Thursday, August 31, 2017

ಬರಮುಕ್ತ ನಾಡು

ಏನೀ... ನಿಮ್ಮಿಬ್ಬರ
ಮೊಗದಲಿ ಮಂದಹಾಸ
ಕಾಣುತಿಲ್ಲವೆ.. ಮಣ್ಣ
ಮಕ್ಕಳು ಅನುಭವಿಸುತಿರುವ
ವನವಾಸ
ಅಗುಳಗುಳ ಖೂಳಿಗೂ
ಪಡುತ್ತಿರುವವರಲ್ಲ ಹರಸಾಹಸ
ದುಡಿದುಣ್ಣುವ ಮಕ್ಕಳ ಮೇಲೆ
ಏಕೀ.. ನಿಮ್ಮಿಬ್ಬರ... ಅಟ್ಟಹಾಸ

ಉತ್ತು ಬಿತ್ತಿದ ಬೀಜಗಳೆಲ್ಲ
ಸುಡು ಸೂರ್ಯನ ತಾಪದ ಪಾಲು
ಬತ್ತಿದ ಕೆರೆಯ ದಂಡೆಗುಂಟ ನೀರಿಲ್ಲದೆ
ಪ್ರಾಣಬಿಟ್ಟ ಪಕ್ಷಿ ಸಂಕುಲಗಳ ಸಾಲು
ನಿನ್ನ ಹನಿ ಹನಿಯ ಅಮೃತವು
ಬಿತ್ತುವವನಿಗಾಗುವುದಲ್ಲ ಊರುಗೋಲು
ಮಾಡದಿರು ನಿನ್ನನೆ ನಂಬಿ
ಬದುಕುತಿರುವವರ ಬಾಳು ಬುಡಮೇಲು

ದಯೆತೋರಿ ಹರಿಸಿಬಿಡು ಗಂಗೆಯ
ಹಸಿರಾಗಿ ನಳನಳಿಸು ಜಗದ ಸಂತೆಯ
ತೀರಿಸಬೇಕಿದೆ ತುಂಬಿದ ಗಂಗವ್ವನೊಡಲ
ಬಾಗಿನ ಬಯಕೆಯ
ನಿಗೀಸು ನೀರು.. ನೀರೆಂದು ಬಿಕ್ಕುತಿರುವ
ಜೀವ ಸಂಕುಲದ ಬಾಯಾರಿಕೆಯ
ತಲೆ ಎತ್ತಿ ಬದುಕುವವರೆ.‌‌.. ಹೊಸೆದು
ಕೊಳ್ಳದಿರಲಿ ತಮ್ಮ ಕೊರಳಿಗೆ ಕುಣಿಕೆಯ

ಕಾಲ ಮಿಂಚುವ ಮುನ್ನವೇ.. ಕಣ್ತೇರೆದು
ನೋಡು
ಗಂಗೆಯ ಧರಣಿಗೆ ಹರಿಸಿ ಹಾಡು
ಮುಕ್ತಿಯು ಸಿಗಲಿ ಬದುಕುತಿರುವ
ನಾಯಿ ಪಾಡು
ನಿನ್ಕರುಣೆಯಿಂದ ಕಟ್ಟಬೇಕಿದೆ
ಹೊಸದೊಂದು ಗೂಡು
ಕೊಟ್ಟ ಭಿಕ್ಷೆಯಲಿ ಬಲಪಡಿಸಿ ರಟ್ಟೆಯ
ಕಟ್ಟಬೇಕಿದೆ ಬರಮುಕ್ತ ನಾಡು

Tuesday, August 29, 2017

ಕಾವಿಗೂ... ಕಾವು ಬೇಕೆ ?

ಕಾವಿಗೂ... ಕಾವು ಬೇಕೆ ?
ಆಧ್ಯಾತ್ಮದ ಯಜ್ಞಕುಂಡಕ್ಕೂ
ಕಾಮದ ತುಪ್ಪ ಬೇಕೆ ?
ನಿಷ್ಕಲ್ಮಷ ಮನದಿ ದೇವರಡಿದಾವರೆಗಳ
ಪೂಜೆಗೆ ಸಲ್ಲಬೇಕಾಗಿದ್ದ ಹೂವುಗಳೆಲ್ಲ..
ಕೊಂದ ವ್ಯಾಘ್ರದ ಚರ್ಮದ ಮೇಲೆ
ಕುಳಿತು ಶಾಂತಿ ಮಂತ್ರವ ಬೋಧಿಸುವವರ
ಶಯನದಲಿ ಅಹಿಂಸೆಯಿಂದ ನಲಗುತಿವೆಯಲ್ಲ ....

