ಸದ್ದಿಲ್ಲದೆ ನಿ... ಹೋದರು
ಸದ್ದು ಮಾಡುತ್ತಲೆ ನಿನ್ನ ಕಳಿಸುವರು
ಸದ್ದಡಗುವ ಮುನ್ನವೇ... ಏನನ್ನಾದರೂ
ಸಾಧಿಸು..
ಸಾಧಿಸಿದನ್ನಿ ಹೊತ್ತುಕೊಂಡುವರಾದರು
ಹೇಳುವರು
ಸದ್ದಿಲ್ಲದೆ ನಿ... ಹೋದರು
ಸದ್ದು ಮಾಡುತ್ತಲೆ ನಿನ್ನ ಕಳಿಸುವರು
ಸದ್ದಡಗುವ ಮುನ್ನವೇ... ಏನನ್ನಾದರೂ
ಸಾಧಿಸು..
ಸಾಧಿಸಿದನ್ನಿ ಹೊತ್ತುಕೊಂಡುವರಾದರು
ಹೇಳುವರು
ತಿಡಿಕೊಳ್ಳುವೆಯಲ್ಲ ಅದೇಷ್ಟು ಕಾಡಿಗೆ
ದೃಷ್ಟಿಯೇನಾಗದು ಬಿಡು ನಿನ್ನ ಕಣ್ಣಿಗೆ
ಆಗುವುದೆನಿದ್ದರು ಎಲ್ಲ ಪುಂಡರೆದೆಗೆ
ಮತ್ತೆ.. ನೀನು ನಡೆದು ಬಿಡುವೆ ಎಂದಿನಂತೆ
ನನಗೇನು ಗೊತ್ತಿಲ್ಲ ಎನ್ನುವ ಹಾಗೆ..
ಸಿಡಿದೆದ್ದಿದೆ..ಮೈ ಕೊಡವೆದ್ದಿದೆ..ನ್ಯಾಯಾಂಗ ವ್ಯವಸ್ಥೆ..!!!! ಭೂಗಳ್ಳರ ಮೈ ಚಳಿಯನ್ನು ಬಿಡಿಸುತಿದೆ...ಅಕ್ರಮದ ಮಣ್ಣಿನಲ್ಲಿ ಹೂತಿಹ ಹೆಣಗಳಿಗೂ ಭಯ ಬೀಳಿಸುತಿದೆ...
ಅಟ್ಟುತಿದೆ, ಜೈಲಿಗಟ್ಟುತಿದೆ...ನ್ಯಾಯ ದೇವತೆ ಕಣ್ಣಿಗೆ
ಬಟ್ಟೆಯ ಕಟ್ಟಿಕೊಂಡೆ ದಬ್ಬುತಿದೆ... ಕಗ್ಗತ್ತಲೆಯ ಕೋಣೆಗೆ
ಸಿಕ್ಕವರು...ಸೆರೆಯ ಹೊಕ್ಕವರು ಧನಿಕರೆನಲ್ಲ
ಕೆರೆಯ ಮಾಯವಾಗಿಸಿ, ಕಟ್ಟಡಗಳ ಕಟ್ಟಿದ ಬಿಲ್ಡರ್ ಗಳೆನಲ್ಲ
ಆಶ್ರಯಾಸೆಯ ತೋರಿಸಿ... ಲಕ್ಷ..ಲಕ್ಷಗಟ್ಟಲೆ ಹಣವ
ನುಂಗಿ, ಜನತೆಗೆ ನೀರು ಕುಡಿಸಿದ ವಸತಿ ವಂಚಕರಲ್ಲ
ಶಾಸಕರ ಹೊಟ್ಟೆಯ ತುಂಬಿಸುವ ದಲ್ಲಾಳಿಗಳಲ್ಲ..
ಬಲೆಗೆ ಬಿದ್ದದ್ದು... ಚಿಕ್ಕ ಚಿಕ್ಕ ಮೀನಗಳೆ...😢😢
ಕರಿದು...ಹುರಿದು ಮುಕ್ಕುತಿರುವುದು ಇವರನ್ನೆ...
ಹೊಟ್ಟೆಪಾಡಿಗಾಗಿ.. ಗೇಣುದ್ದ ಭೂಮಿಯ ಊಳಿದ
ಊಳಿಗರನ್ನೆ...
ಬಿಸಿಲೊ..ಮಳೆಯೊ.. ಒಂದೆಣಿಸದೆ ದುಡಿಯುವ
ಮಣ್ಣ ಮಕ್ಕಳನ್ನ...
