Showing posts with label ಸಾಮಾಜಿಕ. Show all posts
Showing posts with label ಸಾಮಾಜಿಕ. Show all posts

Thursday, April 25, 2019

ನಮ್ಮನು ಬಿಡುವುದೇನು?

ಮುಳುಗಿಯೇ... ಹೋಗುತ್ತಿರುವ ತೆಪ್ಪಕ್ಕೆ
ಹುಟ್ಟಿನ ಹಂಗೇತಕೆ?
ಉಸಿರೆ ಭಾರವಾಗಿರುವ ಬದುಕಿಗೆ
ಊರುಗೋಲಿನ ಆಸೆಯೇತಕೆ?
ಬಂದಂತೆ ನಡೆದು ಬಂದಿದ್ದೇವೆ...ಬೇಸರಿಸದೆ
ಬಾಳು ಇಂದಿಲ್ಲಿಗೆ ತಂದು ನಿಲ್ಲಿಸಿದೆ ವಿಷವನುಣಿಸದೆ.

ಇರುವುದಾದರು ಇನ್ನೇಷ್ಟು ಹೊತ್ತು....
ಬೇಕಿರುವುದು ಒಡಲಿಗೆ ಒಂದೆ ತುತ್ತು...
ಹಿಡಿಗಾಗಿ ಕೈ ಚಾಚಲೆ ಇಂದು ಅತ್ತು...
ಹತ್ತು ಜನರಿಗೆ ಅನ್ನವಿತ್ತ ಕೈ, ಚಾಚುವುದಿಲ್ಲ ಯಾವತ್ತು..

ಜೊತೆಗೂಡಿ ಹಾಕಿದ ಹೆಜ್ಜೆಗಳೇನಿರಲಿಲ್ಲ ಸಸ್ತಾ...
ನೋವಿನೊಳಗೂ ಅರಳುತ್ತಿದ್ದೇವು ನಕ್ಕು ನಗಿಸುತ್ತಾ...
ವಿಧಿಯು ಆಗಾಗ್ಗೆ ವಸೂಲಿ ಮಾಡಿಕೊಂಡೆ ಬರುತ್ತಿದೆ ಹಫ್ತಾ...
ಉಳಿದಿರುವುದೊಂದೆ, ಅವನೇದುರಿಗೆ ಆಗಬೇಕಿದೆ
ಎಲ್ಲಾ ಚುಕ್ತಾ..

ನಾವಾರತ್ತ ಬೊಟ್ಟು ಮಾಡೋಣ
ನಾವೇ.. ಬದುಕಿ ಬಾಳಿದ ಸಮಾಜವಿದು..
ಯಾರಲ್ಲಿ ಏನಂತ ಕೇಳೊಣ
ಹಿಡಿಯಾಗಿ ಹೋಗುವ ನಮಗೆ, ಹುಡಿಯಾಗುವವುಗಳ
ಮೇಲೆ ಮೋಹವಿಲ್ಲ!!
ಹೋಗಿ ಬರುವವರೆಲ್ಲ, 'ಅಯ್ಯೋ..ಪಾಪ'ವೆಂದಾಗಲೆಲ್ಲ
ಸತ್ತು ಬದುಕಿದಂತಾಗುವುದಲ್ಲ!!!

ನಡೆಸಿಕೊಂಡವರ ಬಗ್ಗೆ ಮಾತಿಲ್ಲ...
ಅವರವರ ಕರ್ಮ ಅವರನ್ನು ಬಿಡುವುದಿಲ್ಲ,
ಇಂದು ನಮಗೆ.. ನಾಳೆ ಅವರಿಗೆಲ್ಲ....
ದಶರಥನು ಬಿಟ್ಟ ಬಾಣ ಅವನಿಗೆ ನಾಟಿದ್ದು
ಅರಿವಿಲ್ಲವೇನು?
ಅರಮನೆಯನ್ನೆ ಬಿಡದದ್ದು ನಮ್ಮನ್ನು ಬಿಟ್ಟಿತೇನು?

Monday, January 14, 2019

ಎದ್ದೇಳುವುದಾದರು ಯಾವಾಗ?

ಏಳಿ...ಏದ್ದೇಳಿ ಎಂಬ ವಿದ್ಯುತ್ ಸಂಚಾರದ
ವಾಣಿಗೆ..ಎದ್ದವರೇಷ್ಟೊ? ಬಿದ್ದವರೇಷ್ಟೊ?
ಎದ್ದು ಬಿದ್ದು ಓಡಿದವರೇಷ್ಟೊ?ಲೆಕ್ಕವನಿಟ್ಟವರಾರು?
ಕೇಳಿಯೂ...ಕೇಳದ ಹಾಗೆ ಮಲಗಿಕೊಂಡವರನ್ನು
ಎಬ್ಬಿಸುವವರಾದರು ಯಾರು ?

