Wednesday, December 7, 2011

ಮೋಹನ















ಯಾವ  ಮೋಹನ ಮುರಳಿ ಕರೆಯಿತೋ
ದೂರ ತೀರಕೆ ನಿನನ್ನು ......
ಅದಾವ ನಾದವದು ಸೆಳೆದುದು
ಅದಾವ ತಿರವದು ನಮ್ಮನು ಮರೆಸಿದುದು
ಮಿತ್ರ.....


                                                   ಸದಾ  ನಸುನಗುವ ನೀನು
                                                  ಆಗದ ಕಾರ್ಯಗಳ ಗುರುವು  ನೀನು
ಕಾಯಕವೇ ಕೈಲಾಸ ವನರಿತವನು
ಹಗಲಿರುಳು ದುಡಿಸಪರಿಯರಿತವನು      
                                               
                                                ಸುತ್ತಾರೂರೊಳಗೆ ನಿನದೆ ಮಾತು
                                               ಯಾರಿಗೂ  ನುಡಿದಿಲ್ಲ  ಇದಾಗದ ಮಾತು                                      
ಹತ್ತಾರು ಕೈಗಳಿಗೆ ನಿನಾಗಿದ್ದೆ ಆಸರೆ
ಇಂದಿಲ್ಲವಾಗಿದೆ  ನಿನ್ನಾಶ್ರಮಕಾಸರೆ


                                              ವಿಧಿಯಂತಹದು ಕ್ರೂರ
                                              ನಿನ ಬಾಳ ಹೊಸೆಯಿತದು ದುರ್ಭರ
ದಿಟವಾಯಿತು
ಶಿವನು ಬಿಡನು ನಾಲ್ಕು ದಿನ ಹೆಚ್ಚಿಗೆ
ತನಗಾದವರ ಮೆಚ್ಚುಗೆ

                                            ಬಾರದೂರಿಗೆ ನಡೆದು ಬಿಟ್ಟೆ
                                            ಮರಳಿ ಬಾರದಲ್ಲೇ ಕುಳಿತು ಬಿಟ್ಟೆ

ಬರಿ ನೆನಪೇ ನೀನಿನ್ನೂ ಜೊತೆಗೆ
ನಿನ ನಗುವೊಂದೆ  ಬದುಕಿನುದ್ದಕು ಸಾಕೆಮೆಗೆ
                                           
                                                   

Wednesday, November 30, 2011

ಮರೆಯದ ದಿನವಿದು














ಮರೆಯದ ದಿನವಿದು
ಮಾಸದ ಕ್ಷಣವಿದು
ಕಾಣದ ದೃಶ್ಯವಿದು
ನೋಡದ ನೋಟವಿದು

                                ತಾಯ್ತನದ ಒಲವಿದು
                                ಹೆಣ್ತನದ ರೂಪವಿದು
                               ಹಸಿದವನ್ನಿಕ್ಕುವ ಕರುಳಿದು
                               ಅನ್ನಪುರ್ಣೆಯ ದರುಶನವಿದು

ಅದಕ್ಕೆ ಹೇಳುಹುದು
                               ಕಣ್ಣರಿಯದಿದ್ದರು  ಕರುಳರಿಯದೆ
                               
                             













ಸ್ನೇಹದ ಗೂಡು

snehada ಗೂಡು



















                               ಕುಸುಮವರಳಿ ಸೂಸುವ ಸುಗಂದ
                              ಪಸರಿಸುವದ್ಷ್ಟೆ ಗಾಳಿಯಲಿ
                              ದುಂಬಿ  ಸುಮವ ಮುತ್ತಿಕ್ಕಿ
                              ಜೆನ ಕದ್ದೊಯದು ಗೂಡು ಕಟ್ಟುವದು


                             
 

ಹರೆಯದ ವಯಸು














ಹರೆಯದ  ವಯಸು
ಎಂಥಹ ಸೊಗಸು
ಕರಗದ ಕನಸು
ಮರೆಯದು ಮನಸು

                          ಅಲೆದಿಹ ಊರು
                         ಮಲಗಿದ ಸೂರು
                         ಕುತುಂಡ ಅನ್ನ ಸಾರು
                         ಆಡಿದ ಮಾತು ಮರೆತವರಾರು

