Monday, December 11, 2017

ಸಾ.ಚಿ.ಗೋಷ್ಠಿ ೭೨

ಇಂದಿನ ೭೨ ನೇ ವಾರದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಉಪನ್ಯಾಸಕರು. " ಕರ್ನಾಟಕದಲ್ಲಿ ಸ್ಮಾರಕಗಳು" ವಿಷಯ ಕುರಿತು ಶ್ರೀಯುತ ಇಮಾಮಸಾಬ ಕೋಲಕಾರ (ಭೂ ಸೇನಾ ನಿವೃತ್ತಿ ಸೈನಿಕರು, ಸದರಿ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಸಂರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವರು) ಇವರು ಉಪನ್ಯಾಸವನ್ನು ನೀಡಿದರು. ಅದರ ಕುರಿತು ಕೆಲವು ಉಪಯುಕ್ತ ಮಾಹಿತಿ ನಿಮ್ಮ ಅವಗಾಹನೆಗಾಗಿ..

  ಪ್ರಾರಂಭದಲ್ಲಿ ಶ್ರೀಯುತರು ತಮ್ಮ ಸೇನಾ ಕಾರ್ಯಸೇವೆಯ ಬಗ್ಗೆ ಮಾತನಾಡಿದರು. ಇಪ್ಪತ್ತು ವರ್ಷ ಮತ್ತು ಮೂನ್ನುರ ನಾಲ್ವತ್ತೊಂದು ದಿನಗಳಲ್ಲಿ ದೇಶದ ಮುಖ್ಯ ಗಡಿಭಾಗಗಳಲ್ಲಿ ಸೇವೆಗೈಯ್ಯುಯದದನ್ನು ನೆನೆದು ಸ್ಮಾರಕಗಳ ಕುರಿತು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದರು. ಬಸವಣ್ಣನನ್ನು ನೆನೆದು
೧೯೯೬ರಲ್ಲಿ ನಮ್ಮ ಕರ್ನಾಟಕದ ಪ್ರಧಾನ ಮಂತ್ರಿಯಾದಂತಹ ದೇವೆಗೌಡ ಹಾಗೂ ದಿ. ಎಸ್ ಆರ್ ಬೊಮ್ಮಾಯಿ ಇವರ ಆಸಕ್ತಿಯೊಂದಿಗೆ ಧಾರವಾಡದಲ್ಲಿ ಭಾರತೀಯ ಪುರಾತತ್ವ ವಲಯ ಎಂಬ ಶಾಖೆಯು ತೆರೆಯಲ್ಪಟ್ಟಿತು. ಈ ಒಂದು ಕಟ್ಟಡವನ್ನು ಉಧ್ಘಾಟಿಸಿದ್ದು ದಿ.ಎಮ್.ಎಮ್. ಕಲ್ಬುರ್ಗಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಬೀದರನಿಂದ ಹಿಡಿದು ಭಟ್ಕಳದವರೆಗೂ ಇದರ ವ್ಯಾಪ್ತಿಗೊಳಪಡುತ್ತದೆ. ಧಾರವಾಡದ ವಲಯಗಳ ಕೆಳಗೆ ಹನ್ನೊಂದು ಉಪ ವಲಯಗಳು ಬರುತ್ತವೆ. ಅದರಲ್ಲೂ ಬಿಜಾಪುರ ಪೂರ್ವ, ಪಶ್ಚಿಮ ಬಿಜಾಪುರ ಎಂದು ವಿಂಘಡಿಸಿದ್ದಾರೆ ಕಾರಣ ನಮ್ಮ ಉತ್ತರ ಕರ್ನಾಟಕದಲ್ಲಿ ಬಿಜಾಪುರದಲ್ಲಿ ಸಾಕಷ್ಟು ಸ್ಮಾರಕಗಳು ಬರುವುದರಿಂದ ಇದನ್ನು ವಿಭಾಗಿಸಲಾಗಿದೆ. ೧೯೫೮ ರ ಕಾನೂನಿನ ಪ್ರಕಾರ ಆ ಕಾಯ್ದೆಯಲ್ಲಿ ಏನನ್ನು ತಿಳಿಸಲಾಗಿದೆಯೊ.. ಆ ಕಾನೂನುಗಳ ಪ್ರಕಾರ ಸ್ಮಾರಕಗಳನ್ನು ಹಾಗೆ ಸಂರಕ್ಷಿಸಬೇಕಾಗುತ್ತದೆ. ಇದರ ಪ್ರಕಾರ ಗುಡಿಯಾಗಲಿ, ಮಸೀದಿಯಾಗಲಿ, ಜೈನ ಮಂದಿರಗಳಾಗಲಿ ಇದ್ದ ಸ್ಥಿತಿಯಲ್ಲಿಯೆ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಧಾರವಾಡದ ವಲಯದಲ್ಲಿ ಎರಡ್ನೂರ ಇಪ್ಪತ್ಮೂರು
ಕುಕನೂರು ಇಟಗಿಯ ಮಹಾದೇವ ಸ್ಮಾರಕ ಗುಡಿಯ ಕುರಿತು ಉಪನ್ಯಾಸವನ್ನು ನೀಡಲು ಡಿ.೧೫. ೧೬. ೧೭. ರಂದು ಇಟಗಿ ಉತ್ಸವವು ನಡೆಯುತ್ತಿದ್ದು ಕಾರಣ ಸಕಲರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ...ಇಟಗಿ ಸ್ಮಾರಕ
ಸೋಮನಾಥೇಶ್ಚರ ದೇವಾಲಯ ಪೂರ್ವ ಉತ್ತರ ಮತ್ತು ದಕ್ಷಿಣ ಕ್ಕೆ ಮೂರು ದ್ವಾರ ಬಾಗಿಲಗಳಿದ್ದು

