

ನಾ
ಮಾತು ಮಾತಿಗೂ ನಿನ್ನೆ ಪ್ರೀತಿಸುವೆ
ಎಂದವಳು ಇಂದೇಕೆ ನಿನ್ನ ಮನದಿಂದ
ನನ್ನ ಹೆಸರನು ಅಳಿಸಿದೆ..
ನನ್ನ ಅಹಂ ಎನ್ನುತ್ತಿರುವೆಯಲ್ಲ ಚೆಲುವೆ
ಬರೆದಿರುವ ಇಷ್ಟು ಸಾಲುಗಳಲ್ಲಿ ನನ್ನ
ಪ್ರೇಮ ನಿವೇದನೆಯನೊಂದು ಹೊರತು
ಪಡಿಸಿ.. ಒಂದೇ ಒಂದು ಸಾಲಲ್ಲಾದರೂ..
ಪದವಾದಲ್ಲಾದರೂ ನನ್ನ ಅಹಂನ್ನು
ತೋರಿಸಿಬಿಡು.. ನಿನಗೆ ಶರಣಾಗಿ ಬಿಡುವೆ

ಬಂದ ದಾರಿಗೆ ಸುಂಕವಿಲ್ಲ ಎಂದು
ಹೋಗಲು ನಾನು ಬೇಡುತಿರುವುದು
ಕಲ್ಲು ಮೂರ್ತಿಯ ದೇವತೆಯನ್ನಲ್ಲ
ನನ್ನ ಮನದ ಅಧಿ ದೇವತೆಯಾದ
ನಿನ್ನಲಿ ನಾನು ಭಿನ್ನವಿಸಿಕೊಳ್ಳುತ್ತಿರುವುದು


ಗೆಳೆಯ ಇವಗ ಸಮಯವಿಲ್ಲ
ಕರ್ತವ್ಯ ನನ್ನ ಕೂಗಿ ಕರೆಯುತ್ತಿದೆ..

ಕರ್ತವ್ಯದ ಮುಂದೆ ನಿಮ್ಮ
ಮಾತುಗಳಿಗೆ ಉತ್ತರಿಸಲು ಸಮಯವಿಲ್ಲ

ಗೆಳೆಯ ಅಹಂ ತೋರಿಸುವುದಕ್ಕೆ
ಈ ಒಂದು ಉದಾಹರಣೆ ಸಾಕಲ್ಲವೇ.

ಗೆಳತಿ ಕರ್ತವ್ಯ ಕ್ಕೆ ಹೊರಡುವಳು ಇಂತಹ
ಸಮಯದಲ್ಲಿ ನಾನು ಕಾಡುವುದು ಸರಿಯೇ
ಯೆಂದು ಒಮ್ಮೆ ಯೋಚಿಸಲಿಲ್ಲವೇ

ನಾ
ಕಾಯುವೆ ಗೆಳತಿ ಈ ಉಸಿರಿರುವವರೆಗೂ
ಇಷ್ಟು ದಿನಗಳೆ ಕಾದ ನನಗೆ ಇನ್ನಾರು ತಾಸು
ಕಾಯಲಾಗುವುದಿಲ್ಲವೆ

ನನ್ನ ಕರ್ತವ್ಯವು ಕರೆಯುತಿಹುದು
ಓಗೋಡಬೇಕಿದೆ ಕಾಲನ ಕರೆಗೆ
ನಿನ್ನ ಕರ್ತವ್ಯಕ್ಕೆ ನಾನು ಅಡ್ಡಿ
ಮಾಡಿ ನಾನು ಅಹಂನ್ನು ತೋರುತ್ತಿಲ್ಲ
ನನ್ನ ಪ್ರೇಮ ನಿವೇದನೆಯ ನೆನಪಿಸಿದನಷ್ಟೆ..

ನಿನ್ನ ಕೆಲಸದ ಭರದಲ್ಲಿ.. ನಿನ್ನೊಲವಿಗಾಗಿ
ಕಾಯುತಿರುವ ಈ ಪ್ರೀತಿಯ ಹಸುಗೂಸುನು
ಮರೆಯದಿರು ಕಾಯುತಿರುವೆ.. ನಿನ್ನ ಬರುವಿಕೆಗಾಗಿ..