Wednesday, March 13, 2019

ಶಾಯರಿ ೬೬೨

ನನ್ನೆದೆಯ
ದುಃಖವನ್ನು
ಹೇಳಿಕೊಳ್ಳಲಿ
ಏನಂತ
ಸಾಕಿ...
ಎದೆಯುರಿಯನ್ನು
ಹೆಚ್ಚಿಸಲೆಂದೆ...
ಕೇಳುತ್ತಿರುವೆಯೇನೊ?
ಬೇಕು....ಬೇಕಂತ!!!!

ಶಾಯರಿ ೬೮೧

ಇಷ್ಟಪಟ್ಟ
ಹೂವೆ....
ಕೈಗೆ ಸಿಗಲಿಲ್ಲ
ಸಾಕಿ....
ಕಫನ್ನಿನ
ಮೇಲೆ,
ಹೂ ಹಾರವನ್ನೆ
ಹೊದಿಸಿದರೇನು?
ಉಸಿರು....
ಮರಳುವುದೇನು?

ಶಾಯರಿ ೬೬೯

ಸತ್ತು ಹೋದವನ
ಎದೆಯ
ಮೇಲೊಂದು
ಕಂಪ ಬೀರುವ
ಹೂವೊಂದನಿಟ್ಟರೇನು
ಬಂತು
ಸಾಕಿ....
ಗೋರಿಯೊಳಗಿನ
ನಾನು...
ಮೇಲೆ ಬಿದ್ದ ಮಣ್ಣು
ಸುಗಂಧವನ್ನು
ಆಸ್ವಾದಿಸುವೆವೇನು?

ಸಾಕಿ

ಕನಸುಗಳನ್ನೆ ತುಂಬಿಕೊಂಡ ಈ
ತುಂಬು ಕಂಗಳಲಿ... ಮಣ್ಣನ್ನೆ
ಸುರಿದು ನಡೆದಳಲ್ಲ ಸಾಕಿ....
ಅಳುವುದಕ್ಕೆ ಉಳಿಸದೆ ಹೋದಳಲ್ಲ
ಏನನ್ನೂ... ಬಾಕಿ

ನನಗೆ ಗೋರಿಯ ಹಾದಿ
ತೋರಿಸಿದ ಹಾಗೆ, ನೆನಪುಗಳಿಗೆ
ಗುಂಡಿಯನ್ನು ತೋಡಿಬಿಡೆಂದು
ನೀ ಹೇಳಿಬಿಡು ಸಾಕಿ...
ನೆನಪುಗಳು ನನ್ನೊಂದಿಗೆ ಹೂತು
ಹೋದರೆ....ನೆಮ್ಮದಿ ಸಿಗುವುದೇನು
ಮಣ್ಣಲ್ಲಿ!!!

ನೋವಿಗೆ ಅಮೃತವನ್ನೆ ಸುರಿಯುವವಳೆ
ನೀನಲ್ಲವೆ ಸಾಕಿ...
ಈ ಸಂಜೆಗೆ ಚೂರು ವಿಷವನ್ನಾದರೂ
ಸುರಿದುಬಿಡು, ಅರ್ಧ ಜೀವವಾಗಿ
ನರಳಾಡುತಿರುವ ಸಂಜೆಗಳೊಂದಿಗೆ
ನಾ ಹೇಗೆ ಬದುಕಲಿ.... ಈ ನೋವು
ಈ ಸಂಜೆಗೆ ಕೊನೆಯಾಗಿಬಿಡಲಿ.

ಶಾಯರಿ ೬೯೦

ಚಂದ್ರನಿಗೇನು
ಕೆಲಸ..
ಇರುಳಿಡಿ
ಎದ್ದೆ ಕುಳಿತಿರುವನು
ಸಾಕಿ...
ರಂಗೀಯ ಬಗ್ಗೆ
ಹೇಗೆ ಬರೆಯಲಿ
ನಾನೀಗ,
ಅವನು ಪದೆ...
ಪದೆ... ಇಣುಕಿ
ಹಾಕುತ್ತಿದ್ದರೆ
ಸಾಲುಗಳಲ್ಲಿ

ಶಾಯರಿ ೬೫೮

ಪ್ರೀತಿಯ ಆಳ
ನಿನಗೇನು
ಗೊತ್ತು?
ಪ್ಯಾಲೆಗೆ ಮಧುವನ್ನು
ಅಳೆದು
ಸುರಿಯುವವಳು
ನೀನು...ಸಾಕಿ
ಮುಳುಗೇಳು
ನೀನೊಮ್ಮೆ, ಒಲವ
ಕಡಲಲ್ಲಿ....
ಎದ್ದು ಬರುವ
ಮನಸಾದರೆ
ನನಗೆ ಹೇಳು

ಶಾಯರಿ ೬೮೯

ನಾನುಳಿಯಬೇಕೆಂದರೆ
ಮೊದಲು,
ರಂಗೀಯ
ನೆನಪುಗಳನ್ನು
ಕೊಂದುಬಿಡು
ಸಾಕಿ....
ನಿಲ್ಲು...ನಿಲ್ಲು...
ನೆನಪುಗಳೇ...
ಇಲ್ಲವೆಂದ ಮೇಲೆ
ಬದುಕಲಿಕ್ಕೆ,
ಉಳಿಯುವುದೇನು
ಬಾಕಿ