ಮಣ್ಣನುಳಿಸಿಕೊಳ್ಳಲು ಎದೆಗೆ ಗುಂಡು ತಿಂದು
ಮಣ್ಣು ಸೇರಿದವವರ ನೆನೆಯುವುದಾದರೂ ಎಂದು?
ಒಂದು ಹಾರ, ಒಂದು ಕಾಯಿ, ಮೂಗು ಮುಚ್ಚಿಕೊಳ್ಳುವಷ್ಟು
ಗಬ್ಬು ನಾರುವ, ಒಂದೈದು ಊದು ಬತ್ತಿಯನ್ನು
ಹಚ್ಚಿಟ್ಟು ಬಿಟ್ಟರೆ, ಸಾಕಾಯಿತಲ್ಲವೆ ?
ಅವರ ತ್ಯಾಗ ಬಲಿದಾನಗಳ ನೆನೆಯುವಷ್ಟು ವ್ಯವಧಾನವು
ನಮಗಿಲ್ಲದಿರುವಾಗ

'ಹಿಂದೂ' ಎಂದೂ ಗಟ್ಟಿಯಾಗಿ ಕೂಗಿ..ಕೂಗಿ..
ಸಾರಿ...ಸಾರಿ ಬಂದೆ ಸಾಗರದಾಚೆ ನರೇಂದ್ರ.
'ಹಿಂದೂ' ಎಂದು ಮೇಲುಧ್ವನಿಯಲ್ಲಿಯೆ ಕೂಗಿಕೊಳ್ಳಲು
ಹಿಂದು ಮುಂದು ನೋಡಿಕೊಳ್ಳಬೇಕಿದೆಯಿಂದು
ನಮ್ಮದೆ ನೆಲದಲ್ಲಿ...ದುರದೃಷ್ಟಕರ ? ಅಲ್ಲ...ಅಲ್ಲ..
ಉರಿವ ದೀಪದ ಕೆಳಗೆ ಯಾವಾಗಲೂ ಕತ್ತಲಿರುವುದಲ್ಲವೆ
ಎಂಬ ಜಾಣ ಉತ್ತರದ ಸಮಂಜಸ.
ಹೀಗಿರುವಾಗ ಸಹೋದರ ಸಹೋದರಿಯರೆ ಎಂಬ
ಮಾತಿಗ ಗಗನ ಕುಸುಮ.

ಈಗೀಗ ಎಲ್ಲರಿಗೂ ಮಲಗುವ ಹುಚ್ಚು ಖಯಾಲಿ
ಜೋರಾಗಿಯೆ ಬಡಿದುಕೊಂಡುಬಿಟ್ಟಿದೆ, ಇವರಿಗೀಗ
ನಿನ್ನ ಕೂಗು ಕೇಳದು ನರೇಂದ್ರ...ಅವರೇಳುವುದು
ಹಾಲಿನವನ ಕೂಗಿಗೆ, ವಿದ್ಯುತ್ ಬಿಲ್ ವಸೂಲಿದಾರನಿಗೆ,
ಡಿ.ಟಿ.ಎಚ್.‌ಆಪರೇಟರ್ ನಿಗೆ, ಮನೆಪಟ್ಟಿಯ ಕರವ ಕಟ್ಟಿಸಿಕೊಳ್ಳಲು ಬರುವ ಮುನ್ಸಿಪಲ್ ನೌಕರನಿಗೆ, ರಾತ್ರೊ
ರಾತ್ರಿ ಹಣವನ್ನೆಲ್ಲ ಗುಡಿಸಿ ಗುಂಡಾಂತರಿಸಿಕೊಂಡ್ಹೋಗುವ
ಕತ್ತರಿ ಕಂಪನಿಗಳ ಛೇಲಾಗಳಿಗೆ... ಇವರೆಲ್ಲರನ್ನು ಬಿಟ್ಟು
ಅಬ್ಬಬ್ಬಾ ಎಂದರೆ ಐದು ವರ್ಷಕ್ಕೊಮ್ಮೆ ಮತ ಯಾಚಿಸಲು
ಬರುವ ಖಾದಿ ಮಂದಿಗಳ ಕೂಗಿಗೆ

ಮಲಗಲಿಬಿಡು...ಮಲಗಲಿಬಿಡು...ಇನ್ನೂ ಮಾಗಿಯ ಚಳಿಯಿದೆ
ನನ್ನೂರು...ನನ್ನ ದೇಶ... ನನ್ನ ಜನವೆಂಬ ಅಂತರಾತ್ಮದ
ಬೆಂಕಿ...ಧಗಧಗನೆ ಒಳಗೊಳಗೆ ಉರಿದೆಳದ ಹೊರತು..
ಅವರಾರು ಏಳರು...ಏಬ್ಬಿಸಲೂ...ಆಗದು..
ಏಳಿ...ಏದ್ದೇಳಿ ಎಂಬ ಕೂಗು ಅವರನ್ನು ಅಲ್ಲಾಡಿಸಲು ಆಗದು.