ಸಾಕಿ....
ಮಧು ಬಟ್ಟಲನ್ನು
ಹಿಡಿದುಕೊಂಡು ದರ್ಪಣದಲ್ಲಿ
ನನ್ನನೊಮ್ಮೆ ನೋಡಿಕೊಂಡಾಗ,
ನನ್ನ ಮೇಲೆ ನನಗೆ ಜಿಗುಪ್ಸೆಯೆನಿಸುವುದು
ನೀರು ಕಾಣದ ಮೊಖ, ಎಣ್ಣೆ ಮುಟ್ಟದ
ಕೆದರಿದ ಕೇಶ, ನನ್ನದೆ ಜಾಗವಿದೆಂದು
ಹುಲುಸಾಗಿ ಬೆಳೆದ ಗಡ್ಡ...
ಗಂಜಿಯ ಕಾಣದ ಬಟ್ಟೆ, ಹೊಟ್ಟೆಗೆ
ಹಿಟ್ಟಿಲ್ಲದೆ ಸೊರಗಿರುವ ದೇಹ...
ಅಲ್ಲಾ... ಎಪ್ಪತ್ತೈದು ದೇಹ ತೂಕದ
ನನ್ನನ್ನು... ಕೇವಲ ಆ ಒಂದು
ಚಿಕ್ಕ ಮಲ್ಲಿಗೆಯ ನಗುವಿನಿಂದ
ಸೋಲಿಸಿಬಿಟ್ಟಳಲ್ಲ....ಸಾಕಿ
ಅವಳ ತುಂಟಿಯಂಚೊಳಗಿನ
ಮಿಂಚಿನ ನಗುವಿನ ತೂಕವಾದರು
ಎಷ್ಟೀರಬಹುದು...?
Friday, May 4, 2018
ತೂಕ ಎಷ್ಟೀರಬಹುದು ಸಾಕಿ
ಶಾಯರಿ ೧೬೦
ನಿನ್ನ ಮನೆಯ
ಹೊರಗಿರುವ ನನ್ನೆಲ್ಲ
ಸ್ನೇಹಿತರಿಗೆಲ್ಲ ಒಂದು
ಕಿವಿ ಮಾತನ್ನು
ಹೇಳಿ ಕಳುಹಿಸಿಬಿಡು
ಸಾಕಿ...
ಹರೆಯವೆಂಬುದು
ಬೆಲೆಕಟ್ಟಲಾದದ್ದು
ಅವಳ ಮೋಹದ
ಹೊಳೆಯಲ್ಲಿ ಹಾರಿ
ಈಜುವ ಹುಚ್ಚು
ಸಾಹಸಕ್ಕೆ
ಕೈ ಹಾಕದಿರೆಂದು
ಶಾಯರಿ ೧೫೯
ನೆತ್ತರಿನ
ಸೊಂಕಿಲ್ಲದೆ
ಯಾವ
ಸಾಮ್ರಾಜ್ಯವು
ಉದಯಿಸಲಿಲ್ಲ
ಸಾಕಿ...
ನಿನ್ನ ಮಧು
ಬಟ್ಟಲಿನ
ಸ್ಪರ್ಶವಿಲ್ಲದ
ಯಾವ
ವಿರಹಕೂ....
ಅಳಿವಿಲ್ಲ
ಶಾಯರಿ ೧೫೮
ದೇವರ ಮುಂದೆ
ಲಕ್ಷಗಟ್ಟಲೆ
ಆಸೆಗಳ
ಬೇಡಿಕೆಗಳನ್ನು
ಬೇಡುತ್ತೇವೆ
ಸಾಕಿ...
ಮೆಟ್ಟಿಲುಗಳ
ಮೇಲೆ
ಕುಳಿತ
ಭಿಕ್ಷುಕರಿಗೆ
ಭಿಕ್ಷೆಯನ್ನು
ನೀಡಲು....
ಚಿಲ್ಲರೆಗಾಗಿ
ಜೇಬನ್ನು
ತಡಕಾಡುತ್ತೇವೆ..
Thursday, May 3, 2018
ಹೂವು ಸೊರಗಿತ್ತು ೪೨೬
ತಂದ ಹಾಲು
ಬಿಸಿ ಆರಿ ಕೆನೆಗಟ್ಟಿತ್ತು..
ಹಚ್ಚಿದ ಗಂಧದ ಕಡ್ಡಿಗಳು
ಉರಿದು ಬೂದಿಯಾಗಿದ್ದವು...
ಅಲಂಕರಿಸಿದ ಸುಮಗಳೆಲ್ಲ
ಇವಳ ನೋಡಿ ನಗುತ್ತಿದ್ದವು...
ಜಡೆಯೊಳು ಬಿಗಿದು ಮಲಗಿದ್ದ
ಖೇದಿಗೆ ಮಾತ್ರ ಘಮವಿನ್ನು ಬಿರುತ್ತಿತ್ತು...
ಮಧು ಹೀರುವ ದುಂಬಿ ಕಾವಿಲ್ಲದೆ ಮಲಗಿತ್ತು...