ನಿನ್ನದೆ ಮದಿರೆ

ಮೋಹಕ ನಗುವಿನೊಂದಿಗೆ
ಅಂದೇದೆಯಲಿ ನೀ ಹಚ್ಚಿ, ಬಿಟ್ಟು
ಹೋದ ಪ್ರೀತಿಯ ಬೆಂಕಿಯ ಆರಿಸಲು...
ಕುಡಿಯುತಿರುವೆ, ಬಟ್ಟಲು...ಬಟ್ಟಲು..ಮದಿರೆ..
ಕುಡಿದಷ್ಟೂ... ಹೆಚ್ಚಾಗುತಿದೆ ವಿನಃ...
ನಂದಿ ಹೋಗುವ ಸೂಚನೆಯನ್ನೆ ತೋರುತಿಲ್ಲ

ಮಧುಪಾತ್ರೆಯಲಿ ಮಲಗಿದ ಮಧ್ಯಕ್ಕೆ
ಹಚ್ಚಿದ ಬೆಂಕಿಯನು ನಂದಿಸಬಹುದು...
ಕುಡಿದಾದರೂ...
ನಾ ಹೇಗೆ ನಂದಿಸಿಕೊಳ್ಳಲಿ ? ನನ್ನೆದೆಯ ಬೆಂಕಿಯ,
ಮಧು ತುಂಬಿದ ನಿನ್ನದರದಿಂದ, ನನ್ನದರಕೆ
ಒಲವೆಂಬ ತಂಪನು ಸುರಿಯುವವರೆಗೂ...

ಉಳಿಸಿಕೊಳ್ಳುವೇಯಾ...?
ಈ ಮದಿರೆಯ ದಾಸನನು, ನೆನಪುಗಳ ಕೆಸರಲಿ
ಸಿಕ್ಕು ನರಳಾಡುತಿರುವೆ, ನಿನ್ನ ಹೆಸರನೆ
ಕೂಗಿ...ಕೂಗಿ...
ಕಿರು ಬೆರಳಾದರೂ ನೀಡು, ಎದ್ದು ಬರುವೆ ಈ
ನರಕದಿಂದ,  ಇಲ್ಲವೆ.....
ಚೂರು ವಿಷವಾದರೂ ಕುಡಿಸಿಬಿಡು
ಮರೆಯಾಗಿ ಬಿಡುವೆ ಈ ಲೋಕದಿಂದ

