Wednesday, September 28, 2016

ನೀ ನೀಡಿದ ನೋವು

ನೀ  ನೀಡಿದ ನೋವು ಹನಿ ಹನಿಯ
ಜಡಿಮಳೆಯಂತೆ ನನ್ನೆದೆಯಂತರಂಗದ
ಪಾತಾಳದ ಕೆಸರಾಗಿದೆ, ಎಷ್ಟೆ ನುಂಗಿದರು
ಬತ್ತದ ಸೆಲೆಯಾಗಿದೆ, ಅದನ್ನೇಷ್ಟೆ
ಮರೆಯಲೆತ್ನಿಸಿದಾದರೂ ಒಣಗದ
ರಾಡಿಯಂತಾಗಿದೆ

ಎಷ್ಟೋ ಯತ್ನಿಸಿದೆ ನಿನ್ನ ನಗುವಿನ
ಮಾತಿನ, ಮುತ್ತಿನ, ಮೌನದ,
ಮುನಿಸಿನ, ಮುಂಗೋಪದ ಹನಿಗಳನೆಲ್ಲವ 
ಮತ್ತೆ ಒಸರದಂತೆ ಬತ್ತಿಸಲು ಆದರದಾಗಲೇ ಇಲ್ಲ
ತೂತು ಬಿದ್ದ ತೆಪ್ಪದಂತಿನ್ನೂ ಬಸೆಯುತ್ತಲೇಯಿದೆ

ಮೊಗ್ಗು ಹೂವಾಗುವ ಮುನ್ನ ಬಾಡಿದಂತೆ
ಕಾಯಿ ಹಣ್ಣಾಗುವ ಮೊದಲೇ ಉದುರಿದಂತೆ
ಹಾಲು ಮೊಸರಾಗುವ ಮುನ್ನವೇ ವಡದಂತೆ
ನನ್ನ ಪ್ರೀತಿಯು ಬಲಿಯುವ ಮೊದಲಿಗೆ
ಕತ್ತರಿಸಿಬಿಟ್ಟೆ ರಂಬೆಯಂತೆ

ದೇವರಿರದ ಗುಡಿಯ ಸುತ್ತಿ ಸುತ್ತಿ
ಕಾಲು ನೋವು ಬಂದಂತೆ
ರಸವಿರದ ಹೂವುನು ಸುತ್ತಿ ಸುತ್ತಿ
ದುಂಬಿಯ ರೆಕ್ಕೆ ಸೋತಂತೆ
ಪ್ರೀತಿಯನರಿಯದ ನಿನ್ನ ನಾ ಸುತ್ತಿ ಸುತ್ತಿ
ಬದುಕಿರುವೆನಲ್ಲೆ  ಸತ್ತಂತೆ

No comments:

Post a Comment