ಹರೆಯದ ಒಲುಮೆ
ಚಿಗುರುವ ಕುಲುಮೆ
ಬತ್ತದ ಚಿಲುಮೆ
ಇದೆ ಸ್ನೇಹದ ಹಿರಿಮೆ

Saturday, March 26, 2011

ಕಾಲ

   ಕಾಲ

ಹ್ವಾದದ್ನ ತರೊಂಗಿಲ್ಲ 
ಬರೋದ್ನ ನೋಡಂಗಿಲ್ಲ 
ನಡೆಯೋದ್ನ್ ತಿದ್ದೊಕಾಗಂಗಿಲ್ಲ 
ಹಿಂಗಿದ್ದ, ಜೀವಕ್ಕ ನಾಳೆನ್ನೋ
ಚಿಂತಿನ ಯಾಕ ಹಚ್ಗೊತಿ.

ಹೂ

   hoo 

||ಮುಂಜಾನೆ ಹುಟ್ಟಿ
ಸಂಜೀಕ ಸಾಯೋ
ಹೂವಾ... ಮನಸ್ಸಿಗೆಷ್ಟು
ಮುದ ನಿಡತ್ಯತಿ||
ಭಾಳ ಪೂರಾ ಬದಕೋ
ಮನುಷ್ಯಾ ನೀನು
ಬ್ಯಾರ್ಯಾವರಗ್ಯಾಕಿಷ್ಟು
ಸಂಕಟ ಕೊಡ್ತಿ.

Friday, March 25, 2011

ದೀಪ

              ದೀಪ

||ಕತ್ತಲ ಕೊನ್ಯಾಗೊಂದು
ದೀಪ ಹಚ್ಚಿಟ್ರ ಎಷ್ಟ ಬೆಳಕ
ಚೆಲ್ಲತ್ಯತಿ....||
ನನ್ ಎದೆಯಾಗೊಂದು
ದೀಪ ಹಚ್ಚಿಟ್ಟು ನೋಡ...
ನಿನ್ ಬಾಳ ತುಂಬಾ ಬೆಳಕ ಚೆಲ್ತಿನಿ..
ಆ ಚಂದ್ರನ್ ಮುಖದಾಗೂ
ನಾಚ್ಕೆ ತರಸ್ತೀನಿ...

ನಿನ್ ಗುಲಾಬಿ

 ನಿನ್ ಗುಲಾಬಿ

||ನಿನ್ ತುರುಬಿನೊಳಗಿನ ಗುಲಾಬಿ
ಎಷ್ಟ ಚಂದ ಅಯ್ತಿ...||
||ಕಿತ್ತಿ ನನ್ನ ಎದೆಯಾಗ
ನಡಬೇಕನಸ್ಯತಿ||
ಹುಡುಗಿ...
||ಕಿತ್ತುವಾಗ|| ಹುಡುಗಿ
ಹೂ ಬಾಡಿದರ....
||ನನ್ ಎದೆಯಾ
ಒಡದ್ಹೊಕ್ಯತಿ..||

ನಿನ್ ಕಣ್

ನಿನ್ ಕಣ್

  ನೀ ನೋಡಬ್ಯಾಡ ಹಂಗ
  ಕಣ್ಣಾಗ ಕಣ್ಣಿಟ್ಟ....
  ನಿನ್ ಕಣ್ ಒಂದ ಪ್ರೀತಿ
  ಕೊಳ ಇದ್ಹಂಗ್ಯತಿ.....
 ಈಜ ಬಾರದ ನಾನು ಜಾರಿ   
 ಬಿದ್ನೆಂದ್ರ.....
ಎದ್ಬರೋದ ತ್ರಾಸಾಗತ್ಯತಿ. 

Saturday, March 5, 2011

ಹೊಂಟಹೋದೆನ

ಕಬ್ಬಿನ ಬಿಲ್ಲಿನ ಹಿಂಡಿ ರಸ ತಗದ್ಹಾಂಗ
ಸಿಪ್ಪೆ ಸುಲಿದು ಹಣ್ಣು ತಿಂದ್ಹಾಂಗ
ಮ್ಯೆ ತುಂಬಿದ ಹೂ ಬಳ್ಳಿನ  ಹೂವ ಕಿತ್ತು
ನಿಡಮಬರ   ಮಾಡಿ ಬಿಟ್ಹಂಗ
ನನ್ ಬದುಕಿನ ಪ್ರೀತಿನೆಲ್ಲ ಹೀರಿ
ಹೊಂಟಹೋದೆನ.