Sunday, December 10, 2017

ವಿಧಿಗೆ ಸಿಕ್ಕ ವಿಧವೆ

ನೀ... ಹತ್ತಿಸಿದ ಒಲವಿನ ದಾಹವಿನ್ನೂ... ಆರಿಲ್ಲ
ತಣಿಸದೆ, ಅರ್ಧದಲ್ಲೆ ಬತ್ತಿ ಹೋದೆಯಲ್ಲ
ತನುವಿಗೆ ಸೋಕಿಸಿದ ತಾಪವನ್ನು ತಂಪಾಗಿಸದೆ...
ದೇಹದಣು ದಣುವಲು ವಿರಹದ ಬೆಂಕಿಯ ಹೊತ್ತಿಸಿ,
ಕಾಲನ ಅಸೂಯೆಗೆ ಸಿಕ್ಕು ಉರಿದು ಹೋಗುತಿರುವೆಯಲ್ಲ...

ಇರುಳು ಶಯನದಿ ನಾವಿಬ್ಬರೊಡಗೂಡಿ ಹೊಸಕಿದ
ಕುಸುಮಗಳ ವಾಸನೆಯು ಆರಿಲ್ಲ... ಕಿಟಕಿಯಂಚಿನಿಂದ
ಕದ್ದು ಇಣುಕುವ, ಮಧುಚಂದ್ರಮನ ನೋಟಕೆ, ನಾನೇನು
ಉತ್ತರಿಸಲಿ... ಪ್ರತಿ ದಿನವೂ ದೀಪವ ಸಾಯಿಸಿ ಮಲಗುತ್ತಿದ್ದ ನಾವು, ಇಂದು ನೋಡು ನೀನಿಲ್ಲದೆ ಅದರ ಕಾಂತಿ ನನ್ನನು,
ಕರುಣೆ ತೋರದೆ ಸುಡುತಿಹುದು....

ಸಿಹಿ‌ ಮುತ್ತಿನ ಸವಿಯನುಂಡಿದ್ದ ಕೆನ್ನೆಯ ರಂಗುಗಳಿಂದು, ನಿನ್ನಗಲಿಕೆಯ ಕಾಣಿಕೆಯಾಗಿ ಕಣ್ಣೀರಿನ ಉಪ್ಪನು
ಸವಿಯುತಿಹವು...
ಮನದಾಸೆಗಳೆಲ್ಲ ಗರ್ಭಪಾತವಾಗಿ, ಕಂಡ ಕನಸುಗಳೆಲ್ಲ ಕಮರಿಹೋಗಿ, ಮನದ ಮಾತುಗಳ ಅರಗಿಸಿಕೊಳ್ಳಲಾಗದೆ,
ಮನಕೆ ಮೌನದ ಬೀಗವ ಜಡಿದು, ಕುಳಿತಂತಾಗಿದೆ....

ಓ.... ವಿಧಿಯೆ...
ಒಲವ ರಾಗವ ನುಡಿಸುತಲಿದ್ದ, ಕೊಳಲಿನ ಉಸಿರೊಂದನು
ನಿಲ್ಲಿಸಿ, ಕೊನೆಯಿಲ್ಲದ ಶೋಕ ರಾಗದ ಗಾನವನು ಕಟ್ಟಿ
ಕೊಟ್ಟಿರುವೆಯಲ್ಲ.... ಕೊರಳ ಬಂಗಾರವ ಕಸಿದು, ಬಿತ್ತಿದರು ಬೆಳೆಯದಂತಹ ಸಾವಿನ ವಿಷವ ಸುರಿದು, ನಳನಳಿಸುತಿರುವ ಹಣೆಯನು ಬಂಡೆಯನ್ನಾಗಿಸಿ ನಗುತಿರುವೆಯಲ್ಲ...
ಒಡಲ ಕೊಳದಲೊಂದು ಹುಳವಿಗೆ ಜೀವವನು ತುಂಬದೆ !!!

