Wednesday, February 2, 2011

ಹುಷಾರು

                          ಹುಷಾರು
ಅವರು ಕೊಲ್ಲುತ್ತಾರೋ ಮಗನೆ ಕಣ್ಣಿನ ಬಾಣದಲಿ
ನೀ ಹುಡುಕದಿರು ಅವರನ್ನು ಷಾಪಿಂಗ ಮಾಲಿನಲಿ
ಅವರ ಹಿಂದಲೆದು ಹುಚ್ಹಾಗದಿರು ಈ ಪ್ರೀತಿಯಲಿ
ಹೀಗೆಯೆ ಹೋದರೆ ನಿನ್ನನ್ನು ನೋಡಬೇಕಾದಿತು
ಹೂ ತುಂಬಿ ತುಳುಕುವ ಪಾರ್ಕಿನಲ್ಲಲ್ಲ
ಸಿಂಗರಿಸಿದ ಕಲ್ಯಾಣ ಮಂಟಪದಲ್ಲಲ್ಲ
ನಿನ್ನಂಥವರ  ಮಾವನ ಮನೆಯಾದ ಮೆಂಟಲ್ ಆಸ್ಪತ್ರೆಯಲಿ

ಬೊಕೆ

                 ಯಾವ ಬೊಕ್ಕೆ
ನೀ ಬಿಳದಿರು ತಮ್ಮ ಅವಳ ಪ್ರೀತಿಯ ತೆಕ್ಕೆಯಲಿ
ಕೊಟ್ಟು ಕಳಿಸದಿರು ನಿನ್ನ ಪ್ರೀತಿಯನು ಬೊಕ್ಕೆಯಲಿ
ಇಂದಿನ ಕನ್ಯೆಯರು ಬಲು ಹುಷಾರು ಈ  ಪ್ರೀತಿಯಲಿ
ಎಸೆದಾರೋ ತಮ್ಮ ನೀ ಕೊಟ್ಟ ಬುಕ್ಕೆಯನು ಕಸದ ತೊಟ್ಟಿಯಲಿ

ಮಸಾಲೆ ೩೭೦

                      ಮಸಾಲೆ
ಹೋಟೆಲೊಂದರಲ್ಲಿ ನನ್ನವಳೊಂದಿಗೆ
ಕುಳಿತಿದ್ದ ನಾನು ಪಕ್ಕದಲ್ಲಿದ್ದ ಚೆಲುವೆಯನು
ನೋಡುತ್ತಾ ಮಾಣಿಗೆ ಹೇಳಿದೆ 'ಎರಡು ಮಸಾಲೆ'
         ಇದ ಕಂಡು ನನ್ನವಳು ಇನ್ನು ಹತ್ತಿರ ಬಂದು
         ಹೇಳಿದಳು 'ತಾವಿಗ ಮನೆಗೆ ಬಂದರೆ ನಿಮಗರಿತಿನಿ ಮಸಾಲೆ'

ಮಲ್ಲಿಗೆ ತೂಕ

                   ಮಲ್ಲಿಗೆ ತೂಕ
ನಮ್ಮವನ ಮನದರಸಿ ಮಲ್ಲಿಗೆಯ ತೂಕ
ಆದ್ರ ನೋಡಾಕದಾಳ ಮೈಸೂರ ಪಾಕ
ಇಂವ ಹತ್ರ ಹೋದ್ರ ಕೊಡತಾಳ
ಕಪಾಳಕ್ಕೆರಡು ಕರೆಂಟ್ ಶಾಕ

ನಾನಾರು..

                                           ನಾನಾರು......?
ನಾನೇನು ಸಭೆಯೋಳು ಬಿಲ್ಲನು ಮುರಿದು
ಸೀತೆಯನು ಗೆದ್ದ ರಾಮನಲ್ಲ
                                 ಸೀತೆಗಾಗಿ ಮಾಯಾ ಜಿಂಕೆಯ
                                 ಬೆನ್ನು ಹತ್ತುವ ಹುಚ್ಚು ಗಂಡನಲ್ಲ
ದ್ರೌಪದಿಯ ಮುಡಿಯನ್ನು ಕಟ್ಟಲು
ದುಶ್ಯಾಸನನ ಎದೆಯನು ಬಗೆದ
ಭೀಮನಲ್ಲ
                                   ಏಳಿ ಎದ್ದೇಳಿ, ಎಂಬ ಅಮೃತವಾಣಿಯ
                                   ಕರ್ತ್ರು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ  ಸ್ವಾತಂತ್ರ್ಯ
ನೀಡುವೆನೆಂದವನು ನಾನಲ್ಲ
                                   ಕೋಟೆ ಕೊತ್ತಲುಗಳಿಗೆ ರಕ್ತದ ಕಾಲುವೆಯನು
                                   ಹರಿಸಿದವನು ನಾನಲ್ಲ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ 
ನೀಡುವೆನೆಂದವನು ನಾನಲ್ಲ
                               ಹರಿವ ನೀರಿಗೆ ಗೋಡೆಯ ಕಟ್ಟಿ ಬಂಜರು ನೆಲವನು 
                                 ಹಸಿರಾಗಿಸಿದವನು ನಾನಲ್ಲ 
ಕಡಲನು ಹೊಕ್ಕು ಚಿಪ್ಪನು ಹೆಕ್ಕಿ ಮುತ್ತನು ಸೂಸಿದ 
ಕುಶಲನು ನಾನಲ್ಲ 
ನಾನಾರು.....? 
                                 
