Wednesday, September 21, 2016

ನಿನ್ನಿಂದ

ನಿನ್ನಿಂದ ಎಲ್ಲ ಕಳೆದುಕೊಂಡೆ
ಹಿನ್ನೀರಿಗೆ ಹಾಳಾದ ಗದ್ದೆಯಂತೆ
ಹಣ, ಗುಣ, ಊಟ, ನಿದ್ದೆ
ಸಮಯ, ದುಡಿಮೆ, ಎಲ್ಲರೊಂದಿನ
ಒಡನಾಟವನೆಲ್ಲವ ಹರಿಯಬಿಟ್ಟೆ
ಬಂಜರು ನೆಲಕೆ ನೀರುಣಿಸಿದ ಹಾಗೆ

ನಾನೇಣಿಸಿರಲಿಲ್ಲ ನೀನು ಕೋಗಿಲೆ
ರೂಪದ ಕಾಗೆಯಂದು, ಹಾಲಿನ
ರೂಪದ ಸಿಹಿವಿಷವೆಂದು ನೋಡು...
ಹಣ, ಗುಣ ನಾ ಮರಳಿ ಗಳಿಸಬಲ್ಲೆ
ಆದರೆ ನನ್ನ ಸಮಯ, ನನ್ನವರೊಂದಿನ
ಒಡನಾಟದ ಕ್ಷಣಗಳನ್ನ ಗಳಿಸಬಲ್ಲೇನೇನೆ?

ನನಗನ್ನಿಸುತಿದೆ ಮರೆಯದ ರೂಪವ
ತೊರಿಸಿ, ಮಾಸದ ಕಹಿ ನೆನಪುಗಳ
ಉಳಿಸಿಬಿಟ್ಟೆ, ನಿನ್ನಂದದಷ್ಟು ನಿನ್ನ
ಗುಣವು ಮೌಲ್ಯವಾಗಿದ್ದರೆ ಎಷ್ಟು
ಸುಂದರವಾಗುತ್ತಿತ್ತು ನಮ್ಮಿಬ್ಬರ
ಬದುಕು....

ಮರೆಯಲಾಗದ, ಅಳಿಸಲಾಗದ, ಹೇಳಲಾಗದ
ಸಾವಿರಾರು ನುಡಿಗಳ ನನ್ನೆದೆಯ ಗರ್ಭಕೆ ತುರುಕಿಬಿಟ್ಟು
ನಮ್ಮಿಬ್ಬರ ಬಂಧನದ ಮಾತನ್ನು ಮಿಸುಕಾಡಲು ಬಿಡದಂತೆ 
ನೋವಿನ, ಮೌನದ ಬೀಗವ ಹಾಕಿಬಿಟ್ಟೆ ನನ್ನದರಕೆ
ಕರಗದ ಹಗಲನು, ಮಲಗದ ಕತ್ತಲನಷ್ಟೆ ಬಟ್ಟುಬಿಟ್ಟೆ 
ನನ್ನ ಬಾಳಿಗೆ

No comments:

Post a Comment