Showing posts with label ಉತ್ತರ ಕರ್ನಾಟಕ ಶಾಯರಿ. Show all posts
Showing posts with label ಉತ್ತರ ಕರ್ನಾಟಕ ಶಾಯರಿ. Show all posts

Sunday, August 25, 2019

ಚುಟುಕು

ಎಷ್ಟೊಂದ ಕೆಣಕ್ತಾವಲ್ಲ
ನಿನ್ನ ಕಿವಿಯ್ಯಾಗಿನ ಜಿಮುಕಿ
ನಿನ್ ಬ್ಯಾರೆ ಬಂದ ಕಾಡ್ತಿದಿ
ರಾತ್ರಿ ಕನಸ್ನ್ಯಾಗ ಇಣುಕಿ

ಹುಡುಗ ಭಾಳ ನಾಜೂಕ
ಅದಾನ...ತಡಮಾಡಬ್ಯಾಡ ಲಡಕಿ
ಕೂಡಿ ಹಾಡಿ ಆಡೋಣ ಬಾರ
ಶ್ರಾವಣ್ದ ಜೋಕಾಲಿ ಜೀಕಿ..ಜೀಕಿ...

Thursday, May 16, 2019

ಚುಟುಕು ೮೪೩

ಸತ್ತ್ ಮ್ಯಾಲ
ನನ್ನ ಹಣಿಮ್ಯಾಗೊಂದು
ಹೂಮುತ್ತ ಕೊಟ್ರೇನ
ಬಂತ...ಹುಡುಗಿ
ಬಾಯಾಗ ಮಣ್ಣ ಹಾಕಿ
ಮುಚ್ಚಿದ ಕುಣಿ ಮ್ಯಾಲ
ಗುಲಾಬಿ ಹೂವಾ
ಇಟ್ಟಂಗಾತ್ ನೋಡ

Monday, April 15, 2019

ಶಾಯರಿ ೫೯೦

ಹಿಡಿ ತುಂಬಾ
ಒಂದಿಷ್ಟು ಮಲ್ಗಿ
ಹೂವಾ ತಂದೀನಿ...
ನಾಚ್ಗೊಂತ ನಿಂದ್ರಬ್ಯಾಡ
ನೀ... ಮನಿ ಬಾಗ್ಲ
ಸಂದ್ಯಾಗ...
ಹೊತ್ತು ಮೀರಿ ಹೊಕ್ಕೈತಿ..
ಹೊತ್ತ ಮೀರ್ತಂದ್ರ
ಹೂ ಬಾಡಿ
ಹೊಕ್ಕೈತಿ....
ಹೂ ಬಾಡಿ ಹೋದ್ವಂದ್ರ
ನಾ ಸತ್ತ್....
ಹೊಕ್ಕೇನಿ..

Tuesday, April 9, 2019

ಶಾಯರಿ ೫೮೯

ಈ ಜಿಂಕಿ
ಕಣ್ಣಾಗsss
ಎಷ್ಟರ ನಶೆ
ತುಂಬೈತಿsss
ಮಂದಿ ಹೇಳೊದ
ಖರೆ ಐತಿss
ಕಣ್ಣಾಗ ಕಣ್ಣೀಟ್ಟsss
ಈಕೀನ
ಗೆಲ್ಲೋದsss
ಬಲು ತ್ರಾಸ
ಐತಿ...

Wednesday, January 9, 2019

ಚುಟುಕು ೫೪೦

ಹಂಗೂ... ಹಿಂಗಂತ
ಯಾಕಂತೀ....
ಮಲ್ಗಿ ಮಾತನ್ಯಾಗ,
ಎದಿಯಾಗೊಂದು
ಪ್ರೀತಿ ಬೀಜ ಬಿತ್ಬೀಡು...
ಬರಗಾಲ ಎಷ್ಟ ತುಂಬಿದ್ರೇನ..
ಈ ತುಟಿಗೆ...
ನಿನ್ನ ತುಟಿಯೊತ್ತಿ
ಜೇನನ್ನ ಸುರ್ದಬಿಡು...