ಕಾದು ಕುಳಿತ ಹೂವು ಮಾತ್ರ ಸೊರಗಿ ಕುಳಿತಿತ್ತು..
Tuesday, May 1, 2018
ಶಾಯರಿ ೧೫೭
ಸುಣ್ಣ ಬಡಿದ
ಗೋಡೆಗೆ
ಬಣ್ಣವ ಹಚ್ಚುವ
ಹುಚ್ಚು
ಸಾಹಸವೇಕೆ....
ಸಾಕಿ..
ಬಣ್ಣ ಹತ್ತಿದರು..
ಹತ್ತಬಹುದು
ಗೋಡೆಗೆ..
ಅವಳು ಮನಸಲಿ
ಮಾಡಿದ ಗಾಯಕೆ,
ನಿನ್ನ ಪ್ರೀತಿಯ
ಮುಲಾಮನ್ನು
ಎಷ್ಟೇ ಹಚ್ಚಿದರೂ...
ವಾಸಿಯಾಗದು
ಮತದಾರ...
ಹಾಕಬೇಕಿದೆ ನನ್ನದೊಂದು ಓಟು
ಪಡೆಯದೆ ಏಂಜಲು ಕಾಸಿನ ನೋಟು..!!!
ತೆರೆದಿರಿಸಬೇಕಿದೆ ನನ್ಮನೆಯ ಗೇಟು
ಅಪರೂಪದ ದಿನವಿದು.. ಖಾದಿಗಳು ಬರುವರಲ್ಲ
ಹಿಡಿದುಕೊಂಡು ತಾಟು
ಈಗ ಊರ ಹೊರಗೆಲ್ಲ ಮಸಾಲೆಯದ್ದೆ ಘಾಟು
ರಸಗೊಬ್ಬರ ಗುಂಡಿಗಳಲ್ಲಿ ಕರಗದೆ ಮಲಗಿದೆ ಪ್ಲಾಸ್ಟಿಕ್ ತಾಟು
ನಾಚಿಕೆಯಿಲ್ಲವೆ...? ಮರೆತಿರುವಿರಾ..ಲಾಠಿ, ಗುಂಡಿನೇಟು
ಬೆಳೆದ ಬೆಳೆಗಳು ಮನೆಯಲ್ಲಿ ನುಸಿ ತಿನ್ನುತ್ತಿವೆ....
ಇನ್ನೂ ಏರಿಸಿಲ್ಲ ಬೆಂಬಲ ಬೆಲೆಯ ರೇಟು
ಈ ಮಣ್ಣಲ್ಲಿ....ಮತಕ್ಕೆ ಕಟ್ಟುವರು ಎಷ್ಟಾದರು ವೇಯ್ಟು
ಕಾರಣ...ಮೂಗುದಾರವಿರದೆ ನಾಗಾಲೋಟದಲ್ಲಿರುವುದಲ್ಲ ಜನಸಂಖ್ಯೆಯ ಓಟ
ಎಲ್ಲಿರುವುದು ಐಕ್ಯತೆ.. ಗಲ್ಲಿಗಲ್ಲಿಗೊಂದು ಹಾರುತಿವುದು ಬಾವುಟ
ಅಭಿಮಾನ ಹೆಚ್ಚಾದರೆ....!!!!! ಕೂಡಿಸುವರು ಬಡಿದು ಗೂಟ
ಕಿತ್ತೊಗೆದು ಬಿಡಿ, ಹಾಳ ಕೆರೆಯಲ್ಲಿ ಭಾಗ್ಯಗಳ ಮೂಟೆ,
ಶಾಂತಿ... ನೀರು..ಬೆಳಕು..ಗಾಳಿ..ಒಂದಿಷ್ಟು ದುಡಿಮೆ
ಇವೆಲ್ಲವ ಪಡೆಯುವುದರಲ್ಲಿ ತೋರಿಸಿ ನಿಮ್ಮ ಭರಾಟೆ
ಹೊತ್ತಿನ ಮುತ್ತು ಕೈ ಜಾರಿದ ಮೇಲೆ ಮಾಡಬೇಡಿರಿ ಗಲಾಟೆ
ಸತ್ತ ಹೆಣದ ಮುಂದೆ ಬಾರಿಸಿದರೇನು ಬಂತು...ತಮಟೆ
ಇವರದ್ದು..ವಂಶಪಾರಂಪರೆಯ ಅಧಿಕಾರ
ನಿಲ್ಲುವ ಅಭ್ಯರ್ಥಿ ಯಾರೊಬ್ಬನಿಲ್ಲ ಸಾಲಗಾರ
ಸಾಲ ಹೆಚ್ಚಾಗಿ ಸಾಯುವುದು ಮಾತ್ರ ಮತದಾರ
ಸತ್ತಾಗಲೂ...ಜಾತಿ ರಾಜಕೀಯ ಮಾಡಿ ಹರಿಯುವರು ಉಡದಾರ
ಅದಕ್ಕೂ...ಮೊದಲೆ ನೀವೆ ಹಾಕಿಬಿಡಿ ಇವರಿಗೆ ಬಿಗಿದಾದ ಮೂಗುದಾರ