Thursday, April 13, 2017

ಅಳದಿರಿ ಹಾಳೆಗಳೆ
ಅದೇಷ್ಟು ನನ್ನೆದೆಯ ನೋವುಗಳನು
ನಿಮ್ಮೆದೆಯ ಮೇಲೆ ಗೀಚಿಲ್ಲ
ನನ್ನೆದೆಯ ದುಃಖಕೆ ಕಿವಿಯಾದಿರೆ ಹೊರತು
ಅವರಿವರ ಹಾಗೆ ನಗಲಿಲ್ಲ, ಅಳಲಿಲ್ಲ
ಬೈಯಲಿಲ್ಲ, 

ಅದಕೆ ನಾನು ಅಂತರಂಗದ ನುಡಿಯನು
ನೀನಗಲ್ಲದೆ ನಾನಾರಿಗೂ ನುಡಿಯುವುದಿಲ್ಲ
ನೀನಾದರು, ನಿನ್ನ ದೇಹದ ತುಂಬಾ ಬರೆಸಿಕೊಂಡರು
ಮತ್ತೆ ನನ್ನತ್ತ ನೋಡುವೆ
ಇನ್ನೂ ಏನಾದರೂ ಇದ್ದರೆ ಬರೆ ಎಂದು

ಸರಳ ಸಜ್ಜನಿಕೆಯ ಅಸ್ತಂಗತ


ದಿ.ಜ್ಞಾನದೇವ ದೊಡ್ಡಮೇಟಿಯವರು

ಸರಳ ಸಜ್ಜನಿಕೆಯ ಅಸ್ತಂಗತ

ಏನು ಬರೆಯಲಿ ಈ ಸಮಯದಲಿ
ಪದಗಳೇ ಅಸ್ತವ್ಯಸ್ತವಾಗಿರುವಾಗ
ಮಾತುಗಳೆ ತೊದಲುತಿರುವಾಗ
ಕಂಗಳೆ ಕೊಳ ತುಂಬಿ ನಿಂತ
ನೀರಾಗಿರುವಾಗ

ಸರಳ ಸಜ್ಜನಿಕೆಯ ಗಾಂಧಿವಾದಿ
ನಿರ್ಮಲ ಮನಸ್ಸಿನ ಮುತ್ಸದ್ಧಿ
ಸಾವಿರಾರು ಕೆರೆಗಳ ಭಗೀರಥ
ನಡೆ ನುಡಿಯಲಿ ನಿಷ್ಠುರವಾದರೂ
ಕವಿ ಮನಸಿನ ರಾಜಕಾರಣಿ

ಅಧಿಕಾರಕ್ಕೆ ಬಂದವರು ಮಾಡುತ್ತಿರುವರು
ಸಾಕಷ್ಟು ಆಸ್ತಿ ಪಾಸ್ತಿ
ಇಂತಹ ವಿಷಯಕ್ಕಿವರೂ ನಾಸ್ತಿ
ಜನಸೇವೆ ಮಾಡಲೆಂದೆ ಇದ್ದ ಹೊಲವನ್ನು
ಮಾರಿ ರಾಜಕೀಯಕ್ಕೆ ಬಂದವರು
ಅನ್ಯರ ಪುಡಿಗಾಸು ಮುಟ್ಟದ ಸ್ವಾಭಿಮಾನಿ

ಆಗೀನ ಕಾಲದಲ್ಲೇ ಚಿತ್ರಿಸಿದ್ದರು
ತೈಲ ವರ್ಣದಲ್ಲಿ ತಾಯಿ
ಭುವನೇಶ್ವರಿಯ ಪಟವ
ಈಗಲೂ ಇಹುದವರ ಮನೆಯಲ್ಲಿ
ನೋಡಲೆರಡು ಕಣ್ಣು ಸಾಲದು
ಬಣ್ಣಿಸಲು ಪದಗಳೆ ನಿಲುಕವು

ಇಂತಹ ಸರಳ ಅಜ್ಜನಿಕೆಯ ಆಗರ
ವಾಗಿದ್ದಂತಹ ಧೀಮಂತ ನಾಯಕರ
ಬದುಕು ಇಂದು ಅಸ್ತಂಗತಗೊಂಡಿದೆ
ಯಾವುದಕ್ಕೂ ಜಗ್ಗದ ಜಕ್ಕಲಿ ಗ್ರಾಮವಿಂದು
ದುಃಖ ಸಾಗರದಲಿ ಮುಳುಗಿ ಹೋಗಿದೆ