ಕಾಲನ ಗರ್ಭದಲಿ ಅಬಲೆಯರದದೇಷ್ಟೊ
ಕೂಗುಗಳು ಹೂತು ಹೋಗಿವೆಯಲ್ಲ
ಕಾಮುಕರ ಕೋಣೆಯಲಿ ನತದೃಷ್ಟೆಯರ
ಮೈ ಮನಗಳು ಇನ್ನೂ ಮುದುಡುತಿಹುವೆಯಲ್ಲ
ಹುಲಿಯ ವೇಷದ ನರಿಯ ಮನಸುಗಳು
ಧರ್ಮನಿಷ್ಠೆಯ ಶರಣರನು ಭಕ್ತರ ಅನುಮಾನದ
ಅಲಗು ಕಣ್ಣಿಗೆ ನೂಕುತಿಹುವಲ್ಲ

ರಂಭೆ.. ಊರ್ವಶಿ.. ಮೇನಕೆ.. ತಿಲೋತ್ತಮೆ
ಯಂತಹ ಸುರಲೋಕದ ವೇಶ್ಯೆಯರು
ಋಷಿಮುನಿಗಳ ತಪವ ಭಂಗಗೊಳಿಸಿ.. ಅವರ
ಮನಕಾಮನೆಯ ಬಡಿದೆಬ್ಬಿಸಿ.. ಬದುಕಿನ
ಮಹೋನ್ನತ ಗುರಿಯ ತಪಕೆ ತಮ್ಮ ಕಾಮದ
ಕಿಡಿಯ ಸೊಕಿಸಿ ಹೊತ್ತಿ ಉರಿಸಿಬಿಡುತ್ತಿದ್ದರಂದು..

ಮನದ ಶಾಂತಿಗಾಗಿ... ಬಾಳ ಜಂಜಾಟಗಳ
ಗಂಟುಗಳ ವಿಮುಕ್ತಿಗಾಗಿ ಶರಣೆಂದು ಚರಣಕೆ
ಶರಣಾದವರಸಹಾಯಕತೆಯ ಹಾಸಿಗೆ ಮಾಡಿಕೊಂಡು
ದೇಹದ ತುಂಬ ಮಾಸದ ಮುಳ್ಳು ಗುರುತುಗಳ
ಮೂಡಿಸಿ.. ಲೌಕಿಕ ಅಲೌಕಿಕಗಳ ಸಹವಾಸವೆ 
ಸಾಕೆಂದು ಸಾಯಲು ಸಿದ್ದಗೊಳ್ಳುವಂತೆ ಮಾಡುವ
ಕಾಮಾ...ಸ್ತಿಕರೆ.. ಸ್ವಲ್ಪವಾದರೂ ಅಂತರಾತ್ಮದ
ಭಯವಿಲ್ಲವೆ ?

ಬದುಕಿದು ನಶ್ವರವೆಂದು ಸಾರುವವರು
ಸಾವಿರಾರು ಕೋಟಿಯ ಆಸ್ತಿಯ ಹೊಂದುವರು
ಹೆಣ್ಣು... ಹೊನ್ನು.. ಮಣ್ಣುಗಳೆಂಬ ಮೋಹವ
ತೊಡೆಯಲು ಬಯಲಿಗೆ ಬಂದು...ಮಣ್ಣನು
ಗಳಿಸಿ..ಮಣ್ಣಲಿ ಹೊನ್ನಿನ ಹಾಸಿಗೆಯ ಹಾಸಿ
ಮುಕ್ತಿಯ ನೆಪದಲಿ ಹೆಣ್ಣನು ಹರಿದು ಮುಕ್ಕುವರಲ್ಲ

ಇಂಥ ಧುರುಳರ ಪೂಜಿಸಬೇಕೆ..?
ಇವರ ದುರ್ಮಾರ್ಗವ ಅನುಸರಿಸಬೇಕೆ...?
ತಪ್ಪಿನ ಶಿಕ್ಷೆಗೆ ಒಳಗಾದವರನ್ನು ಅಪ್ಪಿಕೊಂಡು
ಪರರ ಆಸ್ತಿಯನ್ನು ಸುಟ್ಟು ಹಾಕುವುದು ಸರಿಯೆ..?
ನ್ಯಾಯಾಂಗದ ಮುಂದೆ ಎಲ್ಲರೂ ಒಂದೆ ಎಂಬ
ಉಕ್ತಿಗೆ.. ಅಗೌರವ ತೋರಿದಂತಾಗುವುದಿಲ್ಲವೆ..?
ಎಚ್ಚೆತ್ತುಕೊಳ್ಳುವುದಾದರೂ ಯಾವಾಗ..?
ಕಾವಿಯ ಕಾವು ನಮ್ಮ ಮನೆಯ ಬಾಗಿಲನ್ನು
ತಾಕುವವರೆಗೂ ಕಾಯಬೇಕೇನೊ...?

