ಗೆಳತಿ..
ನಿನ್ನ ಮೋಹಕ ನಗುವಿನಲಿ
ತೂಗಿದೆ ಎನ್ನೆದೆಯ ಜೋಕಾಲಿ
ಆ ಕಾಲ್ಗೆಜ್ಜೆಯ ಸದ್ದಿಗೆ ಸೋತ
ಒಲವಿದು... ಜಿಕುತಿದೆ ನಿನ್ನದೆ
ನೆನಪಿನಲಿ
Tuesday, June 13, 2017
ಗೆಳತಿ
ಬಾಳೆನೆ
ಗೆಳತಿ..
ನಿನ್ನ ನಗು ಮೊಗವ
ಹೊತ್ತು ನಿಂತಿರಲು ಹೀಗೆ
ಎದುರಿಗೆ ವೈದ್ಯನು ಚುಚ್ಚಿದ
ಸೂಜಿಗಳ ನೋವು ಒಂದಿನಿತು
ಅರಿವಾಗಲಿಲ್ಲ...
ದೇಹದೊಳಡಗಿ ಕುಳಿತ ಭಾದೆಯು
ಸೂಜಿಯ ಮೊನೆಯಷ್ಟು
ಭಾದಿಸಲಿಲ್ಲ
ನಿನ್ನ ಆರೈಕೆಯಿಂದ..
ಹೊಸ ಹುಮ್ಮಸು ಬಂದಿತಲ್ಲ
ದೇಹದಲ್ಲೆಲ್ಲ ಮಿಂಚಿನ ಸಂಚಾರ
ವಾಗುತಿದೆಯಲ್ಲ..
ಬಾಡಿದ ಮೊಗದಲ್ಲೂ ಹುಣ್ಣಿಮೆ
ಕಾಂತೀಯ ತುಂಬಿ...
ಒಣಗಿದ ಅಧರಗಳಿಗೆ ನಿನ್ನಧರದಿಂದ
ಸವಿಜೇನ ಸವರಿಬಿಟ್ಟೆಯಲ್ಲ..
ನಗುವಿರಲಿ ಚೆಲುವೆ ಸದಾ ಹೀಗೆ
ನಿನ್ನ ತುಟಿಯ ಮೇಲೆ
ಒಲವ ಸುಧೆಯ ಸುರಿಸುತಿರು
ಮರೆಯದೆ ನನ್ನ ಮೇಲೆ
ನಿನ್ನ ನಗುವ ಮದ್ದಿಗಿಂತ
ಬೇರೆ ಮದ್ದು ಬೇಕೆನೆ..?
ನೀನಿಲ್ಲದೆ ಬದುಕುವ
ಬಾಳು.. ಬಾಳೆನೆ..?
Monday, June 12, 2017
Sunday, June 11, 2017
ಹುಟ್ಟಿದೆ ಒಂದು ಕವಿತೆ
ಜಗವ ಗೆದ್ದು ತರುವ.. ಎದುರಾಡಿದ
ಗಂಡುಗಳ ರುಂಡವ ಚೆಂಡಾಡಿ ತರುವ
ಪಂಚ ಪಾಂಡವರು ಪಾಂಚಾಲಿಗಿದ್ದರೂ..
ಸಭೆಯಲಿ ಸೆರಗಿಗೆ ಮೈದುನನೆ.. ಕೈ ಹಾಕಿದಾಗ,
ಹುಟ್ಟಿದೆ ಮನದಾಗ್ನಿ ಕುಂಡದಳೊಂದು ಕವಿತೆ
ವನವಾಸಗಳ ಮೇಲೆ ವನವಾಸವ ಅನುಭವಿಸಿ....
ಅರ್ಧ ಬದುಕೆಲ್ಲ ಪತಿಯಿಂದ
ದೂರವೆ ಉಳಿದು... ಬದುಕುವ ಸ್ಥಿತಿಯ
ತಂದ ವಿಧಿಯ ನೆನೆದು, ಹುಟ್ಟಿದೆ ಅವಳ
ಮನದ ಗರ್ಭದೊಳಗೊಂದು ಕವಿತೆ
ಮೈ ದುಂಬಿ ಹರಿಯುವ ಯಮುನೆಯ
ತೀರದಲಿ, ಸೀರೆ ಕದ್ದ ಕಳ್ಳನಿಗಾಗಿ ಕಾದು..
ಕಾದು.. ಪ್ರೀತಿಯಲ್ಲಿ, ಬರಿ ವಿರಹ ದಾಹವನೆ
ಹೊಂದಿದಂತ, ರಾಧೆಯ ಮನದ ಕೊಳದಲೊಂದು
ಚಿಮ್ಮಿದೆ ಕವಿತೆ
ಹುಟ್ಟಿದ ಕವಿತೆಗಳಿಗೆಲ್ಲ ಕಿವಿಯಾಗುವರಾರು...?
ಅವರ ಮನದ ನೋವುಗಳ ಮರೆಸಿ...
ಹೊಸ ರಾಗವ ಹಾಡುವರಾದರು ಯಾರು..?
