Showing posts with label ಕರಿಕಲ್ಲ ದ್ಯಾವ್ತಿಗೆ. Show all posts
Showing posts with label ಕರಿಕಲ್ಲ ದ್ಯಾವ್ತಿಗೆ. Show all posts

Saturday, February 2, 2019

ನಮ್ಮವ್ವ

ಕರಿಕಲ್ಲ ದ್ಯಾವ್ತಿಗೆ
ಉಡಿ ತುಂಬಿ..
ಹೆಣ್ಣ ನೋಡಾಕ
ಹೋಗ್ಯಾರು
ನೋಡವ್ವ..
ನೋಡಿದ ಹುಡ್ಗಿ
ಕಪ್ಪಾದಳನ್ಕೊಂಡು..
ಮುಡಿಯಾಕ ಹೂವಾನು
ಕೊಡ್ದ, ಎದ್ದ ಬಂದಾರಲ್ಲೊ
ನಮ್ಮವ್ವ

ಊರಾಗಿನ ಎಲ್ಲಾ
ಹೆಣ್ಣ ದ್ಯಾವ್ರಿಗೆ ಹರ್ಕಿ
ಹೊತ್ಗೊಂಡ ಬರ್ತಾರ
ಸೊಸಿ ಗಂಡ್ಮಗು
ಹಡಿಲೆಂತ
ಕೇಳವ್ವ...
ಸೊಸಿ ಆರಾಮಾಗಿ
ಹೆಣ್ಣ ಹಡದ್ರ...
ಮನೇನ ಜಗ್ಲಿ ಮ್ಯಾಲಿನ
ದೇವ್ರು...ಎರ್ಡ ದಿನ
ದೀಪ ಕಾಣೊದಿಲ್ಲಲ್ಲೊ
ನಮ್ಮವ್ವ

ಹೆಣ್ಣು ಶಕ್ತಿ ದ್ಯಾವ್ತಿ
ಅಂತಂದ ಊರ್ತುಂಬಾ
ಹುಣ್ವಿಗೆ ಪ್ರಾಣಿನ
ಬಲಿ ಕೊಡ್ತಾರು
ನೋಡವ್ವ...
ಹೊಟ್ಟ್ಯಾಗೊಂದು
ಹೆಣ್ ಜೀವಾ ಉಸರೈತಂದ್ರ,
ಪಿಂಡಾ ಬಲಿಯೊ ಮುಂಚೇನ,
ಬಲಿ ತಗೊಂಡ ಬಿಡ್ತಾರಲ್ಲೊ
ನಮ್ಮವ್ವ