Monday, August 28, 2017

ಬೆಂಕಿಯ ಹಚ್ಚಿ

ಕುಂತಿದ್ನೆಲ್ಲ... ಗೆಳತಿ ನೀ..
ಬರುವ ದಾರಿಯ ನೆಚ್ಚಿ
ಹೊರಟ ಹೋದೆಯಲ್ಲ ನಮ್ಮ
ಪ್ರೀತಿಯ ತೋಟಕ್ಕ.. ಬೆಂಕಿಯ ಹಚ್ಚಿ

ಎಷ್ಟಂತ... ತಡೆಹಿಡಿಲೇ..ಮಂದಿಮುಂದ
ಎದಿ ದುಃಖಾನ... ಅವುಡಗಚ್ಚಿ
ಎದುರಿಗೆ ಅತ್ತಂಗ ಮಾಡಿ.. ನಗ್ತಾರಲ್ಲೆ
ಎಲ್ಲಾ.. ಮನಿ ಬಾಗಿಲ ಮುಚ್ಚಿ

ನಿನ್ನ ನಂಬಿ ಕಟ್ಟಿದ್ನಲ್ಲೆ...
ಎಷ್ಟೋ ಆಶಾಗೋಪುರಗಳ... ಹುಚ್ಚಿ
ಕಂಡ ಕನಸಿನ ಕನ್ನಡಿ ಒಡ್ದ...
ನಕ್ಕೊತ ನಿಂತಿಯಲ್ಲ... ಮನಸ್ಸಿಗೆ
ಮುಳ್ಳನ್ನ ಚುಚ್ಚಿ

ಮಾಡಿದೆಲ್ಲ ಮಾಯದ ಗಾ...ಯಾನ
ವಾಸಿನರ.. ಹೆಂಗ್ ಮಾಡ್ಕೊಲಿ ನಾನು
ಪ್ರೀತಿ ಇಲ್ಲದ ಮುಲಾಮ ಹಚ್ಚಿ
ಬದುಕೊದು ಆಗೋದಿಲ್ಲಿನ್ನ ಹುಡುಗಿ
ಇಷ್ಟು ದಿವಸ ಬದುಕಿದ್ದ ಹೆಚ್ಚಾಗಿತ್ತು
ನೀ ಕೊಟ್ಟ ಮಾತನ್ನ ಮೆಚ್ಚಿ

ನಿಂಗೇನ ಗೊತ್ತೈತೊ... ಬೆಡಗಿ ನಿನ್ನ
ನೆಪ್ಪುಗಳು ಕೊಲ್ಲಾಕ ಹತ್ತಾವ ನನ್ನ
ಹಗಲಿರುಳು ಕೊಚ್ಚಿ... ಕೊಚ್ಚಿ...
ಕಿವಿಯೊಳಗ ಕುಂತ ನಗಾಡೋ.. ನಿನ್ನ
ನಗುವಿನ ಸದ್ಧಿಗೆ ಈರುಳೆಲ್ಲ
ಬಿಳ್ತೀನಿ ನಾ.. ಬೆಚ್ಚಿ ಬೆಚ್ಚಿ

ಕಡಿಗೊಂದ ಮಾತ ಕೇಳ್ತಿನಿ..
ಹಿಂಗ ನೀ ಬಿಟ್ಟ ಹೋಗೊದಾಗಿದ್ರ..
ಯಾಕರ ಮಳ್ಳ ಮಾಡೀದಿ ಮನಸನ್ನ
ಮಾತಿನ ಬೆಣ್ಣಿ ಹಚ್ಚಿ.. ಹಚ್ಚಿ..
ಬಿಟ್ಟ ಹೋದೆಲ್ಲ.. ನಿನೀಗ... ದುರ್ಗವ್ವನ
ಬಲಿಗೆ ಬಿಟ್ಟ ಕ್ವಾಣದ್ಹಂಗ.. ನಿನೀಲ್ಲದ
ನೋವಿನ ಬ್ಯಾನಿ ಸುಡ್ಲಾಕ ಹತ್ತೈತಿ ನನ್ನ ಕಿಚ್ಚಿ.. ಕಿಚ್ಚಿ..

