Saturday, December 30, 2017

ಹರೆಯ ಜಾರುವ ಮುನ್ನ.....

ಮತ್ತೀಳಿಯುವ ಮೊದಲೆ....
ಸವಿ ಮುತ್ತೊಂದನು....ನೀಡಿಬಿಡು..
ಚಳಿ ತೊರೆಯುವ ಮುನ್ನವೆ...
ಈ ದೇಹವ ಅಪ್ಪಿ...ಬೆಚ್ಚಗಾಗಿಸಿಬಿಡು

ಹರೆಯ ಜಾರುವ ಮುನ್ನ....
ಹಿಂಡಿಬಿಡು ಈ ಕಬ್ಬಿನಾ....ಜಲ್ಲೆಯನು
ಸಿಹಿ ಮಾಸುವ ಮುನ್ನ...
ಹೀರಿಬಿಡು ಕೆಂದುಟಿಯೊಳಗಿನ ಗಂಧವನು

ತಾಳಲಾಗದಿನ್ನು....ನನ್ನಿಂದ ಮಾಗಿಯ ಕೊರೆತ
ತೊರೆಯಲು...ಬಿಡಗೊಡುತಿಲ್ಲ ನಿನ್ನೊಲವಿನಾ ಸೆಳೆತ
ಎದೆಯ ಮೇಲೊರಗಿ ಕೇಳೊ ನನ್ನೆದೆಯ ಬಡಿತ
ಪ್ರತಿ ಬಡಿತದೊಳಡಗಿದೆ ನಿನ್ನದೆ....ಹೆಸರಿನಾ... ಮಿಡಿತ

ಕತ್ತಲಿಗೂ... ನಾಚಿಕೆಯ ತರೀಸಬೇಕಿಂದು ನಾ,
ನಿನ್ನ ತೋಳೊಳಗೆ ಬಂಧಿಯಾಗಿ....
ಚಂದ್ರನ ಹಾಲ್ಬೆಳದಿಂಗಳಿಗೂ... ಹೊಟ್ಟೆ ಕಿಚ್ಚನು
ಹೊತ್ತಿಸಬೇಕು, ನಿನ್ನೊಳು ನನ್ನೆಯ ಸಿರಿಯು ಸೊರೆಯಾಗಿ

ಪ್ರೇಮೊನ್ಮಾದದಿ ಉಸಿರಿದ ಬಿಸಿಯುಸಿರಿಗೆ,
ಕರಗಲಿ ಉಕ್ಕಿದ ಬೆವರು ಆವಿಯಾಗಿ....
ಕುಂಕಮವು ಕರಗಿ, ಸುಮಗಳೆಲ್ಲವ ಹೊಸಕಿ
ಉಳಿಯಲಿದು ಇರುಳು ಎಂದೆಂದು ನೆನಪಾಗಿ...

ಬಾರೊ....ಮನ್ಮಥ ಈ ಹುಣ್ಣಿಮೆಗೆ, ವಿರಹವೆಂಬ
ಅಮವಾಸೆಯ ಕತ್ತಲು ಅಪ್ಪುವ ಮುನ್ನ..
ಚಪ್ಪರಿಸಿ ಸವಿಯ ಬಾರೊ...ಬಾಳಿನ ತೊಟ್ಟಿಂದ,
ಹರೆಯವೆಂಬ ಈ ಹಣ್ಣು ಉದುರುವ ಮುನ್ನ...