ದೀಪ


||ಒಲಿಯಾಗ  ಎಷ್ಟ ಕಟ್ಟಿಗೆ ಇಟ್ಟು 
ಬೆಂಕಿ  ಹಚ್ಚಿದ್ರುನು
ಸುಟ್ಟು ಬೂದಿಯಾಗ್ತ್ಯತಿ||

                   ನನ್ನೆದೆಯ್ಯಾಗಾ ಎಷ್ಟ ಪ್ರೀತಿ ಇಟ್ಟ
                   ಸುಟ್ಟರನು ಅದು ಹೆಚ್ಚು ಬೆಳಕಾ ಕೊಡತ್ಯತಿ
                   ನೀ ಹೋಗೊ ಹಾದಿಗೆ ಬೆಳಕಾ ಚೆಲ್ತ್ಯೆತಿ.
                  

ಮುತ್ತು


ನೀರನ್ಯಾಗ ಹುಟ್ಟಿದ ಅಲೆ
ದಡಾನ ತಬ್ಬಿಕೊಳ್ಬೇಕ
         
             ಮೂಡಣದಾಗ  ಮೂಡೊ ಸೂರ್ಯ
             ಕತ್ಲನ್ನ ಅಪ್ಪಿಕೊಳ್ಬೇಕ

ಬಳ್ಯಾಗ ನಕ್ ಹೂವಿಗ
ದುಂಬಿನ ಮುತ್ತಿಕ್ಬೇಕ

            ಹಂಗ ನಿನ್ ತುಟಿಯಾಗ ಹುಟ್ಟೊ ಮುತ್ತು
            ನನ್ ಕೆನ್ನೆನ  ತಟಬೇಕಂತ

ಯಾಕೆ ಗುರುಗಳೆ

           yaake  gurugale

ಯಾಕೆ   ಗುರುಗಳೆ
ಯಾಕಿಷ್ಟು
ಅವಸರವಾಯ್ತು

                          ಹೆತ್ತವರ ತೊರೆದು
                          ಮಡದಿ ಮಕ್ಕಳ ಮರೆತು
                          ಭವ ಬಂಧನದಿಂದಾಚೆ
                          ನಡೆದಿರಿ....... ಅಲ್ಲವೆ

ಸಹ ಗುರುಗಳನು ಮರೆತು  
ವಿಧೇಯ ವಿಧ್ಯಾರ್ಥಿಗಳ ಮರೆತು
ಅಕ್ಷರ ಲೋಕದಿಂದಾಚೆ ದೂರ
ಸಾಗಿದಿರಿ..... ಅಲ್ಲವೆ

                           ನಿಮ್ಮ ಆದರ್ಶಗಳನೆದೆಗೊತ್ತಿ
                           ತಾವು ಹಾಕಿದ ದಾರಿಯಲಿ
                           ನಡೆಯುವೆವೆಂದೆಂದು
                           ಮರೆಯದಿರಿ...... ಸಾಕಲ್ಲವೆ.

Thursday, February 3, 2011

ಹೆಣ್ಣು




















ಹೆಣ್ಣು-ಮಣ್ಣು

ದಶಾಸುರನ ಧನಕ್ಕಾಗಿ
ಸೀತೆಯನು ಮಣ್ಣಿಗೆ ಬಿಟ್ಟೆ
      ಶತಸೋದರರ ಸಂಹಾರಕ್ಕಾಗಿ
      ಅಯೋನಿಜೆಯನು ಪಾಂಡವರ
      ಜೂಜಿಗೆ ಬಿಟ್ಟೆ
ರಾಮನ ವನವಾಸಕೆ ದಶರಥನ
ಹಿಂದೆ ಕೈಕೆಯನು  ಬಿಟ್ಟೆ

