Monday, December 3, 2018

ಚು ೩೭೪

ಹಗಲಿರುಳು ನನಗೆ
ನಿನ್ನದೆ ಧ್ಯಾನ
ಮುರಿದುಬಿಡು ತುಟಿಯಂಚಲಿ
ಕಟ್ಟಿಕೊಂಡಿರುವ ಬಿಗು ಮೌನ
ಬಡವನೆದೆಯ ನಲಿಸಿಬಿಡು
ಹಾಡಿ ಸವಿಗಾನ

Saturday, December 1, 2018

ಶಾಯರಿ ೪೦೦

ಲೋಕ ಕೈ ಬಿಟ್ಟತು...
ನೀನು ಕೈ
ಬಿಡಲಿಲ್ಲ
ಸಾಕಿ...
ಅವಳು ಕೆಂದುಟಿಯಂಚಿಂದ
ನೀಡಿದ್ದ ಮಧುವು....
ವಿಷವಾಯಿತು.
ಬಟ್ಟಲೊಳಗಿನ ಮಧುವು
ಕಹಿಯಾಗಿದ್ದರು ಸರಿ...
ನನ್ನೆದೆಗೆ ತಂಪನ್ನೆ...
ಎರೆಯಿತು

Friday, November 30, 2018

ಶಾಯರಿ ೪೦೧

ಒಂಟಿ ಮಾಡಿದ
ಲೋಕದ
ನಂಟು ನನಗೇಕಿಗ
ಸಾಕಿ...
ಸಾಯಲಿಷ್ಟವಿಲ್ಲ...
ಮರೆತು ಮಲುಗಲಾದರು
ಸುರಿದುಬಿಡು ನನ್ನೆದೆಗೆ
ಹೂಜಿಯೊಳಗೆ
ಮಲಗಿದ ಮದ್ಯವನ್ನಾದರು
ಕಲಕಿ....

ಶಾಯರಿ ೪೦೨

ಒಂದೆ ಮಾತಿನಲ್ಲಿ
ಹೇಳಿದ್ದರು
ಸಾಕಿತ್ತಲ್ಲವೆ..
ಸಾಕಿ....
ಹೀಗೆ ಮೌನವಾಗಿದ್ದು
ಕ್ಷಣ..ಕ್ಷಣವು
ನನ್ನನು
ಕೊಲ್ಲುವ ಪಾಡು
ಅವಳಿಗೆ ಹಿತವಾಗಿತ್ತ

Wednesday, November 28, 2018

ಶಾಯರಿ ೪೦೩

ಮತ್ತೊಬ್ಬರ ಮತಿಯ
ಮದವೇರಿಸಿ....ಗೊರಲೆ
ತಿನ್ನುವ ಫಲಕಗಳ
ಪಡೆದುಕೊಳ್ಳುವ ಹುಚ್ಚು
ಹಂಬಲ ನನಗೇಕೆ
ಸಾಕಿ...
ಸಾಯುವವರೆಗೂ...
ಕೈ ಬಿಡದ, ಮತ್ತೇರಿಸುವ
ನಿನ್ನ ಮಧು ಬಟ್ಟಲೊಂದು
ಕೈಯಲ್ಲಿರುವಾಗ...

ಸಾಕಿ

ಎದೆಯಲ್ಲಿ ನೆಟ್ಟ ಪ್ರೀತಿಯ ಬಳ್ಳಿಯ
ಚಿಗುರನು... ಸದ್ದಿಲ್ಲದೆ, ನೋವಾಗದಂತೆ
ಚಿವುಟಿ ಹೋದಳಲ್ಲಳವಳು ಸಾಕಿ...
ಕ್ಯಾ ಪ್ಯಾರ ಕರ್ನೆವಾಲೊಂಕೊ ಇಸಿ...
ತರಹ ಕಿ ಸಜಾ ಕ್ಯೂಂ ಮಿಲ್ತಿ ಹೈ...
ಜಿಂದಾ ರಹ್ತೆ ಹೈಂ ಜರೂರು..
ತಡಪ್ನೆವಾಲೆ ಉನ್ಕಿ ಯಾದೊಂಕಾ
ಕತ್ಲ ಕರ್ನಾ ನಾ ಹೊತೆ ಹುಯೆ...