ಬೆಂಕಿಯ ಹಚ್ಚಿ

ಕುಂತಿದ್ನೆಲ್ಲ... ಗೆಳತಿ ನೀ..
ಬರುವ ದಾರಿಯ ನೆಚ್ಚಿ
ಹೊರಟ ಹೋದೆಯಲ್ಲ ನಮ್ಮ
ಪ್ರೀತಿಯ ತೋಟಕ್ಕ.. ಬೆಂಕಿಯ ಹಚ್ಚಿ

ಎಷ್ಟಂತ... ತಡೆಹಿಡಿಲೇ..ಮಂದಿಮುಂದ
ಎದಿ ದುಃಖಾನ... ಅವುಡಗಚ್ಚಿ
ಎದುರಿಗೆ ಅತ್ತಂಗ ಮಾಡಿ.. ನಗ್ತಾರಲ್ಲೆ
ಎಲ್ಲಾ.. ಮನಿ ಬಾಗಿಲ ಮುಚ್ಚಿ

ನಿನ್ನ ನಂಬಿ ಕಟ್ಟಿದ್ನಲ್ಲೆ...
ಎಷ್ಟೋ ಆಶಾಗೋಪುರಗಳ... ಹುಚ್ಚಿ
ಕಂಡ ಕನಸಿನ ಕನ್ನಡಿ ಒಡ್ದ...
ನಕ್ಕೊತ ನಿಂತಿಯಲ್ಲ... ಮನಸ್ಸಿಗೆ
ಮುಳ್ಳನ್ನ ಚುಚ್ಚಿ

ಮಾಡಿದೆಲ್ಲ ಮಾಯದ ಗಾ...ಯಾನ
ವಾಸಿನರ್ ಹೆಂಗ್ ಮಾಡ್ಕೊಲಿ ನಾನು
ಪ್ರೀತಿ ಇಲ್ಲದ ಮುಲಾಮ ಹಚ್ಚಿ
ಬದುಕೊದು ಆಗೋದಿಲ್ಲಿನ್ನ ಹುಡುಗಿ
ಇಷ್ಟು ದಿವಸ ಬದುಕಿದ್ದ ಹೆಚ್ಚಾಗಿತ್ತು
ನೀ ಕೊಟ್ಟ ಮಾತನ್ನ ಮೆಚ್ಚಿ

ನಿಂಗೇನ ಗೊತ್ತೈತೊ... ಬೆಡಗಿ ನಿನ್ನ
ನೆಪ್ಪುಗಳು ಕೊಲ್ಲಾಕ ಹತ್ತಾವ ನನ್ನ
ಹಗಲಿರುಳು ಕೊಚ್ಚಿ... ಕೊಚ್ಚಿ...
ಕಿವಿಯೊಳಗ ಕುಂತ ನಗಾಡೋ.. ನಿನ್ನ
ನಗುವಿನ ಸದ್ಧಿಗೆ ಈರುಳೆಲ್ಲ
ಬಿಳ್ತೀನಿ ನಾ.. ಬೆಚ್ಚಿ ಬೆಚ್ಚಿ

ಕಡಿಗೊಂದ ಮಾತ ಕೇಳ್ತಿನಿ..
ಹಿಂಗ ನೀ ಬಿಟ್ಟ ಹೋಗೊದಾಗಿದ್ರ..
ಯಾಕರ ಮಳ್ಳ ಮಾಡೀದಿ ಮನಸನ್ನ
ಮಾತಿನ ಬೆಣ್ಣಿ ಹಚ್ಚಿ.. ಹಚ್ಚಿ..
ಬಿಟ್ಟ ಹೋದೆಲ್ಲ.. ನಿನೀಗ... ದುರ್ಗವ್ವನ
ಬಲಿಗೆ ಬಿಟ್ಟ ಕ್ವಾಣದ್ಹಂಗ.. ನಿನೀಲ್ಲದ
ನೋವಿನ ಬ್ಯಾನಿ ಸುಡ್ಲಾಕ ಹತ್ತೈತಿ ಕಿಚ್ಚಿ.. ಕಿಚ್ಚಿ..