ಮದನ ಪುರಾಣ

               ಮದನ ಪುರಾಣ

ಮುಕ್ಕಣ್ಣನ ಕಣ್ಣಿಗೆ ಗುರಿಯಾಗಿ
ಮರುಜನ್ಮ ಪಡೆದವನು ನೀನು
        ಲಂಕಾಸುರನ ಎದೆಯಲ್ಲಿ ಹುಟ್ಟಿ
        ಲಂಕೆಯನೆ ದಹಿಸುವಂತೆ ಮಾಡಿದವನು ನೀನು
ಶೂರ್ಪಿಯ ಮನವನ್ನು ಹೊಕ್ಕು
ಅವಳ ನಾಸಿಕವೇ ಕತ್ತರಿಸುವಂತೆ ಮಾಡಿದೆ ನೀನು
ಇಷ್ಟೆಲ್ಲಾ ಇದ್ದರೂ
       ಶಿವಶರಣೆ ಅಕ್ಕನ ಚಿತ್ತವನು ಕೊಂಕಿಸದೆ ಸೋತೆ
       ತೇಜೋಸುತನಾದ ವಿವೇಕಾನಂದನ ಮನಸ್ಸನ್ನು ತಟ್ಟದೆ ಹೋದೆ

ನಿರಂತರ

             ನಿರಂತರ
ಅಲೆಯ ಮೇಲೊಂದು ಅಲೆ   
ಸಾಗಿ ಬರುತಿಹುದು ತಡೆಯಿಲ್ಲದೆ
        ಚಿಗುರಿನ ಮೇಲೆ ಚಿಗುರು
        ಬರುತಿಹುದು ಯಾವ ಬಂಧವಿಲ್ಲದೆ
ಹೂವಿನ ನಂತರ್ ಹೂವೊಂದು
ಅರಳುತಲಿಹುದು ದುಂಬಿಗು ಕಾಯದೆ
        ಕವಿತೆಯ ಮೇಲೊಂದು ಕವಿತೆ
        ಹುಟ್ಟುತಿಹುದು ಯಾವ ಭಾವನೆಗೂ ನಿಲುಕದೆ
ಜೀವದ ಮೇಲೆ ಜೀವ ಹುಟ್ಟುತಿದೆ
ಸಾವಿನ ಭಯವಿಲ್ಲದೆ ಹಾಗೆ
         ಮರಣದ   ನಂತರ ಮರಣ
         ಬರುತಲಿದೆ ಬದುಕುವ ಆಸೆಯಿಲ್ಲದೆ
ಬದುಕಿನ ನಂತರ ಬದುಕು
ಹುಟ್ಟುತಿದೆ ಮರಣಕು ಅಂಜದೆ

ನನ್ನವಳು

                         ನನ್ನವಳು

ನನ್ನವಳು ನನ್ನೆದೆಯನುರಾಗದ ಗೀತೆಯಂತವಳು
ಮುಂಗಾರಿನ ಮಿಂಚಂತವಳು
ಮಾಗಿಯ ಚಳಿಯಂತವಳು
ಸ್ವಾತಿಮುತ್ತಿನ ಮಳೆಯಂತವಳು
ನನ್ನವಳು
                                      ವಸಂತ ಕೋಗಿಲೆಯ ಗಾನದಂತವಳು 
                                      ಗರಿಬಿಚ್ಚಿ ಕುಣಿಸುವ ನವಿಲಿನಂತವಳು 
                                      ಗರಿಗೆದರಿ ಹಾರುವ ಹಕ್ಕಿಯಂತವಳು
                                      ಜುಳು ಜುಳು ಹರಿಯುವ ಜರಿಯಂತವಳು 
                                      ನನ್ನವಳು  
ನನ್ನವಳು ನನ್ನ ಬಾಳಲಿ ಇನ್ನೂ
ಅರಳದ ಪ್ರೀತಿಯ ಮೊಗ್ಗು                                    
ನನ್ನೆದೆಯ ದುಂಬಿಗೆ ಒಲವಿನ
ಮಕರಂದವ ಸೂಸುವ  ಪ್ರೇಮದ
ಸುಮರಾಶಿಯಂತವಳು
ನನ್ನವಳು

