Saturday, April 25, 2020

ಕಜಲ್

ಬಣ್ಣದ ಮಾತುಗಳ ಆಡುವವರ ನಡುವೆ
ಸಿಕ್ಕು, ನರಳಾಡಿ, ನೊಂದು-ಬೆಂದು
ಹೋಗದಿರು ಪಾಗಲ್!!!
ಇಂದು ಹೋಳಿಯ ಹಬ್ಬ. ಬಣ್ಣ ಬಣ್ಣದ
ಪುಡಿಯ ಬುಟ್ಟಿಗಳಿವೆಯಿಲ್ಲಿ, ಬಂದುಬಿಡು
ಎರಚಿಬಿಡುತ್ತೇನೆ, ಮೊಗದ ಗುರುತೆ ಸಿಗದ ಹಾಗೆ.





ಕಜಲ್

ಹೊತ್ತು...ಹೊತ್ತಿಗೂ ನಿನಗೇರಿದ ಅಮಲು
ಇಳಿದು ಹೋಗುವ ಹಾಗೆ, ಹೊತ್ತು ಹೊತ್ತಿಗೂ..
ನನ್ನ ಹರೆಯವಿಲ್ಲಿ ಸೋರಿ ಹೋಗುತಿವುದು ಪಾಗಲ್!
ಹಿಂಡಿ ಹಿಪ್ಪೆಯಾಗುವ ನನ್ನಂಗಗಳ ನೋವು....
ಉರಿದುರಿದು ನಿಗಿನಿಗಿಸುವ ನಿನ್ನೆದೆಯ ವೇದನೆ 
ಎರಡೂ....ಒಂದೆ ಅಲ್ಲವೇನು? ವಿಪರ್ಯಾಸವೆಂದರೆ,
ಜಗತ್ತು ಇವೆರಡಕ್ಕೆ ಎಂದಿಗೂ....ಕಿವಿಯಾಗುವುದೆ ಇಲ್ಲ....!!!

ನನ್ನಂಗಳಕೆ ಕಾಲಿಡುವವರೆಲ್ಲ ನಿನ್ನ ಹಾಗೇನು 
ಭಿಕಾರಿಗಳಲ್ಲ  ಹಣದಲ್ಲಿ!
ತಮ್ಮ ಕಾಮದ ತೆವಲಿಗಾಗಿ, ಯಾರದೋ... ಬೇವರಿನ ದುಡ್ಡನ್ನು ತಂದು ಮಧುಮಂಚದ ಮೇಲೆ‌ ಚೆಲ್ಲುವರು ಪಾಗಲ್!
ಇಲ್ಲಿ‌ ಬರುವವರೆಲ್ಲ, ಮಧ್ಯ-ಮಧುವನ್ನು ಹೀರಲಿಕ್ಕೆ!,
ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿ ಹೊರಳಾಡಿ  ಹೋಗುವುದಕ್ಕೆ!
ದೇಹದ ಇಂಚಿಂಚು ಭಾಗವನ್ನು ಚುಂಬಿಸುತ್ತಾರೆ, ಕಚ್ಚುತ್ತಾರೆ, ವಿಜೃಂಭಿಸುತ್ತಲೆ  ಸ್ವರ್ಗದ ಬಾಗಿಲನ್ನು ತೆಗೆಯುತ್ತರಾದರು ಸಂತೃಪ್ತರಾಗುವುದಿಲ್ಲವಷ್ಟೆ!.

ನೀನು, ಅದ್ಹೇಗೆ? ಕುಡಿದು ಎಸೆದುಬಿಟ್ಟ ಮದ್ಯದ 
ಬಟ್ಟಲೊಳಗಿನ ಕೊನೆಯ ಹನಿ ಹನಿಯನ್ನು ಸವಿದು
ಸ್ವರ್ಗದಲ್ಲಿಯೆ ತೇಲಾಡಿದವರಂತೆ ಸುಖ ಪಡುವೆ ಪಾಗಲ್!
ಸೂಸಿ ಹೋದ ಮಕರಂದ, ಅರ್ಧಂಬರ್ಧ ಮುರಿದುಬಿದ್ದ
ದಳಗಳ ಹೂವನ್ನೆ ಎತ್ತಿ ಮೂಸಿ... ಮೂಸಿ...ನನ್ನರಮನೆಯ
ಸುಖವೆ ನಿನ್ನ ನೋಡಿ ಉರಿದು ಹೋಗುವ ಹಾಗೆ ಸಂತೃಪ್ತಗೊಳ್ಳುವೆಯಲ್ಲ!!! 
ಹೇಗಿರಬಹುದು ನಿನ್ನೊಳಗೆ ವಿರಹವನ್ನು ಅದುಮಿಟ್ಟುಕೊಳ್ಳುವ ಗುಟ್ಟು

ಸರಿ ಬಾ ಇಲ್ಲಿ ನನ್ನೀ.... ಎಂಜಲು ತುಟಿಗಳಿಂದ ನಿನ್ನಧರಕ್ಕೊಂದಿಷ್ಟು ಮಧುವನ್ನು ತುಂಬಿಬಿಡುವೆ.
ಮದ್ಯವು ಮರೆಸದ ನೋವನ್ನು ನನ್ನಧರದ ಮಧುವಾದರು
ಕಡಿಮೆಗೊಳಿಸಲಿ ಪಾಗಲ್!!
ಒಣಗಿ ಬಿರುಕುಬಿಟ್ಟು ಹನಿಯಾಗಿ ಜಿನುಗುತಿರುವ ನಿನ್ನಧರದ
ನೆತ್ತರಿನ ರುಚಿಯನೊಮ್ಮೆ ನಾನು ಸವಿಯುವೆ.
ನನ್ನೆದೆಯೊಳಗೂ ಧಗಧಗಿಸುತಿರುವ ಅಶಾಂತಿಯ ಅಗ್ಗಿಷ್ಟಿಕೆಯ ಉರಿ ಶಮನವಾದರು ಆಗಲಿ.

