Wednesday, December 18, 2019
ಶಾಯರಿ
Wednesday, November 20, 2019
ಸಾಕಿ
Sunday, November 10, 2019
ರಂಗೀ..
Friday, July 12, 2019
ರಂಗೀ
ಕತ್ತಲೊಳಗಿನ,
ನೆನಪಿನೆದಿರುಗಳಲ್ಲಿ
ಬೆತ್ತಲಾಗುವುದಕ್ಕೆ
ಇನ್ನೇನುಳಿದಿದೆ
ರಂಗೀ.....
ಮಧು ದಾಸನಿಗೆ
ಈಗ, ಜಗದ
ನೈತಿಕತೆಯ ಪಾಠದ
ಅವಶ್ಯಕತೆ.....
ಇದೆಯಾ?
Thursday, July 11, 2019
ರಂಗೀ
ಅವಳ ಮಾದಕ
ಕಣ್ಣೋಟ....
ನೈತಿಕವೋ?
ಅನೈತಿಕವೋ?
ಹೇಗೆ ಅರ್ಥೈಸಿಕೊಳ್ಳಲಿ
ರಂಗೀ....
ಹಾದಿ ತಪ್ಪಿಬಿಟ್ಟಿದ್ದೇನೆ,
ಸರಿ ಯಾವುದೆಂಬುದನ್ನೆ
ಮರೆಸಿಬಿಟ್ಟಿದೆ ಅವಳ
ನೋಟದ ನಶೆ.
Tuesday, July 9, 2019
ರಂಗೀ
ಅವು ಕಪ್ಪು
ಮಚ್ಚೆಗಳಲ್ಲ,
ಮತ್ತೇರಿ, ಕತ್ತಲಿನಲ್ಲಿ
ನಿ ಕೊಟ್ಟ... ಗುರುತುಗಳವು
ರಂಗೀ...
ಒಲವಿತ್ತು ನಿ
ಕಚ್ಚಿದ್ದಾಗ!!
ವಿಷವೇರಿ ಕಪ್ಪಾಗಿಬಿಟ್ಟಿವೆ
ಈಗ,
ವಿರಹದ ಬಿಸಿಯನ್ನು
ತಾಳಲಾಗದೆ!!
ರಂಗೀ...
ನನ್ನ ಹೃದಯವೆ
ಸಿಡಿದು ಹೋಗಿದೆ
ರಂಗೀ...
ಒಡೆದು ಹೋದ
ಮದಿರೆ ಬಟ್ಟಲುಗಳು
ಇನ್ನಾವ ಲೆಕ್ಕ!!
ಒಂದು ಕಾಣಿಸದು,
ಇದು ಕಾಣಿಸುತ್ತದೆ
ಅಷ್ಟೇ ವ್ಯತ್ಯಾಸ.
ರಂಗೀ..
ನನ್ನ ಜೋಳಿಗೆಗೆ
ಸುರಿದ, ಒಂದೊಂದು
ಕನಸುಗಳು...
ಮೊದಲೆ ಅಸುನೀಗಿದ್ದವಲ್ಲ
ರಂಗೀ....
ಹಾಕಿದ್ದು
ಪ್ರೀತಿಯಿಂದಲೋ?
ದ್ವೇಷದಿಂದಲೊ?
Tuesday, June 4, 2019
ಶಾಯರಿ
ನಾನು ಶಾಸ್ತ್ರವನ್ನು
ನಂಬಿಕೊಂಡವನಲ್ಲ,
ಬದುಕು ನಡಿಸಿದಂತೆ
ಹೆಜ್ಜೆಯಿಟ್ಟವನು
ಸಾಕಿ....
ಬಂದು ನಿಂತಿರುವೆ
ನಿನ್ನರಮನೆಯ ಬಾಗಿಲ
ಮುಂದೆ... ತೆರದರೆ?
ಹೊಸ ಲೋಕ
ಇಲ್ಲದಿದ್ದರೆ!!!?
ಕಾಯ್ದು ಕುಳಿತೇ...
ಇದೆಯಲ್ಲ ನರಕ..
ಶಾಯರಿ
ಅಂದಿನಿಂದ
ಇಂದಿನವರೆಗೂ...
ಅಷ್ಟೇ ಪ್ರೀತಿಯಿಂದ
ಮದ್ಯವನ್ನು ಸುರಿದು
ಕೊಡುತ್ತಿರುವೆಯಲ್ಲ
ಸಾಕಿ....
ನಿನೆಂಥಹ ವ್ಯಾಪಾರಿ!!!
ಮುಸ್ಸಂಜೆಗೊಂದು
ಗುಟುಕು ಒಲವ
ಭಿಕ್ಷಿಸದೆ ನಡೆದ
ರಂಗೀ... ಇವಳೆಂಥ
ವೈಯ್ಯಾರಿ!!!
ಶಾಯರಿ
ಇದ್ದದ್ದನ್ನು
ಇದ್ದಂತೆಯೆ
ಸುರಿದು
ಕೊಟ್ಟುಬಿಡು
ಸಾಕಿ....
ಏನು ಕುಡಿದರೇನು?
ರಂಗೀಯ
ನೆನಪುಗಳಲ್ಲಿ
ಎದೆಯಾಗಿದೆಯಲ್ಲ
ಸುಡುಗಾಡು
Saturday, June 1, 2019
ಶಾಯರಿ ಗಾಲಿಬ್
ಮರೆಯುವ ಕಲೆ
ನಿನಗೆ ಗೊತ್ತಿದ್ದಿದ್ದರೆ
ಮದಿರೆಯಾದರು
ಏತಕ್ಕೆ ಬೇಕಿತ್ತು?