ಏಟು

             ಪ್ಯಾಂಟು-ಏಟು 

ಇಂದಿನ ಹುಡುಗಿಯರು ಹಾಕುತ್ತಾರೆ ಪ್ಯಾಂಟು
ಅದ ನೋಡಿ ಬಿಳದಿರು ಅವರಿಗೆ ನೀ  ಗಂಟು
ಕಟ್ಟಬೇಕಾದಿತು  ಅವರ ಕೊರಳಿಗೆ ಮೂರು ಗಂಟು
ತಲೆಯಲ್ಲಿ ಎದ್ದವೋ ಮಗನೆ ಮನೆಯಲ್ಲಿ
ಅವಳು ಕೊಡುವ ಲಟ್ಟಣಿಗೆಯ ಏಟು

ನತ್ತು

                  ನತ್ತು
ಸುತ್ತದಿರು ಆ ನತ್ತಿನ ಸುತ್ತ
ಆ ನಡುವಿನ ಸುತ್ತ
ಕಾಲ್ಗೆಜ್ಜೆಯ ಸುತ್ತ
                        ನತ್ತು ಕಟ್ಟಿತೋ ನಿನ್ನ ಚಿತ್ತದೊಳಗೆ
                        ಗೆದ್ದಿಲೆ ಇಲ್ಲದ ಹಾವಿನ ಹುತ್ತವನು
                       ಹುತ್ತದೊಳಗಿನ ಹಾವು ನೀನಾಗಿ
                        ನಿನ್ನಾಡಿಸುವ ಪುಂಗಿ ಅವಳಾಗುವಳೋ ಪುಟ್ಟ
                         ಸುತ್ತದಿರು ಆ ನತ್ತಿನ ಸುತ್ತ
                        

Wednesday, February 2, 2011


ಗದಗ ಜಿಲ್ಲಾ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನ -೧೧

ಚೆಸ್ಸು ೪೫೦

     ಚೆಸ್ಸು-ಟೈಂ ಪಾಸು
ನಿಮಗಾಗಿಯೆ ತಂದದ್ದು ಈ ಚೆಸ್ಸು
ನಿನ್ನೆ ಕರೆದರೆ ನೀವಂದಿರಿ ಪಿಸ್ಸು
ನಿಡದಿರಿ ಇದಕ್ಕೆ ಗೇಟ್ ಪಾಸು
ಕಳೆಯುವದಾದರು ಹೇಗೆ
ಇಂದು ನಾಳೆಯ ಟೈಂ ಪಾಸು

ಹುಷಾರು

                          ಹುಷಾರು
ಅವರು ಕೊಲ್ಲುತ್ತಾರೋ ಮಗನೆ ಕಣ್ಣಿನ ಬಾಣದಲಿ
ನೀ ಹುಡುಕದಿರು ಅವರನ್ನು ಷಾಪಿಂಗ ಮಾಲಿನಲಿ
ಅವರ ಹಿಂದಲೆದು ಹುಚ್ಹಾಗದಿರು ಈ ಪ್ರೀತಿಯಲಿ
ಹೀಗೆಯೆ ಹೋದರೆ ನಿನ್ನನ್ನು ನೋಡಬೇಕಾದಿತು
ಹೂ ತುಂಬಿ ತುಳುಕುವ ಪಾರ್ಕಿನಲ್ಲಲ್ಲ
ಸಿಂಗರಿಸಿದ ಕಲ್ಯಾಣ ಮಂಟಪದಲ್ಲಲ್ಲ
ನಿನ್ನಂಥವರ  ಮಾವನ ಮನೆಯಾದ ಮೆಂಟಲ್ ಆಸ್ಪತ್ರೆಯಲಿ

ಬೊಕೆ

                 ಯಾವ ಬೊಕ್ಕೆ
ನೀ ಬಿಳದಿರು ತಮ್ಮ ಅವಳ ಪ್ರೀತಿಯ ತೆಕ್ಕೆಯಲಿ
ಕೊಟ್ಟು ಕಳಿಸದಿರು ನಿನ್ನ ಪ್ರೀತಿಯನು ಬೊಕ್ಕೆಯಲಿ
ಇಂದಿನ ಕನ್ಯೆಯರು ಬಲು ಹುಷಾರು ಈ  ಪ್ರೀತಿಯಲಿ
ಎಸೆದಾರೋ ತಮ್ಮ ನೀ ಕೊಟ್ಟ ಬುಕ್ಕೆಯನು ಕಸದ ತೊಟ್ಟಿಯಲಿ

