Wednesday, October 13, 2021

ಚುಟುಕು

ಎದೆಗೊದ್ದು ಹೋಗುವುದೇನು?
ಬಗೆದು ಹೋಗಿದ್ದರೂ....
ಸಾವರಿಸಿಕೊಳ್ಳುತ್ತಿದ್ದೆ
ರಂಗೀ....
ಬಾಳಿನ ಹಾದಿಗೆ ಬೆನ್ನನ್ನೆ
ತೋರಿಸಿಬಿಟ್ಟಳಲ್ಲ!!!
ಸ್ವಾರ್ಥ ಸಂಬಂಧಗಳು
ನಡೆದು ಹೋಗುವ
ಹಾಗೆ.

Saturday, September 25, 2021

ಚುಟುಕು

ದೇಹಗಳ ಹಸಿವಿನ ಕಾದಾಟಕ್ಕೆ
ಈ ಹೂವುಗಳು
ಆಹಾರವಾಗಬೇಕೇನು?
ಸುಂದ್ರಿ....
ಇರುಳ ಕಳೆದು, ಹೊನಲು
ಮೂಡುವವರೆಗೂ...
ಒಂದು...ಎರಡು..ಮೂರೆಂದು
ಗುಣಿಸುತ್ತಾ, ಹೂಮುತ್ತುಗಳ
ನೀಡುವೆ!
ಇಷ್ಟು... ಸಾಕಲ್ಲವೇನು?

Sunday, September 19, 2021

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

ಚುಟುಕು

'ತೀರಿ'ಕೊಂಡವರ
ಶೃದ್ಧಾಂಜಲಿಯ ಪುಟವನ್ನಿಲ್ಲಿ...
ಎಷ್ಟು ಬೇಗ
'ತಿರುವಿ' ಹಾಕಿಬಿಡುತ್ತಾರೆ
ಗೊತ್ತೇ...!!?
ವಾರ ಹೋಗಲಿ, ಒಂದು
ದಿನವು ಬಾಧಿಸದವರ ಸಾವಿನ
ನೋವಿಗೆ, ಮಗ, ಅಣ್ಣ, ಗೆಳೆಯ
ತಂಗಿ, ಅಕ್ಕಂದಿರೆಂಬ ಪೊಳ್ಳು
ನಂಟುಗಳ ಕಟ್ಟಿಕೊಳ್ಳುವ
ಗೊಡವೆಯಾದರೂ...
ಬೇಕಿತ್ತೇ...!!?

Thursday, June 17, 2021

ಗಾಲಿಬ್

ಹಾಳೂರ ಸಂತೆಯಲಿ ಹಾಳಾದ ರೋಗವೊಂದು
ಎಲ್ಲರನೂ ನುಂಗಿ ಹಾಕುತಿರಲು, ನೀನೆಲ್ಲಿ ಹಾಳಾಗಿ
ಅಲೆಯುತಿರುವೇಯೊ? ಗಾಲಿಬ್!!
ಈಗಲೋ...ಆಗಲೋ...ಎಂಬಂತೆ ಬಿದ್ದು ಹೋಗಲು
ಹಾತೊರೆಯತ್ತಿರುವ, ಕಲ್ಲು ಕಟ್ಟಡದ ನಡುವೆ
ಹರೆಯದ ಸಕ್ಕರೆಯ ಗೊಂಬೆಯು ಕಾಯುತ್ತಿರುವುದು
ನಿನಗರಿವಿಲ್ಲದೆ ಹೋಯಿತೇನು?

ಹರವಿಕೊಂಡ ನಿಂತ ಈ... ಹೆರಳುಗಳಿಗಿನ್ನು
ಸಾಂಭ್ರಾಣಿಯ ಭಾಗ್ಯ ದೊರೆತಿಲ್ಲ, ಎಣ್ಣೆಯಂತೂ
ದೂರದ ಮಾತು ಗಾಲಿಬ್!!!
ಮೊಳವಿಲ್ಲದಿದ್ದರೂ ಸರಿ, ಅಂಗೈಯಲ್ಲಾಷ್ಟಗದಿದ್ದರೂ..
ಹಾದಿ ಬದಿಯ ಮನೆಯ ಕಂಪೌಡಿನ ಸರಹದ್ದನ್ನು
ದಾಟಿ ಬಂದಂತ ಬಳ್ಳಿಯೊಳಗಿನ ಒಂದೆ...ಒಂದು
ಹೂವಿನ ದಳವಾದರು ಸಾಕು, ಇವುಗಳ ವಿರಹದ
ಹಸಿವು ಇಂಗಿದರೂ ಇಂಗಬಹುದು....