ಓ... ವಿಧಿಯೆ...
ನನ್ನ ಹಣೆಯ ಹುಡಿಯೆ... ಬೇಕಿತ್ತೆ ನಿನಗೆ ?
ಇಬ್ಬರನು.. ಕರೆದೊಯ್ದಿದ್ದರೆ, ಕಷ್ಟವಾಗುತ್ತಿತ್ತೇನೊ....?
ಇದಕ್ಕಾದರೂ.... ಉತ್ತರಿಸುವೇಯಾ...?
ನಲ್ಲನನ್ನೇನೊ...ಬೆಂಕಿಯ ಪಾಲಾಗಿಸಿದೆ..
ನನ್ನನ್ನೇಕೆ ? ಉಳಿಸಿ, ಬಾಳಿಗೆ ಕಣ್ಣೀರನ್ನು
ಉರುಳಾಗಿಸಿದೆ ....

Wednesday, December 6, 2017

ನಡೆವುದೊಂದೆ ಆಯ್ಕೆ

ಬಾಳ ಕಾನನದಿ ತೊಟ್ಟಿಲು ತೂಗಿ
ಕೈ ಬಿಟ್ಟಿಹನು ಭಗವಂತ....
ನಡೆವ ದಾರಿ ಕಲ್ಲೊ....ಮುಳ್ಳೊ.....
ಎಚ್ಚೆತ್ತು ನಡೆಯುತ್ತಾ ಸಾಗುತ್ತಿರಬೇಕು

ಕಣ್ತಪ್ಪಿ ತುಳಿದ ಮುಳ್ಳಿನ ನೋವು
ಮುಂದಿನ ದಾರಿಯ ಬಗ್ಗೆ ಎಚ್ಚರವಹಿಸುವಂತೆ ಮಾಡುತ್ತದೆ
ಈಗ ಎಡವಿದ ಕಲ್ಲು, ಮುಂದೆಂದೂ
ಎಡವದಿರೆಂದು ಎಚ್ಚರಿಸುತ್ತದೆ.

ನಮ್ಮಂತೆ ಎಷ್ಟೊ.... ಜನರಿಹರಿಲ್ಲಿ
ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು
ನಡೆಯಬೇಕಿದೆ ಇಲ್ಲಿ.... ದುಷ್ಟ ಮನಗಳ
ಮೃಗಗಳ ಕಣ್ತಪ್ಪಿಸಿ

ನಡೆಯುವುದೊಂದೆ ಆಯ್ಕೆ,
ನಡೆಯುತಿರಬೇಕು ದಣಿವಾದರೂ...
ಸೂರ್ಯಾಸ್ತವ ಹೊಂದುವವರೆಗೂ

🙏🙏🙏🙏🙏🙏🙏
👌👌👌👌👌👌👌

Tuesday, December 5, 2017

ಬಂಧನ ೪೨೫

ಚುಮು...ಚುಮು ಚಳಿಯ
ಕೊರೆತಕ್ಕೆ, ಕೊರಳಿಗೆ ಹಾಕುವೆ
ತೋಳ್ಬಂಧನ..

ಉರಗಗಳಂತಿಬ್ಬರು ಬಿಗಿದು
ಹಾಕಿ ಬಿಡುವ....
ವಿರಹದುರಿಗೆ
ದಿಗ್ಬಂಧನ

Sunday, December 3, 2017

ಮಣ್ಣಲಿ ಮಣ್ಣಾಗಿಸು

ನಿನ್ನ ಹಾಗೆ ಅತ್ತು ಎದೆಭಾರವ
ಹಗುರ ಮಾಡಿಕೊಳ್ಳುವ ಧೈರ್ಯ
ನನಗಿಲ್ಲದಲೆ... ಮದಿರೆಯ ಬಟ್ಟಲನ್ನು
ಹಿಡಿದಿರುವೆ...
ನನ್ನೆದೆಯ ಉರಿಯ ತಣ್ಣಗಾಗಿಸಿಕೊಳ್ಳುವ
ದವಾ.. ವಾಗಿಸಿಕೊಂಡೆ ಮಧು...ರಾ

