Thursday, March 31, 2022

ರಂಗೀ

ಎದುರಾದಾಗಲೆಲ್ಲ
ಮೌನವನ್ನೆ
ಹೊತ್ತು ನಿಲ್ಲದಿರು
ರಂಗೀ...
ಆಡದೆ ಉಳಿದಂತಹ
ಎದೆಯಾಳದ
ಮಾತುಗಳು ಸಾವಿನ
ಬಿಕ್ಕಳಿಕೆಯನ್ನು ಬಿಕ್ಕ
ತೊಡಗುತ್ತವೆ.

Sunday, March 27, 2022

ರಂಗೀ

ದೃಷ್ಟಿಯಾಗಬಹುದೇನೊ ?
ಜಿಂಕೆ ಕಂಗಳ
ಚೆಲುವೆಗೆ
ರಂಗೀ...
ಇರಲಿಬಿಡು...
ಕಣ್ಣಂಚಿನ ಕೊನೆಯಲ್ಲಿ
ಚೂರು ಹೆಚ್ಚಿಗೆ
ಇದೆಯಲ್ಲ
ಕಾಡಿಗೆ!!

Saturday, March 26, 2022

ಗೆಳೆಯ

ಬರಿ ನಿದಿರೆಯಲ್ಲೆ
ಬಂದು, ಕನಸುಗಳಿಗೆ
ಬಣ್ಣವ...ತುಂಬಿ ಹೋದರೆ
ಹೇಗೆ ಗೆಳೆಯ!!
ಬರುವೆಯೆಂದೊ...?
ಖಾಲಿಯಾಗಿರುವ ಅದರದ
ಕೊಡಗಳಿಗಳಿಗೆ ಜೇನ
ತುಂಬಲು ಇನಿಯ!!

Wednesday, March 9, 2022

ಮಾತನ್ಯಾಗ ಹೇಳಲಿಕ್ಕ ಹೋತು

ಮಾತನ್ಯಾಗ ಹೇಳಲಿಕ್ ಹೋತು
ನಗುನ್ಯಾಗರ ಒಪ್ಗಿ ಕೊಡಬೇಕಿತ್ತಿಲ್ಲ!!
ಹೋಗುವಾಗ ಹೊಳ್ಳಿ ನೋಡ್ದಿದ್ರೇನಾತು?
ಕೊಟ್ಟ ಹೂವಾನ ಮುಡ್ಕೊಂಡಿದ್ರ ಸಾಕಿತ್ತಿಲ್ಲ!!

ಕಳ್ಸಿದ ಪತ್ರಾನ ಓದ್ಲಿಲ್ಲಂದ್ರೇನಾತು?
ಕಣ್ಣಾಗ ಮಾತಾಡ್ಸಿದ್ರ ಸಾಕಿತ್ತು!!
ಕಳ್ಸಿದ ಮೆಹಂದಿನ ಹಚ್ಗೊಲಿಲ್ಲಂದ್ರಾತು
ನಾಚ್ಕಿಲೆ ರಂಗೇರಿದ ಕೆನ್ನಿ ತೋರ್ಸಿದ ಸಾಕಿತ್ತು!!

ಊರ ಜಾತ್ರಿಗೆ ಬರದಿದ್ರ ಏನಾತು?
ಕೊಟ್ಟ ಮುತ್ತಿನ ಸರಾನ ಹಾಕ್ಕೊಂಡಿದ್ರ ಸಾಕಿತ್ತು!!
ಹಬ್ಬಕ್ಕ ಮಾಡಿದ ಮಾದ್ಲಿ ತಿನ್ನದಿದ್ರ ಏನಾತು ?
ಬೆಲ್ಲದಂತಾವು ನಾಕ ಮಾತಾಡಿದ್ರು ಸಾಕಿತ್ತು!!

ತುಪ್ಪದಾಗ ನೆನಿಸಿಟ್ಟ ಉತ್ತತ್ತಿಯಂತ ಸಕ್ರಿ ಗಲ್ಲಾದವು!
ಮುಖ ಉದಿಸಿಕೊಂಡ ಕುಂದ್ರೊದ ಏನ್ ಚೆಂದ ಹೇಳು?
ಬ್ಯಾಸ್ಗಿ ಬಿಸ್ಲಿಗೆ ಕುಂತ ಬೇವಿನಕಟ್ಟಿ ಒಣಗಿ ಹೊಂಟಾನಿಲ್ಲೆ
ಲಿಂಬಿ ಪಾನ್ಕನರ ಮಾಡ್ಕೊಂಡ ಬಂದು ಕುಡ್ಸಬಾರದಿತ್ತನು!!