ಎಲ್ಲರೂ... ಜಗದೊದ್ಧಾರಕರೆ...!!!!!
ಬಂಜೆಯ ಅಳಲು
ಮೊನ್ನೆ ಜಾತ್ರೆಯಲಿ ತಂದ ಕಟ್ಟಿಗೆಯ
ಗೊಂಬೆಯ ಎದೆಗವುಚಿ.. ಜೊ....ಜೊ..
ಎಂದು ಲಾಲಿಯ ಹಾಡುತ್ತಿರುವೆ... ನಡುಗತ್ತಲಲಿ
ಚಿಟ್ಟನೆ ಚೀರಿ ಎದೆಹಾಲಿಗಾಗಿ ಹಂಬಲಿಸುವ
ಕರುಳು ಕುಡಿಯು ನೀನಾಗಬಾರದೆ
ಕಂದ ನಿನ್ನಜ್ಜ ಮಾಡಿಸಿಟ್ಟಿರುವ ಗಂಧದ
ತೊಟ್ಟಿಲಲಿ ಹಾಕಿ ತೂಗಿ..ತೂಗಿ..ನನ್ನ
ತೋಳುಗಳು ಸೋತರು.. ನೀ ಮಲಗದೆ
ನನ್ನ ಸತಾಯಿಸುವ ರೀತಿಯಲ್ಲಿ ನಗುವುದ
ನಾ ನೋಡಬೇಕು
ಅಡುಗೆ ಮನೆಯ ಕೆಲಸದ ತರಾತುರಿಯಲ್ಲಿರುವಾಗ
ಅಂಬೆಗಾಲಲಿ ಬಂದು ಸೀರೆಯ ಚುಂಗನು ಎಳೆದು
ಬಟ್ಟಲು ಕಂಗಳಿಂದ ಹಸಿವು ಎಂಬಂತೆ ನೀ ನೋಡುವ
ನೋಟವ ಕಣ್ತುಂಬಿಕೊಳ್ಳುವಾಸೆ...
ಎಷ್ಟೇಷ್ಟೊ ಆಸೆಗಳಿವೆಯೀ..ಬಂಜರು ಮಡಿಲಲಿ
ನಿನ್ನ ಚಿಗುರುಗಾಗಿ ಕಾದು ಕಾದು ನೊಂದ ಮನದಲಿ
ಅವರಿವರು... ಮನೆಯವರೆಲ್ಲಾಡುವ ಚುಚ್ಚು ಮಾತುಗಳ
ನೋವಿಗೆ ನೀನೊಂದು ಅಮೃತವಾಗಿ ಬರಬಾರದೆ
ಈ ಬಾಳಲೊಂದು ಬೆಳ್ಳಿ ಕಿರಣವಾಗಿ ಮೂಡಬಾರದೆ
ಬಂಜೆ... ಬಂಜೆ... ಬಂಜೆ ಎಂದು ಜಗವೆಲ್ಲ ಜರಿದರೂ
ನನ್ನ ಕರಿಮಣೆಯ ಮಾಲೀಕ ಮಾತ್ರ... ಒಂದು ಮಾತನ್ನು
ಹೋಗಲಿ ನನಗೂ ಒಂದು ಮಗು ಬೇಕೆಂದು ಕೇಳಿದವನಲ್ಲ
ಅವನ ಮುಂದೆ ದುಃಖವ ತೋಡಿಕೊಂಡರೆ... ಅವ ಹೇಳುವುದೊಂದೆ ಮಾತು..
ನಾನಾಗುವೆ ನಿನ್ನ ಮಡಿಲಿಗೆ ಮಗು
ಮಗುವಂತೆ ಮಲಗಿಸಿ ನೀ.. ನಗು
ರಚ್ಚೆ ಹಿಡಿದು ಅಳುವವನಲ್ಲ..
ಅದು ಬೇಕು ಇದು ಬೇಕೆಂದು ಕೇಳುವವನಲ್ಲ
ಸುರವಮೃತವು ಸಮವೆ ನಿನ್ನ ಕೈ ತುತ್ತಿಗೆ
ಉಣಿಸಿ ಜಾರಿಸಿಬಿಡು ನನ್ನನು ನಿದಿರೆಗೆ
ತರಬೇಡ ಹನಿ ಮುತ್ತುಗಳ ಕಣ್ಣಂಚಲಿ
ನನಗೆ ನೀನು.. ನಿನಗೆ ನಾನು ಎಂಬಂತೆ
ಜೋತೆಯಿರೋಣ ಬಾಳಲಿ
ಕೊಡದಿದ್ದರೇನು ಅವನು ಒಂದು ಹಣ್ಣು
ತೆರೆದು ನೋಡೊಣ ಅಂತರಂಗದ ಕಣ್ಣು
ಜಗದ ತೋಟದಲಿ ಮಾಲಿಯಿಲ್ಲದ
ಸುಮಗಳು ಅದೇಷ್ಟಿಲ್ಲ...ಹೊತ್ತು
ತರೋಣವೊಂದು ಸುಮವನು
ನಮ್ಮ ಮಡಿಲಲಿ ಬೆಳೆಸೋಣ
ಜಗದ ತುಂಬ ತುಂಬಿರುವ ಕುಸುಮಗಳು
ನಮ್ಮದೆ ತೋಟದೆಂದುಕೊಳ್ಳುವ
ಚಿಂತಿಸಬೇಡ ಒಡತಿ...