ಕರೆದರೂ.. ಕರಗದ ಕತ್ತಲಲಿ,
ಮೋಡದ ಮರೆಯಲ್ಲಿ ಅವಿತು...
ನಗೆಯ ಮುಳ್ಳನು ಚುಚ್ಚುವ
ಚಂದಿರನ ರಾತ್ರಿಗಳಷ್ಟನ್ನೆ..
ನೀನು ಅನುಭವಿಸಿದ್ದು !!!
ನೋವನು ಅವನೊಂದಿಗೆ ಹಂಚಿಕೊಂಡದ್ದು...
ಹಗಲಿರುಳಗಳ ಅಡಕತ್ತರಿಯಲ್ಲಿ
ಸಿಕ್ಕ ನನ್ನ ನೋವಿನ ಅಡಿಕೆಯ ಮನವನ್ನು
ಅರಿಯುವರೊಬ್ಬಾರು... ಇಲ್ಲವಿಲ್ಲಿ...!!!
ಎಲ್ಲರೂ... ನನ್ನಾವಸ್ಥೆಯ ಕಂಡು, ನಗುವೆಂಬ
ಕತ್ತರಿಯ ಹಿಡಿದೆ ನಿಂತಿರುವರು...ಕತ್ತರಿಸಲು !!!

ನೃತ್ಯದ ರಭಸಕೆ ಜಿನುಗಿದ ಹಿಮ್ಮಡಿಯ
ನಿನ್ನ ರಕ್ತಕ್ಕಿಂತ....
ನನ್ನೆದೆಯ ರಕ್ತವು ಎಷ್ಟೊ....
ಮದಿರೆಯ ಬಟ್ಟಲುಗಳಲ್ಲಿ
ಇಳಿದಿದ್ದು ನಿನಗೆ ತಿಳಿದೆ.. ಇಲ್ಲ !!!
ಬರೆದ ಪ್ರತಿಯೊಂದು ಕಾವ್ಯದ
ಪದಕೆ ನಿ ಕಿವಿಯಾಗಲೇ....ಇಲ್ಲ
ಮೇಣ ದೀಪದ ಬೆಳಕಲಿ ಮಿಂಚಿ,
ನಿನ್ನ ಕೆಂಪು ರಂಗೀನ ಮದರಂಗಿ ಪಾದಗಳಿಗಂಟಿದ,
ನನ್ನ ಕಣ್ಣಂಚಿಂದ ಜಾರಿದ ಹನಿಗಳ ನಿ....
ಎತ್ತಿಕ್ಕಲೆ ಇಲ್ಲ..
ಮುಂಗೈಗೆ ಸುತ್ತಿ ಘಮಘಮಿಸಿದ
ಮಲ್ಲಿಗೆಯ ಆಘ್ರಾಣಿಸಿ, ಮೆಚ್ಚಿ ನಿನ್ನ
ತುರುಬಿಗೆ ನಾ ಮುಡಿಸಿದ ಘಳಿಗೆಯ
ಒಂದಿನಿತು ನಿ....ನೆನೆಯಲೆ....ಇಲ್ಲ

ನಿನಗೆ ಹೇಗೆ ಹೇಳಲಿ, ನನ್ನೊಳಗಿನ ನೋವನು
ಬಟ್ಟಲೊಳಗಿನ....ಷರಾಬಿನ ಹನಿ... ಹನಿಗೂ
ಹೇಳುವೆ....ನಿನ್ನನ್ನು,
ಸ್ವಪ್ನದಲ್ಲಾದರೂ ಒಂದುಗೂಡಿಸು
ಇಲ್ಲವೆ ನನ್ನನ್ನು ಮಣ್ಣುಗೂಡಿಸು ಎಂದು

ಶರಣ ೭

ಅಜ್ಞಾನವು ಮತಿಯ ಹೊಕ್ಕು
ಮದಬಂದ ಗಜದಂತೆ ಮೆರೆಯುತಿಹುದು
ಕಾಯ..
ಜ್ಞಾನವೆಂಬ ಅಂಕುಶದಿಂದ ಎನ್ನ
ದುರ್ಬುದ್ದಿಯ ಮದಿಸಿ...
ಸುಜ್ಞಾನದ ಸುಧೆಯ ಸುರಿಸಿ...
ಸತ್ವಿಚಾರಗಳತ್ತ....ಬೆಳಕ ತೋರೊ..
ಶ್ರೀ ಶರಣಬಸವ