ಎದೆಯ ಗೂಡಿನಲ್ಲಿ ಕನಸುಗಳ
ಮೊಟ್ಟೆಯನಿಟ್ಟು... ಕಾವು ಕೊಡದೆ
ರೆಕ್ಕೆಬಿಚ್ಚಿ ಹಾರಿ ಹೋಗಿದೆಯಲ್ಲ ಸಾಕಿ
ನನ್ನೆದೆಯ ಹಕ್ಕಿ...
ಜಾಲ ಬಿಚಾಕೆ ಬೈಟ್ನೆಕೆಲಿಯೆ ಮೈ ಕೊಯಿ
ಹತ್ಯಾರ ನಹೀ ಹ್ಞೂಂ...
ಉಸೀನೆ ಬಿಚಡೆ ಹುಯೆ ಜಾಲ್ ಪೆ ಫಸ್ಕರ
ತಡಪ್ತಾ ಹುವಾ ನಾದಾನ ಪ್ರೇಮಿ ಹ್ಞೂಂ..

ಹನಿ..ಹನಿಯಾಗಿಯಾದರೇನು...?
ಬಟ್ಟಲು...ಬಟ್ಟಲುಗಳಾದರೇನು...?
ಲೆಕ್ಕವಿಡದ ಹೂಜಿ...ಹೂಜಿಗಳ ಮದಿರೆಯನ್ನೆ
ಕುಡಿದರೇನು ಬಂತು ಸಾಕಿ...
ಎದೆಯುರಿಯೆ ಆರದಿರುವಾಗ..!!!
ಪಿತಾ ಹ್ಞೂಂ ಜಾನಬೂಜಕರ್..
ಪಿತಾ ಹ್ಞೂಂ ಜಾನಬೂಜಕರ್...
ಕ್ಯಾ ಕರೂಂ...ಜಿನೆ ಮೆ ಕೋಯಿ ಧಮ್ ನಹೀ ಹೈ
ಮರ್ನೆ ಮೆ ಮುಝೆಕೋಯಿ ಘಮ್ ನಹೀ ಹೈ

ತಮ್ಮಾ ೧

ಮಾಡಿದ ಪಾಪಾ ಕಳ್ಕೊಳ್ಳಾಕ
ಸಾಕಷ್ಟ ನದಿಗಳದಾವಂದ ಮ್ಯಾಲ
ಪಾಪ ಮಾಡೊದೇನ ತಪ್ಪೊ ತಮ್ಮಾ...
ಮಾಡಿದ ತಪ್ಪನ್ನ ತಿದ್ಕೊಳ್ಳದ ಮಣ್ಣ
ಸೇರಿದ್ರ, ಬದುಕನ್ನ ಯಾವ ತಕ್ಕಡ್ಯಾಗಿಟ್ಟರ
ತೂಗ್ತೀಯೊ ತಿಮ್ಮ...

ತುಳ್ದ...ತುಳ್ದ ಗಳ್ಸಿದ ಕಾಸೆಲ್ಲ
ಕಬ್ಣದ ಪೆಟ್ಗಿ ಹೊಟ್ಟಿ ಸೇರ್ತಲ್ಲೊ ತಮ್ಮಾ..
ಗೊತ್ತಿಲ್ಲದ್ದೇನು ? ಹೊಟ್ಟಿ..ಬಟ್ಟಿ ಕಟ್ಟಿ
ದುಡ್ದ ಜೀವಾ ಅದು, ಸತ್ತ ಮ್ಯಾಲ ಕಟ್ಗಿ
ಕಪಾಟನ್ಯಾಗ ಮುಚ್ಗೊಂಡ ಹೋಗ್ತಾರು ತಿಮ್ಮ

ಮೂಲೋಕ ಗೆದ್ದವಂಗ ಮನ್ಯಾನ ಹೆಂಡ್ತಿನ
ಸಂಭಾಳ್ಸಾಕ ಆಗೋದಿಲ್ಲೊ ತಮ್ಮಾ...
ಎಷ್ಟ ದೇಶದ ಚುಕ್ಕಾಣಿ ಹಿಡದ್ರೇನಾತ, ಗಂಡನ
ಜುಟ್ಟು ಕೊನಿಗೆ ಹೆಂಡ್ತಿ ಕೈಯ್ಯಾಗ ಇರತೈತೊ ತಿಮ್ಮ

ಕಾಲ್ಕೆದರಿ ಕದನಕ್ಕ ಬಂದೊರೆಲ್ಲ ಕಾಲಕಾಲಕ್ಕೂ
ಉಳಿಲಿಲ್ಲ ನೋಡ್ತಮ್ಮಾ....
ಕಾಲನ ಹೊಡ್ತಕ್ಕ ಸಿಕ್ಕವ್ರು ಚರಿತ್ರೆಯೊಳಗಿನ
ಪುಟದಾಗ ಹೇಳ ಹೆಸರಿಲ್ದಂಗ ಅಳಸಿ ಹೋಗ್ಯಾರ
ನೋಡ್ತಿಮ್ಮಾ