ಅವಳು ಕೊಂದು
ಹೋದದ್ದು
ಪ್ರೀತಿಯನ್ನ!!
ನನ್ನ ಭಾವನೆಗಳನ್ನೆನಲ್ಲ
ರಂಗೀ...
ಮಾತುಗಳಿಗೆ ಬರವಿರಬಹುದು!
ಬರೆವ ಪದಗಳಿಗಿಲ್ಲ!!!
ಸೂಪರ್ ಬೀಗರೆ
ಅವಳು ಕೊಂದು
ಹೋದದ್ದು
ಪ್ರೀತಿಯನ್ನ!!
ನನ್ನ ಭಾವನೆಗಳನ್ನೆನಲ್ಲ
ರಂಗೀ...
ಮಾತುಗಳಿಗೆ ಬರವಿರಬಹುದು!
ಬರೆವ ಪದಗಳಿಗಿಲ್ಲ!!!
ಸೂಪರ್ ಬೀಗರೆ
ನಾನೇನು ಗಾಯವನ್ನು
ವಾಸಿಮಾಡಿಕೊಳ್ಳಲು
ಬಂದವನೇನಲ್ಲ!! ಅದರ
ನೋವನ್ನು ಮರೆಯಲು
ಬಂದವನು ರಂಗೀ....
ಅದು ವಾಸಿಯಾದರೆ?
ಬದುಕುವುದಕ್ಕೆ
ನನಗಿನ್ನೇನುಳಿಯುವುದು
ಹೇಳು...
ಪ್ರೀತಿಗೆ ಬೆನ್ನು
ತೋರಿಸಿದ ದಿನವೆ
ನನ್ನೆಲ್ಲ ಮಾತುಗಳನ್ನು
ಗಂಟುಕಟ್ಟಿ ಒಗೆದುಬಿಟ್ಟೆ,
ಮದ್ಯದ ಬಟ್ಟಲಿನೊಳಗೆ
ರಂಗೀ....
ನನ್ನ ಬಳಿ ಇರುವುದೊಂದೆ
ಈಗ.... ಅವಳ
ಮರೆಯಲು, ಮನೆ ಮಾರಿ,
ಕುಡಿಯಲು ತಂದಂತಹ
ಹಣದ ಗಂಟು...
ನನಗೆ ಗೊತ್ತು. ಇದಕ್ಕೂ
ನಿನಗೂ ಬಹಳ ನಂಟು
ನಾನೂ....
ಕುಡಿಯದಿದ್ದಾಗ
ಅವಳನ್ನು ಎದೆಯಲ್ಲಿಯಟ್ಟಿಕೊಂಡೆ
ಪೂಜಿಸುತ್ತಿದ್ದೆ
ರಂಗೀ....
ಅವಳೀಗ ಎದೆಯಲ್ಲಿಲ್ಲ!
ತಲೆಗೆರಿಬಿಟ್ಟಿದ್ದಾಳೆ, ಅದಕೆ
ಕುಡಿದ ಮತ್ತು
ತಲೆಗೆರುವುದೆ ಇಲ್ಲ!!!
ಇತ್ತೀಚೆಗೆ
ನಿನ್ನರಮನೆಯ ಮದಿರೆಯ
ಬಟ್ಟಲುಗಳು
ಮಾತನಾಡುತ್ತಿವೆ
ರಂಗೀ...
ಕುಡಿದು ಅವಳನ್ನಾದರು
ಮರೆ...ಇಲ್ಲವಾದರೆ
ನಮ್ಮನ್ನಾದರೂ ಬಿಡು,
ಎರಡು ಆಗದಿದ್ದರೆ?
ಮರೆಯುವುದಂತನ್ನಾದರು
ನೆನಪಿಸಿಕೊಂಡು, ನಮ್ಮನ್ನು
ಕುಡಿ ಎಂತೆಂದು
ಒಂಟಿತನಕ್ಕಿಂತಲೂ
ಖಾಲಿತನವು ಬಹು
ಅಪಾಯಕಾರಿಯಾದದ್ದು
ರಂಗೀ...
ಹೇಗೆ ಅಂತ ಹೇಳಲೆ?
ಒತ್ತೊತ್ತುಕೊಂಡು ಬರುವವಳ
ನೆನಪುಗಳ ಮರೆಯಲು...
ಮದಿರೆಯನ್ನು ಕುಡಿಯಬೇಕೆಂದಾಗ
ನಿನ್ನರಮನೆಯ ಹೂಜಿಯು
ಖಾಲಿ ಇರುವುದಲ್ಲ!
ಅವಳು
ಕಟ್ಟಿಕೊಟ್ಟು ಹೋದ
ನೆನಪುಗಳ ಹೊರೆಯನ್ನು,
ಯಾವ ಸಂತೆಯಲ್ಲಿ
ಮಾರಟಕ್ಕಿಡಲಿ
ರಂಗೀ....
ಬಜಾರಿನ ಮೂಲೆ
ಮೂಲೆಗಳಲ್ಲೂ... ಅವಳೆ
ಕಳುಹಿಸಿಕೊಟ್ಟ, ವಿರಹಿಗಳೆ
ತುಂಬಿರುವಾಗ