Tuesday, March 8, 2022

ರಂಗೀ

ಉಳಿಸಿಕೊಳ್ಳುವ
ಮಾತೆಲ್ಲಿ ಬಂತು
ರಂಗೀ...
ಗಳಿಸಿಕೊಳ್ಳುವ ಭರದಲ್ಲಿ
ಉಳಿಸಿಕೊಂಡವರನ್ನು
ಕಳೆದುಕೊಳ್ಳುತ್ತಾ
ನಡೆಯುತ್ತಿಲ್ಲವೆ ಇಲ್ಲಿ!!

Monday, March 7, 2022

ಗೆಳೆಯಾ

ಈ ದೇಹದ
ಹಸಿ- ಬಿಸಿ ಕಾಮನೆಗಳೆ 
ಇನ್ನೂ... ಆರಿಲ್ಲ!!
ನೀನಾಗಲೆ... ಮದ್ದಿಗೆ
ಸಿಕ್ಕು ಉರಿದು ಹೋದೆಯಲ್ಲ!!
ಗೆಳೆಯಾ...
ನಾನೀಗಿಲ್ಲಿ ಬಿಳಿಯ ವಸ್ತ್ರವನ್ನು
ತೊಟ್ಟುಕೊಂಡು ಕುಳಿತಿರುವೆ!!
ಅಲ್ಲಿನ್ನೂ... ಮದ್ದು-ಗುಂಡುಗಳ
ಸದ್ದೆ... ಅಡಗಿಲ್ಲವಲ್ಲ!!

ಚುಟುಕು

ಅನಾಥ... ಬಡತನ,
ಅಸಹಾಯಕತೆಯ ಜೊತೆ
ಜೊತೆಗೆ, ಕಾರ್ಕೋಟಕ
ವಿಷದಂತಹ ಹಸಿವನ್ನೇಕೆ
ಬೆನ್ನಿಗಂಟಿಸಿಬಿಟ್ಟನಾ....
ದೇವರು!!?
ಕಲ್ಲೆದೆಯ ಮನುಜರ ಮದ್ಯದಲ್ಲಿ
ನೋವು-ಅವಮಾನ
ನರಕಯಾತನೆಗಳ ಮೆಟ್ಟಿ ನಿಲ್ಲುವ
ಹಾದಿಯನ್ನು ನನಗೀಗಿನಿಂದಲೆ
ಹಾಕಿ ಕೊಟ್ಟಿರುವನೇನು?

ಗೆಳೆಯಾ

ಹೇಳಿದರೂ...
ಮುಗಿಯದಷ್ಟು ಮಾತುಗಳಿವೆ!!
ಕಿವಿಯಾಗುವ ಹೃದಯವೊಂದು
ಇಲ್ಲಿಲ್ಲವಲ್ಲ
ಗೆಳೆಯಾ...
ಒರಗಿನಿಂತ ಮರದ ಬಾಗಿಲು
ಜಾರಿದ ಕಣ್ಣ ಹನಿಗಳನ್ನು
ಇಂಗಿಸಿಕೊಳ್ಳಬಹುದಷ್ಟೆ!!
ಒರೆಸಲು ಸಾಧ್ಯವೇನು?
ನೀನಿಲ್ಲದೆ.

ಗೆಳೆಯಾ

ಹೇಳಿದರೂ...
ಮುಗಿಯದಷ್ಟು ಮಾತುಗಳಿವೆ!!
ಕಿವಿಯಾಗುವ ಹೃದಯವೊಂದು
ಇಲ್ಲಿಲ್ಲವಲ್ಲ
ಗೆಳೆಯಾ...
ಒರಗಿನಿಂತ ಮರದ ಬಾಗಿಲು
ಜಾರಿದ ಕಣ್ಣ ಹನಿಗಳನ್ನು
ಇಂಗಿಸಿಕೊಳ್ಳಬಹುದಷ್ಟೆ!!
ಒರೆಸಲು ಸಾಧ್ಯವೇನು?
ನೀನಿಲ್ಲದೆ.