ಈ ಎದೆಯ
ಗೂಡೊಂದು
ಗಾರೆ, ಇಟ್ಟಿಗೆಗಳಿಂದ
ಕಟ್ಟಿದ್ದಾಗಿದ್ದರೆ
ಎಷ್ಟು ಸುಖವಿರುತ್ತಿತ್ತು
ಸಾಕಿ...
ನೋವಿಂದ
ಒಡೆದಾಗಲೆಲ್ಲ...
ಮತ್ತೆ... ಮತ್ತೆ...
ಕಟ್ಟಿಕೊಳ್ಳಬಹುದಿತ್ತು...
ಈ ಎದೆಯ
ಗೂಡೊಂದು
ಗಾರೆ, ಇಟ್ಟಿಗೆಗಳಿಂದ
ಕಟ್ಟಿದ್ದಾಗಿದ್ದರೆ
ಎಷ್ಟು ಸುಖವಿರುತ್ತಿತ್ತು
ಸಾಕಿ...
ನೋವಿಂದ
ಒಡೆದಾಗಲೆಲ್ಲ...
ಮತ್ತೆ... ಮತ್ತೆ...
ಕಟ್ಟಿಕೊಳ್ಳಬಹುದಿತ್ತು...
ನನ್ನೆದೆಯೊಳಗೆ
ಸುಡುವವಳ
ನೆನಪುಗಳ
ಕಾವು...
ನಿನಗರಿವಾಗದು
ಸಾಕಿ...
ನಾ...
ಬರೆದಿಟ್ಟ
ಪದ್ಯಗಳ
ಮೇಲೆ...
ಒಮ್ಮೆ ಕೈ
ಇಟ್ಟಾದರೂ
ನೋಡು....
ಬಿಸಿ ತಾಕಿದರೂ...
ತಾಕಬಹುದು..
ಸೋಲುತ್ತೆವೆಂದು
ಗೊತ್ತಿದ್ದರೂ...
ಅವಳ
ಮನದ
ಬಾಗಿಲನ್ನು
ತಟ್ಟುವರಲ್ಲ
ಎಲ್ಲ
ರಸಿಕರು...
ಸಾಕಿ....
ಬಹುಶಃ
ಸೋತವರಿಗೆಲ್ಲ
ನಿನ್ನರಮನೆಯ
ಬಾಗಿಲು
ತೆರೆದಿರುವುದಲ್ಲ
ಎಂಬ ಹುಂಬು
ಧೈರ್ಯವಿರಬಹುದೇನೋ....
ಅವಳಂದವ
ಕಂಡು...
ಹೊಟ್ಟೆ
ಉರಿದುಕೊಂಡವರು
ಅದೇಷ್ಟೊ...
ಸಾಕಿ..
ಉರಿಯುತಿರುವ
ಹೊಟ್ಟೆಯ
ತಣ್ಣಗಾಗಿಸಿಕೊಳ್ಳಲು
ಅನುದಿನವು
ಕುಡಿಯುತಿರುವೆ...
ಅವಳ ನೆನಪುಗಳ
ಬಾಗಿಲಿಗೆ
ಬೀಗ ಹಾಕಿ...
ಅವನ
ಅಡಿಗೆ ಒಂದು
ಹೂವನ್ನಾದರೂ
ಇಟ್ಟಿರಲ್ಲಿಲ್ಲ
ಸಾಕಿ....
ಅವಳ
ಮೋಹದ
ಸೆರಗಲಿ
ಸೆರೆಯಾಗಲೆಂದು
ಅಡಿಯಿಂದ
ಮುಡಿಯವರೆಗೂ...
ಪುಷ್ಪಗಳಲ್ಲೆ...
ಅವನನ್ನು
ಮುಚ್ಚಿಬಿಟ್ಟಿರುವೆನಿಂದು
ಅವಳ
ನೆನಪುಗಳ
ಸುಳಿಯಿಂದ
ಮೇಲೆತ್ತಲೆಂದು...
ನಿನ್ನನ್ನು
ದೇವರೊಮ್ಮೆ
ಭೇಟಿಯಾದರೆ...
ನನಗೂ
ತಿಳಿಸು
ಸಾಕಿ....
ಅವನಲ್ಲಿ
ಒಂದು ಪ್ರಶ್ನೆಯನ್ನು
ಕೇಳಬೇಕಿದೆ...
ಬದುಕಿನ
ತಕ್ಕಡಿಯಲ್ಲಿ
ನೋವಿನ ಭಾರವನ್ನೆ
ಏಕೆ
ಹೊರಿಸಿದೆಯೆಂದು...
ಊರಲ್ಲಿರುವ
ಎಲ್ಲ....
ದೇವರುಗಳಲ್ಲಿ
ಬೇಡಿಕೊಂಡು
ಬಂದಿರುವೆ
ಸಾಕಿ..
ನಾ ಕೊಟ್ಟ
ಗುಲಾಬಿ
ಅವಳ
ಮುಡಿಯಲ್ಲಾದರೂ
ನಗುತಿರಲಿ
ಇಲ್ಲವೆ.....
ನನ್ನ
ಗೋರಿಯ
ಮೇಲಾದರು
ಅಳುತಿರಲಿ..