ನಾನು ಶಾಸ್ತ್ರವನ್ನು
ನಂಬಿಕೊಂಡವನಲ್ಲ,
ಬದುಕು ನಡಿಸಿದಂತೆ
ಹೆಜ್ಜೆಯಿಟ್ಟವನು
ಸಾಕಿ....
ಬಂದು ನಿಂತಿರುವೆ
ನಿನ್ನರಮನೆಯ ಬಾಗಿಲ
ಮುಂದೆ... ತೆರದರೆ?
ಹೊಸ ಲೋಕ
ಇಲ್ಲದಿದ್ದರೆ!!!?
ಕಾಯ್ದು ಕುಳಿತೇ...
ಇದೆಯಲ್ಲ ನರಕ..
Tuesday, June 4, 2019
ಶಾಯರಿ
ಶಾಯರಿ
ಅಂದಿನಿಂದ
ಇಂದಿನವರೆಗೂ...
ಅಷ್ಟೇ ಪ್ರೀತಿಯಿಂದ
ಮದ್ಯವನ್ನು ಸುರಿದು
ಕೊಡುತ್ತಿರುವೆಯಲ್ಲ
ಸಾಕಿ....
ನಿನೆಂಥಹ ವ್ಯಾಪಾರಿ!!!
ಮುಸ್ಸಂಜೆಗೊಂದು
ಗುಟುಕು ಒಲವ
ಭಿಕ್ಷಿಸದೆ ನಡೆದ
ರಂಗೀ... ಇವಳೆಂಥ
ವೈಯ್ಯಾರಿ!!!
ಶಾಯರಿ
ಇದ್ದದ್ದನ್ನು
ಇದ್ದಂತೆಯೆ
ಸುರಿದು
ಕೊಟ್ಟುಬಿಡು
ಸಾಕಿ....
ಏನು ಕುಡಿದರೇನು?
ರಂಗೀಯ
ನೆನಪುಗಳಲ್ಲಿ
ಎದೆಯಾಗಿದೆಯಲ್ಲ
ಸುಡುಗಾಡು
Monday, June 3, 2019
ಗಾಲಿಬ್
ಗಾಲಿಬ್...
ನಡುರಾತ್ರಿಯಾಯಿತು, ಚಂದ್ರನು ನೆತ್ತಿಯ ಮೇಲೆ ಬಂದ
ಬರಬೇಕಾಗಿತ್ತಲ್ಲ ನೀನು ಇಷ್ಟೊತ್ತಿಗೆ!,
ತುಂಬಿ ತುಳುಕುತಿಹುದಿಲ್ಲಿ..ತಲಬಾಗಿಲಲೊಂದು
ಹರೆಯದ ಬಿಂದಿಗೆ
ಬಂದಾಗಲೊಮ್ಮೆ ಜೋತು ಬಿಳುವೆ ನೀ
ಕೇವಲ ಮಧು ಬಟ್ಟಲಿಗೆ
ಮರೆತು ಮತ್ತನಾಗಿ ಮಲಗಿಬಿಡುವೆ
ಚುಂಬಿಸುವುದೆ ಇಲ್ಲ...ನನ್ನ ಕೆಂದುಟಿಗಳಿಗೆ
ಗಾಲಿಬ್.....
ಆರಡಿಯ ಹೂದೋಟವಿದು, ತೆಗ್ಗುದಿನ್ನೆಗಳ
ಏರಿಳಿದು, ಸಂಚಲನೆಯ ಹರಿಸಿಬಿಡು ತನುವಿನೊಳಗೆ
ಚೆಲ್ಲಿದ ಮಧುವ ಹೀರಿಕೊಂಡು, ಹದವಾಗಿಬಿಡಲಿ ಮಣ್ಣು....
ಮೊಳಕೆಯೊಡೆದು ಚಿಗುರಿ, ಕಾಯಿಯು ಹಣ್ಣಾಗಿಬಿಡಲಿ
ನಿನ್ನೊಲವಿನ ಕಾವಿಗೆ
ಬರೆದಿಟ್ಟುಬಿಡು ಪುಟಪುಟಗಳಲಿ, ಪದಪದಗಳಲಿ
ಶೃಂಗಾರ ರಸವೆ ಮೈದುಂಬಿ ಹೊದ್ದಿರಬೇಕು ಆ ಹೊತ್ತಿಗೆ
ಗಾಲಿಬ್.....