ರೋಣ ತಾಲೂಕಿನ, ಗದಗ ಜಿಲ್ಲೆಯ,
ಇಡೀ ರಾಜ್ಯದ ಸಾಹಿತ್ಯ ಪ್ರೇಮಿಗಳಿಂದ
ಆ ಜೀವಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯ
ನೀಡಲೆಂದು ಬೇಡಿಕೊಳ್ಳುತ್ತೇವೆ.

ಹೊತ್ತು ಮುತ್ತು

ನಾನಿನ್ನೂ ಮರೆತಿಲ್ಲ ಇನಿಯ
ಆ ಸಂಜೆ ಮಳೆ ಸುರಿದ ಹೊತ್ತು
ಈ ಕೆನ್ನೆಗೆ ನೀ.. ನೀಡಿದ ಸಿಹಿ ಮುತ್ತು
ನೋಡಲ್ಲಿ....
ಚಿಗುರೆಲೆಗಳ ಮೇಲೆ ಮಳೆ ಹನಿಗಳ
ಮುತ್ತಿನ ಸಾಲು....
ನೋಡಿಲ್ಲಿ....
ಈ ಕೆಂಪು ಕೆನ್ನೆಯ ಮೇಲೆ ನೀ ಕೊಟ್ಟ
ಮುತ್ತುಗಳ ಸಾಲು ಸಾಲು...

Wednesday, April 12, 2017

ಸರಳ ಸಜ್ಜನಿಕೆಯ ಅಸ್ತಂಗತ

ಏನು ಬರೆಯಲಿ ಈ ಸಮಯದಲಿ
ಪದಗಳೇ ಅಸ್ತವ್ಯಸ್ತವಾಗಿರುವಾಗ
ಮಾತುಗಳೆ ತೊದಲುತಿರುವಾಗ
ಕಂಗಳೆ ಕೊಳ ತುಂಬಿ ನಿಂತ
ನೀರಾಗಿರುವಾಗ

ಸರಳ ಸಜ್ಜನಿಕೆಯ ಗಾಂಧಿವಾದಿ
ನಿರ್ಮಲ ಮನಸ್ಸಿನ ಮುತ್ಸದ್ಧಿ
ಸಾವಿರಾರು ಕೆರೆಗಳ ಭಗೀರಥ
ನಡೆ ನುಡಿಯಲಿ ನಿಷ್ಠುರವಾದರೂ
ಕವಿ ಮನಸಿನ ರಾಜಕಾರಣಿ

ಅಧಿಕಾರಕ್ಕೆ ಬಂದವರು ಮಾಡುತ್ತಿರುವರು
ಸಾಕಷ್ಟು ಆಸ್ತಿ ಪಾಸ್ತಿ
ಇಂತಹ ವಿಷಯಕ್ಕಿವರೂ ನಾಸ್ತಿ
ಜನಸೇವೆ ಮಾಡಲೆಂದೆ ಇದ್ದ ಹೊಲವನ್ನು
ಮಾರಿ ರಾಜಕೀಯಕ್ಕೆ ಬಂದವರು
ಅನ್ಯರ ಪುಡಿಗಾಸು ಮುಟ್ಟದ ಸ್ವಾಭಿಮಾನಿ

ಆಗೀನ ಕಾಲದಲ್ಲೇ ಚಿತ್ರಿಸಿದ್ದರು
ತೈಲ ವರ್ಣದಲ್ಲಿ ತಾಯಿ
ಭುವನೇಶ್ವರಿಯ ಪಟವ
ಈಗಲೂ ಇಹುದವರ ಮನೆಯಲ್ಲಿ
ನೋಡಲೆರಡು ಕಣ್ಣು ಸಾಲದು
ಬಣ್ಣಿಸಲು ಪದಗಳೆ ನಿಲುಕವು

