ಮಾಡಿದ ತಪ್ಪುಗಳ
ಲೆಕ್ಕವನ್ನಿಡುವುದೇಕೆ
ಸಾಕಿ....
ತಪ್ಪು- ಒಪ್ಪುಗಳ
ಮರೆಯಲೆಂದೆ....
ಬಂದಿರುವೆನಿಲ್ಲಿಗೆ
ಕುಡಿದ ಮದಿರೆ
ಬಟ್ಟಲುಗಳ ಲೆಕ್ಕ
ತಪ್ಪದಿದ್ದರಷ್ಟೆ...
ಸಾಕಿಲ್ಲವೆ ಈಗ
Friday, September 21, 2018
ಶಾಯರಿ ೨೮೭
ಶಾಯರಿ ೨೮೮
ಅವಳೇರಿಸಿದ
ಪ್ರೇಮದ ಬಿಸಿಯನ್ನು
ಆರಿಸಿಕೊಳ್ಳಲೆಂದೆ
ಬಟ್ಟಲು... ಬಟ್ಟಲು
ಮದಿರೆಯನ್ನು
ಕುಡಿಯುತ್ತಿರುವೆ
ಸಾಕಿ...
ಈ ಹುಣ್ಣಿಮೆಗೆ
ಇಂದೆನಾಗಿಹುದೊ...
ಚೆಲ್ಲಿದ ಹಾಲ್ಬೆಳದಿಂಗಳಲೂ
ಸುಡುವ ಬಿಸಿಯ
ತುಂಬಿಹುದದೇಷ್ಟೊ...
Saturday, September 15, 2018
ಶಾಯರಿ ೨೭೪
ಝುಳು...ಝುಳು...
ಹರಿಯುವ ಹಳ್ಳದಲ್ಲಿ...
ಅವಳ ನೆನಪುಗಳನ್ನೆಲ್ಲವ
ಕಾಗದದ ದೋಣಿ ಮಾಡಿ
ಹರಿಯಬಿಟ್ಟಿದ್ದೆ
ಸಾಕಿ......
ದುರಾದೃಷ್ಟವೆ ಹೀಗೆ...
ದಡ ಸೇರದ ಒಲವಿನಂತೆ
ನೆನಪುಗಳ ಹೊತ್ತು ಸಾಗುವ
ಕಾಗದದ ದೋಣಿಯೂ...
ಮಧ್ಯದಲ್ಲಿಯೆ ಮುಳುಗಿಬಿಟ್ಟಿತು...
Thursday, September 13, 2018
ಶಾಯರಿ ೨೭೩
ಸದಾ ಕಣ್ಣ
ಕೊಳದಲ್ಲಿಯೆ
ಈಜಾಡುತ್ತಿರಬೇಡ
ಗಾಲಿಬ್...
ಆಗಾಗ ಎದೆಯಾಳಕ್ಕೂ
ಜಾರುತ್ತಿರು...
ಗೊತ್ತಿಲ್ಲ, ಯಾವ ನೋವಿನ
ಕಣ್ಣ ಹನಿಯು ನಿನ್ನನು
ಹೊರ ನೂಕಿಬಿಟ್ಟಾತು.
Wednesday, September 12, 2018
ವಚನ ೯
ಮದಗಜದ ದಾಳಿಗೆ ಸಿಕ್ಕವನನ್ನಾದರೂ
ಬದುಕಿಸಿಕೊಳ್ಳಬಹುದು
ಕಾಲನ ತುಳಿತಕ್ಕೆ ಸಿಕ್ಕವರನ್ನು
ಉಳಿಸಿಕೊಳ್ಳುವುದು ಬಲು ಕಷ್ಟಕರ
ಕೇಳಯ್ಯ..
ಅರೆ ಹೊಟ್ಟೆಯಲ್ಲಾದರೂ ಸರಿ, ಅರಗಿನ
ಅರಮನೆಯಲ್ಲಿ ವಾಸಿಸಬಲ್ಲೇನು...
ಮೃಷ್ಟಾನ್ನ ಭೋಜನವನೆ ತುಂಬಿಟ್ಟು
ಹಂಗಿನರಮನೆಗೆನ್ನ ದೂಡದಿರಯ್ಯ
ಶ್ರೀಶರಣಬಸವ
ವಚನ ೮
ಸಿರಿಯಿಲ್ಲದವನ ಮನೆಯು
ಸುಡುವ ಸುಡುಗಾಡಿಗಿಂತಲೂ
ಕಡೆಗಾಣುವರು ನೋಡಯ್ಯ..
ಕಾಸಿಲ್ಲದವನನ್ನು ಕಣ್ಣಲಿ ಬೀಳುವ
ಕಸಕ್ಕಿಂತಲೂ ಕೀಳಾಗಿಸಿ
ಕಾಣುವರಯ್ಯ...
ನಡೆ ಬೇಡ... ನುಡಿ ಬೇಡ..
ತಲೆಯ್ಹೊಡಿದಾದರು ಸರಿ....ಧನವ
ತಾರೆಂಬರಯ್ಯ... ಶರಣ
ಮನವಿದು ಪಾಪದ ಹೊನ್ನ ಮಡಿಕೆಗೆ
ಕೈ ಹಾಕುವ ಹೊಂಚೊಂದನು
ಹೆಣೆಯುವ ಮೊದಲೆ,
ಎನ್ನ ಪ್ರಾಣ ಹರಣವ ಮಾಡಿಬಿಡು ಶರಣ.
ನರಿಯಂತೆ, ನಿಷ್ಠೆಯಿಲ್ಲದ ಬಾಳನ್ನು ಬಾಳುವಂತೆ
ಹರಸದಿರಯ್ಯ....
ಮಡಿದರು ಗರಿಕೆ ಮುಟ್ಟದ
ವ್ಯಾಘ್ರದಂತಾದರು ಇರಿಸಯ್ಯ
ಶ್ರೀ ಶರಣಬಸವ
ಶಾಯರಿ ೨೮೯
ಮೌನಕ್ಕಿಂತಲೂ...
ಆಡಿದ ಮಾತಿಗೆ ಸಾವಿರ
ಬಣ್ಣವ ಬಳಿದರು
ಸಾಕಿ....
ನಂಬಿಕೆಯೆನ್ನುವುದು
ಹುಗಿದ ಗೋರಿಯೊಳೊಳಗೂ
ದಕ್ಕಲಿಲ್ಲ...