ಮಳೆ-ಬೆಳೆಯಿಲ್ಲದೆ ಊರೂರು ಅಲೆಯುವ
ಅಲೆಮಾರಿಗಳನ್ನ....
ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಕೊಡುವ
ಯೋಗ್ಯತೆಯಿಲ್ಲ... ಹೊಲದ ಬದುವಿನ ಗಿಡಕ್ಕೆ
ನೇಣುಕೊಟ್ಟವರ ಬದುಕಿನ ಬಂಡಿಗೆ ನೇರವಾದವರಿಲ್ಲ
ಸಾಲದ ಶೂಲಕ್ಕೆ ಸಿಕ್ಕು ನರಳಾಡುತಿರುವವರ
ಉಪಚರಿಸುವವರಿಲ್ಲ...ಓಟಿಗಾಗಿ ಇವರುಗಳ
ಮನೆಯ ಕದವ ತಟ್ಟದವರೆ ಇಲ್ಲ... ಮೇವು
ನೀರಿಲ್ಲದೆ ಸಾಯುವ ದನಕರಗಳ ಗೋಳು..
ಇವರಿಗೆ ಬೇಕಿಲ್ಲ...
ಅಂತೂ...ಇಂತು ಹೂಡಿದೆ ಯುದ್ದ, ಭೂಗಳ್ಳರ ವಿರುದ್ಧ
ನ್ಯಾಯಾಂಗ ಬೀಸಿದ ಬಲೆಯಲ್ಲೂ ರಂಧ್ರಗಳುಂಟು
ಉಳ್ಳವರು ನುಣುಚಿಕೊಳ್ಳುವರು... ಹೊಟ್ಟೆಗೆ ಹಿಟ್ಟೆ
ಇಲ್ಲದವರು... ನುಣುಚಿಕೊಳ್ಳುವ ಮಾತೆಲ್ಲಿ...ನ್ಯಾಯ
ದೇವತೆ ಕಣ್ಣಿಗೆ ಬಟ್ಟೆಯನ್ನೆ ಕಟ್ಟಿಕೊಂಡು ತೀರ್ಪು
ನೀಡಿಬಿಟ್ಟಿರುವಳಲ್ಲ... ಒಂದು ವರ್ಷ ಜೈಲು...
ಹತ್ತು ಸಾವಿರ ದಂಡ...!!!!!! ಇನ್ನೇನುಳಿಯಿತು..?
ಅವನ ಸಂಸಾರದ ಬಾಗಿಲಿಗೊಂದು ಇಡಬೇಕಿದೆಯಲ್ಲ
ಪಿಂಡ...
ನನ್ನ ನಾ ಕಂಡುಕೊಳ್ಳಲೊಲ್ಲೆ
ಮಾಧವ... ನಿನ್ನ ಮಾರ್ಗದರ್ಶನವಿಲ್ಲದೆ...
ಅರಿತುಕೊಳ್ಳಲಾದರು ಹೇಗೆ..? ನನ್ನೊಳಗೆ
ನೀನಿರುವೆಂಬುದರ ಸಾಕ್ಷಾತ್ಕಾರವಾಗದ ಹೊರತು..
ಏನು ಮಾಡಲಿ...? ಬೆಳಕಲ್ಲಿ ನಿಂತವರೆ...
ಕತ್ತಲೆಗೆ ದೂಡುತಿಹರು...
ದೋಣಿಯ ಹತ್ತಿಸಿಕೊಂಡವರೆ...
ನಡು ನೀರಿನಲ್ಲಿ ದೂಡುತಿಹರು
ಗಿರಿಯನೆತ್ತಿದೆ... ಕಿರುಬೆರಳಿನಲಿ
ಗಿರಿಬಿಡು ಅಂಧಕಾರದ ಪೊರದೆಯನು
ಉಗಿರಿನಲಿ...
ದಯೆ ತೋರಿದೆ ನೂರೊಂದು ತಪ್ಪುಗಳಿಗೂ ಕಂಸನಲಿ...
ನಾ ಕಾಯಲಾರೆ, ಸುಟ್ಟುಬಿಡು ಲೆಕ್ಕವಿಡದೆ
ನನ್ನೆಲ್ಲ ತಪ್ಪುಗಳನು ಉರಿದುಹೋಗಲಿ
ನುಡಿಸು ನಿ ಮನತಣಿಸುವ ರಾಗವನು
ಅಂಕೆಯಿರದ ಮನವು ಸೋತು ಶರಣಾಗಲಿ
ಓದಿ ಸಾರವ ಸವಿಯುವ ಸಂತ ನಾನೇನಲ್ಲ
ಬೆಳಗಿಸಿಬಿಡು ಬೆಳಕೊಂದನು ಎದೆಯಲಿ,
ಬದುಕು ಸಾರ್ಥಕಗೊಳ್ಳಲಿ ನಿನ್ನದೆ ಸ್ಮರಣೆಯಲಿ...
