Wednesday, March 28, 2018

ಶಾಯರಿ ೧೧೩


ಕತ್ತಲಿಗಳಿಗೂ...
ನನ್ನ ಮೇಲದಷ್ಟು
ಹಗೆತನವಿರಬಹುದು
ಸಾಕಿ....

ಒಂದೆರಡು
ಮದಿರೆಯ
ಬಟ್ಟಲುಗಳ
ಸವಿಯುವ
ಮುನ್ನವೆ...
ಹಗಲೆಂಬ
ನರಕಕ್ಕೆ
ಮತ್ತೆ ದೂಡಿ
ಬಿಡುವುವಲ್ಲ...

ಶಾಯರಿ ೧೧೨

ನನಗೇತಕೊ...
ಈ ಮಲ್ಲಿಗೆಯ
ಮೇಲೆ
ಅನುಮಾನ
ಮೂಡುತಿಹುದು
ಸಾಕಿ....

ಇಂದು
ನಿನ್ನ ಮದಿರೆಯ
ಮಂದಿರದಲ್ಲಿ
ಸೂಸುತ್ತಿರುವ
ಸುಗಂಧವನು
ಅಂದು
ಅವಳ ಮುಡಿಗೆ
ಮುಡಿಸುವಾಗ
ಇದ್ದಿದ್ದರೆ...?

ಶಾಯರಿ ೧೧೧

ನಿನಗೆ
ಹೇಗೆ
ಹೇಳಲಿ
ಸಾಕಿ...
ಮನದೊಳಡಗಿದ
ದುಗುಡುಗಳ
ನೋವ..

ಮನದ
ಮಾತುಗಳನೆಲ್ಲವ
ಅವಳ
ಸೀರೆ
ಸೆರಗಂಚಿನ
ಗಂಟಿನಲಿ
ಸಿಕ್ಕು
ನರಳುತ್ತಿರುವಾಗ

ಯಾವಾಗ ಬರ್ತಿಯೊ ಮಾಂವ

ಮನಸಿನ ಬ್ಯಾನಿ...ನಿಂಗ
ತಿಳಿವಲ್ದೇನೊ.. ಮಾರಾಯಾ....
ಹರೆಯದ ಉರಿ.. ಚೂರಾದ್ರು
ತಟ್ಟವಲ್ದೇನ... ನನ್ನ ರಾಯ

ಹರಿಯೊ..ಹೊಳಿ ಸುಮ್ನ
ಹರಿಯ್ಯಾಕ ಹತ್ತೈತಿ ಮಾತ ಕೇಳಲಾರ್ದ

ಶಾಯರಿ ೧೧೦

ಅವಳ
ತುಟಿಯಂಚಿನ
ಮಧುವಿಗೂ...
ನಿನ್ನ ಬಟ್ಟಲೊಳಗಿನ
ಮಧುವಿಗೂ..
ಅದೇಷ್ಟು
ಅಂತರವಿದೆ
ಸಾಕಿ....

ಅವಳು
ನೀಡಿದ...
ತುಟಿಯಂಚಿನ
ಮುತ್ತಿನ
ಮತ್ತು ಇಂದಿಗೂ..
ಇಳಿಯಿತ್ತಿಲ್ಲ..

ನಿನ್ನ
ಬಟ್ಟಲೊಳಗಿನ
ಮದಿರೆ..
ಹೊತ್ತು...ಹೊತ್ತಿಗೆ
ಇಳಿದುಬಿಡುವುದಲ್ಲ...

ಶಾಯರಿ ೧೦೯

ಸ್ವರ್ಗದಲ್ಲಿಯೆ
ನಿಶ್ಚಯವಾಗುತ್ತದಂತೆ
ಸಾಕಿ..
ಏಳೇಳು
ಜನ್ಮಗಳ
ನಂಟು...

ಇನ್ನೇಷ್ಟು
ಜನ್ಮಗಳಿವೇಯೊ...?
ಬಿಡಿಸಿಕೊಳ್ಳಲಾಗದ
ನೋವಿನ
ಗಂಟು...

ಶಾಯರಿ ೧೦೮

ಅವಳು
ಮೌನವಾದಳೆಂದೆ
ನಿನ್ನ
ಬಳಿ ನಾನು
ಓಡೋಡಿ
ಬಂದದ್ದು...
ಸಾಕಿ..

ನೀನೇ...
ಈಗ
ಮೌನವಾಗಿಬಿಟ್ಟರೆ...?