Friday, August 25, 2017

ಭಾರ... ಭಾರ

ಮರೆತು ಹೋದ ಅವನ
ನೆನೆದು ಮನವಿದು ಭಾರ
ಅವನ ಕೈ ಬೆರಳುಗಳ ಸ್ಪರ್ಶವಿಲ್ಲದೀ..
ಮುಂಗರುಳುಗಳು
ಇನ್ನೂ ಭಾರ.. ಭಾರ..

Wednesday, August 23, 2017

ನೀನೂ... ದೇವರಾದೆಯಲ್ಲೊ..

ನೀನು ದೇವರಾದೆಯಲ್ಲೊ...ಎಸುಳೆ
ಹನ್ನೊಂದು ಮಾಸಗಳಷ್ಟೇ ಬೆಳಗಿ
ಮಡಿಲಿಗೆ ಮುಳ್ಳನಿಟ್ಟು.. ಆಸೆ ಕಂಗಳಲಿ
ಕಣ್ಣೀರ ಕೆರೆಯ ಕಟ್ಟಿ.. ಕತ್ತಲಿನ ದಿನಗಳ
ಉಳಿಸಿ ಹೋದೆಯಲ್ಲೊ ಕಾಲನ ಕರೆಗೆ ಕರಗಿ

ತುಂಬಿದೆದೆಯಿದು ಬಿಗಿದು... ಮೊಲೆಯ ತೊಟ್ಟಿನಿಂದ
ಅಮೃತವು ಜಿನುಗಿ... ರವಿಕೆಯಲ್ಲ ಹಸಿಯಾಗಿಹುದು
ಉಸಿರಿಡಿದು ಅಳುವ ನಿನ್ನ ಸಂತೈಸಲು
ನನ್ನಜ್ಜಿಯಿಂದ ಕಲಿತ ಜೋಗುಳ ಪದಗಳು
ನೀನಿಲ್ಲದೆ ಉಸಿರುಗಟ್ಟಿವವು....

ಅಪ್ಪ ತಂದಿಟ್ಟ ಗೊಂಬೆಯ ಆಡಿಸಲಿಲ್ಲ.. ಬೀಳಿಸಲಿಲ್ಲ
ಆಡಿಸಿ.. ಬೀಳಿಸಿ ನಕ್ಕು ನಮ್ಮನು ನಗಿಸಲಿಲ್ಲ
ಅಜ್ಜಿ ಮಾಡಿಸಿಟ್ಟ ಕಾಲ್ಗೆಜ್ಜೆಯ ತೊಡಲಿಲ್ಲ.. ನಡೆಯಲಿಲ್ಲ
ತೊಟ್ಟು.. ಓಡಾಡಿ.. ಮನೆಯಂಗಳದ ತುಂಬ
ಕಾಲ್ಗೆಜ್ಜೆಯ ನಾದವ ತುಂಬಿಸುವ ಮೊದಲೆ
ಮರೆಯಾಗಿಬಿಟ್ಟೆಯಲ್ಲೊ... ಮಗುವೆ..

ಎರಡೆರಡು ಬಾರಿ ಹೃದಯಾಘಾತವಾದರೂ..
ನಿನ್ನಜ್ಜನೆದೆಯ ಬಯಲು ನಿನ್ನ ಮುದ್ದು ಪಾದಗಳ
ಹೆಗ್ಗುರುತಿಗಾಗಿ ಕಾಯುತ್ತಿತ್ತಲ್ಲ... ಬಯಲು ಬರೀ..
ಬಯಲಾಗಿಯೇ.. ಉಳಿಯಿತೆಂಬ ಸತ್ಯವು ಗೊತ್ತಾದ
ಮೇಲೆಯೂ ನೀ.. ಬಂದೆ ಬರುವೆ ಎಂಬ ನಂಬಿಕೆಯಿಂದ
ಮಿಡಿಯುತಿಹುದಲ್ಲ

ಮೌನವಾದೆಯಲ್ಲೊ... ಮಗುವೆ ಕಲ್ಲು
ದೇವರ ಹಾಗೆ..ತೊಟ್ಟಿಲು ‌ನಿಂತಿದೆ.. ಜೋಗುಳ
ಕಾದಿದೆ..ಎಣ್ಣೆ ನೀರದು ಆರುತಿದೆ... ನೀನ್ನಳುವ
ಕೇಳದೆ ಮನೆಯ ಮೂಲೆ ಮೂಲೆಯಲೂ..
ಮೌನದ ತಾಂಡವ ನೃತ್ಯವೆ ವಿಜೃಂಭಸಿದೆ...
ಸಂತೈಸುವ ಮಡಿಲು ಬರಿದಾಗಿದೆ... ನೀನ್ನೆನೆದು
ಸುರಿಸುವ ಕಂಬನಿಗೆ ಕೊನೆಯಿಲ್ಲದಾಗಿದೆ...
ದೇವರಾಗಿಬಿಟ್ಟೆಯಲ್ಲೊ..‌ ಮಗುವೆ..
ವಂಶದ ಚಿಗುರು ಚಿಗಿಯುವ ಮೊದಲೆ...

