Tuesday, August 22, 2023

ಗೆಳೆಯ


ಹಚ್ಚಿಟ್ಟ ಮೊಂಬತ್ತಿ
ಬೆಳಗುವುದಾದರೂ
ಎಷ್ಟೊತ್ತು..?
ಉರಿದುರಿದು ಇರುಳ
ಗಾಳಕ್ಕೆ ಸಿಕ್ಕು
ನರಳಿ ಹೋಗುವುದಿಲ್ಲವೇನು?
ಗೆಳೆಯ...
ಬರೆಯಲು ಕುಳಿತರೆ
ಇದೊಂದೆ ರಾತ್ರಿಗೆ
ಕಳೆಯುವುದೇನು..?
ನನ್ನೆದೆಯೊಳಗಿನ
ವ್ಯಥೆ..!!

Friday, August 18, 2023

ರಂಗೀ


ಪ್ರೇಮದ ಮೈದಾನದಲ್ಲಿ
ಎಂದೋ...ಸೋತು
ಹೋದವನು ನಾನು
ರಂಗೀ...
ಗೆದ್ದವರಿಗಿಂತ
ಸೋತವರಿಗೆ ಹೆಚ್ಚು
ಪ್ರಾಮುಖ್ಯತೆ ಇಲ್ಲಿ..!!

Thursday, August 17, 2023

ರಂಗೀ


ಯಾವ ಶಾಸನಗಳು
ಹೇಳದ ಇತಿಹಾಸವನ್ನು
ನಿನ್ನ ಕಣ್ಣುಗಳು
ಹೇಳುತ್ತಿವೆ ರಂಗೀ....
ಕೆದಕುತ್ತ ಕೂರುವುದು
ಬೇಡ...!!
ಅಲ್ಲೆಲ್ಲ ದುರಂತಗಳೆ
ತುಂಬಿ ಹೋಗಿವೆ.


ಗೆಳೆಯ


ಸಾವಿಗಿಂತ ದೊಡ್ಡ
ಮೋಸಗಾರನಿಲ್ಲ
ನೋಡು...
ಗೆಳೆಯ...
ಅವನೆಲ್ಲೂ....
ದೂರದಲ್ಲಿ ನಿಂತು
ನೋವಿನ ಸೇವಕನನ್ನು
ಮಾತ್ರ ಕಳುಹಿಸಿದ್ದಾನೆ.

Wednesday, August 16, 2023

ರಂಗೀ


ನನ್ನ ನೋವಿಗೆ
ಸಾಕ್ಷಿಯಾಗಿ ಯಾವ
ಮದ್ಯದ ಬಟ್ಟಲನ್ನು 
ಕೇಳುತ್ತಾಳವಳು
ರಂಗೀ....
ಮೊದಲು ನಾ ಕೊಟ್ಟ
ಮಲ್ಲಿಗೆಯ ಸಾವಿಗೆ
ನ್ಯಾಯವನ್ನು
ಕೊಡಲಿ...!!

Tuesday, August 15, 2023

ಉಂಡಿ


ತಿರುತಿರುಗಿ ನೋಡಬೇಡ
ಹುಡುಗಿ..
ಒಮ್ಮೆ ನೋಡಿದ್ದಕ್ಕೆ
ಬಿದ್ದಾವ ಬೆನ್ನ ಮೇಲೆ
ಬಾ...ಸುಂಡಿ...!!
ಮಾತಾಡಸಾಕ 
ಬರೊ ಮುಂದ
ಮರಿಲಾರದನ ತಗೊಂಡ
ಬಾರ.... ಪಂಚಮಿ
ಉಂಡಿ..!!

ರಂಗೀ


ಮೊನ್ನೆ-ನಿನ್ನೆ ಕೂಡಿ
ನಡೆದ ದಾರಿಗಳೆಲ್ಲ 
ಈಗ ಹೆದ್ದಾರಿಗಳಾಗಿವೆ
ರಂಗೀ...
ನಡೆಯುವ ಹಾದಿಗಳೆ
ವಿಸ್ತಾರವಾಗಿರುವಾಗ...
ಇಂದೇಕೆ ನಿನ್ನ ಮನಸ್ಸು
ಸಂಕುಚಿತಗೊಳ್ಳುತ್ತಿದೆ..!!