ಹಚ್ಚಿಟ್ಟ ಮೊಂಬತ್ತಿಯು ಬೆಂಕಿಯ ಶಾಖಕ್ಕೆ ಸಿಕ್ಕು
ಕರಗಿ ನೀರಾಗಿ ಬಿಕ್ಕತೊಡಗಿದೆ
ಬರುವಿಕೆಗಾಗಿ ಕಾಯುತ್ತಿರುವ ಈ ಚಿಟ್ಟೆ..ಚಟಪಟಿಸುತ
ಒಳಗೊಳಗೆ ಬೆಂದು, ಕುದ್ದು ಹೋಗುತ್ತಿದೆ
ಉಟ್ಟ ಸೀರೆ...ತೊಟ್ಟ ರವಿಕೆ... ಮುಡಿದ ಮಲ್ಲಿಗೆ...
ಸಿಂಗರಿಸಿಕೊಂಡ ಆಭರಣಗಳಿಂದೇಕೊ ಭಾರವೆನಿಸಿಬಿಟ್ಟಿವೆ..
ಗಾಲಿಬ್....
ಎಂದಿನಂತೆ, ನಾನಿಂದಿಲ್ಲ....ನಿನ್ನ ಕೈಯಿಂದ ಅಡಿಯಿಂದ ಮುಡಿಯವರೆಗೂ ನವಿಲು ಗರಿಯನು ನರ್ತಿಸಿಕೊಳ್ಳಬೇಕಿದೆ
ಪಾಪ..ಪುಣ್ಯಗಳ ಗಣಿತ ನನಗೆ ಗೊತ್ತಿಲ್ಲ, ಏನಾದರೂ ಸರಿ
ಇಂದು ನಿನ್ನ ಬ್ರಹ್ಮಚರ್ಯವನ್ನು ಮುರಿಯಲೆ ಬೇಕಿದೆ
ಅತಿರಥ ಮಹಾರಥ ಮುನಿಗಳೆ...ಕಾಲ್ಗೆಜ್ಜೆಯ ಸದ್ದಿಗೆ
ದಿಕ್ಕು ತಪ್ಪಿದ್ದಾರೆ, ನಿನ್ಯಾವ ಲೆಕ್ಕ!!! ಬಾ ಬೇಗ ನಿನೀಗ
ಎಲ್ಲೂ.... ವಿರಮಿಸದೆ
Saturday, June 1, 2019
ತಿದ್ದುಪಡಿ ೧
ಮುನ್ನುಡಿಯನ್ನು
ಬರೆದು ಕೊಡುತ್ತೇನೆಂದವರು
ಇನ್ನೂ.... ಬರೆದು
ಕೊಟ್ಟಿಲ್ಲ...!!!
ಕಾದ ಶಬರಿಗೆ
ರಾಮನು ಬಂದ....
ನಾನು ಕಲ್ಲಾಗಿಬಿಡಲೆ?
ಪುಸ್ತಕಗಳಲ್ಲಿ
ಸಾಕಷ್ಟು ಪದಗಳಿವೆ
ಭಾವನೆಗಳಿಲ್ಲ!!
ಜೇಬಿನಲ್ಲಿ ಖರ್ಚು
ಮಾಡಲಾರದಷ್ಟು
ಹಣವಿದೆ...
ತಲೆಯಲ್ಲಿ
ಬುದ್ದಿಯೊಂದಿಲ್ಲ!!
ನಾನಲ್ಲ
ಎಡಬಲಗಳ
ಹುಂಭ!!
ಬರೆಯುತ್ತೇನೆ
ತಿಳಿದಷ್ಟು....ಇದಕ್ಕಿಲ್ಲ
ಜಂಭ!!!
ಎದೆಯಿದು
ಪ್ರೀತಿಯನ್ನೆ ತುಂಬಿಕೊಂಡ
ಕುಂಭ!!!
ಸಿದ್ಧು- ದುರಹಂಕಾರಿ
ಯಡ್ಡಿ- ಕೋಪಿಷ್ಟ
ಗೌಡ್ರು- ಗಂಟುಮೂತಿ
ಮತ್ತೇ................?
ಪದೇ... ಪದೇ...
ಇಂಥವರನ್ನೆ
ನಾಯಕರನ್ನಾಗಿ
ಆರಿಸಿ ತರುವ
ನಾವೆಂಥ ..............?
ಸಿಂಹಗಳು ಎಂದಿದ್ದರೂ...
ಬೇಟೆಯಾಡಲೇಬೇಕು!
ಬೇಟೆಗಳೆ ಸಿಂಹದ
ಬಾಯಿಗೆ ಬಂದರೆ?
ಸುಖವಾಗಿರುತ್ತೆ!!!!?
ಸುಖದಲ್ಲಿ ತೇಲುತ್ತಿದ್ದರೆ
ಬೇಟೆಗಳೆ ಸಿಂಹವನ್ನು
ಬೇಟೆಯಾಡಿಬಿಡುತ್ತವೆ.