ಮೈ ಮೇಲೆಲ್ಲ ಧರಿಸಿಕೊಂಡಿರುವ ಆಭರಣಗಳೆಲ್ಲ
ಚುಚ್ಚುತ್ತಿವೆ, ಮೊನಚಾದ ಮುಳ್ಳುಗಳ ಹಾಗೆ ಗಾಲಿಬ್!!!
ಗುಂಜಿಯಷ್ಟೂ.... ಬೇಕಿಲ್ಲ ಬಂಗಾರ ನನಗೆ ನಿನ್ನಿಂದ
ಒಮ್ಮೆ... ಒಮ್ಮೆ ನವಿಲುಗರಿಯಿಂದ ಈ ದೇಹ
ಸಿರಿಯನ್ನು ಸವರಿ ಬಿಡಬಾರದೆ? ಅಡಿಯಿಂದ
ಮುಡಿಯವರೆಗೂ.... ಏರಿದ ಬಿಸಿಯ ತಾಪ,
ಚೂರು ತಣ್ಣಗಾದರು ಆಗಲಿ

ಈ ಸಂಜೆಯ ಮಧು ಬಟ್ಟಲಿಗೆ ಒಂದೆ..ಒಂದು
ದಮ್ಮಡಿಯನ್ನು ತೆಗೆದುಕೊಳ್ಳುವುದಿಲ್ಲ ಗಾಲಿಬ್!!
ಅದರದಂಚಿನಲಿ ಹೇಳಿಕೊಳ್ಳಲಾರದಷ್ಟು ನೋವಿದೆ,
ಕಚ್ಚಿಬಿಡು ಗಿಣಿಯಂತೆ, ಹೀರಿಬಿಡು ಗಂಧವನು ದುಂಬಿಯಂತೆ, ನಿನ್ನೊಳಗಿನ ನೋವು ಶಮನವಾಗದಿದ್ದರು ಸರಿ,
ನನ್ನೊಳಗಿನ ವೇದನೆಯನ್ನು ತಣ್ಣಗಾಗಿಸಿದರಷ್ಟೆ ಸಾಕು.

ಅದ್ಹೇಗೆ ಕಾದಳೊ? ಶಬರಿ!!! ರಾಮನಿಗಾಗಿ ಕಲ್ಲಾಗಿ
ಪಾಪ-ಪುಣ್ಯಗಳ ಸುಳಿಯಲ್ಲಿ ಸಿಕ್ಕು, ಹಣ್ಣಾಗಿ
ಹೋದದ್ದು ದೂರಾದೃಷ್ಟವಲ್ಲವೇನು? ಗಾಲಿಬ್!!
ನಾನು...ಹೆಣ್ಣಲ್ಲವೇನು?, ಹಣ್ಣಾಗಿಲ್ಲವೇನು? ಕಲ್ಲಾಗಬೇಕೆನು? ಕಾಯಬೇಕೆನು? ಹರೆಯದ ಹೊರೆಯನೆಲ್ಲ ಪರಿತಪಿಸುವುದರಲ್ಲಿಯೆ...
ಕಳೆದುಕೊಂಡುಬಿಡಲೇನು? ಹೇಳು ಏನು ಮಾಡಲಿ
ನಾನೀಗ... ಗಾಲಿಬ್ ಹೇಳು ಏನು ಮಾಡಲಿ
ನಾನೀಗ..

ಅಕ್ಷರ ಬಡವ.

Monday, June 14, 2021

ಚುಟುಕು

ಮಲ್ಲಿಗೆ ಮುಡಿದು
ನೀ.. ಹೀಗೆ ನಾಚಿ
ನಿಂತಿರಲು, ನೂರೆಂಟು
ಹೂ ಮಾತುಗಳ
ಗೊಡವೆಯೇತಕೆ?
ಬೇಕಿದ್ದರೆ, ಕಾಲ್ಬೆರಳ
ತುದಿಯಿಂದಲೆ ಗೀರಿ
ಒಪ್ಪಿಗೆಯನ್ನು ಸೂಚಿಸಿಬಿಡು!
ತಣ್ಣನೆಯ ಮೌನದಲ್ಲಿ
ಕೊಲ್ಲುವ ಈ....
ಸಂಚಾದರೂ... ಏತಕೆ?