                                     

Tuesday, February 1, 2011

ಯಾರದು ತಪ್ಪು

ಯಾರದು ತಪ್ಪು

ಸುಮವರಳಿ ಗಂಧವ ಸೂಸಿದೊಡೆ
ಬಾಲೆಯು ಕಿತ್ತು ಮುಡಿಗೆರಿಸಿಕೊಂಡರೆ
ಯಾರದು ತಪ್ಪು
ಕುಸುಮವರಳಿ ಗಂಧವ ಸೂಸಿದುದು ತಪ್ಪೆ
ಮುಡಿಯ ಸಿಂಗಾರಕೆ ಸುಮವನು ಕಿತ್ತಿದ
ಬಾಲೆಯ ತಪ್ಪೆ
                                           ಭಾನನು ಜಾರಿದ ಬಿಂದು ಧರೆಯನು ತಟ್ಟಿ
                                           ಲವಣದ ಒಡಲನು ಸೇರಿದರೆ
                                           ಯಾರದು ತಪ್ಪು
                                           ಭಾನನು ತೊರೆದು ಭುವಿಯನು ತಣಿಸುದುದು
                                           ಹನಿಯ ತಪ್ಪೆ | ಉಕ್ಕಿ ಉಕ್ಕಿ ಬರುವ ಹನಿಯ
                                           ರಭಸವ ತನ್ನೊಡಲೊಳಗೆ ಸೇರಿಸಿಕೊಳ್ಳುವ ಲವಣದ ತಪ್ಪೆ
ಕತ್ತಲೆಯ  ಕಳೆದು ಬೆಳಕನು
ಚೆಲ್ಲುವ ದೀಪಕೆ ಸಂಜೆಯ
ತಂಗಾಳಿ ಸೋಕಿ ನಂದಿದರೆ
ಯಾರದು ತಪ್ಪು
ಹಾದಿಯ ಅಂಧತೆ ನೀಗಿಸಲು  
ಬೆಳಕನು ಹರಿಸುವದು ದೀಪದ ತಪ್ಪೆ
ತಂಪಾಗಿ ಬೀಸಿದರು ಗಾಳಿಯು ದೀಪವ
ನಂದಿಸಿದರೆ ಯಾರದು ತಪ್ಪು

ಕಾರ್ಗಿಲ್

ಬಿಸಿ ನೆತ್ತರಿನ
ಹಸಿದೊಡದಲಿನ 
ಭರತೋದ್ಭವ ಪುರುಷ
ಸಿಂಹಗಳಿಹರಿಲ್ಲಿ
                                ಇಡದಿರೊಂದಡಿಯನು
                               ಎದೆಬಗೆದೊಗೆಯುವರು
                               ಅಂಧಕಾರಕಂಧಕದೊಳಗೆ

ಮರೆಯದಿರಿ ಪಾಪಿಗಳೇ
ಪಾಪದ ಫಲಕುಂಡಡುಗೆಯನು
ಬಿತ್ತದಿರಿನ್ನು ಭಯೋತ್ಪಾದಿಸೋ
ಬೀಜಗಳನು

                               ಕರ ಜೋಡಿಸಿರುತ್ತಮ ಭಾಂದವ್ಯಕೆ
                               ಮಡಿಲ ಮರಿಗಳಡಿಯಿಡುವ ನೆಲವ
                               ಹಸಿರಾಗಿಸೋಕೆ

ಕೋವಿಯ ಕಾವದು
ಸುಡದಿರಲಿ ತನುವನು
ಮದ್ದಿನ ಸದ್ದೊಳು
ಲಿನವಾಗದಿರಲಿ  ಮನವದು

                                ಸಾಕಿನ್ನು ಮರೆಯೋಣ
                                ನೋವುಂಡ ಈ ದಶಕಕ್ಕೆ    
                                ಹರಿಸುವ ಪ್ರೀತಿಯ ಹೊಳೆಯನು
                                ನೆತ್ತರನುಂಡು ಬರಡಾದ ಈ ಧರಿಣಿಗೆ

ನಾವು ನೀವುಗಳೆಲ್ಲಾ ಭರತ ಸಂಜಾತರೆ
ಬನ್ನಿರಿ ಸಾಗೋಣ ವಿಶ್ವ ಶಾಂತಿ ಪಥದತ್ತ
ಒಂದೊಂದೆ  ಹೆಜ್ಜೆಯನಿಡುತ