Beish
Tuesday, September 10, 2013
ಮಗಳೆ
ಬಾನಿನ ಬಿಲ್ಲು ನಾಚಿತು ಇಂದು
ನಿನ್ನೀ ಅಂದವ ನೋಡಿ
ಮಲ್ಲಿಗೆ ಮುನಿಸಿತು ಇಂದು
ನಿನ್ನೀ ನಗುವ ನೋಡಿ
ಶಶಿಯು ಮಂಕಾದನು ಇಂದು
ನಿನ್ನೀ ಕಾಂತಿಯ ನೋಡಿ
ಬೇಲೂರೆ ಸೊರಗಿತು ಇಂದು
ನಿನ್ನೀ ಭಂಗಿಯ ನೋಡಿ
ನಿನಗಾರು ಸಾಟಿ ಮಗಳೆ...
Saturday, June 22, 2013
ಬಚ್ಚಿಡುವೆ
ಬಿಸಿಲಿಗೆ ಬಾಡದ ಹಾಗೆ
ಕಣ್ಣಿನ ರೆಪ್ಪೆಯಲಿ
ಬಚ್ಚಿಡುವೆ
ಗಾಳಿಗೆ ನಲುಗದ ಹಾಗೆ
ಎರಡು ಅಂಗ್ಯೆಯಲ್ಲಿ
ಮುಚ್ಚಿಡುವೆ
ಮಳೆಗೆ ಸಿಲುಕದ ಹಾಗೆ
ಮನದಲ್ಲಿ ಮಲಗಿಸಿ
ಬೆಚ್ಚಗಿಡುವೆ
Wednesday, June 19, 2013
ಕಾಮನ ಬಿಲ್ಲೆ
ನಲ್ಲೆ ನೀನು ಕಾಮನಬಿಲ್ಲೆ
ನಲ್ಲೆ ನೀನು ಕಬ್ಬಿನಬಿಲ್ಲೆ
ನಲ್ಲೆ ನೀನು ಬೆಲ್ಲದ ಬಿಲ್ಲೆ
ಆದರೆ ನಲ್ಲೆ ನಿಮ್ಮಪ್ಪ ನಾನೆಂದರೆ
ಕಬ್ಬಿಣದ ಬಿಲ್ಲೆ
ಗಂಗೆ
ಪಾವನವಾದಳು ಗಂಗೆ
ವರುಣನ ದಯದಿಂದಾ
ತುಂಬಿ ಚೆಲ್ಲಿದಳು ಕೊಳಕನ್ನು
ಮೈಗಂಟಿದ ಕಳೆಯನ್ನು
ಇವಳಿಗೆಕೋ ಹರಿಹರರ
ಮೇಲೆ ಅನುಕಂಪ ಅದಕೆ
Sunday, August 26, 2012
ಭೀಷ್ಮ
ಭೀಷ್ಮ
ಶರ ಶಯನವನೇರಿದ
ಶ್ವೇತದಾರಿ
ಮಾನಸ ಮಾತೆಯ
ಮಡಿಲದಾರಿ
ಆತ್ಮಿಚ್ಚೆ ಕವಚದ
ಧನುರಧಾರಿ
Friday, August 24, 2012
ಕನಸು ಮನಸು
ಕನಸು ಮನಸು
ಎದೆಯ ಮೇಲಿನ
ಕೌಸ್ತುಭದ ತುಂಬಾ
ನಿನ ಮನಸು
ಅರಿಯದೆ ಹೋದೆ
ಎದೆಯೊಳಗಿನ ನೂರಾರು
ಕನಸು.
ಅಂದದ ಹೂವನು ಮುಡಿಗೆರಿಸುವ
ನಿನ್ನ ಚಪಲ| ಅದರೊಳಗಿನ
ಗಂಧವ ಸವಿಯುವುದಿಲ್ಲವಾಯಿತೆ
ಹಂಬಲ
ಕರಿ ಇರುಲೋಳು, ಕರಿ ಆಗಸದಲಿ
ಚಂದಿರನ ಮೊಗದಲ್ಲೂ ನೀ
ಹುಡುಕುವೆ ಕರಿ ಮಚ್ಚೆಗಳ
ಕಾಣದೆ ಸೋತೆ ಕರಿ ರಾತ್ರಿಯೊಳು
ಕರಿ ಮಚ್ಚೆಗಳ ಚಂದ್ರನು
ಚೆಲ್ಲುವ ಹಾಲಂತ ಬೆಳಕನ್ನ
ಕನಸು ಚೂರು
ಕನಸು ಚೂರು
ಚೆಂದದ ಸೀರೆ ಹರಿದೆ
ಹೋಯ್ತು ಮುಳ್ಳಿಗೆ
ಸಿಲುಕಿ
ಅಂದದ ಕನ್ನಡಿ ಒಡಿದೆ
ಹೋಯ್ತು ಗಾಳಿಗೆ
ನಲುಗಿ
ಗಂದದ ಹೆಣ್ಣು ಉರಿದೆ
ಹೋಯ್ತು ಕಾಮದ
ಬೆಂಕಿಗೆ ಸಿಲುಕಿ
Newer Posts
Older Posts
Home
Subscribe to:
Posts (Atom)