Sunday, December 9, 2018

ಶಾಯರಿ ೩೮೭

ಎಷ್ಟೆಂದು
ಹೊರಳಾಡಲಿ
ಅವಳಿಲ್ಲದ ಈ
ಹಾಸಿಗೆಯ ಮೇಲೆ
ಸಾಕಿ...
ಸಹಿಸಿಕೊಳ್ಳಲಾಗದ
ವಿರಹದ ಉರಿಯನ್ನು
ಹೊತ್ತಿಸಿದ್ದೆ ಈ...
ರಾತ್ರಿಗಳು

ಶಾಯರಿ ೩೮೭

ಅವಳ ಮುಡಿಗೆ
ಮುಡಿಸಿದ ಮಲ್ಲಿಗೆಯ
ಹೂಗಳಿಗೆ ನಾನೆಂದು
ಲೆಕ್ಕವನ್ನೆ ಇಟ್ಟಿಲ್ಲ
ಸಾಕಿ...
ಇಂದವಳ ಮಧು
ಮಂಚವ ಶೃಂಗರಿಸಿದ
ಹೂವಾಡಿಗ...ಹೂವಿನ
ಬಾಬತ್ತನ್ನು
ಕೇಳುತ್ತಿರುವನಲ್ಲ

ಶಾಯರಿ ೩೮೮

ಪದೆ...ಪದೆ..
ನಿನ್ನ ನೋವ
ಮರೆಸುವವಳು
ನಾನೆ...ಎಂದು
ಬೀಗಬೇಡ
ಸಾಕಿ...
ನನ್ನೆಲ್ಲ ಸ್ವತ್ತಿನ
ಪತ್ರಗಳು...
ನಿನ್ನ ಕಬ್ಬಿಣದ
ಪೆಟ್ಟಿಗೆಯಲ್ಲಿರುವುದನ್ನು
ನೀನು ಮರಿಬೇಡ

ಶಾಯರಿ ೩೯೧

ತೆರೆದಿಡುವುದಕ್ಕಾದರು
ಏನುಳಿದಿದೆ
ಸಾಕಿ....
ಭಗ್ನಗೊಂಡ ಒಲವು
ಊರಿಗೆ ಗೊತ್ತು...
ಕುಡಿಯುವುದು
ಅವಳಿಗೂ ಗೊತ್ತು..
ನನ್ನೆದೆಯ ನೋವು
ನಿನಗೆ.... ಗೊತ್ತು

ಶಾಯರಿ ೩೯೨

ನಿನ್ನ ಮದ್ಯದ
ಬಟ್ಟಲೊಂದನು
ಹೊರತುಪಡಿಸಿ...
ನನ್ನ ಬಳಿಗೇನು
ಉಳಿದಿಲ್ಲ
ಸಾಕಿ...
ಮರೆಯಬೇಕೆಂದೆ
ಉಳಿದಿರುವ
ನೆನಪುಗಳನ್ನೆ
ಇನ್ನೂ....
ಮರೆಯಲಾಗಿಲ್ಲ

Saturday, December 8, 2018

ಶಾಯರಿ ೩೯೩

ಮೊದಲು...
ತೀರಿಸು ಬಾರೊ
ಕುಡಿದ ಮದ್ಯದ
ಹಳೆಯ
ಬಾಕಿ!
ತೀರಿಸುವೆನಾಗ
ನಿನ್ನಾಸೆಯ...ತುಟಿಯನ್ನು
ಸೋಕಿ..
ಇಲ್ಲದಿದ್ದರೆ...
ಮುತ್ತಿಕ್ಕಲು ಮುಖವಿರದಂತೆ
ರುಬ್ಬಿಬಿಡುವಳೀ...
ಸಾಕಿ...

ಚು ೩೭೫

ಮುಗಿಲ ಮಳೆಯೊಳಗೆ
ಅತ್ತರೆ...ಏನರ್ಥವಾದಿತು ?
ಎಷ್ಟೊ ಭಾರಗಳ ಹೊತ್ತ
ಹೆಗಲೊಂದಿದೆ..
ಕಣ್ಮುಚ್ಚಿ.. ಮಲಗಿಬಿಡು
ತಲೆಯನಿಟ್ಟು...
ಬಿಟ್ಟು ಹೋದವರ ಚಿಂತೆಯೊಂದನು
ಬಿಟ್ಟು...