ನಾವಿಬ್ಬರೂ.... ಒಂದೆ ಹಾದಿಯ ಪಯಣಿಗರೆಂದೆನಿಸುವುದಿಲ್ಲವೆ ನಿನಗೆ!
ನೋವುಂಡವನು ನೀನು, ಸುಖದ ಸುರೆಯನ್ನು ಸುರಿಸುವವಳು  ನಾನಲ್ಲವೇನು?
ಹಂಚಿದೆ...ಸುರಿದೆ...ಮಾರಿದೆ...ಹ್ಞೂಂ... ಹ್ಞೂಂ..
ಸಂಜೆ ಕಳೆದು ರಾತ್ರಿಯಾಗಿ ಬೆಳಕು ಹರಿಯುವವರೆಗೆ,
ದಿನ ಕಳೆದು ವಾರವಾಗಿ, ತಿಂಗಳಾಗಿ, ವರ್ಷಗಳೆ ಉರುಳಿದರು
ಸುರಿಯುವ ನನ್ನ ಮನಸ್ಸಿಗಿಲ್ಲಿ ನೆಮ್ಮದಿಯೆ ದಕ್ಕಿಲ್ಲ ಪಾಗಲ್!!
ತುಂಬದ ಹೊಟ್ಟೆ, ಹರಿದ ಬಟ್ಟೆ, ಹನಿಹನಿ ಮದ್ಯಕೂ...
ಪರಿತಪಿಸುವ ನೀನು ಅದೇಷ್ಟೊಂದು ಸಂತೃಪ್ತದಲ್ಲಿರುವೆ.
ಇಷ್ಟಕ್ಕೂ... ಅವಳು ನಿನಗೆ ಅಂಟಿಸಿದ ರೋಗವಾದರು
ಯಾವುದು?


Friday, April 24, 2020

ಶಾಯರಿ

ಸುಖವಾಗಿಯೆ,
ಕಣ್ಮುಚ್ಚುತ್ತಿದ್ದೆ
ರಂಗೀಯು
ಬೆನ್ನಿಗೆ ಚೂರಿಯನ್ನೆ
ಇರಿದು ಹೋಗಿದ್ದರು
ಸಾಕಿ....
ಹೊರಟೆ..
ಹೋದಳಲ್ಲ ಸುಮ್ಮನೆ!
ಕಿರು ಬೆರಳಿನಿಂದ
ಎದೆಯ ಮೇಲೊಂದು
ಸಣ್ಣನೆಯ ಗೆರೆಯೊಂದನು
ಗೀಚಿ..

Wednesday, April 22, 2020

ಶಾಯರಿ

ರಂಗೀ ಮಾಡಿ
ಹೋದ, ಗಾಯಕ್ಕೆ
ಮದ್ದಾಗಿ ನಿನ್ನ
ಮದ್ಯವನ್ನು
ಕುಡಿಯಲು ಬಂದೆ
ಸಾಕಿ...
ಕುಡಿದಷ್ಟು....ಗಾಯ
ಹಸಿಯಾಗುತಿದೆ
ವಿನಃ,
ವಾಸಿಯಾಗುತ್ತಿಲ್ಲ!

Tuesday, April 21, 2020

ಶಾಯರಿ

ಚಂದಿರನ ಮಾತು
ಬಿಡು...
ಅವನಿಗೇನು ಸಖಿಯರು
ಕಡಿಮೆಯೇ?
ಸಾಕಿ...
ಬಟ್ಟಲಿಗೆ ಹನಿ ಮದಿರೆಯು
ಕಡಿಮೆಯಾಗದಂತೆ ಸುರಿ...
ನನಗೋ... ಅವನನ್ನು
ಕಂಡರೆ ಹೊಟ್ಟೆಯುರಿ.

ಶಾಯರಿ

ಅವಳೆದೆಯ ನಂಜು
ಹೂಗಳೆದೆಗೂ
ಎರಿಬಿಟ್ಟಿದೆಯಲ್ಲ
ಸಾಕಿ....
ಇವುಗಳನ್ನು
ಒಮ್ಮೆ, ಮದ್ಯದ
ಬಟ್ಟಲಿನಲ್ಲಿ
ಅದ್ದಿ ತೆಗೆಯಲೇನು?

Monday, April 20, 2020

ಶಾಯರಿ

ಹುಚ್ಚಿ...
ರಂಗೀಯು ನನ್ನನು
ಕೇವಲ ತನ್ನ ಕಣ್ ರೆಪ್ಪೆಗಳಲ್ಲಿಯೆ
ತುಂಬಿಟ್ಟುಕೊಂಡಿದ್ದಳು
ಸಾಕಿ....
ಯಾರೊ ಧೂಳನ್ನು
ಕೆಡವಿದರು!
ಕಣ್ಣೀರಿನ ಜೊತೆಯಲ್ಲಿ
ನನ್ನನು ಹೊರನೂಕಿಬಿಟ್ಟಳು.
ಅದೇ ಎದೆಯಲ್ಲಿ
ಬಚ್ಚಿಟ್ಟುಕೊಂಡಿದ್ದರೆ?