ಇಂತಹ ಸರಳ ಅಜ್ಜನಿಕೆಯ ಆಗರ
ವಾಗಿದ್ದಂತಹ ಧೀಮಂತ ನಾಯಕರ
ಬದುಕು ಇಂದು ಅಸ್ತಂಗತಗೊಂಡಿದೆ
ಯಾವುದಕ್ಕೂ ಜಗ್ಗದ ಜಕ್ಕಲಿ ಗ್ರಾಮವಿಂದು
ದುಃಖ ಸಾಗರದಲಿ ಮುಳುಗಿ ಹೋಗಿದೆ

ರೋಣ ತಾಲೂಕಿನ, ಗದಗ ಜಿಲ್ಲೆಯ,
ಇಡೀ ರಾಜ್ಯದ ಸಾಹಿತ್ಯ ಪ್ರೇಮಿಗಳಿಂದ
ಆ ಜೀವಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯ
ನೀಡಲೆಂದು ಬೇಡಿಕೊಳ್ಳುತ್ತೇವೆ.

Tuesday, April 11, 2017

ತೇರು

ಬಾನೊಳು ಮೂಡಿರೆ
ಜೋಡಿ ತಾರೆಗಳು
ಭಕ್ತರ ಸಮೂಹವ
ಕುಣಿಸಿಹೆ ಘಂಟೆಗಳು

ಜೈ ಜೈಕಾರವ ಮೊಳಗಿಸುತ
ರಥದ ಹಗ್ಗವ ಹೀಡಿದರು
ಹರುಷದಿ ಎಳೆದರೆಲ್ಲರು
ಮಲ್ಲಯ್ಯನ ತೇರನು

ಬೇಡಿದ ವರಗಳ
ನೀಡುವ ಕಾಲೇಶ
ಭಕ್ತರ ಇಷ್ಟಾರ್ಥಗಳ
ಅನುಗ್ರಹಿಸುವ ಈಶ

ಜಾಲೀಂದ್ರ ಗಿರಿಯ
ಗುಹೆಯಲಿ ನೆಲೆಸಿಹನು
ಬೆಟ್ಟವನೇರಿ ಬರುವವರೆಲ್ಲರಿಗೂ
ನೀಡುವನು ಅಭಯವನು

ಅಂತರಗಂಗೆಯ ಜಿನುಗುತಲಿರಲು
ಮಾಡಿದ ಪಾಪವದಳಿಯುತಿರಲು
ದಕ್ಷಿಣಾಭಿಮುಖವಾಗಿ ಗಿರಿಯಿರಲು
ದಕ್ಷೀಣಕಾಶಿಯೆಂದೆ ಕರೆಯುತಿಹರು

ಏನೀ ಜಾತ್ರೆಯ ಸೊಬಗು
ನೋಡಿದವರೆ ಧನ್ಯ
ಅನುಭವಿಸಿದ ಜನರೆಲ್ಲರೂ
ಪಡೆದರೆಲ್ಲ ಪುಣ್ಯ

ರವಿಯು ಕರಗಿರೆ
ಸೂಸಿ ತಂಪನು
ದವನವು ಮೆರುಗಿರೆ
ಜಾತ್ರೆಯ ಕಂಪನು

ನವ ಜೋಡಿಗಳು
ಕಣ್ತುಂಬಿರೆ ಜಾತ್ರೆಯನು
ಹೂಡಿರೆ ತರುಣ ತರುಣಿಯರು
ನಯನ ಕದನವನು

ಬನ್ನಿ ನೋಡಿರೀ...
ಸುತ್ತ ಹತ್ತೂರಿನ ಜಾತ್ರೆಯನು
ಬರುವಾಗ ತಪ್ಪದೆ ತನ್ನಿ ನಿಮ್ಮ
ಕುಡಿಯುವ ನೀರನ್ನು

ಈ ಐದು ದಿನದ ಜಾತ್ರೆಗೆ
ಬರುವ, ಬಂದಿರುವ
ಬಂದು ಹೋಗುವ ಎಲ್ಲ
ಕಳಕಮಲ್ಲಯ್ಯನ ಭಕ್ತರಿಗೆ
ನಮ್ಮ ಸ್ವಾಗತಗಳು

