Saturday, March 26, 2011

ಕಾಲ

   ಕಾಲ

ಹ್ವಾದದ್ನ ತರೊಂಗಿಲ್ಲ 
ಬರೋದ್ನ ನೋಡಂಗಿಲ್ಲ 
ನಡೆಯೋದ್ನ್ ತಿದ್ದೊಕಾಗಂಗಿಲ್ಲ 
ಹಿಂಗಿದ್ದ, ಜೀವಕ್ಕ ನಾಳೆನ್ನೋ
ಚಿಂತಿನ ಯಾಕ ಹಚ್ಗೊತಿ.

ಹೂ

   hoo 

||ಮುಂಜಾನೆ ಹುಟ್ಟಿ
ಸಂಜೀಕ ಸಾಯೋ
ಹೂವಾ... ಮನಸ್ಸಿಗೆಷ್ಟು
ಮುದ ನಿಡತ್ಯತಿ||
ಭಾಳ ಪೂರಾ ಬದಕೋ
ಮನುಷ್ಯಾ ನೀನು
ಬ್ಯಾರ್ಯಾವರಗ್ಯಾಕಿಷ್ಟು
ಸಂಕಟ ಕೊಡ್ತಿ.

Friday, March 25, 2011

ದೀಪ

              ದೀಪ

||ಕತ್ತಲ ಕೊನ್ಯಾಗೊಂದು
ದೀಪ ಹಚ್ಚಿಟ್ರ ಎಷ್ಟ ಬೆಳಕ
ಚೆಲ್ಲತ್ಯತಿ....||
ನನ್ ಎದೆಯಾಗೊಂದು
ದೀಪ ಹಚ್ಚಿಟ್ಟು ನೋಡ...
ನಿನ್ ಬಾಳ ತುಂಬಾ ಬೆಳಕ ಚೆಲ್ತಿನಿ..
ಆ ಚಂದ್ರನ್ ಮುಖದಾಗೂ
ನಾಚ್ಕೆ ತರಸ್ತೀನಿ...

ನಿನ್ ಗುಲಾಬಿ

 ನಿನ್ ಗುಲಾಬಿ

||ನಿನ್ ತುರುಬಿನೊಳಗಿನ ಗುಲಾಬಿ
ಎಷ್ಟ ಚಂದ ಅಯ್ತಿ...||
||ಕಿತ್ತಿ ನನ್ನ ಎದೆಯಾಗ
ನಡಬೇಕನಸ್ಯತಿ||
ಹುಡುಗಿ...
||ಕಿತ್ತುವಾಗ|| ಹುಡುಗಿ
ಹೂ ಬಾಡಿದರ....
||ನನ್ ಎದೆಯಾ
ಒಡದ್ಹೊಕ್ಯತಿ..||

ನಿನ್ ಕಣ್

ನಿನ್ ಕಣ್

  ನೀ ನೋಡಬ್ಯಾಡ ಹಂಗ
  ಕಣ್ಣಾಗ ಕಣ್ಣಿಟ್ಟ....
  ನಿನ್ ಕಣ್ ಒಂದ ಪ್ರೀತಿ
  ಕೊಳ ಇದ್ಹಂಗ್ಯತಿ.....
 ಈಜ ಬಾರದ ನಾನು ಜಾರಿ   
 ಬಿದ್ನೆಂದ್ರ.....
ಎದ್ಬರೋದ ತ್ರಾಸಾಗತ್ಯತಿ. 

Saturday, March 5, 2011

ಹೊಂಟಹೋದೆನ

ಕಬ್ಬಿನ ಬಿಲ್ಲಿನ ಹಿಂಡಿ ರಸ ತಗದ್ಹಾಂಗ
ಸಿಪ್ಪೆ ಸುಲಿದು ಹಣ್ಣು ತಿಂದ್ಹಾಂಗ
ಮ್ಯೆ ತುಂಬಿದ ಹೂ ಬಳ್ಳಿನ  ಹೂವ ಕಿತ್ತು
ನಿಡಮಬರ   ಮಾಡಿ ಬಿಟ್ಹಂಗ
ನನ್ ಬದುಕಿನ ಪ್ರೀತಿನೆಲ್ಲ ಹೀರಿ
ಹೊಂಟಹೋದೆನ.

ದೀಪ


||ಒಲಿಯಾಗ  ಎಷ್ಟ ಕಟ್ಟಿಗೆ ಇಟ್ಟು 
ಬೆಂಕಿ  ಹಚ್ಚಿದ್ರುನು
ಸುಟ್ಟು ಬೂದಿಯಾಗ್ತ್ಯತಿ||

                   ನನ್ನೆದೆಯ್ಯಾಗಾ ಎಷ್ಟ ಪ್ರೀತಿ ಇಟ್ಟ
                   ಸುಟ್ಟರನು ಅದು ಹೆಚ್ಚು ಬೆಳಕಾ ಕೊಡತ್ಯತಿ
                   ನೀ ಹೋಗೊ ಹಾದಿಗೆ ಬೆಳಕಾ ಚೆಲ್ತ್ಯೆತಿ.