Thursday, December 28, 2017

ಪ್ರೂಫ್

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರೋಣ
ಕ.ಸಾ.ಪ ತಾಲೂಕ ಘಟಕ ಗಜೇಂದ್ರಗಡ ಇವರ ಸಂಯುಕ್ತಾಶ್ರಯದಲ್ಲಿ ೮೦ ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆ ಶ್ರಿ ಆಯ್. ಎ. ರೇವಡಿ ಅಧ್ಯಕ್ಷರು ಕ.ಸಾ.ಪ. ರೋಣ. ವಿದ್ಯಾದರ್ ಮುತಾಲಿಕ್ ದೇಸಾಯಿ. ವಿದ್ಯಾದರ ಕನ್ನಡ ಪ್ರತಿಷ್ಠಾನ (ಠಾಕುರ್ಲಿ-ಠಾಣೆ ಮಹಾರಾಷ್ಟ್ರ) ಇವರು ಕಳೆದ ತಿಂಗಳು ಆಹ್ವಾನಿಸಿದ್ದ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನಮ್ಮೂರಿನವರೆ ಆದ ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಇವರ "ಚಂದ್ರವ್ವ" ಎಂಬ ಕಥೆಗೆ ವಿಶೇಷ ಪುರಸ್ಕಾರವು ಲಭಿಸಿದ್ದು, ಈ ಒಂದು ವಿಷಯವಾಗಿ "ನಾನು ನನ್ನ ಕಥೆ" ಎಂಬ ವಿಷಯದ ಕುರಿತು ಶ್ರೀ ಶರಣಪ್ಪ ಕ. ಬೇವಿನಕಟ್ಟಿ ಗ.ಗಡ  ಇವರು ಉಪನ್ಯಾಸವನ್ನು ನೀಡುತ್ತಿದ್ದು, ಅತಿಥಿಗಳಾಗಿ ಶ್ರೀ ಬಿ.ಕೆ ಮಾದಿ   ಮತ್ತು ಡಾ|| ಜಗದೀಶ. ಹುಲ್ಲೂರ ಪ್ರಾಧ್ಯಾಪಕರು  ಸ.ಪ್ರ.ದ.ಕಾಲೇಜ್ ಗ.ಗಡ. ಇವರು ಕಥೆಯ ಕುರಿತು ವಿಮರ್ಶಾತ್ಮಕ ನುಡಿಗಳನ್ನು ಆಡಲಿದ್ದು ಕವನ ವಾಚನವನ್ನು  ಕುಮಾರಿ.ಕೆ.ಬಿ.ಮಾಳೋತ್ತರ ವಾಚಿಸಲಿದ್ದು ೧೨ ನೇ ಶತಮಾನದ ಮೊದಲ ವಚನಗಾರ್ತಿಯಾದಂತ ಅಕ್ಕಮಹಾದೇವಿ ಯವರ ಕುರಿತು ಪರಿಚಯದ ನುಡಿಗಳನ್ನಾಡಲಿದ್ದಾರೆ ಕುಮಾರಿ. ಎ.ಟಿ.ಪೋಲಿಸ್ ಪಾಟೀಲ ಇವರುಗಳು ನಡೆಸಿಕೊಡಲಿದ್ದಾರೆ.
ಎಂದಿನಂತೆ ಕಾರ್ಯಕ್ರಮವು ಸಹ ಅಂದರೆ ದಿ.೦೩-೦೨-೨೦೧೮ ಶನಿವಾರದಂದು ಸಂಜೆ, ಸಮಯ ೬.೦೦ ಕ್ಕೆ ಸರಿಯಾಗಿ ಮೈಸೂರು ಮಠದಲ್ಲಿ ನಡೆಯಲಿದೆ ಕಾರಣ ಸಕಲ ಕನ್ನಡದ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಎಂದು ವಿನಂತಿಸಿಕೊಳ್ಳುತ್ತಾ ಸರ್ವರಿಗೂ ಹಾರ್ದಿಕ ಸ್ವಾಗತ.

Wednesday, December 27, 2017

ನಾ ಹ್ಯಾಂಗ ಮಾಡ್ಲಿ ?

ಸುಮ್ಕ ಕುಂದ್ರಬ್ಯಾಡ ಹಿಂಗ ನನ್ನೇದುರಿಗೆ
ಎಷ್ಟೊತ್ತಾತು ಕಾಯ್ಲಾಕ ಹತ್ತು ನಿನ್ನ ನಗುವಿಗೆ
ತುರುಬನ್ಯಾಗಿಟ್ಟ ಗುಲಾಬಿ ಹೂವಿಂದ ನಗುನರ
ಕೊಡ್ಸಲೇನ.. ಕಡ ಮಾಡಿ ನಿನ್ನ ತುಟಿಗೆ
ಈ ಮನದಾಗ ಪ್ರೀತಿ ಹಣತೆ ಹಚ್ಚಿ... ಬರಬಾರದ್ಯಾಕ
ನೀನು ಬಲಗಾಲಿಟ್ಟು ನನ್ನ ಹಟ್ಟಿಗೆ

ತುಡ್ಗ ಕಣ್ಣಿಲೆ...ಕಣ್ಣೇತ್ತಿ ಒಮ್ಮೇರ ನೋಡ ನನ್ನ ಕಡಿಗೆ
ಎದೆಯುರಿನರ ಕಡ್ಮೀ.. ಆಗ್ಲಿ ಒಂದ್ಹೊತ್ತಿನ ಮಟ್ಟಿಗೆ
ಪ್ರೀತಿ ಕಲ್ಲ ಎಡವಿ ಬಿದ್ದೇನ ಹುಡುಗಿ... ನಿನ್ನ ಹೆಸರಿನ
ಬೀದಿಗೆ

ಶರಣಾಗದ ಹೊರತು...

ಮನಕೆ ತೊಟ್ಟಿರುವ ನಾನೆಂಬ
ವಸ್ತ್ರವ ವಿವಸ್ತ್ರಗೊಳಿಸಿ ಬಿಡು
ಕಣ್ಣುಗಳಿಗೆ ಮೆತ್ತಿರುವ ಅಹಂ ನ
ಪರದೆಯನು ಕಳಚಿ ನೋಡು

ಎಲ್ಲ ನಿನ್ನಂತವರಿಲ್ಲ, ಒಳಗಣ್ಣ
ತೆರದು ಓದು, ಮೇಲೇರಿದವರದೇಷ್ಟು
ತಲೆಬಾಗಿ ನಡೆಯುತಿಹರು, ಬರೆಯುತಿರುವವರು ನಿನ್ನನೆ ದಿಟ್ಟಿಸಿ
ನೋಡುತಿಹರು