ಸಾಕಿಷ್ಟು ಬದುಕಿಗೆ.. ನಿನಗೆ ನಾನು
ನನಗೆ ನೀನು... ಲೋಕದ ಚಿಂತೆ
ಬೇಡ ನಮಗಿನ್ನು...
ಒಂಟಿ ಕಣ್ಣಿನಲಿ
ಅಳದಿರು ಹೀಗೆ ಒಂಟಿ ಕಣ್ಣಿನಲಿ
ಹೊತ್ತುವುದು ಬೆಂಕಿ ನನ್ನೊಂಟಿ ಎದೆಯಲಿ
ನೋಡದಿರು ಹೀಗೆ ನನ್ನನೆ ದುರುಗುಟ್ಟಿ
ತಪ್ಪಿನ ಅರಿವಾಗಿ ಸೋತಿಹನು ನಿನಗೀ.. ಜಟ್ಟಿ
ಕಣ್ಣ ಕಾಂತಿಯಲಿ ತೋರುತಿದೆ ನನ್ನ ತಪ್ಪು
ಮಾಡನಿನ್ನೆಂದೆಂದು ನಂಬಿ ಈಗಲಾದರೂ ಒಪ್ಪು
ಕಣ್ಣೀರಲೆ.... ತೊಯಿಸದಿರು ಮನವನ್ನು
ಒರೆಸುವೆ... ಅಪ್ಪುವೆಯಾ ತನುವನ್ನು
ಮನದ ಮಾತುಗಳ ಹೇಳುವುದಿದೆ ಬಹಳಷ್ಟು
ನೊಂದು ನೀ... ನನ್ನನು ನೋಯಿಸಬೇಡ ಇನ್ನಷ್ಟು
ಮೂಡಿದೆ ಬಾನಲಿ ಮಳೆ ಬಿಸಿಲಿನ ಮಿಲನಕೆ ಕಾಮನಬಿಲ್ಲು
ನಮ್ಮಿಬ್ಬರ ಮಿಲನಕೆ ಕಾಮನು ಹೂಡಲಿ ಬಿಲ್ಲು
ಬಾರೆ.. ಪ್ರೀಯೆ ಕ್ಷಮಿಸಿ ತೋರು ನಿನ್ನ ದಯೆ
ಕಾಡುತಿದೆ ನನ್ನನು ಹಗಲಿರುಳು ನಿನ್ನದೆ ಮಾಯೆ
ವಿರಹದ ಬೇಲಿಯನು ಸುಟ್ಟು ಹಾಕೋಣ
ಮನಗಳೆರಡಲೂ ಒಲವಿನ ಹಣತೆಯ ಹಚ್ಚೋಣ
Saturday, June 10, 2017
ಮಳೆಯೆ ಇಳೆಗೆ ಇಳಿಯೆ
ಬಾರೆ ಬಾರೆ ಇಳೆಗೆ ಮಳೆಯೆ
ಹಸಿರರಳುವುದು ನೀ ಸುರಿಯೆ
ಕಾದ ಕಾದ ಕೆರೆಗಳ ತಣಿಸೆ
ಹೊಲಗದ್ದೆಗಳಿಗೆಲ್ಲ ತಂಪನುಣಿಸೆ
ಬಿತ್ತಿದ ಕಾಳುಗಳಿಗೆ ಜೀವವ ತುಂಬೆ
ಮಣ್ಣ ಮಗನು ಬಾಳುತಿರುವನು ನಿನ್ನನೆ ನಂಬೆ
ಬೆಟ್ಟಗುಡ್ಡಗಳಲಿ ಹಸಿರ ಹೊದ್ದು ಮಲಗಿಸು
ಮೂಕ ಪ್ರಾಣಿಗಳ ಹಸಿವ ಇಂಗಿಸು
ಬರಗಾಲದ ನಾಡಿಗೆ ಚಿನ್ನದ ಹನಿಯಾಗು
ಉತ್ತು ಬಿತ್ತುವ ಭೂಮಿಗೆ ಹನಿ ಮುತ್ತಾಗು
ಮಲಗದಿರು ಕರಿಮೋಡದಲೆ ಚಿಂತೆಯಿಲ್ಲದೆ
ಬದುಕುವದಾದರೂ ಹೇಗೆ ಹಗಲಿರುಳು ನಿನ್ನ ನಂಬದೆ
ಕಾಯಿಸಬೇಡ ಜಾರಿಬಿಡು ಹೊತ್ತು ಮೀರುವ ಮೊದಲೆ
ಕಾದು ಕಾದ ಕತ್ತದು ಹಗ್ಗಕ್ಕೆ ನೇತಾಡುವ ಮೊದಲೆ