ಮಸಣವನ್ನೆ
ಕಾಯುತ್ತಿರುವೆ
ಅಂದ ಮಾತ್ರಕ್ಕೆ
ನಿನಗೆ ಮರಣ
ಬರುವುದಿಲ್ಲವೇನು?
ತಪ್ಪುಗಳನ್ನೆ ಮಾಡಿ
ಸಮರ್ಥಿಸಿಕೊಳ್ಳುತ್ತಿದ್ದರೆ
ನಿನಗೆ ಶಿಕ್ಷೆಯೆ
ಆಗುವುದಿಲ್ಲವೇನು?
ತಾತನಿಗಾಗಿ
ರಾಜಿನಾಮೆಯನ್ನು
ನೀಡುವಿರೇನೊ?
ಸರಿ.....
ನಿಮ್ಮನ್ನೆ ಗೆಲ್ಲಿಸಲು
ಹಗಲಿರುಳು ದುಡಿದ
ಕಾರ್ಯಕರ್ತರ
ಶ್ರಮಕ್ಕೆ ಏನೆಂದು
ಬೆಲೆ ಕಟ್ಟುವಿರಿ
ಯಾವುದರ
ಹಿಂದೆ ಬಿದ್ದಿರುವೆ
ನೆನಪಿದೆಯಾ?
ಮರೆತಿರುವೆಯಾದರೆ
ಎಚ್ಚೆತ್ತಿಕೊ... ಇನ್ನೂ
ಸಮಯ ಬಹಳ
ಉಳಿದಿಲ್ಲ!!!
ಏನು ಬರೆಯಲೆಂದು
ಹವಣಿಸುತ್ತದೆ
ಮನ!!!
ಹಳೆಯದನೆಲ್ಲ
ನೆನೆದಾಗ,
ಪದಗಳು ತಾಳುತ್ತವೆ
ಮೌನ!!!
ಜಪ ಮಾಡುವಿರೇಕೆ
ಇವಿಎಮ್ ಯಂತ್ರ
ಮಾಡುವುದಾದರೆ ಮಾಡಿ
ಅಭಿವೃದ್ಧಿ ಮಂತ್ರ
ಇದೆ ನಿಂ ಚುನಾವಣಾ
ಗೆಲುವಿಗೆ ತಂತ್ರ
ಬಯಲಿಗೆ
ಬಂದವರೆಲ್ಲ
ಬೆತ್ತಲಾಗಲಿಲ್ಲ!!!!
ಬೆತ್ತಲಾದವರನ್ನೆಲ್ಲ
ಮೂಢ ಜನರು.
ದೇವರನ್ನಾಗಿ
ಮಾಡಿದರಲ್ಲ!!!
ಬುದ್ಧನೆದ್ದನೆಂದು
ಆಗಾಗ ಎದ್ದು
ಕೂರಬೇಡಿ
ನಡು ರಾತ್ರಿಯಲ್ಲಿ!!
ತಲೆ ಕೆಟ್ಟಿರಬಹುದೆಂದು
ತಂದು ಕೂರಿಸ್ಯಾರು
ನಿಮ್ಮನ್ನು
ಹುಚ್ಚಾಸ್ಪತ್ರೆಯಲ್ಲಿ
ಉರಿದು ಹೋಗುತಿಹವು
ನನ್ನೀ....
ತನುಮನ ಮೋಹನ
ಮೋಹಗೊಳಿಸುವ
ನಿನ್ನ ಕೊಳಲು
ನಾದಕೆ!!!
ನನ್ನದೆಲ್ಲವು
ಅರ್ಪಿತವಲ್ಲವೇನು
ನಿನಗೆ...
ಹೇಳಬೇಕೆನು?
ಬಂದುಬಿಡೊಮ್ಮೆ.....
ಯಮುನೆಯ
ತೀರಕೆ!!!
ಹೇಗೆ
ಗೆಲ್ಲಲಿ ನಾನು
ಈ ನಿನ್ನ
ದಿಟ್ಟ ನೋಟಕ್ಕೆ!!!
ಎದೆಯೊಳಗೆ
ಗಾಯವಾಗಿದೆ, ಕಾಣಿಸದು
ಯಾರಿಗೂ...ನೀ
ಬಿಟ್ಟ ಬಾಣಕ್ಕೆ !!!
ಕೊಂದುಬಿಡು
ಬೇಕಿದ್ದರೆ....
ಗೋರಿಯೊಳಗೆ
ಮಲಗಿಬಿಡುವೆ
ಒಂಟಿಯಾಗಿಯೇ..!!
ಒಂಟಿ ಕಣ್ಣಿನಲ್ಲಿ
ಸತಾಯಿಸಬೇಡ,
ಉರಿದು ಹೋಗುತ್ತಿರುವೆನಿಲ್ಲಿ
ನಿನಗರಿವಿಲ್ಲದೆಯೇ...!!!