Monday, April 10, 2017

ಅವಳ ನೆನಪುಗಳು

ಅವಳು ಬಿಟ್ಟು ಹೋದ ನೆನಪುಗಳು
ಕಪಿಗೆಯಾದ ಗಾಯದಂತೆ
ಮಾಸದು, ಕೆರೆಯುವದ ಬಿಡದು

ಅವಳೊಂದಿಗೆ ಕಳೆದ ದಿನಗಳು
ಹರಿದು ಹೋದ ಹಳ್ಳದಂತೆ
ನಿಲ್ಲದು, ಹಿಮ್ಮುಖವಾಗೆಂದೂ
ಹರೆಯದು

ನನ್ನೊಂದಿಗಾಡಿದವಳ ಮಾತುಗಳು
ಇರುಳಲಿ ಚೆಲ್ಲಿದ ತಾರೆಗಳಂತೆ
ಎಣಿಸಲಾಗದು, ಹುಡುಕಿದರೂ
ಹಗಲಲ್ಲಿ ಕಾಣಲಾರವು

ನನ್ನ ಬದುಕಿಗೆ ಅವಳು ನೀಡಿದ ಪ್ರೀತಿ
ಮರಳುಗಾಡಿನ ಮರಳು ದಿನ್ನೆಯಂತೆ
ಗಟ್ಟಿಯಲ್ಲದು, ಬಿಸುವ ಬಿರುಗಾಳಿಗೆ
ಕರಗಿ ಹಾರುವದು
ಇನ್ನೊಬ್ಬನ ಮನಕೆ ಪ್ರೀತಿಯ
ದಿನ್ನೆಯಾಗುವುದು

Saturday, April 8, 2017

ಬರ-ಸತಿ

ನಿಜ...
ಬಡತನದ ಬೇಗೆಗೆ ಬೇಸತ್ತು
ನನ್ನೆರಡು ಎತ್ತುಗಳ ಮಾರಿ
ಬಂದಿರುವೆ
ಬಾಳಿನ ಬಂಡಿಗೆಂದು ಕರೆತಂದ
ನಿನ್ನನು ಬದುಕಿನ ನೊಗಲನ್ನು
ನಿನ್ನ ಹೆಗಲಿಗೆರಿಸಿರುವೆ

ಹೂವ ಹಾಸಲಿ ನಡೆಸುವೆನೆಂದವನು
ಕಾದ ಹಂಚಾದ ಈ ಮಣ್ಣ ಧೂಳಲಿ
ನಿನ್ನ ನಡೆಸುತಿಹನು, ನನ್ನೊಂದಿಗೆ
ಸಪ್ತಪದಿ ತುಳಿದ ತಪ್ಪಿಗೆ ನಿನಗೀ...
ಗತಿ ಬಂದಿತೇನೊ?

ಆ ಶಶಿಯ ಬೆಳ್ಳಿಯ ಕಿರಣಗಳೂ
ನಿನ್ನ ಮುಟ್ಟದಂತೆ ಕಾಯುವೆನೆಂದಿದ್ದೆ
ಈ ಹಾಳು ಹೊಟ್ಟೆಗಾಗಿ ಸುಡುವ ಸೂರ್ಯನ
ರಶ್ಮಿಗೆ ನಿನ್ನನೊಡ್ಡಿರುವೆ

ಹರನು ಬೀಸಿದ ಈ ಬರದ ಬಲೆಗೆ ಸಿಕ್ಕ
ಮೀನುಗಳು ನಾವು
ಹಸಿವೆಂಬ ಗಾಳಕೆ ಸಿಲುಕಿಸಿ ನನ್ನ ನಿನ್ನನೂ
ವಿಲವಿಲಿಸುತಿಹನು

ಬರಲಿ ಒಡತಿ ಬರವು ಇನ್ನೂ ಹೆಚ್ಚಿಗೆ
ಸುಡಲಿ ಗೆಳತಿ ಸೂರ್ಯನೂ ಹೊತ್ತು ಹೊತ್ತಿಗೆ
ಸುರಿಸಲಿ ಸಾಕು ನಾಕು ಹನಿಯ ಧರಣಿಗೆ
ಬಿತ್ತಿ ತೋರಿಸೊಣ ಆ ಶಿವನಿಗೆ
ಬಂದ ಬಂಗಾರದ ಫಸಲನು
ಒಯ್ಯೋಣ ನಮ್ಮ ಮನೆಗೆ