ಮಸಾಲೆ ೩೭೦

                      ಮಸಾಲೆ
ಹೋಟೆಲೊಂದರಲ್ಲಿ ನನ್ನವಳೊಂದಿಗೆ
ಕುಳಿತಿದ್ದ ನಾನು ಪಕ್ಕದಲ್ಲಿದ್ದ ಚೆಲುವೆಯನು
ನೋಡುತ್ತಾ ಮಾಣಿಗೆ ಹೇಳಿದೆ 'ಎರಡು ಮಸಾಲೆ'
         ಇದ ಕಂಡು ನನ್ನವಳು ಇನ್ನು ಹತ್ತಿರ ಬಂದು
         ಹೇಳಿದಳು 'ತಾವಿಗ ಮನೆಗೆ ಬಂದರೆ ನಿಮಗರಿತಿನಿ ಮಸಾಲೆ'

ಮಲ್ಲಿಗೆ ತೂಕ

                   ಮಲ್ಲಿಗೆ ತೂಕ
ನಮ್ಮವನ ಮನದರಸಿ ಮಲ್ಲಿಗೆಯ ತೂಕ
ಆದ್ರ ನೋಡಾಕದಾಳ ಮೈಸೂರ ಪಾಕ
ಇಂವ ಹತ್ರ ಹೋದ್ರ ಕೊಡತಾಳ
ಕಪಾಳಕ್ಕೆರಡು ಕರೆಂಟ್ ಶಾಕ

ನಾನಾರು..

                                           ನಾನಾರು......?
ನಾನೇನು ಸಭೆಯೋಳು ಬಿಲ್ಲನು ಮುರಿದು
ಸೀತೆಯನು ಗೆದ್ದ ರಾಮನಲ್ಲ
                                 ಸೀತೆಗಾಗಿ ಮಾಯಾ ಜಿಂಕೆಯ
                                 ಬೆನ್ನು ಹತ್ತುವ ಹುಚ್ಚು ಗಂಡನಲ್ಲ
ದ್ರೌಪದಿಯ ಮುಡಿಯನ್ನು ಕಟ್ಟಲು
ದುಶ್ಯಾಸನನ ಎದೆಯನು ಬಗೆದ
ಭೀಮನಲ್ಲ
                                   ಏಳಿ ಎದ್ದೇಳಿ, ಎಂಬ ಅಮೃತವಾಣಿಯ
                                   ಕರ್ತ್ರು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ  ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
                                   ಕೋಟೆ ಕೊತ್ತಲುಗಳಿಗೆ ರಕ್ತದ ಕಾಲುವೆಯನು
                                   ಹರಿಸಿದವನು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ 
ನೀಡುವೆನೆಂದವನು ನಾನಲ್ಲ
                               ಹರಿವ ನೀರಿಗೆ ಗೋಡೆಯ ಕಟ್ಟಿ ಬಂಜರು ನೆಲವನು 
                                 ಹಸಿರಾಗಿಸಿದವನು ನಾನಲ್ಲ 
ಕಡಲನು ಹೊಕ್ಕು ಚಿಪ್ಪನು ಹೆಕ್ಕಿ ಮುತ್ತನು ಸೂಸಿದ 
ಕುಶಲನು ನಾನಲ್ಲ 
ನಾನಾರು.....? 
                                 
                                     

