Thursday, May 26, 2016

ಅಂದು ಇಂದು

ನೀನೇಕೆ ಬಂದೆ ನನ್ನೆದುರಿಗಿಂದು
ಮರೆಯದ ನಗುವ ಮೊಗದಲಿ ಹೊತ್ತು
ಎದೆ ಬಡಿತದ ತುಡಿತವ ಹೆಚ್ಚಿಸಿದೇಕೆ
ಆ ಕುಡಿ ನೋಟದ ನೋಟ ಬಿಟ್ಟು
ನುಡಿಸಿದೆದೆಯ ವೀಣೆಯನೇಕಿಂದು
ಆ ತುಟಿಯಂಚಿನ ನಗುವಿನಲಿ

ಇಂದೇಕೆ ಮರೆಯಾದೆ
ಆರದ, ಮರೆಯದ ನೆನಪನು ಬಿಟ್ಟು
ನಲಿವಿನ ಹಾಡಿಗೆ ನೋವಿನ ಶೃತಿಯನು ಮೀಡಿದು
ಹಾರೋ ಮನಸಿನ ಹಕ್ಕಿಗೆ ಮಾಯೆಯ ಬಾಣವ ಬಿಟ್ಟು
ಬಾಳ ಪ್ರೇಮ ಹಾದಿಯಲಿ ಮುಳ್ಳಿನ ಹಾಸಿಗೆ ಹಾಸಿ
ಇಂದೇಕೆ ಮರೆಯಾದೆ.

ನಾಚಿಕೆ

ಮದುವೆಗೆ ಮುಂಚೆ..

ನನ್ನಾಕೆಗೆ ತುಂಬಾನೆ ನಾಚಿಕೆ
ಅದಕ್ಕೆ ಮರೆಯಾಗುತ್ತಾಳ
ಸೀರೆ ಸೇರಗಿನಲ್ಲಾಕೆ
ಎರಡು ಸಲ ಭೇಟಿಯಾದರೂ ನೋಡಲಿಲ್ಲ
ನನ್ನತ್ತ ಒಮ್ಮೆಯಾದರೂ ಕಣ್ಣೆತ್ತಿ
ನನ್ನಾಕೆ

ಮದುವೆಯ ನಂತರ...

ನನ್ನಾಕೆಗೆ ತುಂಬಾನೆ ನಾಚಿಕೆ
ಅದಕ್ಕೆ ಸೆರೆಯಾಗುತ್ತಾಳೆ ನನ್ನ
ಬಾಹು ಬಂಧನದಲ್ಲಾಕೆ
ಮಾತು ಮಾತಿಗೂ ಅನ್ನುತ್ತಾಳೆ ನಾಚಿಕೆ
ಅದಕ್ಕೆ ಮಾತಾಡಲೂ ಬಿಡುವುದಿಲ್ಲ ರಾತ್ರಿಗೆ

ಇರುವೆ...೪೪೬

|| ಅಲೆಮನೆಯ ಬೆಲ್ಲಕೆ
ಮುತ್ತಿಕ್ಕಲು ಇಲ್ಲವೆ ಇರುವೆ||
ರಮಣೀಯ ಗಲ್ಲಕೆ
ಮುತ್ತಿಕ್ಕಲು ನಾನಿಲ್ಲೆ...ಇರುವೆ