ಗಾಲಿಬ್.....
ಅವಳಿನ್ನು ನನಗೆ
ನೆನಪಾಗಳೆಂದು
ಮಗ್ಗಲು ಬದಲಿಸಿದ್ದರೂ
ಸಾಕಿತ್ತು....
ಶಾಯರಿ
ರಂಗೀಯ ನೆನಪುಗಳ
ಬುಟ್ಟಿಯನ್ನು ಖಾಲಿ
ಮಾಡಲು, ಕುಡಿಯುತ್ತಿರುವೆ
ಬಟ್ಟಲು... ಬಟ್ಟಲು
ಮದಿರೆ...!!
ಸಾಕಿ.....
ಮಧ್ಯ ಕುಡಿದಷ್ಟು
ಖಾಲಿಯಾಗುತ್ತಿದೆ,
ನೆನಪುಗಳು ನೆನಸಿಕೊಂಡಷ್ಟು
ಹೆಚ್ಚಾಗುತ್ತಿವೆ!!
ಹೀಗಾದರೆ... ಬರುವುದು
ಹೇಗೆ? ರಾತ್ರಿಗೆಲ್ಲ
ನಿದಿರೆ!!
Tuesday, May 21, 2019
ಶಾಯರಿ
ಮಾತಿರದೆ
ರಾತ್ರಿಯಿಡೀ....
ಸುಖಿಸುವುದೆಂದರೇನು
ಸಾಕಿ....
ಎಲ್ಲರ ಹಾಗೆ
ನಾನು....ಕರುಣೆಯಿಲ್ಲದೆ
ಕುಕ್ಕಿ ತಿನ್ನುವ
ಹದ್ದಾಗಿಬಿಡಲೇನು?
ಶಾಯರಿ
ಕನಸುಗಳು
ಜೋಗುಳವ
ಹಾಡುವಂತಿದ್ದರೆ
ನಿನ್ನ ಮದ್ಯದ
ಅವಶ್ಯಕತೆ,
ನನಗಿರುತ್ತಿರಲಿಲ್ಲ
ಸಾಕಿ....
ರಂಗೀಯ ನೆನಪುಗಳು
ತಂಪೆರೆಯುವಂತಿದ್ದಿದ್ದರೆ...
ಚಂದ್ರನಿಗೆ ವಿದಾಯವನ್ನು
ಹೇಳಿಬಿಡುತ್ತಿದ್ದೆನಲ್ಲವೆ?
ಶಾಯರಿ
ಗೋರಿಗೆಂದೆ
ಖರೀದಿಸಿದ
ಜಾಗದಲ್ಲಿ
ನೆಮ್ಮದಿಯುಂಟೇನು
ಸಾಕಿ....
ಹುಗಿದುಬಿಡು
ಸ್ಮಶಾನದಲ್ಲಿ...
ನಾಲ್ಕು ಹೆಣಗಳ ಜೊತೆ
ಮಾತನಾಡುತ್ತಾ
ಕೊಳೆತುಬಿಡುವೆ.
ಶಾಯರಿ
ರಂಗೀಯ
ನೆನಪುಗಳ ಬಳ್ಳಿ
ನನ್ನ ಭವಿಷ್ಯತ್ತಿನ
ಕಾಲೆಳೆದಿದೆ
ಸಾಕಿ....
ಬಿದ್ದದ್ದು.....!!!!
ನಿನ್ನರಮನೆಯೊಳಗೆ
ತಪ್ಪಿದ್ದರೆ?
ಗೋರಿಯೊಳಗೆ!!
ಶಾಯರಿ
ಕತ್ತಲಿಗೂ
ಕನಸಿಗೂ
ನಂಟಿದೆ!!!
ನಿಜ ಸಾಕಿ....
ಅದಕೆ ನನಗೂ
ನಿನ್ನ ಮದ್ಯದ
ಬಟ್ಟಲಿಗೂ...
ಬಿಡಿಸಲಾರದ
ಅಂಟಿದೆ!!
Friday, May 17, 2019
ಶಾಯರಿ ೮೬೩
ಆತ್ಮೀಯರೆಲ್ಲರೂ
ಅಳುತ್ತಿದ್ದಾರೆ...ನನ್ನ
ಪ್ರೇಮದ ಅವನತಿಯ
ನೋಡಿ
ಸಾಕಿ....
ನಾನು ಮಾತ್ರ
ಮನಸ್ಸಿನಲ್ಲೆ
ನಗುತ್ತಿರುವೆ...
ಬಟ್ಟಲಿಗೆ ಮದ್ಯವನ್ನು
ನೀನು ಅಳೆದು
ಹಾಕುತ್ತಿರುವುದನ್ನು
ನೋಡಿ....
ಶಾಯರಿ ೮೬೨
ಲೋಕವೆಲ್ಲ
ಷಂಡನೆಂದು
ಕೂಗುತ್ತಿದೆ
ಇವತ್ತು...
ಸಾಕಿ...
ಕತ್ತಲ
ರಾತ್ರಿಗಳಲ್ಲಿ
ಸಹಕರಿಸದ
ಅವಳ ರೀತಿ
ಯಾರಿಗೆ ತಾನೆ
ಗೊತ್ತು...