Tuesday, February 1, 2011

ಯಾರದು ತಪ್ಪು

ಯಾರದು ತಪ್ಪು

ಸುಮವರಳಿ ಗಂಧವ ಸೂಸಿದೊಡೆ
ಬಾಲೆಯು ಕಿತ್ತು ಮುಡಿಗೆರಿಸಿಕೊಂಡರೆ
ಯಾರದು ತಪ್ಪು
ಕುಸುಮವರಳಿ ಗಂಧವ ಸೂಸಿದುದು ತಪ್ಪೆ
ಮುಡಿಯ ಸಿಂಗಾರಕೆ ಸುಮವನು ಕಿತ್ತಿದ
ಬಾಲೆಯ ತಪ್ಪೆ
                                           ಭಾನನು ಜಾರಿದ ಬಿಂದು ಧರೆಯನು ತಟ್ಟಿ
                                           ಲವಣದ ಒಡಲನು ಸೇರಿದರೆ
                                           ಯಾರದು ತಪ್ಪು
                                           ಭಾನನು ತೊರೆದು ಭುವಿಯನು ತಣಿಸುದುದು
                                           ಹನಿಯ ತಪ್ಪೆ | ಉಕ್ಕಿ ಉಕ್ಕಿ ಬರುವ ಹನಿಯ
                                           ರಭಸವ ತನ್ನೊಡಲೊಳಗೆ ಸೇರಿಸಿಕೊಳ್ಳುವ ಲವಣದ ತಪ್ಪೆ
ಕತ್ತಲೆಯ  ಕಳೆದು ಬೆಳಕನು
ಚೆಲ್ಲುವ ದೀಪಕೆ ಸಂಜೆಯ
ತಂಗಾಳಿ ಸೋಕಿ ನಂದಿದರೆ
ಯಾರದು ತಪ್ಪು
ಹಾದಿಯ ಅಂಧತೆ ನೀಗಿಸಲು  
ಬೆಳಕನು ಹರಿಸುವದು ದೀಪದ ತಪ್ಪೆ
ತಂಪಾಗಿ ಬೀಸಿದರು ಗಾಳಿಯು ದೀಪವ
ನಂದಿಸಿದರೆ ಯಾರದು ತಪ್ಪು

ಕಾರ್ಗಿಲ್

ಬಿಸಿ ನೆತ್ತರಿನ
ಹಸಿದೊಡದಲಿನ 
ಭರತೋದ್ಭವ ಪುರುಷ
ಸಿಂಹಗಳಿಹರಿಲ್ಲಿ
                                ಇಡದಿರೊಂದಡಿಯನು
                               ಎದೆಬಗೆದೊಗೆಯುವರು
                               ಅಂಧಕಾರಕಂಧಕದೊಳಗೆ

ಮರೆಯದಿರಿ ಪಾಪಿಗಳೇ
ಪಾಪದ ಫಲಕುಂಡಡುಗೆಯನು
ಬಿತ್ತದಿರಿನ್ನು ಭಯೋತ್ಪಾದಿಸೋ
ಬೀಜಗಳನು

                               ಕರ ಜೋಡಿಸಿರುತ್ತಮ ಭಾಂದವ್ಯಕೆ
                               ಮಡಿಲ ಮರಿಗಳಡಿಯಿಡುವ ನೆಲವ
                               ಹಸಿರಾಗಿಸೋಕೆ

ಕೋವಿಯ ಕಾವದು
ಸುಡದಿರಲಿ ತನುವನು
ಮದ್ದಿನ ಸದ್ದೊಳು
ಲಿನವಾಗದಿರಲಿ  ಮನವದು

                                ಸಾಕಿನ್ನು ಮರೆಯೋಣ
                                ನೋವುಂಡ ಈ ದಶಕಕ್ಕೆ    
                                ಹರಿಸುವ ಪ್ರೀತಿಯ ಹೊಳೆಯನು
                                ನೆತ್ತರನುಂಡು ಬರಡಾದ ಈ ಧರಿಣಿಗೆ

ನಾವು ನೀವುಗಳೆಲ್ಲಾ ಭರತ ಸಂಜಾತರೆ
ಬನ್ನಿರಿ ಸಾಗೋಣ ವಿಶ್ವ ಶಾಂತಿ ಪಥದತ್ತ
ಒಂದೊಂದೆ  ಹೆಜ್ಜೆಯನಿಡುತ  







Thursday, January 27, 2011

ಹಾಲಂತ ಬೆಳದಿಂಗಳು



ಹಾಲಂತ ಬೆಳದಿಂಗಳೋಳು 
 ಹಾಳಾದ್ದು ನಿನದೆ  ನೆನಪು  

                      ಹೂಟ್ಟೆಗೆ ಹಸಿವಿಲ್ಲ|  ಕಣ್ಣಿಗೆ ನಿದ್ದೆಯಿಲ್ಲ      ಮನಸಿಗೆ ಹಿತವಿಲ್ಲ | ಪಕ್ಕದಲಿ ನೀನಿಲ್ಲ

ಹಾಲಂತ ಬೆಳದಿಂಗಳೋಳು  
 ಹಾಳಾದ್ದು ನಿನದೆ  ನೆನಪು                                  

Monday, January 24, 2011


ನನ್ನ ಚಿತ್ತ ಬರವಣಿಗೆಯತ್ತ