ನನಗೇಕಿ ಬಾಳು

ನನಗೇತಕಿ ಬಾಳು..
ಅರಿಯದಾಯಿತೆ ಜಗವಿದು
ಎನ್ನೆದೆಯ ಗೋಳು... ಅರ್ಥವಿಲ್ಲದ
ದಾರಿಯಲ್ಲಿ ... ಗೊತ್ತು ಗುರಿಯಿಲ್ಲದೆ
ಸಾಗುತಿಹುದಲ್ಲ ಬಾಳು

ಅಪ್ಸರೆಯ ರೂಪವ ತುಂಬಿದಿ ದೇಹಕೆ
ಬುದ್ಧಿಮಾಂದ್ಯತೆಯ ಕೊಡುಗೆಯು
ಯಾರಿಲ್ಲದ ಹೊತ್ತಿನಲಿ ಹೊಂಚು ಹಾಕಿದ
ಹದ್ದಿಗೆ ಬೇಟೆಯಾದ ಹಕ್ಕಿಯಿದು

ಹೂವಾದ ದೇಹವಿದು
ಮಧುಮಂಚಕೆ ಶೃಂಗಾರವಾಗಲಿಲ್ಲ
ಕಾಮದ ಕಾವಿಗೆ ಸಿಕ್ಕು...
ಸುಟ್ಟ ಚಿಟ್ಟೆಯಾದೆನಲ್ಲ

ನನ್ನದಲ್ಲದ ತಪ್ಪಿಗೆ... ಮನೆತನದ
ಮರ್ಯಾದಕ್ಕೆ ಹೆತ್ತವರು ಹೊರ
ದೂಡಿದರಲ್ಲ..
ಹಗಲಿರುಳೆನ್ನದೆ... ಗಂಡು ನಾಯಿಗಳೆನ್ನ
ಕಾಮದ ಹಾಸಿಗೆಯನ್ನಾಗಿಸಿಹರಲ್ಲ

ಬದುಕೆಂದರೇನು....?
ಎಂದರಿಯುವ ಮೊದಲೇ...
ಜಗವರಿಯದ ಕರುಳಿಗೆ.. ಕಣ್ಣೀರನರಿಯದ
ಪಾಪದ ಪಿಂಡವೊಂದು ಕಂಕುಳಲಿ
ಕೂತಿದೆಯಲ್ಲ..

ಎದೆಯು ಬಿಗಿಯುವಷ್ಟು ದಿನಗಳ
ವರೆಗಷ್ಟೇ.. ಇದಕೆ ಉಸಿರು
ರವಿಕೆ ಸಡಿಲಗೊಂಡ ಮೇಲೆ... ಇದರ
ಕೊರಳಿಗೆ ಕುಣಿಕೆ ಹೆಣೆಯುವುದೇನೊ..
ಆ ವಿಧಿ... ನಾನಂತೂ ಅರಿಯೇ..

ತುಂಬಿದ ಸೌಂದರ್ಯದಲರ್ದದಷ್ಟಾದರೂ
ಬುದ್ಧಿಯನ್ನಾದರೂ ತುಂಬಿದ್ದರೆ..
ನನಗಿಂತ ದುರ್ಗತಿ ಬರುತ್ತಿರಲಿಲ್ಲ
ಬಂದರೂ... ಎದುರಿಸಿ ನಿಲ್ಲದೆ
ಸೋಲುತ್ತಿರಲಿಲ್ಲ...

ಏನು ಮಾಡಲಿ..? ಕೊನೆಯದಾಗಿ
ಬಾಳಿನ ದಾರಿ ಗೋಚರಿಸುತ್ತಿಲ್ಲ
ನನಗೆ ಹಸಿವಿನ ಬಯಕೆ ನಿಗ್ತಾಯಿಲ್ಲ
ಏಕೊ.. ಏನೋ... ಸಾವಿಗೆ ಬಾಯಾರಿಕೆ ಆಗ್ತಾಯಿಲ್ಲ