Beish
Friday, March 25, 2011
ದೀಪ
ದೀಪ
||ಕತ್ತಲ ಕೊನ್ಯಾಗೊಂದು
ದೀಪ ಹಚ್ಚಿಟ್ರ ಎಷ್ಟ ಬೆಳಕ
ಚೆಲ್ಲತ್ಯತಿ....||
ನನ್ ಎದೆಯಾಗೊಂದು
ದೀಪ ಹಚ್ಚಿಟ್ಟು ನೋಡ...
ನಿನ್ ಬಾಳ ತುಂಬಾ ಬೆಳಕ ಚೆಲ್ತಿನಿ..
ಆ ಚಂದ್ರನ್ ಮುಖದಾಗೂ
ನಾಚ್ಕೆ ತರಸ್ತೀನಿ...
ನಿನ್ ಗುಲಾಬಿ
ನಿನ್ ಗುಲಾಬಿ
||ನಿನ್ ತುರುಬಿನೊಳಗಿನ ಗುಲಾಬಿ
ಎಷ್ಟ ಚಂದ ಅಯ್ತಿ...||
||ಕಿತ್ತಿ ನನ್ನ ಎದೆಯಾಗ
ನಡಬೇಕನಸ್ಯತಿ||
ಹುಡುಗಿ...
||ಕಿತ್ತುವಾಗ|| ಹುಡುಗಿ
ಹೂ ಬಾಡಿದರ....
||ನನ್ ಎದೆಯಾ
ಒಡದ್ಹೊಕ್ಯತಿ..||
ನಿನ್ ಕಣ್
ನಿನ್ ಕಣ್
ನೀ ನೋಡಬ್ಯಾಡ ಹಂಗ
ಕಣ್ಣಾಗ ಕಣ್ಣಿಟ್ಟ....
ನಿನ್ ಕಣ್ ಒಂದ ಪ್ರೀತಿ
ಕೊಳ
ಇದ್ಹಂಗ್ಯತಿ.....
ಈಜ ಬಾರದ ನಾನು ಜಾರಿ
ಬಿದ್ನೆಂದ್ರ.....
ಎದ್ಬರೋದ ತ್ರಾಸಾಗತ್ಯತಿ.
Saturday, March 5, 2011
ಹೊಂಟಹೋದೆನ
ಕಬ್ಬಿನ ಬಿಲ್ಲಿನ ಹಿಂಡಿ ರಸ ತಗದ್ಹಾಂಗ
ಸಿಪ್ಪೆ ಸುಲಿದು ಹಣ್ಣು ತಿಂದ್ಹಾಂಗ
ಮ್ಯೆ ತುಂಬಿದ ಹೂ ಬಳ್ಳಿನ ಹೂವ ಕಿತ್ತು
ನಿಡಮಬರ ಮಾಡಿ ಬಿಟ್ಹಂಗ
ನನ್ ಬದುಕಿನ ಪ್ರೀತಿನೆಲ್ಲ ಹೀರಿ
ಹೊಂಟಹೋದೆನ.
ದೀಪ
||ಒಲಿಯಾಗ ಎಷ್ಟ ಕಟ್ಟಿಗೆ ಇಟ್ಟು
ಬೆಂಕಿ ಹಚ್ಚಿದ್ರುನು
ಸುಟ್ಟು ಬೂದಿಯಾಗ್ತ್ಯತಿ||
ನನ್ನೆದೆಯ್ಯಾಗಾ ಎಷ್ಟ ಪ್ರೀತಿ ಇಟ್ಟ
ಸುಟ್ಟರನು ಅದು ಹೆಚ್ಚು ಬೆಳಕಾ ಕೊಡತ್ಯತಿ
ನೀ ಹೋಗೊ ಹಾದಿಗೆ ಬೆಳಕಾ ಚೆಲ್ತ್ಯೆತಿ.
ಮುತ್ತು
ನೀರನ್ಯಾಗ ಹುಟ್ಟಿದ ಅಲೆ
ದಡಾನ ತಬ್ಬಿಕೊಳ್ಬೇಕ
ಮೂಡಣದಾಗ ಮೂಡೊ ಸೂರ್ಯ
ಕತ್ಲನ್ನ ಅಪ್ಪಿಕೊಳ್ಬೇಕ
ಬಳ್ಯಾಗ ನಕ್ ಹೂವಿಗ
ದುಂಬಿನ ಮುತ್ತಿಕ್ಬೇಕ
ಹಂಗ ನಿನ್ ತುಟಿಯಾಗ ಹುಟ್ಟೊ ಮುತ್ತು
ನನ್ ಕೆನ್ನೆನ ತಟಬೇಕಂತ
ಯಾಕೆ ಗುರುಗಳೆ
yaake gurugale
ಯಾಕೆ ಗುರುಗಳೆ
ಯಾಕಿಷ್ಟು
ಅವಸರವಾಯ್ತು
ಹೆತ್ತವರ ತೊರೆದು
ಮಡದಿ ಮಕ್ಕಳ ಮರೆತು
ಭವ ಬಂಧನದಿಂದಾಚೆ
ನಡೆದಿರಿ....... ಅಲ್ಲವೆ
ಸಹ ಗುರುಗಳನು ಮರೆತು
ವಿಧೇಯ ವಿಧ್ಯಾರ್ಥಿಗಳ ಮರೆತು
ಅಕ್ಷರ ಲೋಕದಿಂದಾಚೆ ದೂರ
ಸಾಗಿದಿರಿ..... ಅಲ್ಲವೆ
ನಿಮ್ಮ ಆದರ್ಶಗಳನೆದೆಗೊತ್ತಿ
ತಾವು ಹಾಕಿದ ದಾರಿಯಲಿ
ನಡೆಯುವೆವೆಂದೆಂದು
ಮರೆಯದಿರಿ...... ಸಾಕಲ್ಲವೆ.
Newer Posts
Older Posts
Home
Subscribe to:
Posts (Atom)