ತಿರುಗುವ ಭೂಮಿ
ನಿಲ್ಲುವುದೇನು?
ಕುಳಿತುಕೊಳ್ಳಲಿ ಹೇಗೆ
ನಿನ್ನ ಜಪಿಸದೆ
ನಾನು ಸುಮ್ಮನೆ!!!
ಗಡಿಯಾರದ ಮುಳ್ಳುಗಳನ್ನು
ಕಿತ್ತಿಟ್ಟರೆ? ಸಮಯ
ನಿಲ್ಲುವುದೇನು? ಕಾಯಿಸಬೇಡ
ಬಂದುಬಿಡು ನೀನೀಗ
ಸುಮ್ಮನೆ..!!!
ಮಧುರಾತ್ರಿಯಲ್ಲೆ
ಮಗನ ಯೌವ್ವನವನ್ನು
ಕಿತ್ತುಕೊಂಡುಬಿಟ್ಟ
ಯಯಾತಿ....!!!
ಪುಸ್ತಕ ಮುದ್ರಣಗೊಂಡ
ಮೂರೆ ದಿನದಲ್ಲಿ
ಗೆದ್ದುಕೊಂಡುಬಿಟ್ಟ
ಬಹುಮಾನವನ್ನು
ಇಲ್ಲೊಬ್ಬ
ಸಾಹಿತಿ..!!
ಹಾಡಿ ಹೊಗಳುತ್ತಿದ್ದವರೆ
ಆಡಿಕೊಳ್ಳುತ್ತಿರುವರು
ನೋಡಿ..!!
ಬೆನ್ನಹಿಂದೆ
ಮಾತನಾಡುವ ಚಟಕ್ಕೆ
ಬಿದ್ದು... ನೀವಾಗದಿರಿ
ಹೇಡಿ..!!
ಅರೆಬರೆ ಬೆಂದು
ಬರೆದವರೂ...
ಕಳುಹಿಸಿ ಕೊಡುತ್ತಾರೆ
ಪ್ರಶಸ್ತಿಗೆ ಒಂದ್ಮೂರು
ಪ್ರತಿ!!!
ನೋಡಲಾಗದು...
ಇವರ ಸಾಹಿತ್ಯವ
ಅರಗಿಸಿಕೊಳ್ಳಲಾಗದೆ
ಒದ್ದಾಡುವ ನಿರ್ಣಾಯಕರ
ಪಜೀತಿ!!!
ಎಲ್ಲದಕ್ಕೂ....
ತುದಿಗಾಲಿನಲ್ಲಿಯೇ..
ನಿಲ್ಲಬೇಡ!!!
ಬ್ಯಾಂಕ್ ಖಾತೆಯಲ್ಲಾ
ಖೋತಾ ಆಗಿದೆ
ಮರಿಯದಿರಬೇಡ!!
ನಾ ಕೊಟ್ಟ
ಬಳೆಗಳನ್ನು
ನಿಮ್ಮಪ್ಪನಿಗೆ
ತೋರಿಸಬೇಡ!!
ಪ್ರೀತಿ ಒಪ್ಪಿತವಾದರೆ
ಎತ್ತಿಟ್ಟಿಕೊ...
ಶಾಯರಿ ಗಾಲಿಬ್
ಮರೆಯುವ ಕಲೆ
ನಿನಗೆ ಗೊತ್ತಿದ್ದಿದ್ದರೆ
ಮದಿರೆಯಾದರು
ಏತಕ್ಕೆ ಬೇಕಿತ್ತು?
ಗಾಲಿಬ್.....
ಅವಳಿನ್ನು ನನಗೆ
ನೆನಪಾಗಳೆಂದು
ಮಗ್ಗಲು ಬದಲಿಸಿದ್ದರೂ
ಸಾಕಿತ್ತು....
ಶಾಯರಿ
ರಂಗೀಯ ನೆನಪುಗಳ
ಬುಟ್ಟಿಯನ್ನು ಖಾಲಿ
ಮಾಡಲು, ಕುಡಿಯುತ್ತಿರುವೆ
ಬಟ್ಟಲು... ಬಟ್ಟಲು
ಮದಿರೆ...!!
ಸಾಕಿ.....
ಮಧ್ಯ ಕುಡಿದಷ್ಟು
ಖಾಲಿಯಾಗುತ್ತಿದೆ,
ನೆನಪುಗಳು ನೆನಸಿಕೊಂಡಷ್ಟು
ಹೆಚ್ಚಾಗುತ್ತಿವೆ!!
ಹೀಗಾದರೆ... ಬರುವುದು
ಹೇಗೆ? ರಾತ್ರಿಗೆಲ್ಲ
ನಿದಿರೆ!!