ತಮ್ಮ ಮೂಕವಿಸ್ಮಿತ ಸಾಲುಗಳಿಗೆ ಈ
ಅಕ್ಷರ ಬಡವನ ಜೋಳಿಗೆಯಿಂದೆರಡು ಸಾಲುಗಳು ಅಣ್ಣವ್ರೆ ಒಪ್ಪಿಸಿಕೊಳ್ಳಿ.
ಶುಭೋದಯ
ಹೀಗೆ ಎದೆಗಿರಿಯುವುದು ಸರಿಯೆ...
ತುಟಿಯಂಚಿನ ನಗುವಿನಿಂದಲೆ...
ಮೋಹಗೊಳಿಸಿ, ಬಂಧಿಸಿಬಿಡುವುದೇಕೆ
ಸೇಬುಗೆನ್ನೆಯೊಳಗಿನ ಗುಳಿಯ ಕಾರಾಗೃಹದಲ್ಲಿ
ಫಟ್...ಫಟ್ ಅಂತ ಮತ್ತೇರಡು ಏಟು ಬಿದ್ದವು. ' ಯವ್ವಾ...' ಎನ್ನುತ್ತಲೆ ಹೊಡೆತಬಿದ್ದ ನೋವನ್ನು ಅವುಡುಗಚ್ಚಿ ಸಹಿಸಿಕೊಂಡು ನೆಲದ ಮೇಲೆ ಮಲಗಿದಳು ಶಾಂತಾ. ಬೆನ್ನ ಮೇಲೆಲ್ಲ ಕಟ್ಟಿಗೆಯಿಂದ ಹೊಡೆದ ಬಾಸುಂಡೆಗಳೆದ್ದು ಹನಿ...ಹನಿ ರಕ್ತವನ್ನು ಜಿನಗುತ್ತಿದ್ದವು...
'ಈಕೀ ಮೊಖಾ ನೊಡ್ದಾಗ್ಲೆ ಚಂದ್ರ್ಯಾಗ ಹೇಳಿದ್ನಿ, ಕೆಲ್ಸ ಕೆಟ್ತ್ಲೆ ತಮ್ಮಾ, ಈಕಿ ಕಾಲ್ಗುಣ ಸಜ್ಜಿಲ್ಲ, ನಮ್ಮುರಾಗ ಏಟಾಕೊಂಡ ಕನ್ಯೆ ಹೊಸಲ ದಾಟ್ದ, ನಡ ಬಗ್ಗಾಕ ಹತ್ತಾವು, ಆ ಬಸರಗಿಡ್ದ ಮಗ್ಗಲ್ದ ಮನಿ ಸೋಮ್ಯಾನ ಮಗ್ಳ ಏನಾಗಿತ್ತಲೆ, ಬೆಳ್ಳಿ..ಬೆಳ್ಳಿ ಹಂಗ ಅದಾಳ, ಕೇಳ್ಲಿಲ್ಲ..ಈಕಿನ್ನ ಕಟ್ಕೊಂಡ ಬಂದ ಮೂರ ತಿಂಗ್ಳಿಗೆ ನೆಗ್ದ ಬಿದ್ದ, ಈಕಿ ಈ ಕೆಲ್ಸಕ್ಕ ಕೈ ಹಚ್ಚಿದ್ಲು, ಅಷ್ಟಿಲ್ದ ಹೇಳ್ತಾರನು ಹಗ್ಗ ತಿನ್ನೊ ಹೋರಿ ಇರ್ಬಾರ್ದಂತ,ಮನಿ ಮುಂದ ಬಾಯಿ ಇರ್ಬಾರ್ದಂತ ' ಕಣ್ಣುಗಳನ್ನ ಕೆಂಪಾಗಿಸಿಕೊಂಡು, ಶಾಂತಾಳನ್ನು ದುರುಗುಟ್ಟಿಕೊಂಡು ನೋಡುತ್ತಾ, ಮತ್ತೆರಡೆಟನ್ನು ಹೊಡೆಯಲು ಕೈಯತ್ತಿದನು