ತೊಗಟೆ

ಹತ್ತಿ ಕಾಯಿಯ ತೊಗಟೆ
ಬಲು ದಪ್ಪ| ಅದರೊಳಗಿನ
ಹತ್ತಿ ಬಲು ನಿಪ್ಪ

ಬದಾಮಿ ಕಾಯಿ ತೊಗಟಿ
ಬಲು ಗಟ್ಟಿ|  ಅದರೊಳಗಿನ
ಬದಾಮಿ ತಿನ್ನಾಕ ಇನ್ನೂ ತುಟ್ಟಿ

ಕಿತ್ತಳೆ ಹಣ್ಣಿನ ಸಿಪ್ಪಿ
ಬಲು ಮೆತ್ತಗ| ಅದನ್ನ ಸಿಳಾಕ
ಹೋದ್ರ ಕಣ್ಣಾಗ ಬರೀ ನೀರ

ಬಾಳೆ ಹಣ್ಣಿನ ಸಿಪ್ಪಿ
ಬಲು ಸುಲಭ| ಇದನ್ನ
ತಿಂದ್ರ ಮಲ ಇನ್ನೂ ಸುಲಭ

Wednesday, May 25, 2016

ಕರಿಮೋಡ

ಕರಿಮೋಡವು ನೀರಾಗಿ ಸುರಿದು, ಸರಿದು
ರವಿ ಕಿರಣಕೆ  ಮೋಡವು ಮ್ಯದುಂಬಿ ಬೆಳ್ಳಿಯ
ಬಟ್ಟಲಿನಂತೆ ನೀಲಾಕಾಶಾದಲ್ಲಿ ತೇಲುತಿರಲು
ಸುರಿದ ಹನಿಯು ನೆಲವ ತಣಿಸಿ, ಕೆರೆ-ತೊರೆಯ
ಉಣಿಸಿ ಧರೆಯ ಒಡಲ ಸೆಲೆಯ ಸೇರಿತು

ಕಳೆಯಿತೆರಡುದಿನ
ಆಗಸ ಖಾಲಿ ಖಾಲಿ, ಅಲ್ಲೊಂದು ಇಲ್ಲೊಂದು
ಬೆಳ್ಳಿಯ ಮೋಡಗಳ ಪಯಣ, ಭೂತಾಯಿಯ
ಒಡಲು ತಂಪಾಗಿ, ಹಸಿರು ಮೊಳೆತು
ಮರಗಿಡದೊಳು ಚಿಗುರೆಲೆ ಚಿಗುರಿ
ಮರವನಪ್ಪಿಸುಮಗಂಧವಸೂಸಿ
ಹಕ್ಕಿಯ ಕಲರವ ಬಾನಗಲ ತುಂಬಿ
ನಕ್ಕು ನಲಿಯಿತು ಕರಿಮೋಡ
ತಾಯಿಯ ಒಡಲನು ತಂಪಾಗಿಸಿತು
ಕರಿಮೋಡ

ನಾನೊಬ್ಬ ಕವಿಯೆಂದು

ನಾನಂದುಕೊಂಡಿದ್ದೆ....
ನಾನೂ ಒಬ್ಬ ಕವಿಯೆಂದು
ಒಲ್ಲದ, ಒಗ್ಗದ, ಹಿಗ್ಗದ, ಕುಗ್ಗದ
ಬಳಸಿದ, ಬಳಸಲಾರದ, ಸಿಕ್ಕ, ಸಿಗಲಾರದ
ಹಳೆ, ಹೊಸ ಪದಗಳ ತುರುಕಿ
ತಿರುಚಿ, ನಿಗಿಚಿ ಬರೆಯುವ ಕವಿಯೆಂದು

   ಹಳೆತನದಲಿ ಹೊಕ್ಕು ಹೊಸತನವನು ತಂದು
   ಇರದಿರುವಿಕೆಯನು ಇದೆಯಂದು
   ಮರಣಿಸಿದ ಕಾಗದದ ಮೇಲೆ  ಕವಿತೆ
   ಕವಿತೆ ಎಂಬ ಜೀವ ತುಂಬುವ ಕವಿಯೆಂದು

ನಡೆದು ಹೋದ, ಇಂದೆ ಇರುವ
ಮುಂದೆ ಬರುವ ವಿಷಯಗಳನರಿದು
ಕುಡಿದು, ಕುಡಿಸುವ ಕವಿಯೆಂದು
ನಾನಂದುಕೊಂಡಿದ್ದೆ...

ಸುಂದರಿ

ಗಂಧದ ಊರಿನ ಮುತ್ತಿನ ಮನೆಯ
ಸಾಲು ಕಂಬಗಳ ಮನೆಯೊಡತಿ
ಗಿರಿಶ್ರಂಗ ಸಾಲುಗಳ