ಚಂದಿರನಿಲ್ಲದ ರಾತ್ರಿಗೆ
ತಾರೆಗಳೆಲ್ಲವು ಮೌನ
ಅವಳಿಲ್ಲದ ಈ ಘಳಿಗೆಗೆ
ಮಾಡುತ್ತಿರುವೆ ನಾನೀಗ
ಸುಮ್ಮನೆ ಧ್ಯಾನ
Friday, December 7, 2018
ಶಾಯರಿ ೩೯೭
ಕನಸುಗಳು ಬೀಳಲೆಂದೆ
ಸಾಕಷ್ಟು ಮಧುವನ್ನು
ಕುಡಿದೆ ಸಾಕಿ...
ಕನಸೇನು ಬೀಳಲಿಲ್ಲ,
ಕಸವನೆತ್ತದ ಮೊರೆಯಲ್ಲಿ
ನಾ ಬೀಳುವುದು
ತಪ್ಪಲಿಲ್ಲ..
ಶಾಯರಿ ೩೯೫
ಬಾರದವಳ
ಕಾಯುತ್ತ
ಕುಳಿತುಕೊಳ್ಳುವುದರಲ್ಲಿ
ಏನರ್ಥವಿದೆ
ಸಾಕಿ...
ತುಟಿಯಂಚಲಿ
ಕಾಪಿಟ್ಟುಕೊಂಡ
ಮುತ್ತುಗಳೆಲ್ಲ...
ಬಿಕ್ಕುತಿರುವಾಗ
ಶಾಯರಿ ೩೯೪
ಹೆಂಡತಿಯ ಕಾಟಕ್ಕಿಂತ
ಪ್ರೇಯಸಿ ನೀಡಿದ
ನೋವಿಗೆ....
ಹೆಚ್ಚು ಕುಡಿಯುವರು
ಸಾಕಿ...
ಇವಳು ಮುಡಿದ
ಮಲ್ಲಿಗೆಗಿಂತ
ಅವಳು ನಿರಾಕರಿಸಿದ
ಮಲ್ಲಿಗೆಯ
ಘಮಲೇ... ಇನ್ನೂ
ಕಾಡುತಿಹುದು
ಶಾಯರಿ ೩೯೦
ನನ್ನೆದೆಯ
ನೋವಿಗೆಲ್ಲ...
ಸಾಕ್ಷಿಯನ್ನು
ಕೇಳುತ್ತಿರುವೆಯಲ್ಲ
ಸಾಕಿ...
ನೋಡು ಮೇಲೊಮ್ಮೆ
ತುಂಬು ಚಂದಿರನ
ಎದೆಯ ಮೇಲೆಲ್ಲ
ಸುಟ್ಟ ಕಲೆಗಳು..!!
ಬೇಕಾ..?
ಇದಕ್ಕಿಂತ ಬೇರೆ
ಸಾಕ್ಷಿ..
ಶಾಯರಿ ೩೮೯
ಅವಳಿಗ ಎದುರಿಗೆ
ಬಂದು ನಿಂತರೆ
ಏನು ಮಾಡಲಿ
ಸಾಕಿ...
ಈಗೀಗ ಅವಳ
ಮೋಹಕ್ಕಿಂತ, ನಿನ್ನ
ಮದ್ಯದ ಅಮಲೆ
ನನ್ನನಾವರಿಸಿಕೊಂಡುಬಿಟ್ಟಿದೆಯಲ್ಲ
ಶಾಯರಿ ೩೯೮
ಅವಳ
ಪ್ರೀತಿಯನ್ನು
ಪಡೆಯುವ ರಭಸದಲ್ಲಿ
ಯಾರೊಬ್ಬರೂ...
ಹಾದಿಯನ್ನೆ ಬಿಡಲಿಲ್ಲ
ಸಾಕಿ...
ನಿನ್ನ ಮದ್ಯವನ್ನು
ಕುಡಿದ ಮೇಲೆ...
ಇಡಿ ಬೀದಿಯೆ
ಬರಿದಾಗಿಬಿಟ್ಟಿತಲ್ಲ..
Subscribe to:
Posts (Atom)