ಮೇಲೆರಿದವರ ಕಾಲೆಳೆಯಬೇಡ
ಹಿಂಬಾಲಕರ, ದಟ್ಟ ಕಾನನದ ಒಂಟಿ
ದಾರಿಯಲಿ ಕೈ  ಬಿಡಬೇಡ
ಪದಪದಗಳು ಅರಳುವವು ನಿನ್ನಂತರಂಗದೊಳು, ಪರರ ನಿಂದಿಸಲು
ಬಳಸಬೇಡ, ಪರರು ಇಲ್ಲದೆ ನಿನ್ನ
ಪದಗಳಿಗೆ ಬೆಲೆಯಿಲ್ಲ

ಹೆಗಲೆರುವುದು ಆಗಾಗ ಯಶಸ್ಸಿನ
ಭಾರ, ಹಿರಿಯರ ಮುಂದೆ ಬಾಗಿ ಬಾಗಿ
ಅರ್ಪಿಸಿಬಿಡು ಅವರ ಪಾದಗಳ ಧೂಳಿಗೆ
ಹಗುರಾಗಿ ಎಲ್ಲರೊಡಗೂಡಿ ಸಾಗಲು
ಅನುವಾಗುವುದು ಆವಾಗ

ನಿನ್ನ ಮನದ ಜ್ಯೋತಿಯ ಇನ್ನೊಬ್ಬರ
ಮನಕೆ ಹಚ್ಚುವ ದೀವಿಗೆಯಾಗಲಿ
ಅವರ ನಡೆದು ಹೋಗುವ ದಾರಿಯ
ಕತ್ತಲನು ಕಳೆಯುವ ಪಂಜಾಗಲಿ
ನಾನೆ ಜ್ಞಾನಿಯಂಬ ಹುಚ್ಚು ಯಜ್ಞದಲಿ
ಸುಟ್ಟು ಕರಕಲಾಗಬೇಡ

ಕಲಿ..ಕಲಿಸು.. ಕಲಿಯುತಿರು
ಬದುಕಿದು ನಿರಂತರ... ನಿನ್ನ
ಬರವಣಿಗೆಯೊಂದೆ ನಿಲ್ಲದಿರಲಿ
ಬರಲಿ ಬದುಕಲಿ ಅದೇಷ್ಟು ಅಂತರ

ನೀ ಜಗಕೆ ಶರಣಾಗದ ಹೊರತು
ನಿನಗೆ ಜಯವಿಲ್ಲ 
🙏🙏🙏🙏🙏🙏🙏🙏🙏🙏

ನಿನ್ನ ನಗುವು ೪೨೪

ನಿನ್ನ ಮರೆತು ನಗಲೆಂದು
ಎಷ್ಟೊ... ಪ್ರಯತ್ನಪಟ್ಟೆ
ಹತಾಶೆನಾದೆ.. ಕಾರಣ
ಅದು ನಿನ್ನ ತುಟಿಯ ಮೇಲೆ
ಕುಣಿಯುತ್ತಿತ್ತು...!!!!!

Thursday, December 14, 2017

ಮಾರು ಹೋಗುವುದು

ಇತ್ತೀಚೆಗೆ...
ಮದಿರೆಯ ಬಟ್ಟಲುಗಳು
ಮತ್ತೇರಿಸುತ್ತಿಲ್ಲ...
ಬಹುಶಃ
ಅವುಗಳು ಅವಳ
ಸೌಂದರ್ಯಕ್ಕೆ...
ಮಾರುಹೋಗಿರಬಹುದೇನೊ..????

ನಮ್ಮವರಾರು....?

ನಮ್ಮರೆಂದು ನೋಡಿದರೆ ಲೆಕ್ಕಹಾಕಿ,
ಯಾರೀಹರು ? ಈ ಜಗದಿ....
ಮೂರು ಪರದೆಗಳ ನಾಟಕದಿ
ಬಂದು ಹೋಗುವ ಪಾತ್ರಗಳ
ನೆನಹುವವರಾರು ?

ನಕ್ಕಾಗ... ನಕ್ಕು ನಲಿದವರು,
ಅತ್ತಾಗ ಕಣ್ಣನೊರೆಸಿ ಸಾಂತ್ವಾನಿಸಿದವರು,
ಸಾಧನೆಯ ಹಾದಿಗೆ ಬೆಳಕಾದವರು,
ಮರೆಯಾಗುವವರೆ.... ಎಲ್ಲ ಹಾದಿಯ ಕೊನೆಗೆ.
ಉಳಿಯುವವರು ಕೇವಲ ನೆನಪಿಗೆ

ಎದೆಯ ಗಟ್ಟಿಗೊಳಿಸಿಕೊಂಡು,
ನಡೆಯಬೇಕಿದೆ ಬಾಳಿನುದ್ದಕು,
ಯಾರಿಲ್ಲದಿದ್ದರೇನು ಜೊತೆಗೆ,
ನೆಮ್ಮದಿಯ ನೀಡುವುದಿಲ್ಲವೆ
ಪುಸ್ತಕಗಳು ನೊಂದ ಮನಕೆ